ಉಪರಾಷ್ಟ್ರಪತಿ ಮೆಚ್ಚಿದ 'ಮಹರ್ಷಿ': ನಾಲ್ಕು ದಿನಗಳಲ್ಲೇ ನೂರು ಕೋಟಿ ಕ್ಲಬ್​ ಸೇರಿದ ಪ್ರಿನ್ಸ್​ ಸಿನಿಮಾ..!

ಬಾಕ್ಸಾಫಿಸ್​ನಲ್ಲಿ ಯಶಸ್ಸಿನ ಓಡವನ್ನು ಮುಂದುವರೆಸಿರುವ ಮಹೇಶ್​ ಬಾಬು ಅಭಿನಯದ 'ಮಹರ್ಷಿ' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರದ ಕಥಾ ವಸ್ತು ಹಾಗೂ ನೀಡಲಾಗಿರುವ ಸಂದೇಶಕ್ಕೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ಇದಕ್ಕೆ ನಮ್ಮ ದೇಶ್ ಉಪರಾಷ್ಟರಪತಿ ಅವರೂ ಹೊರತಾಗಿಲ್ಲ.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಮಹೇಶ್​ ಬಾಬು

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಮಹೇಶ್​ ಬಾಬು

  • News18
  • Last Updated :
  • Share this:
ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬು ಅಭಿನಯದ 25ನೇ ಸಿನಿಮಾ ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸುತ್ತಿದೆ. ತೆರೆ ಕಂಡಾಗಿನಿಂದ ಕೋಟಿ ಕೋಟಿ ಲೂಟಿ ಮಾಡುತ್ತಾ ನಾಲ್ಕು ದಿನಗಳಲ್ಲೇ ಜಾಗತಿಕ ಮಟ್ಟದಲ್ಲಿ 100 ಕೋಟಿ ಬಾಚಿಕೊಂಡಿದೆ.

ಈ ಚಿತ್ರದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿರುವ ರೈತರಿಗೆ ಜನರು ಯಾವ ರೀತಿಯಲ್ಲಿ ನೆರವಾಗಬೇಕು ಹಾಗೂ ಕೃಷಿ ನಮಗೆ ಎಷ್ಟು ಮುಖ್ಯ ಎಂದು ತೋರಿಸಲಾಗಿದೆ. ಈ ಚಿತ್ರದ ಕಥಾ ವಸ್ತು ಹಾಗೂ ನೀಡಲಾಗಿರುವ ಸಂದೇಶಕ್ಕೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ಇದಕ್ಕೆ ನಮ್ಮ ದೇಶ್ ಉಪರಾಷ್ಟರಪತಿ ಅವರೂ ಹೊರತಾಗಿಲ್ಲ.

ಇದನ್ನೂ ಓದಿ: ವಿವಾದಕ್ಕೀಡಾಗಿದೆ 'ನನ್ನ ಗೆಳತಿ ನನ್ನ ಗೆಳತಿ...' ರ‍್ಯಾಪ್ ಹಾಡು: ಏನಂತಾರೆ ಹಾಡಿನ ಮೂಲ ರಚನೆಕಾರ ಮಂಜುನಾಥ್​?

ಹೌದು, ಉಪರಾಷ್ಟ್ರಪತಿ  ಎಂ. ವೆಂಕಯ್ಯ ನಾಯ್ಡು ಅವರು 'ಮಹರ್ಷಿ' ಸಿನಿಮಾ ನೋಡಿದ್ದು, ಅದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದಾರೆ.

కుటుంబ సభ్యులతో కలిసి ఈరోజు ‘మహర్షి’ చిత్రాన్ని చూడడం జరిగింది. గ్రామీణ ఇతివృత్తంతో, వ్యవసాయ పరిరక్షణను, అన్నదాతలకు అండగా నిలబడాల్సిన ఆవశ్యకతను తెలియజేసిన ప్రబోధాత్మక చిత్రం. ప్రతి ఒక్కరూ చూడదగిన మంచి సినిమా @directorvamshi @urstrulyMahesh #Maharshi pic.twitter.com/PLG1lFCllY


'ಮಹೇಶ್​ ಬಾಬು ಅಭಿನಯದ 'ಮಹರ್ಷಿ' ಸಿನಿಮಾವನ್ನು ಕುಟುಂಬ ಸದಸ್ಯರೊಂದಿಗೆ ಸೇರಿ ನೋಡಿದ್ದೇನೆ. ಅನ್ನದಾತನಿಗೆ ನೆರವಾಗುವ ಅಗತ್ಯ ಇರುವುದನ್ನು ಎತ್ತಿ ತೋರಿಸಿದ ಉತ್ತಮ ಸಿನಿಮಾ. ಇದು ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರ' ಎಂದು ಉಪರಾಷ್ಟ್ರಪತಿ ಅವರು ಟ್ವೀಟ್​ ಮಾಡಿದ್ದಾರೆ.

ಅದಕ್ಕೆ ನಟ ಮಹೇಶ್​ ಬಾಬು ಅವರು ಸಹ ಮತ್ತೆ ಟ್ವೀಟ್​ ಮೂಲಕ ಧನ್ಯವಾದ ತಿಳಿಸಿದ್ದಾರೆ.ಕನ್ನಡದ ಗಾಯಕನ ಹಾಡಿಗೆ ಮೆಚ್ಚುಗೆಯ ಮಹಾಪೂರ

ಇನ್ನೂ ಮಹರ್ಷಿ ಸಿನಿಮಾದ ಹಾಡುಗಳು ಸಹ ಹಿಟ್​ ಆಗಿದ್ದು, ಯೂಟ್ಯೂಬ್​ನಲ್ಲಿ ಒಳ್ಳೆಯ ವೀಕ್ಷಣೆ ಗಳಿಸುತ್ತಿವೆ. ಅದರಲ್ಲೂ ಕನ್ನಡದ ಗಾಯಕ ವಿಜಯ್​ ಪ್ರಕಾಶ್​ ಅವರು ಹಾಡಿರುವ 'ಇದೇ ಕದ ನೀ ಕಥಾ' ಹಾಡು ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​ಚಾಟ್​  ನಲ್ಲೂ ಹಿಂಬಾಲಿಸಿ'

 ನನ್ನ ಗೆಳತಿ ಹಾಡಿನ ಮೂಲ ರಚನೆಗಾರ ಮಂಜುನಾಥ್ ಸಂಗಳದ್‍ ಅವರ ಅಂತರಾಳ

First published: