Jagdeep Passes away: 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ನಟ ಜಗದೀಪ್ ನಿಧನ

1975ರಲ್ಲಿ ತೆರೆಕಂಡ ಅಮಿತಾಭ್​ ಬಚ್ಚನ್​ ನಟನೆಯ ಸೂಪರ್​ ಹಿಟ್​ ಸಿನಿಮಾ ಶೋಲೆದಲ್ಲಿ ನಟಿಸಿ ಖ್ಯಾತಿ ಹೆಚ್ಚಿಸಿಕೊಂಡರು. ಇದೇ ಸಿನಿಮಾ ಆಧರಿಸಿ ಸೂರ್ಮಾ ಭೋಪಾಲಿ ಹೆಸರಿನ ಚಿತ್ರವನ್ನು ನಿರ್ದೇಶನ ಮಾಡಿ,  ನಟಿಸಿದ್ದರು.

news18-kannada
Updated:July 9, 2020, 8:17 AM IST
Jagdeep Passes away: 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ನಟ ಜಗದೀಪ್ ನಿಧನ
ಜಗದೀಪ್​
  • Share this:
ಸೂಪರ್​ ಹಿಟ್​ ಸಿನಿಮಾ ಶೋಲೆ ಖ್ಯಾತಿಯ ಜಗದೀಪ್​ ಅವರು ಇಂದು ಮೃತಪಟ್ಟಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಗದೀಪ್​, ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಸಯ್ಯದ್​ ಇಷ್ತಿಯಾಕ್ ಅಹ್ಮದ್ ಜಫ್ರಿ ಇವರ ಮೊದಲ ಹೆಸರು. ನಂತರ ಅವರು ಜಗದೀಪ್​ ಎಂದೇ ಗುರುತಿಸಿಕೊಂಡರು. 1951ರಲ್ಲಿ ತೆರೆಕಂಡ ಬಿಆರ್​ ಚೋಪ್ರಾ ನಿರ್ದೇಶನದ ಅಫ್ಸಾನಾ ಸಿನಿಮಾ ಮೂಲಕ ಬಾಲ ಕಲಾವಿದನಾಗಿ ಬಣ್ಣದ ಜಗತ್ತಿಗೆ ಜಗದೀಪ್​ ಕಾಲಿಟ್ಟಿದ್ದರು. ನಂತರ ಅಬ್​ ದಿಲ್ಲಿ ದೂರ್​ ನಹಿ​, ಮುನ್ನಾ ಸಿನಿಮಾದಲ್ಲೂ ಬಾಲ ಕಲಾವಿದನಾಗಿ ಜಗದೀಪ್​ ನಟಿಸಿದ್ದರು.

ನಂತರ ಜಗದೀಪ್,​ ಭಾಬಿ, ಭರ್ಕಾ ಮತ್ತು ಬಿಂದಾಯಾ ಚಿತ್ರಗಳಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದರು. ಶಮಿ ಕಪೂರ್​ ಮುಖ್ಯಭೂಮಿಕೆಯಲ್ಲಿದ್ದ ಬ್ರಹ್ಮಚಾರಿ ಸಿನಿಮಾದಲ್ಲಿ ಜಗದೀ​ಪ್​ ಮೊಟ್ಟ ಮೊದಲ ಬಾರಿಗೆ ಹಾಸ್ಯ ನಟನಾಗಿ ಕಾಣಿಸಿಕೊಂಡಿದ್ದರು. ಕಾಮಿಡಿ ನಟನಾಗಿ ಕಾಣಿಸಿಕೊಳ್ಳಲು ಅವರಿಗೆ ಸ್ಫೂರ್ತಿ ನೀಡಿತ್ತು.

1975ರಲ್ಲಿ ತೆರೆಕಂಡ ಅಮಿತಾಭ್​ ಬಚ್ಚನ್​ ನಟನೆಯ ಸೂಪರ್​ ಹಿಟ್​ ಸಿನಿಮಾ ಶೋಲೆದಲ್ಲಿ ನಟಿಸಿ ಖ್ಯಾತಿ ಹೆಚ್ಚಿಸಿಕೊಂಡರು. ಇದೇ ಸಿನಿಮಾ ಆಧರಿಸಿ ಸೂರ್ಮಾ ಭೋಪಾಲಿ ಹೆಸರಿನ ಚಿತ್ರವನ್ನು ನಿರ್ದೇಶನ ಮಾಡಿ,  ನಟಿಸಿದ್ದರು. ಅವರ ಸಾವಿಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿದಿದೆ.
Published by: Rajesh Duggumane
First published: July 9, 2020, 8:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading