Mithilesh Chaturvedi Death: ಹಿರಿಯ ನಟ ಮಿಥಿಲೇಶ್ ಚತುರ್ವೇದಿ ನಿಧನ, ಸಿನಿತಾರೆಯರಿಂದ ಸಂತಾಪ

Mithilesh Chaturvedi: ಪಟಿಯಾಲಾ ಬೇಬ್ಸ್‌ನಂತಹ ಅನೇಕ ಧಾರಾವಾಹಿಗಳು ಮತ್ತು ಜಾಹೀರಾತುಗಳಲ್ಲಿ ಮತ್ತು ಸ್ಕ್ಯಾಮ್‌ನಂತಹ ವೆಬ್ ಶೋಗಳಲ್ಲಿ ಅವರು ರಾಮ್ ಜೇಠ್ಮಲಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಮಿಥಿಲೇಶ್ ಚತುರ್ವೇದಿ

ಮಿಥಿಲೇಶ್ ಚತುರ್ವೇದಿ

  • Share this:
ಹಿರಿಯ ನಟ ಮಿಥಿಲೇಶ್ ಚತುರ್ವೇದಿ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಚಲನಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ ತಮ್ಮ Instagram ನಲ್ಲಿ ಈ ನೋವಿನ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮಿಥಿಲೇಶ್ ಅವರ ಫೋಟೋ ಹಂಚಿಕೊಂಡಿರುವ ಅವರು, "RIP Mithileshji" ಎಂದು ಬರೆದುಕೊಂಡಿದ್ದಾರೆ. ವರದಿಯ ಪ್ರಕಾರ, ಮಿಥಿಲೇಶ್ ಚತುರ್ವೇದಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಆಗಸ್ಟ್ 3 ರಂದು ನಿಧನರಾಗಿದ್ದಾರೆ. ಅವರ ಅಳಿಯ ಆಶಿಶ್ ಕೂಡ ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ಪೋಸ್ಟ್​ ಹಂಚಿಕೊಳ್ಳುವ ಮೂಲಕ ಸಾವಿಗೆ ಸಂತಾಪ ಸೂಚಿಸಿದ್ದಾರೆ. 

ಭಾವನಾತ್ಮಕ ಪೋಸ್ಟ್​ ಹಂಚಿಕೊಂಡ ಅಳಿಯ

ಆಪ್ ದುನಿಯಾ ಕೆ ಸಬ್ಸೆ ಆಚೆ ಪಿತಾ ಥೆ, ಆಪ್ನೆ ಮುಝೆ ಧಮಾದ್ ನಹಿ ಬಾಲ್ಕಿ ಏಕ್ ಬೇಟೆ ಕಿ ತಾರಾ ಪ್ರೇಮ್ ದಿಯಾ. ಭಗವಾನ್ ಆಪ್ಕಿ ಆತ್ಮಾ ಕೋ ಶಾಂತಿ ಪ್ರದಾನ್ ಕರೇ (ನೀವು ವಿಶ್ವದ ಅದ್ಭುತ ತಂದೆ, ನೀವು ನನಗೆ ನಿಮ್ಮ ಸ್ವಂತ ಮಗನಂತೆ ಪ್ರೀತಿಯನ್ನು ನೀಡಿದ್ದೀರಿ. ನಿಮ್ಮ ಆತ್ಮಕ್ಕೆ ಶಾಮತಿ ಸಿಗಲಿ)" ಎಂದು ಆಶಿಶ್ ಪೋಸ್ಟ್ ಮಾಡಿದ್ದು, ನಟನ ಕೆಲ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

ಸಾವಿನ ಸುದ್ದಿ ತಿಳಿದ ನಂತರ ನೆಟಿಜನ್‌ಗಳು ಸಹ ನಟನ ನಿದನಕ್ಕೆ ಸಂತಾಪ ಸೂಚಿಸಿದ್ದಾರೆ. ಪ್ರಸಿದ್ಧ ರಂಗಭೂಮಿ ಮತ್ತು ಚಲನಚಿತ್ರ ನಟ #ಮಿಥಿಲೇಶ್ ಚತುರ್ವೇದಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವೀಟ್ ಮಾಡಿದ್ದಾರೆ. ಇದು ದುಃಖದ ಸುದ್ದಿ, ಶಾಂತಿಯಿಂದ ವಿಶ್ರಾಂತಿ ಮಾಡಿ ಸಾರ್" ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕಿಚ್ಚನಿಗೆ ತಿನ್ನೋದಕ್ಕಿಂತ ಅಡುಗೆ ಮಾಡಿ ಬಡಿಸೋದು ಇಷ್ಟವಂತೆ! ವಿಮಾನ ಹಾರಿಸುವ ಕನಸು ಬಿಚ್ಚಿಟ್ಟ ವಿಕ್ರಾಂತ್ ರೋಣ

ಮಿಥಿಲೇಶ್ ಚತುರ್ವೇದಿ ದಶಕಗಳಿಂದ ಮನರಂಜನಾ ಕ್ಷೇತ್ರದಲ್ಲಿದ್ದಾರೆ. ಅವರು ಹೃತಿಕ್ ರೋಷನ್ ಜೊತೆ ಕೋಯಿ ಮಿಲ್ ಗಯಾ, ಸನ್ನಿ ಡಿಯೋಲ್ ಜೊತೆ ಗದರ್ ಏಕ್ ಪ್ರೇಮ್ ಕಥಾ, ಸತ್ಯ, ಬಂಟಿ ಔರ್ ಬಬ್ಲಿ, ಕ್ರಿಶ್, ತಾಲ್, ರೆಡಿ, ಅಶೋಕ ಮತ್ತು ಫಿಜಾ ಸೇರಿದಂತೆ ಕೆಲವು ದೊಡ್ಡ ಬಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ವರದಿಗಳ ಪ್ರಕಾರ, ಮಿಥಿಲೇಶ್ ಅವರು ಮಣಿನೀ ದೇ ಅವರೊಂದಿಗೆ ತಳ್ಳಿ ಜೋಡಿ ಎಂಬ ವೆಬ್ ಸರಣಿಯನ್ನು ಸಹ ಮಾಡಿದ್ದಾರೆ.

ಇದನ್ನೂ ಓದಿ: ಇಂದು ಕಿಶೋರ್ ಕುಮಾರ್ ಜನ್ಮದಿನ, ಸ್ವರಮಾಂತ್ರಿಕನ ಹಾಡುಗಳು ಎಂದಿಗೂ ಅಜರಾಮರ

ಅನೇಕ ಧಾರಾವಾಹಿಗಳಲ್ಲಿ ಸಹ ನಟಿಸಿದ್ದರು.

ಪಟಿಯಾಲಾ ಬೇಬ್ಸ್‌ನಂತಹ ಅನೇಕ ಧಾರಾವಾಹಿಗಳು ಮತ್ತು ಜಾಹೀರಾತುಗಳಲ್ಲಿ ಮತ್ತು ಸ್ಕ್ಯಾಮ್‌ನಂತಹ ವೆಬ್ ಶೋಗಳಲ್ಲಿ ಅವರು ರಾಮ್ ಜೇಠ್ಮಲಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಮಿತಾಭ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ಅವರೊಂದಿಗೆ ಗುಲಾಬೋ ಸಿತಾಬೋ ಅವರ ಕೊನೆಯ ಚಿತ್ರ.
Published by:Sandhya M
First published: