• Home
  • »
  • News
  • »
  • entertainment
  • »
  • K Muralidharan: ಹಿರಿಯ ನಿರ್ಮಾಪಕ ಕೆ. ಮುರಳೀಧರನ್ ಇನ್ನಿಲ್ಲ!

K Muralidharan: ಹಿರಿಯ ನಿರ್ಮಾಪಕ ಕೆ. ಮುರಳೀಧರನ್ ಇನ್ನಿಲ್ಲ!

ಕೆ. ಮುರಳೀಧರನ್

ಕೆ. ಮುರಳೀಧರನ್

ಹಿರಿಯ ನಿರ್ಮಾಪಕ ಕೆ. ಮುರಳೀಧರನ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸೌತ್ ಸೂಪರ್​ಸ್ಟಾರ್ ನಟರು ನಿರ್ಮಾಪಕರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

  • News18 Kannada
  • 4-MIN READ
  • Last Updated :
  • Bangalore, India
  • Share this:

ಸೌತ್ ಸಿನಿಮಾ ಇಂಡಸ್ಟ್ರಿಯ ಹಿರಿಯ ನಿರ್ಮಾಪಕ ಕೆ ಮುರಳೀಧರನ್ (K Muralidharan) ಇಂದು ತಮ್ಮ ಹುಟ್ಟೂರು ತಮಿಳುನಾಡಿನ (Tamil Nadu) ಕುಂಭಕೋಣಂನಲ್ಲಿ ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ಅವರು ದಕ್ಷಿಣ ಚಿತ್ರರಂಗದ ಪ್ರಮುಖ ನಿರ್ಮಾಪಕರಾಗಿದ್ದರು. ಅವರು ಪುದುಪೆಟ್ಟೈ, ಅಂಬೆ ಶಿವಂ, ಮತ್ತು ಬಾಗಾವತಿ ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ. ಸಿನಿಮಾ ನಿರ್ಮಾಪಕರಲ್ಲದೆ, ಅವರು ತಮಿಳು ನಿರ್ಮಾಪಕರ ಮಂಡಳಿಯ ಮಾಜಿ ಅಧ್ಯಕ್ಷರೂ ಆಗಿದ್ದರು. ಅವರು 1994 ರಲ್ಲಿ ತಮ್ಮ ಮೊದಲ ಸಿನಿಮಾದೊಂದಿಗೆ ಚಲನಚಿತ್ರ ನಿರ್ಮಾಣ (Production) ವೃತ್ತಿಯನ್ನು ಪ್ರಾರಂಭಿಸಿದರು. ನಿರ್ಮಾಪಕರಾಗಿ ಅವರ ಮೊದಲ ಚಿತ್ರ (Movie) ಅರಣ್ಮನೈ ಕವಲನ್. ಇದರಲ್ಲಿ ಶರತ್ ಕುಮಾರ್ ಅವರು ಹೀರೋ ಆಗಿ ನಟಿಸಿದ್ದರು. ಮುರಳೀಧರನ್ ಅವರ ನಿರ್ಮಾಣ ಸಂಸ್ಥೆಯ ಹೆಸರು ಲಕ್ಷ್ಮಿ ಮೂವೀ ಮೇಕರ್ಸ್ (LMM). ಪ್ರೊಡಕ್ಷನ್ ಹೌಸ್‌ನಲ್ಲಿ ಜಿ ವೇಣುಗೋಪಾಲ್ ಮತ್ತು ದಿವಂಗತ ವಿ.ಸ್ವಾಮಿನಾಥನ್ ಅವರು ಮುರಳೀಧರನ್ ಅವರ ಪಾಲುದಾರರಾಗಿ ಗುರುತಿಸಿಕೊಂಡಿದ್ದಾರೆ.


ಕೆ. ಮುರಳೀಧರನ್ ಅವರು ನಿರ್ಮಿಸಿದ ಸಿನಿಮಾಗಳು


ಅವರ ನಿರ್ಮಾಣ ಸಂಸ್ಥೆ LMM ಅಡಿಯಲ್ಲಿ ಕಮಲ್ ಹಾಸನ್ ಜೊತೆ ಅಂಬೆ ಶಿವಂ, ಕಾರ್ತಿಕ್ ಜೊತೆ ಗೋಕುಲತಿಲ್ ಸೀತೈ, ಮತ್ತು ಧನುಷ್ ಜೊತೆ ಪುದುಪೆಟ್ಟೈ. ಅವರು ವಿಜಯಕಾಂತ್ ಜೊತೆ ಉಳವತುರೈ, ಸಿಂಬು ಅಭಿನಯದ ಸಿಲಂಬಟ್ಟಂ, ಮತ್ತು ವಿಜಯ್ ಅಭಿನಯದ ಪ್ರಿಯಮುದನ್ ಚಿತ್ರಗಳನ್ನೂ ಮಾಡಿದರು. ಅವರ ಸಿನಿಮಾಗಳಲ್ಲಿ ಒಂದಾದ ಉನ್ನೈ ತೇಡಿಯಲ್ಲಿ ಅಜಿತ್ ಹೀರೋ ಆಗಿ ನಟಿಸಿದ್ದರು.


ನಟ, ನಟಿಯರಿಂದ ಸಂತಾಪ


ಮುರಳೀಧರನ್‌ಗೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕಮಲ್ ಹಾಸನ್ ತಮಿಳಿನಲ್ಲಿ ಟ್ವಿಟರ್‌ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಕೆ. ಮುರಳೀಧರನ್ ಅವರೊಂದಿಗೆ ಕೆಲಸ ಮಾಡಿದ ದಿನಗಳನ್ನು ನೆನಪಿಸಿಕೊಂಡಿದ್ದಅರೆ ಕಮಲ್ ಹಾಸನ್. ನಟ ಹಾಗೂ ನಿರ್ದೇಶಕ ಮನೋಬಾಲಾ ಕೂಡ ಟ್ವಿಟರ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದು, ಸಾವಿನ ಸುದ್ದಿ ನನಗೆ ಆಘಾತ ತಂದಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Siddharth: ಮುಂಬೈ ಹೋಟೆಲ್​​ನಲ್ಲಿ ಸಿದ್ಧಾರ್ಥ್-ಅದಿತಿ! ಸೌತ್​ ನಟನ ಜೊತೆ ಬಾಲಿವುಡ್ ಸುಂದರಿ


ಕೆ. ಮುರಳೀಧರನ್ ಅವರು ದಕ್ಷಿಣ ಸಿನಿ ಇಂಡಸ್ಟ್ರಿಯ ಅನೇಕ ಸೂಪರ್​ ಸ್ಟಾರ್​​ಗಳ ಜೊತೆ ಕೆಲಸ ಮಾಡಿದ್ದಾರೆ. ಈ ಪಟ್ಟಿಯಲ್ಲಿ ವಿಜಯಕಾಂತ್, ಕಮಲ್ ಹಾಸನ್, ಧನುಷ್, ಅಜಿತ್, ಸಿಂಬು ಸೇರಿದಂತೆ ಹಲವರು ಇದ್ದಾರೆ.


ಲಕ್ಷ್ಮಿ ಮೂವೀ ಮೇಕರ್ಸ್ (LMM) ನಿರ್ಮಿಸಿದ ಕೊನೆಯ ಚಿತ್ರ 2015 ರಲ್ಲಿ ಸಕಲಕಲಾ ವಲ್ಲವನ್. ಇದರಲ್ಲಿ ತ್ರಿಶಾ, ಜಯಂ ರವಿ ಮತ್ತು ಅಂಜಲಿ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.

Published by:Divya D
First published: