RIP Rajaram: ಸ್ಯಾಂಡಲ್​ವುಡ್​ನ ಹಿರಿಯ ನಟ-ರಂಗಭೂಮಿ ಕಲಾವಿದ ರಾಜಾರಾಂ ನಿಧನ

ಡಾ. ರಾಜ್​ಕುಮಾರ್ ಅವರೊಂದಿಗೆ ಸಹ ಸಿನಿಮಾದಲ್ಲಿ ನಟಿಸಿದ್ದಾರೆ. ವೈ.ಆರ್ ಸ್ವಾಮಿ ನಿರ್ದೇಶನದ ಭಲೇ ಹುಚ್ಚ ಸಿನಿಮಾದಲ್ಲಿ ರಾಜ್​ಕುಮಾರ್​ ಜೊತೆ ನಟಿಸಿದ್ದಾರೆ. ಈ ಚಿತ್ರದಲ್ಲಿ ಜೋಕರ್​ ಶ್ಯಾಮ್​ ಸಹ ಇದ್ದರು. ಗಾಳಿಪಟ ಸಿನಿಮಾದ ನಂತರ ಮಾಡಿದ್ದು ಶ್ರೀಮತಿ ಜಯಲಲಿತಾ. ಇದು ರಾಜಾರಾಂ ಅಭಿನಯದ ಕೊನೆಯ ಚಿತ್ರ. 

ಹಿರಿಯ ನಟ ರಾಜಾರಾಂ

ಹಿರಿಯ ನಟ ರಾಜಾರಾಂ

  • Share this:
ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ರಾಜಾರಾಂ ಅವರು ಕೊರೋನಾಗೆ ಬಲಿಯಾಗಿದ್ದಾರೆ. ಕೊರೋನಾದಿಂದಾಗಿ ಸ್ಯಾಂಡಲ್​ವುಡ್​ನಲ್ಲಿ ಒಂದರ ಹಿಂದೆ ಒಂದು ಕಹಿ ಘಟನೆಗಳು ನಡೆಯುತ್ತಿವೆ. ಕಲಾ ಸೇವೆ ಮಾಡುತ್ತಿರುವ ಹಲವಾರು ಮಂದಿ ಕಲಾವಿದರು ಕೊರೋನಾಗೆ ಬಲಿಯಾಗುತ್ತಿದ್ದಾರೆ. ಶಂಖನಾದ ಅರವಿಂದ್​, ರೇಣುಕಾ ಶರ್ಮಾ, ರಾಮು ಸೇರಿದಂತೆ ಹಲವರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಈಗ ಹಿರಿಯ ನಟ ರಾಜಾರಾಂ ಅವರು ನಿಧನ ಹೊಂದಿದ್ದಾರೆ. 84 ವರ್ಷದ ಹಿರಿಯ ಕಲಾವಿದ ಸಿನಿಮಾ, ಧಾರಾವಾಹಿ ಹಾಗೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಸಿನಿಮಾಗಿಂತ ಹೆಚ್ಚಾಗಿ ರಾಜಾರಾಂ ಅವರು ರಂಗಭೂಮಿಯಲ್ಲೇ ಸಕ್ರಿಯವಾಗಿದ್ದರು.  1971ರಿಂದ ಇಲ್ಲಿಯವರೆಗೆ  62 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಸಿನಿರಂಗದಲ್ಲಿ ರಾಜ್​ಕುಮಾರ್​ ಸೇರಿದಂತೆ ಬಹುತೇಕ ಎಲ್ಲ ನಾಯಕರೊಂದಿಗೆ ತೆರೆ ಹಂಚಿಕೊಂಡಿದ್ದಾರೆ ರಾಜಾರಾಂ. ಶಾಲಾ ದಿನಗಳಿಂದಲೇ ರಂಗಭೂಮಿಯಲ್ಲಿ ಆಸಕ್ತಿ ತೋರಿದ ರಾಜಾರಾಂ ನಂತರದಲ್ಲಿ ಸಿನಿಮಾಗಳಿಗೆ ಬಂದು ಹೆಸರು ಸಹ ಮಾಡಿದರು. 

ನೂರಾರು ನಾಟಕಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದ ಹಿರಿಯ ಕಲಾವಿದ ರಾಜಾರಾಂ ಅವರಿಗೆ ಕೊರೋನಾ ಸೋಂಕು ಧೃಡವಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಕುಟುಂಬದ ಕಡೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನಟ ಇಂದು ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಯ ಬಗ್ಗೆ ನಟ ಸೃಜನ್​ ಲೋಕೇಶ್​ ಸಾಮಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
1971ರಲ್ಲಿ ಕೃಷ್ಣಸ್ವಾಮಿ ನಿರ್ದೇಶಕ ಪಾಪಪುಣ್ಯ ಸಿನಿಮಾ ರಾಜಾರಾಂ ಅವರ ಅಭಿನಯದ ಮೊದಲ ಸಿನಿಮಾ. ಸರೋಜಾ ದೇವಿ, ಕಲ್ಯಾಣ್​ ಕುಮಾರ್ ಅಶ್ವತ್ಥ್​ ಪ್ರಮುಖ ಪಾತ್ರದಲ್ಲಿದ್ದರು. ವಿಧಾನಸೌಧದಲ್ಲಿ ಟೈಪಿಸ್ಟ್​ ಆಗಿ ಕೆಲಸ ಮಾಡಿಕೊಂಡೇ ಸಿನಿಮಾ ಹಾಗೂ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದರು ರಾಜಾರಾಂ. ನಟ ಲೋಕೇಶ್​ ಅವರೊಂದಿಗೆ ಬಹಳ ಹಳೆಯ ಗೆಳೆತನವಿತ್ತು. ರಂಗಭೂಮಿಯಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದರು.

ಇದನ್ನೂ ಓದಿ: Kichcha Sudeep: ಬಿಗ್​ ಬಾಸ್​ ಖ್ಯಾತಿಯ ಸೋನು ಪಾಟೀಲ್​ ತಾಯಿಯ ಚಿಕಿತ್ಸೆಗೆ ಧನ ಸಹಾಯ ಮಾಡಿದ ಕಿಚ್ಚ ಸುದೀಪ್​..!

ಡಾ. ರಾಜ್​ಕುಮಾರ್ ಅವರೊಂದಿಗೆ ಸಹ ಸಿನಿಮಾದಲ್ಲಿ ನಟಿಸಿದ್ದಾರೆ. ವೈ.ಆರ್ ಸ್ವಾಮಿ ನಿರ್ದೇಶನದ ಭಲೇ ಹುಚ್ಚ ಸಿನಿಮಾದಲ್ಲಿ ರಾಜ್​ಕುಮಾರ್​ ಜೊತೆ ನಟಿಸಿದ್ದಾರೆ. ಈ ಚಿತ್ರದಲ್ಲಿ ಜೋಕರ್​ ಶ್ಯಾಮ್​ ಸಹ ಇದ್ದರು. ಗಾಳಿಪಟ ಸಿನಿಮಾದ ನಂತರ ಮಾಡಿದ್ದು ಶ್ರೀಮತಿ ಜಯಲಲಿತಾ. ಇದು ರಾಜಾರಾಂ ಅಭಿನಯದ ಕೊನೆಯ ಚಿತ್ರ.

RIP Rajaram, Kannada actor, Actor Rajaram Died in Bangalore, rajaram, Kannada ator Rajaram, Covid 19, ಗಾಳಿಪಟ ಖ್ಯಾತಿಯ ನಟ ರಾಜಾರಾಂ, ರಾಜಾರಾಂ ನಿಧನ, ಕನ್ನಡದ ಹಿರಿಯ ನಟ, ಭಲೇ ಹುಚ್ಚ ಸಿನಿಮಾದ ನಟ ರಾಜಾರಾಂ, ಕೋವಿಡ್​ 19, Veteran Kannada actor Rajaram died in Bengaluru ae
ಭಲೇ ಹುಚ್ಚ ಸಿನಿಮಾದ ಚಿತ್ರ


1938ರಲ್ಲಿ ಕೆಜಿಎಫ್​ನಲ್ಲಿ ರಾಜ್​ರಾಮ್​ ಅವರ ಜನನವಾಗಿದ್ದು. ರಾಜಾರಾಂ ಅವರ ತಂದೆ ಪೊಲೀಸ್ ಇಲಾಖೆಯಲ್ಲಿದ್ದರು. ಕೆಲ ಸಮಯ ಕೆಜಿಎಫ್​ನಲ್ಲಿದ್ದ ಇವರ ಕುಟುಂಬ ನಂತರ ಬೆಂಗಳೂರಿಗೆ ಬಂದು ನೆಲೆಸಿದರು. ಆಗಿನಿಂದ ಇಲ್ಲಿಯವರೆಗೆ ಬೆಂಗಳೂರಿನಲ್ಲೇ ಇದ್ದರು. ಶಾಲಾ ದಿನಗಳಲ್ಲೇ ಅಂದರೆ 1951ರಿಂದ ರಂಗಭೂಮಿ ಪಯಣ ಆರಂಭವಾಗಿತ್ತು. ಹವ್ಯಾಸಿ ರಂಗಭೂಮಿಯ ಕಲಾವಿದನಾಗಿ ಅವರೇ ಪರದೆ ಕಟ್ಟಿಕೊಂಡು ನಾಟಕಗಳನ್ನು ಆಡುತ್ತಿದ್ದರು. ಮಲ್ಲೇಶ್ವರದ ಸೇವಾಸದನದಲ್ಲಿ ಸಾಕಷ್ಟು ನಾಟಕ ಪ್ರದರ್ಶನ ಮಾಡಿದ್ದಾರೆ.

ಸೇವಾ ಸದನದ ಪಕ್ಕದಲ್ಲೇ ಇದ್ದ ಟೈಪ್ರೇಟಿಂಗ್​ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದರಂತೆ ರಾಜಾರಾಂ. ಅದಲುಬದಲು, ಗುಂಡಣ್ಣ ಅವರ ನಾಟಕಗಳು ಸೇರಿದಂತೆ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.  ನಾಟಕ ಆಡುತ್ತಿದ್ದರು ಅಂತ ರಾಜಾರಾಂ ಅವರ ತಂದೆ ಬಯ್ಯುತ್ತಿರಲಿಲ್ಲವಂತೆ. ಆದರೆ ಚೆನ್ನಾಗಿ ಓದು ಎಂದು ಹೇಳುತ್ತಿದ್ದರಂತೆ.

ಇದನ್ನೂ ಓದಿ: Kangana Ranaut: ಕಂಗನಾ ಮಾಡಿದ ಪೋಸ್ಟ್​ ಡಿಲೀಟ್​ ಮಾಡಿದ ಇನ್​ಸ್ಟಾಗ್ರಾಂ: ಈ ವೇದಿಕೆಯಲ್ಲೂ ಒಂದು ವಾರ ಉಳಿಯೋದು ಅನುಮಾನ ಎಂದ ನಟಿ..!

1954ರಲ್ಲಿ ಎಸ್ಸೆಸ್ಸೆಲ್ಸಿ ಮುಗಿತು. ನಂತರ 1957ರ ವರೆಗೆ ಪಿಯುಸಿ ಮುಗಿಸಿದ್ದ ರಾಜಾರಾಂ ಅವರು ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಪದವಿ ಮುಗಿಸಿದ್ದಾರೆ. ಪದವಿ ಕಾಲೇಜಿಗೆ ಹೋಗುವಾಗಲೇ ಅಂದರೆ 1959ರಲ್ಲಿ ರಾಜಾರಾಂ ಅವರಿಗೆ ವಿಧಾನಸೌಧದಲ್ಲಿ ಟೈಪಿಸ್ಟ್ ಆಗಿ ಕೆಲಸ ಸಿಕ್ಕಿತ್ತು. ಬೆಳಿಗ್ಗೆ 6ಕ್ಕೆ ಎದ್ದು ಸೈಕಲ್​ನಲ್ಲಿ ಆಚಾರ್ಯ ಕಾಲೇಜಿಗೆ ಹೋಗಿ ತರಗತಿ ಮುಗಿಸಿ, ನಂತರ ಸೈಕಲ್​ನಲ್ಲೇ ಕೆಲಸಕ್ಕೆ ವಿಧಾನಸೌಧಕ್ಕೆ ಬರುತ್ತಿದ್ದರಂತೆ. ಸಂಜೆ ಮತ್ತೆ ನಾಟಕ ಅಭ್ಯಾಸ ಮುಂದುವರೆಯುತ್ತಿತ್ತು.

ಪದವಿ ಕಾಲೇಜಿಗೆ ಸೇರಿದ ನಂತರ ನಾಟಕ ಆಡುವುದು ಮತ್ತಷ್ಟು ಹೆಚ್ಚಾಗಿತ್ತಂತೆ.  ಆಗ ಕಾಲೇಜಿನಲ್ಲಿ ನಾಟಕಕ್ಕಾಗಿ ಮೀಸೆ ಬಿಟ್ಟಿದ್ದ ಕಲಾವಿದ ಇವರೊಬ್ಬರೆ ಅಂತೆ. ಅಲ್ಲದೆ ನಾಟಕ, ಫ್ಯಾನ್ಸಿ ಡ್ರೆಸ್​ ಹೀಗೆ ಎಲ್ಲ ವಿಭಾಗದಲ್ಲೂ ಅವರಿಗೆ ಮೊದಲ ಬಹುಮಾನ ಸಿಗುತ್ತಿತ್ತಂತೆ.
Published by:Anitha E
First published: