Kichcha Sudeep: ಕ್ರಿಕೆಟಿಗನ ಪಾತ್ರದಲ್ಲಿ ಕಿಚ್ಚ ಸುದೀಪ್: 300 ಕೋಟಿ ಬಜೆಟ್​ನಲ್ಲಿ ನಿರ್ಮಾಣಗೊಳ್ಳಲಿದೆ ಈ ಸಿನಿಮಾ​..!​

Kichcha Sudeep: ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಕ್ರೀಡಾ ಆಧಾರಿತ ಸಿನಿಮಾಗಳು ಬಂದಿರುವುದು ಕಡಿಮೆ. ಇತ್ತೀಚೆಗೆ ತೆಲುಗಿನಲ್ಲಿ ನಾನಿ ಅಭಿನಯದ ಜೆರ್ಸಿ ತೆರೆ ಕಂಡು ಯಶಸ್ಸು ಕಂಡಿತು. ಅದರಂತೆ ಇಕ್ಬಾಲ್​, ದಂಗಲ್​  ಹಾಗೂ ಸುಲ್ತಾನ್​ ನಂತಹ ಕ್ರೀಡಾ ಆಧಾರಿತ ಸಿನಿಮಾಗಳು ತೆರೆ ಕಂಡು ಹಿಟ್ ಆಗಿವೆ. ಈಗ ಕನ್ನಡದಲ್ಲೂ ಈ ಕ್ರೀಡಾ ಆಧಾರಿತ ಸಿನಿಮಾಗಳ ಮೇನಿಯ ಆರಂಭವಾದಂತಿದೆ. 

Anitha E | news18-kannada
Updated:September 11, 2019, 6:23 PM IST
Kichcha Sudeep: ಕ್ರಿಕೆಟಿಗನ ಪಾತ್ರದಲ್ಲಿ ಕಿಚ್ಚ ಸುದೀಪ್: 300 ಕೋಟಿ ಬಜೆಟ್​ನಲ್ಲಿ ನಿರ್ಮಾಣಗೊಳ್ಳಲಿದೆ ಈ ಸಿನಿಮಾ​..!​
ಸುದೀಪ್
Anitha E | news18-kannada
Updated: September 11, 2019, 6:23 PM IST
ಇದೇ ಮೊದಲ ಬಾರಿಗೆ ಬಾಕ್ಸಿಂಗ್​ ರಿಂಗ್​ನಲ್ಲಿ ಕಿಚ್ಚ ಸುದೀಪ್ ಕೈ ಮಿಲಾಯಿಸಲಿದ್ದಾರೆ. ನಾಳೆ ಅವರ ಬಹುನಿರೀಕ್ಷಿತ ಸಿನಿಮಾ ಬಿಡುಗಡೆಯಾಗಲಿಗೆ. ಹೀಗಿರುವಾಗಲೇ ಕಿಚ್ಚ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ.

ಹೌದು, ಕಿಚ್ಚ ಒಬ್ಬ ಒಳ್ಳೆಯ ಕ್ರಿಕೆಟ್​ ಆಟಗಾರ. ಅವರು ಬ್ಯಾಟ್​ ಹಿಡಿದು ಮೈದಾನಕ್ಕೆ ಇಳಿದರೆ ಬೌಲರ್​ಗಳ ಬೆವರಿಳಿಸುತ್ತಾರೆ. ಸಿಸಿಎಲ್​ ಸಮಯದಲ್ಲಿ ಮಾತ್ರ ಸುದೀಪ್​ ಕ್ರಿಕೆಟ್​ ಆಡುವುದನ್ನು ​ಅಭಿಮಾನಿಗಳು ನೋಡಬಹುದಿತ್ತು. ಆದರೆ ಬೆಳ್ಳಿ ತೆರೆ ಮೇಲೆ ಅವರನ್ನು ಕ್ರಿಕೆಟ್ ಆಟಗಾರನಾಗಿ ನೋಡುವ ಅವಕಾಶ ಆದಷ್ಟು ಬೇಗ ಸಿಗಲಿದೆ.

Sudeep Cricket
ಲಂಡನ್​ನಲ್ಲಿ ಕ್ರಿಕೆಟ್​ ಆಡಿ ಗೆದ್ದ ಸುದೀಪ್​


Actor Kichcha Sudeep Played Cricket in London and won the match
ಲಂಡನ್​ನಲ್ಲಿ ಕ್ರಿಕೆಟ್​ ಆಡಿ ಗೆದ್ದ ಕಿಚ್ಚ


ಹೀಗೆಂದು ಖುದ್ದು ಕಿಚ್ಚ ಸುದೀಪ್​ ಹೇಳಿಕೊಂಡಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ನಡೆದ 'ಪೈಲ್ವಾನ್​' ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ನಲ್ಲಿ ಮಾತನಾಡುತ್ತಾ ಈ ವಿಷಯ ಪ್ರಸ್ತಾಪಿಸಿದ್ದಾರೆ ಸುದೀಪ್​.

ಇದನ್ನೂ ಓದಿ: Pailwaan: ಸಲ್ಮಾನ್​​ಗಾಗಿ ಮುಂಬೈನಲ್ಲಿ ನಡೆಯಲಿದೆ ಪೈಲ್ವಾನ್​ ಸಿನಿಮಾದ ವಿಶೇಷ ಪ್ರದರ್ಶನ

ಹೌದು, 'ಪೈಲ್ವಾನ್​' ಚಿತ್ರದ ವಿತರಣೆ ಮಾಡುತ್ತಿರುವ ಕಾರ್ತಿಕ್​ ಗೌಡ ಸುದೀಪ್​ಗಾಗಿ ಭಾರೀ ಬಜೆಟ್​ನ ಸಿನಿಮಾವನ್ನು ನಿರ್ಮಿಸಲಿದ್ದಾರಂತೆ. 200- 300 ಕೋಟಿ ಬಜೆಟ್​ನಲ್ಲಿ ಈ ಸಿನಿಮಾ ಸೆಟ್ಟೇರಲಿದ್ದು, ಇದರಲ್ಲಿ ಕಿಚ್ಚ ಕ್ರಿಕೆಟ್​ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಒಂದು ವೇಳೆ ಇಷ್ಟು ಬಜೆಟ್​ನಲ್ಲಿ ಸಿನಿಮಾ ನಿರ್ಮಾಣಗೊಂಡರೆ ಅದು ಸ್ಯಾಂಡಲ್​ವುಡ್​ನಲ್ಲಿ ಇತಿಹಾಸವಾಗಲಿದೆ.
Loading...

ಇದನ್ನೂ ಓದಿ: Dabangg 3 Kannada Movie: ದಬಂಗ್​ 3 ಮೋಷನ್​ ಪೋಸ್ಟರ್​ ರಿಲೀಸ್​: ಕನ್ನಡದಲ್ಲಿ ಸಲ್ಮಾನ್​ ಡೈಲಾಗ್ ಹೇಗಿದೆ ಗೊತ್ತಾ..?​

ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಕ್ರೀಡಾ ಆಧಾರಿತ ಸಿನಿಮಾಗಳು ಬಂದಿರುವುದು ಕಡಿಮೆ. ಇತ್ತೀಚೆಗೆ ತೆಲುಗಿನಲ್ಲಿ ನಾನಿ ಅಭಿನಯದ 'ಜೆರ್ಸಿ' ತೆರೆ ಕಂಡು ಯಶಸ್ಸು ಕಂಡಿತು. ಅದರಂತೆ 'ಇಕ್ಬಾಲ್​', 'ದಂಗಲ್'​  ಹಾಗೂ 'ಸುಲ್ತಾನ್​' ನಂತಹ ಕ್ರೀಡಾ ಆಧಾರಿತ ಸಿನಿಮಾಗಳು ತೆರೆ ಕಂಡು ಹಿಟ್ ಆಗಿವೆ. ಈಗ ಕನ್ನಡದಲ್ಲೂ ಈ ಕ್ರೀಡಾ ಆಧಾರಿತ ಸಿನಿಮಾಗಳ ಮೇನಿಯ ಆರಂಭವಾದಂತಿದೆ.

 

 

Evelyn Sharma: ವೈರಲ್​ ಆಯ್ತು 'ಸಾಹೋ' ಬ್ಯೂಟಿಯ ಬಿಕಿನಿ ಫೋಟೋಗಳು

First published:September 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...