ಸೌತ್ನ ಹಿರಿಯ ನಟ ಛಲಪತಿ ರಾವ್ (Chalapathi Rao) ಅವರು ಹೃದಯಾಘಾತದಿಂದ (Cardiac Arrest) ಭಾನುವಾರ ಡಿಸೆಂಬರ್ 25ರಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಛಲಪತಿ ರಾವ್ ತೆಲುಗು ಚಿತ್ರರಂಗದಲ್ಲಿ ಕಾಮಿಕ್ ಮತ್ತು ಖಳನಾಯಕನ (Villain Role) ಪಾತ್ರಗಳನ್ನು ಮಾಡಿ ಹೆಸರುವಾಸಿಯಾಗಿದ್ದರು. 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹಿರಿಮೆ ಇವರಿಗಿದೆ. ರಾವ್ ಆಂಧ್ರಪ್ರದೇಶದ (Andhra Pradesh) ಬಲಿಪರ್ರು ಮೂಲದವರು. ಅವರ ಮಗ ರವಿಬಾಬು ಕೂಡ ಟಾಲಿವುಡ್ನಲ್ಲಿ (Tollywood) ನಟ, ಚಲನಚಿತ್ರ ನಿರ್ಮಾಪಕ. ರಾವ್ ಅವರು ಸಾಕ್ಷಿ (1966), ಡ್ರೈವರ್ ರಾಮುಡು (1979), ವಜ್ರಂ (1995), ಮತ್ತು ಬಾಲಿವುಡ್ ಸಿನಿಮಾ ಕಿಕ್ (2009) ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ಅವರ ಸಾವಿನ ಸುದ್ದಿ ಹೊರಬಂದ ನಂತರ ಅವರ ಅಭಿಮಾನಿಗಳು ಟ್ವಿಟರ್ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಸ್ಟಾರ್ ನಟರಿಂದ ತೊಡಗಿ ಅಭಿಮಾನಿಗಳ ತನಕ ಬಹಳಷ್ಟು ಜನರು ಸಂತಾತ ಸೂಚಿಸಿದ್ದಾರೆ. ಅನೇಕರು ಅವರನ್ನು ಪ್ರಸ್ತುತ ಪೀಳಿಗೆಯ 'ಉತ್ತಮ ಮತ್ತು ಧೈರ್ಯಶಾಲಿ' ನಟ ಎಂದು ಹೊಗಳಿದ್ದಾರೆ.
ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅವರ ಹಳೆಯ ಸಿನಿಮಾಗಳ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಒಬ್ಬರು ನಟನ ಕುರಿತು ಬರೆದು, ಹಿಂದಿನ ಮತ್ತು ಇಂದಿನ ಪೀಳಿಗೆಯ ಅತ್ಯುತ್ತಮ ಮತ್ತು ಧೈರ್ಯಶಾಲಿ ನಟ. ಓಂ ಶಾಂತಿ, ನಿಮ್ಮನ್ನು ಮತ್ತು ನಿಮ್ಮ ಪಾತ್ರಗಳನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಬರೆದಿದ್ದಾರೆ. ಮತ್ತೊಬ್ಬರು ಸಂತಾಪ ಸೂಚಿಸಿ, ನಾವು ಇನ್ನೊಬ್ಬ ಶ್ರೇಷ್ಠ ನಟನನ್ನು ಕಳೆದುಕೊಂಡೆವು ಎಂದಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ ಇದು ನೋವಿನ ವರ್ಷ ಎಂದಿದ್ದಾರೆ.
ಅವರು ತಮ್ಮ ಪತ್ನಿ ಇಂದುಮತಿ ಮತ್ತು ಅವರ ಮೂವರು ಮಕ್ಕಳನ್ನು ಅಗಲಿದ್ದಾರೆ. ಅವರಲ್ಲಿ ಒಬ್ಬರು ನಟ-ಚಲನಚಿತ್ರ ನಿರ್ಮಾಪಕ ರವಿಬಾಬು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ