S P Balasubrahmanyam: ಆಸ್ಪತ್ರೆಗೆ ಕರೆ ಮಾಡಿ ಎಸ್​ ಪಿ ಬಿ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದ ವೆಂಕಯ್ಯ ನಾಯ್ಡು..!

SPB Health Update: ನಿನ್ನೆಯಷ್ಟೆ ಎಸ್​ಪಿಬಿ ಅವರ ಪರಿಸ್ಥಿತಿ ಬಗ್ಗೆ ತಿಳಿಯುತ್ತಿದ್ದಂತೆಯೇ ನಟ ಕಮಲ್​ ಹಾಸನ್​ ಸಹ ಎಂಜಿಎಂ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಎಂಜಿಎಂ ಆಸ್ಪತ್ರೆಗೆ ಕರೆ ಮಾಡಿದ್ದು, ಗಾಯಕನ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರಂತೆ. ಅಗತ್ಯ ಬಿದ್ದಲ್ಲಿ ನುರಿತ ವೈದ್ಯರ ಸಲಹೆ  ಪಡೆಯುವಂತೆ ಸೂಚಿಸಿದ್ದಾರಂತೆ. ಸದ್ಯಕ್ಕೆ ಎಸ್​ಪಿಬಿ ಅವನ್ನು ವೆಂಟಿಲೇಟರ್​ನಲ್ಲೇ ಇಡಲಾಗಿದೆಯಂತೆ.

ಎಸ್​ಪಿ ಬಾಲಸುಬ್ರಹ್ಮಣ್ಯಂ

ಎಸ್​ಪಿ ಬಾಲಸುಬ್ರಹ್ಮಣ್ಯಂ

  • Share this:
ಗಾಯಕ ಎಸ್ ​ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಅವರು ಮನೆ ಸೇರಲಿದ್ದಾರೆ ಎಂದು ಅವರ ಮಗ ಇತ್ತೀಚೆಗಷ್ಟೆ ಹೇಳಿದ್ದರು. ಆದರೆ ನಿನ್ನೆ ಇದ್ದಕ್ಕಿದ್ದಂತೆಯೇ  ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ ಎಂದು ಆಸ್ಪತ್ರೆಯವರು ಸಂಜೆ ಹೆಲ್ತ್​ ಬುಲೆಟಿನ್​ ರಿಲೀಸ್​ ಮಾಡುವ ಮೂಲಕ ತಿಳಿಸಿದ್ದಾರೆ. ಈ ವಿಷಯ ಹೊರ ಬೀಳುತ್ತಿದ್ದಂತೆಯೇ ಎಸ್​ಪಿಬಿ ಅವರ ಅಭಿಮಾನಿಗಳು ಮತ್ತೆ ಆತಂಕದಲ್ಲಿದ್ದಾರೆ.  ಕಳೆದೆ ಕೆಲವು ದಿನಗಳಿಂದ ಎಸ್​ಪಿ ಬಿ ಆರೋಗ್ಯದ ಕುರಿತು ಮಾಹಿತಿ ನೀಡಿದ್ದ ಅವರ ಮಗ ಚರಣ್​, ತಂದೆಯ ಆರೋಗ್ಯ ಸುಧಾರಿಸುತ್ತಿದೆ ಎಂದಿದ್ದರು. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವಿಡಿಯೋ ಮಾಡಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇನ್ನು ನೆಚ್ಚಿನ ಗಾಯಕನ ಆರೋಗ್ಯದಲ್ಲಿ ಚೇತರಿಕೆ ಕಾಣಲೆಂದು ಅವರ ಕೋಟ್ಯಂತರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. 

ನಿನ್ನೆಯಷ್ಟೆ ಎಸ್​ಪಿಬಿ ಅವರ ಪರಿಸ್ಥಿತಿ ಬಗ್ಗೆ ತಿಳಿಯುತ್ತಿದ್ದಂತೆಯೇ ನಟ ಕಮಲ್​ ಹಾಸನ್​ ಸಹ ಎಂಜಿಎಂ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಎಂಜಿಎಂ ಆಸ್ಪತ್ರೆಗೆ ಕರೆ ಮಾಡಿದ್ದು, ಗಾಯಕನ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರಂತೆ. ಅಗತ್ಯ ಬಿದ್ದಲ್ಲಿ ನುರಿತ ವೈದ್ಯರ ಸಲಹೆ  ಪಡೆಯುವಂತೆ ಸೂಚಿಸಿದ್ದಾರಂತೆ. ಸದ್ಯಕ್ಕೆ ಎಸ್​ಪಿಬಿ ಅವನ್ನು ವೆಂಟಿಲೇಟರ್​ನಲ್ಲೇ ಇಡಲಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆ ಬಿಡುಗಡೆ ಮಾಡಿರುವ ಅವರ ಹೆಲ್ತ್​ ಬುಲೆಟಿನ್​


ಇನ್ನು, ಆಗಸ್ಟ್ 13ರಂದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ತಜ್ಞ ವೈದ್ಯರ ಸಲಹೆಯಂತೆ ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಆಸ್ಪತ್ರೆಯ ಬೆಡ್​ ಮೇಲೆ ಮಲಗಿಯೇ ಥಮ್ಸ್​ ಅಪ್​ ತೋರಿದ್ದ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಮತ್ತೆ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು, ತಜ್ಞ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

Venkaiah Naidu
ವೆಂಕಯ್ಯ ನಾಯ್ಡು


ಸೆ.7ರಂದು ಕೊರೋನಾ ಪರೀಕ್ಷೆಗೆ ಒಳಗಾಗಿದ್ದ ಎಸ್​ಪಿ ಅವರಿಗೆ ಸೋಂಕಿಲ್ಲ ಎಂಬುದಾಗಿ ವರದಿ ಬಂದಿತ್ತು. ಅವರ ಶ್ವಾಸಕೋಶದ ಸ್ಥಿತಿ ಇನ್ನೂ ಕೊಂಚ ಸುಧಾರಿಸಬೇಕೆಂದು ಎಂದು ಚರಣ್​ ತಿಳಿಸಿದ್ದರು. ಇನ್ನು ಇತತ್ಈಚೆಗಷ್ಟೆ ಎಸ್​ಪಿಬಿ ಆಸ್ಪತ್ರೆಯಲ್ಲಿಯೇ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.
Published by:Anitha E
First published: