• Home
  • »
  • News
  • »
  • entertainment
  • »
  • Vishnu Smaraka: ಮೈಸೂರಿನಲ್ಲಿ ರೆಡಿಯಾಯ್ತು ಸಾಹಸಸಿಂಹನ ಸ್ಮಾರಕ! ಲೋಕಾರ್ಪಣೆ ಬಗ್ಗೆ ಮಾಹಿತಿ ಕೊಟ್ಟ ಅನಿರುದ್ಧ್

Vishnu Smaraka: ಮೈಸೂರಿನಲ್ಲಿ ರೆಡಿಯಾಯ್ತು ಸಾಹಸಸಿಂಹನ ಸ್ಮಾರಕ! ಲೋಕಾರ್ಪಣೆ ಬಗ್ಗೆ ಮಾಹಿತಿ ಕೊಟ್ಟ ಅನಿರುದ್ಧ್

ಸಾಹಸಸಿಂಹ ವಿಷ್ಣುವರ್ಧನ್

ಸಾಹಸಸಿಂಹ ವಿಷ್ಣುವರ್ಧನ್

ಮೈಸೂರಿನಲ್ಲಿ ನಿರ್ಮಾಣವಾಗಿರುವ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ರೆಡಿ ಆಗಿದೆ. ವಿಷ್ಣು ಅಳಿಯ ಅನಿರುದ್ಧ ಈ ಬಗ್ಗೆ ಅಧಿಕೃತ ಮಾಹಿತಿ ಕೊಟ್ಟಿದ್ದಾರೆ. ಹಾಗಾದ್ರೆ ಸ್ಮಾರಕ ಲೋಕಾರ್ಪಣೆ ಯಾವಾಗ? ಅಲ್ಲಿ ಏನೇನು ವಿಶೇಷತೆಗಳಿವೆ? ಸಮಾರಂಭಕ್ಕೆ ಮುಖ್ಯ ಅತಿಥಿ ಯಾರು? ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ...

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಅವರ ಮೈಸೂರು ಸ್ಮಾರಕ ಲೋಕಾರ್ಪಣೆ (Smaraka) ಆಗುತ್ತಿದೆ. ಇವತ್ತಿನಿಂದ ಇನ್ನೂ ಒಂದು ತಿಂಗಳು ಟೈಮ್ ಇದೆ. ಈಗಾಗಲೇ ಅಲ್ಲಿ ಶೇಕಡ 90 ರಷ್ಟು ಸ್ಮಾರಕದ ಕೆಲಸ ಮುಗಿದಿದೆ. ಸುಮಾರು ಎರಡೂವರೆ ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣ ಆಗಿದೆ. ವಿಷ್ಣು ವರ್ಧನ್ ಅವರಿಗೆ ಸಂಬಂಧಿಸಿದ ಗ್ಯಾಲರಿ, ಆಡಿಟೋರಿಯಂ, ವಿಷ್ಣು (Vishnu Statue) ಪುತ್ಥಳಿ, ಕ್ಲಾಸ್ ರೂಮ್, ಕ್ಯಾಂಟೀನ್ ಏರಿಯಾ, ಹೀಗೆ ಈ ಸ್ಮಾರಕದಲ್ಲಿ ಹತ್ತು ಹಲವು ವಿಶೇಷತೆಗಳಿವೆ. ಇವುಗಳ ಬಗ್ಗೆ ಸಾಹಸ ಸಿಂಹ ವಿಷ್ಣುವರ್ಧನ್ ಅಳಿಯ (Anirudh) ಅನಿರುದ್ಧ ನ್ಯೂಸ್-18  ಕನ್ನಡ ಡಿಜಿಟಲ್ ಜೊತೆಗೆ ಇನ್ನೂ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. ಅವು ಮುಂದಿವೆ ಓದಿ.


ಸಾಹಸ ಸಿಂಹ ವಿಷ್ಣುವರ್ಧನ್ ಮೈಸೂರು ಸ್ಮಾರಕ ಬಹುತೇಕ ರೆಡಿ
ಸಾಹಸ ಸಿಂಹ ವಿಷ್ಣುರ್ಧನ್ ವಿಷಯದಲ್ಲಿ ಎಲ್ಲವೂ ಆಯಿತು ಅನ್ನೋ ಹೊತ್ತಿಗೆ ಇನ್ನೇನೋ ಆಗುತ್ತದೆ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದಲ್ಲಿ ಗೊಂದಲ ಇದ್ದೇ ಇದೆ. ಬೆಂಗಳೂರಿನಲ್ಲಿ ವಿಷ್ಣು ಸ್ಮಾರಕ ಆಗಬೇಕು ಅನ್ನೋ ಅಭಿಮಾನಿಗಳು ಒಂದಷ್ಟು ಜನ ಇದ್ದಾರೆ.


ಆದರೆ ಅದು ಅಷ್ಟು ಸುಲಭದ ಮಾತು ಕೂಡ ಅಲ್ಲ ಬಿಡಿ. ವಿಷ್ಣು ಅಂತ್ಯಕ್ರಿಯೆ ನಡೆದ ಅಭಿಮಾನ ಸ್ಟುಡಿಯೋದ ಸ್ಮಾರಕ ಮಾಡಬೇಕು ಅಂದ್ರೂ ಅದು ಇನ್ನು ಗೊಂದಲದ ಗೂಡೇ ಆಗಿದೆ.


Veteran Actor Vishnuvardhan Mysore Smaraka inaugurate on December 18th this Year
ಡಿಸೆಂಬರ್​ 18ಕ್ಕೆ ಮೈಸೂರಿನಲ್ಲಿರೋ ವಿಷ್ಣು ಸ್ಮಾರಕ ಲೋಕಾರ್ಪಣೆ


ಮೈಸೂರು ವಿಷ್ಣು ಸ್ಮಾರಕದ ಡಿಟೈಲ್ಸ್ ಕೊಟ್ರು ವಿಷ್ಣು ಅಳಿಯ ಅನಿರುದ್ಧ
ಆದರೆ ಸರ್ಕಾರ ಈಗ ವಿಷ್ಣು ಫ್ಯಾಮಿಲಿ ಜೊತೆಗೆ ನಿಂತಿದೆ. ವಿಷ್ಣು ಫ್ಯಾಮಿಲಿಯ ಆಸೆಯಂತೆ ಮೈಸೂರಿನ ಎಚ್.ಡಿ. ಕೋಟೆ ರಸ್ತೆಯ ಹಾಲಾಳು ಸಮೀಪದಲ್ಲಿಯೇ ಈಗ ಭವ್ಯ ಸ್ಮಾರಕ ನಿರ್ಮಾಣ ಆಗಿದೆ.


Shankar Nag: ಶಂಕರ್​ ನಾಗ್ ಅಭಿನಯದ ಎಸ್​ಪಿ ಸಾಂಗ್ಲಿಯಾನ-2 ಸಿನಿಮಾ ರಿ-ರಿಲೀಸ್!


ವಿಷ್ಣು ಸ್ಮಾರಕದ ಬಗ್ಗೆ ಅನಿರುದ್ಧ ಒಂದಷ್ಟು ಮಾಹಿತಿ ಕೊಟ್ಟಿದ್ದಾರೆ. ಆ ಮಾಹಿತಿ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.


-ಮೈಸೂರಿನಲ್ಲಿರೋ ವಿಷ್ಣು ಸ್ಮಾರಕದ ಕೆಲಸ ಶೇಕಡ 90 ರಿಂದ 95 ರಷ್ಟು ಕಂಪ್ಲೀಟ್ ಆಗಿದೆ.
-ಅಪ್ಪಾಜಿ ಅವರ 600 ಫೋಟೋಗಳ ಗ್ಯಾಲರಿ ಯನ್ನ ಕೂಡ ಇಲ್ಲಿ ಮಾಡಲಾಗಿದೆ.
-ವಿಷ್ಣುವರ್ಧನ್ ಅವರ ವಿಭೂತಿಯನ್ನ ಹಾಕಿ ಅಪ್ಪಾಜಿ ಅವರ ಪುತ್ಥಳಿಯನ್ನ ಸ್ಥಾಪಿಸಲಾಗುತ್ತದೆ


- ವಿಷ್ಣು ಸ್ಮಾರಕದಲ್ಲಿ ಎರಡು ಕ್ಲಾಸ್ ರೂಮ್ ಕೂಡ ನಿರ್ಮಾಣ ಮಾಡಲಾಗಿದೆ.


- ಆಡಿಟೋರಿಯಂ ಅನ್ನ ಕೂಡ ಇಲ್ಲಿ ನಿರ್ಮಿಸಲಾಗಿದೆ. ಸಿನಿಮಾ ಮತ್ತು ನಾಟಕಗಳ ಚಟುವಟಿಕೆಗೆ ಇದು ಅನುಕೂಲವಾಗಲಿದೆ.


- ಸ್ಮಾರಕದಲ್ಲಿ ಕ್ಯಾಂಟಿನ್ ವ್ಯವಸ್ಥೆ ಮಾಡಲಾಗಿದೆ.


- ಎರಡು ಮುಕ್ಕಾಲು ಎಕರೆಯಲ್ಲಿ ಇಡೀ ಸ್ಮಾರಕ ನಿರ್ಮಾಣಗೊಂಡಿದೆ.


ಡಿಸೆಂಬರ್​ 18ಕ್ಕೆ ಮೈಸೂರಿನಲ್ಲಿರೋ ವಿಷ್ಣು ಸ್ಮಾರಕ ಲೋಕಾರ್ಪಣೆ
ಅನಿರುದ್ಧ ಈ ಮಾತು ಹೇಳುವಾಗ ತುಂಬಾ ಖುಷಿಯಲ್ಲಿಯೇ ಇದ್ದರು. ಅಂದು ಕೊಂಡಂತೆ ಸ್ಮಾರಕ ರೆಡಿ ಆಗಿದೆ. ವಿಷ್ಣುವರ್ಧನ್ ಅವರ ಸರ್ಕಾರದ ಟ್ರಸ್ಟ್​ ನಿಂದಲೇ ಈ ಎಲ್ಲ ಕೆಲಸ ಆಗಿದೆ.


ಈ ಟ್ರಸ್ಟ್​​ನ ಅಧ್ಯಕ್ಷರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಆಗಿದ್ದಾರೆ. ನಾನು ಮತ್ತು ಅಮ್ಮ ಈ ಟ್ರಸ್ಟ್​ನ ಟ್ರಸ್ಟಿಗಳಾಗಿದ್ದೇವೆ. ಇದೇ ವರ್ಷ ಡಿಸೆಂಬರ್ 18 ರಂದು ಮೈಸೂರಿನಲ್ಲಿ ನಿರ್ಮಾಣಗೊಂಡ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಗೊಳ್ಳಲಿದೆ ಎಂದು ಅನಿರುದ್ಧ ವಿವರಣೆ ಕೊಟ್ಟರು.


Veteran Actor Vishnuvardhan Mysore Smaraka inaugurate on December 18th this Year
ವಿಷ್ಣು ಸ್ಮಾರಕದ ಕೆಲಸ ಶೇಕಡ 90 ರಿಂದ 95 ರಷ್ಟು ಕಂಪ್ಲೀಟ್


ಶೇಕಡ 90 ರಿಂದ 95 ರಷ್ಟು ಸ್ಮಾರಕದ ಕೆಲಸ ಮುಗಿದಿದೆ. ಇನ್ನೇನು ಡಿಸೆಂಬರ್ ಹೊತ್ತಿಗೆ ವಿಷ್ಣು ಸ್ಮಾರಕ ಲೋಕಾರ್ಪಣೆ ಆಗುತ್ತದೆ. ಸರ್ಕಾರ ಕೊಟ್ಟ ಜಾಗದಲ್ಲಿ ಈಗ ಸ್ಮಾರಕ ರೆಡಿ ಆಗಿದೆ. ಫಿಲ್ಮಂ ಆ್ಯಂಡ್ ಟೆಲಿವಿಷನ್ ಇನ್ಟಿಟ್ಯೂಟ್ ಆಫ್ ಇಂಡಿಯಾದ ಶಾಖೆ ದಕ್ಷಿಣ ಭಾರತದಲ್ಲಿ ಎಲ್ಲೂ ಇಲ್ಲ. ಅದು ಮೈಸೂರಿನಲ್ಲಿಯೇ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ ಹೆಸರಿನಲ್ಲಿ ನಿರ್ಮಾಣ ಆಗಬೇಕು ಅನ್ನುವ ಪ್ರಸ್ತಾಪ ಕೂಡ ಇದೆ. ಈ ವಿಷಯದಲ್ಲಿ ಸಿಎಂ ಬಸವರಾಜ್ ಬೊಬ್ಮಾಯಿ ಪಾಸಿಟಿವ್ ಆಗಿಯೇ ಇದ್ದಾರೆ ಎಂದು ಅನಿರುದ್ಧ ತಿಳಿಸಿದರು.


ಸಾಹಸ ಸಿಂಹ ವಿಷ್ಣುವರ್ಧನ್ ವಿಷಯದಲ್ಲಿ ಯಾವುದು ಅಷ್ಟು ಬೇಗ ಆಗಿಯೇ ಇಲ್ಲ. ಈ ಸ್ಮಾರಕ ಕೂಡ ರೆಡಿ ಆಗಲು ಇಷ್ಟೊಂದು ಸಮಯ ತೆಗೆದುಕೊಂಡಿದೆ. ವಿಷ್ಣುವರ್ಧನ್ ಅವರ ಅಭಿಮಾನಿಗಳ ಒಂದು ಬಳಗ ಖುಷಿಯಾಗಿದೆ.


ಇದನ್ನೂ ಓದಿ: Kantara 50 Days: ಕನ್ನಡದ ಕಾಂತಾರ! ಆಸ್ಟ್ರೇಲಿಯಾದಲ್ಲಿ 50 ದಿನ ಪೂರೈಸಿದ ಮೊದಲ ಕನ್ನಡ ಚಿತ್ರ


ಇನ್ನೂ ಒಂದು ಬಳಗ ಬೆಂಗಳೂರಿನಲ್ಲಿಯೇ ಆಗಿದ್ದೇ ಚೆನ್ನಾಗಿತ್ತು ಅಂತಲೂ ಹೇಳುತ್ತಿದೆ. ಒಟ್ಟಾರೆ, ಸಾಹಸ ಸಿಂಹನ ಸ್ಮಾರಕ ರೆಡಿಯಾದ ಖುಷಿಯಲ್ಲಿ ವಿಷ್ಣು ಫ್ಯಾಮಿಲಿ ಖುಷಿಯಲ್ಲಿಯೇ ಇದೆ.

First published: