HOME » NEWS » Entertainment » VETERAN ACTOR ASHOK RESIGNS FOR KARNATAKA FILM ARTISTS WORKERS UNION SESR HTV

Kannada Actor Ashok: ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ಅಶೋಕ್‌ ರಾಜೀನಾಮೆ; 30 ವರ್ಷ ಸುದೀರ್ಘ ಸೇವೆ ಸಲ್ಲಿಸಿದ ಹಿರಿಯ ನಟ

ಈಗ ನನ್ನ ವಯಸ್ಸು 65 ದಾಟಿದೆ. ನಿವೃತ್ತಿಯ ವಯಸ್ಸಾಗಿದೆ. ಹಲವು ಹೊಸ ಸವಾಲುಗಳು ನಮ್ಮ ಮುಂದಿವೆ. ಈ ವಯಸ್ಸಿನಲ್ಲಿ ಹೆಚ್ಚಾಗಿ ಓಡಾಡುತ್ತಾ, ಒಕ್ಕೂಟಕ್ಕೆ ಶ್ರಮಿಸಲು ಕಷ್ಟ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ- ಅಶೋಕ್​

news18-kannada
Updated:January 6, 2021, 10:18 PM IST
Kannada Actor Ashok: ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ಅಶೋಕ್‌ ರಾಜೀನಾಮೆ; 30 ವರ್ಷ ಸುದೀರ್ಘ ಸೇವೆ ಸಲ್ಲಿಸಿದ ಹಿರಿಯ ನಟ
ಈಗ ನನ್ನ ವಯಸ್ಸು 65 ದಾಟಿದೆ. ನಿವೃತ್ತಿಯ ವಯಸ್ಸಾಗಿದೆ. ಹಲವು ಹೊಸ ಸವಾಲುಗಳು ನಮ್ಮ ಮುಂದಿವೆ. ಈ ವಯಸ್ಸಿನಲ್ಲಿ ಹೆಚ್ಚಾಗಿ ಓಡಾಡುತ್ತಾ, ಒಕ್ಕೂಟಕ್ಕೆ ಶ್ರಮಿಸಲು ಕಷ್ಟ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ- ಅಶೋಕ್​
  • Share this:
1987-88ರ ಸಮಯದಲ್ಲಿ ಕನ್ನಡ ಚಲನಚಿತ್ರ ರಂಗದಲ್ಲಿ ದುಡಿಯುತ್ತಿರುವ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ, ಅವರಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಕನ್ನಡ ಚಲನಚಿತ್ರ ಕಾರ್ಮಿಕರ ಒಕ್ಕೂಟವನ್ನು ಸ್ಥಾಪಿಸಲಾಗಿತ್ತು. ಅದನ್ನು ಸ್ಥಾಪಿಸಿದ ಬಳಿಕ ಖುದ್ದು ಹಿರಿಯ ನಟ ಅಶೋಕ್‌ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದರು. ಈ ಹಿಂದೆಯೇ ಹಲವು ಬಾರಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಇಂಗಿತ ವ್ಯಕ್ತಪಡಿಸಿದ್ದರೂ ಚಿತ್ರರಂಗದ ಪ್ರಮುಖರ ಒತ್ತಾಯದ ಮೇರೆಗೆ ಮುಂದುವರಿದಿದ್ದರು. ಈಗ ಬರೋಬ್ಬರಿ 3 ದಶಕಗಳ ಸುದೀರ್ಘ ಸಮಯದ ಬಳಿಕ ಅವರೇ ರಾಜೀನಾಮೆ ಸಲ್ಲಿಸಿದ್ದಾರೆ.  ವೈಯಕ್ತಿಕ ಕಾರಣಗಳಿಂದಾಗಿ ಈ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ಕನ್ನಡ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ರಾಜೀನಾಮೆ ನೀಡಿದ ಕುರಿತು ನ್ಯೂಸ್‌ 18 ಕನ್ನಡಕ್ಕೆ ಮಾತನಾಡಿದ ಹಿರಿಯ ನಟ ಅಶೋಕ್‌, ʻಈಗ ನನ್ನ ವಯಸ್ಸು 65 ದಾಟಿದೆ. ಸಿನಿಮಾಗಳಲ್ಲೂ ನಟಿಸುವ ಅವಕಾಶಗಳು ಸಿಗುತ್ತಿಲ್ಲ. ನಿವೃತ್ತಿಯ ವಯಸ್ಸಾಗಿದೆ. ಹಲವು ಹೊಸ ಸವಾಲುಗಳು ನಮ್ಮ ಮುಂದಿವೆ. ಈ ವಯಸ್ಸಿನಲ್ಲಿ ಹೆಚ್ಚಾಗಿ ಓಡಾಡುತ್ತಾ, ಒಕ್ಕೂಟಕ್ಕೆ ಶ್ರಮಿಸಲು ಕಷ್ಟ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆʼ ಎಂದಿದ್ದಾರೆ.

ಸಿಸಿಐ ಅರ್ಥಾತ್‌ ಕಾಂಪಿಟಿಷನ್‌ ಕಮಿಷನ್‌ ಆಫ್‌ ಇಂಡಿಯಾದಿಂದಲೂ ಕಾರ್ಮಿಕರ ಒಕ್ಕೂಟ ಸ್ಥಾಪಿಸುವಂತಿಲ್ಲ ಎಂದು ತಾಕೀತು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಗೆ ಹೋಗಬೇಕು. ಕೋರ್ಟ್‌ನಲ್ಲೂ ಹೋರಾಡಬೇಕು. ಈ ವಯಸ್ಸಿನಲ್ಲಿ ಓಡಾಡಲು ಕಷ್ಟ. ಇಂತಹ ಸವಾಲುಗಳನ್ನು ಎದುರಿಸಿಕೊಂಡು ಒಕ್ಕೂಟವನ್ನು ಸಮರ್ಥವಾಗಿ ಮುನ್ನಡೆಸಬಲ್ಲವರು ಯಾರಾದರೂ ಈ ಜವಾಬ್ದಾರಿಯನ್ನು ವಹಿಸಿಕೊಂಡರೆ ಖುಷಿಯ ವಿಷಯ ಎಂದು ಹಿರಿಯ ನಟ ಅಶೋಕ್‌ ತಿಳಿಸಿದ್ದಾರೆ.

1975ರ ಹೆಣ್ಣು ಸಂಸಾರದ ಕಣ್ಣು ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅಶೋಕ್‌ ಅವರು ಬಳಿಕ ಸನಾದಿ ಅಪ್ಪಣ್ಣ, ಬಯಲು ದಾರಿ, ಭಾಗ್ಯವಂತರು, ರಂಗನಾಯಕಿ, ಕ್ರಾಂತಿಯೋಗಿ ಬಸವಣ್ಣ, ಜನುಮದ ಜೋಡಿ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 2019ರಲ್ಲಿ ಬಿಡುಗಡೆಯಾದ‌ ಆದ ಅಧ್ಯಕ್ಷ ಇನ್‌ ಅಮೆರಿಕಾ ಬಳಿಕ ಅವರು ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿಲ್ಲ. ಈಗ 69 ವರ್ಷ ವಯಸ್ಸಾಗಿದ್ದು, 70 ವರ್ಷದ ಬಾಗಿಲಲ್ಲಿ ನಿಂತಿದ್ದಾರೆ.  ಅದು ಅಲ್ಲದೇ ಕೊರೊನಾ ಹಾವಳಿಯಿಂದಾಗಿ ಮೊದಲಿನಂತೆ ಹೆಚ್ಚು ಹುಮ್ಮಸ್ಸಿನಿಂದ ಓಡಾಡಲು ಸಾಧ್ಯವಾಗದ ಆತಂಕದಿಂದಲ್ಲಿ ಅವರು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗಂತ ಚಿತ್ರರಂಗಕ್ಕೆ ಗುಡ್‌ಬೈ ಎಂದಿದ್ದಾರೆ ಅಂತರ್ಥವಲ್ಲ. ಬದಲಾಗಿ ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತ ನಟಿಸುವುದಾಗಿಯೂ ಅಶೋಕ್‌ ತಿಳಿಸಿದ್ದಾರೆ.
Published by: Seema R
First published: January 6, 2021, 10:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories