ಮೊದಲ ದಿನ ಪ್ರೇಕ್ಷಕರ ನೀರಸ ಪ್ರತಿಕ್ರಿಯೆ: ವೀಕೆಂಡ್‌ನತ್ತ ಎಲ್ಲರ ಚಿತ್ತ!

ಎಸ್‌ಪಿ ರಸ್ತೆಯ ಶಾರದಾ ಥಿಯೇಟರ್‌ನಲ್ಲಿ ಜಯಮ್ಮನ ಮಗ ಖ್ಯಾತಿಯ ನಿರ್ದೇಶಕ ವಿಕಾಸ್‌ ನಾಯಕನಾಗಿ ನಟಿಸಿ, ನಿರ್ದೇಶಿಸಿದ್ದ ಕಾಣದಂತೆ ಮಾಯವಾದನು ಸಿನಿಮಾ ಪ್ರದರ್ಶನವಿತ್ತು. ಬೆಳಗ್ಗೆ 10:15ಕ್ಕೆ ಹಾಗೂ ಮಧ್ಯಾಹ್ನ 1:15ಕ್ಕೆ ಎರಡು ಶೋಗಳಿದ್ದವು. ಬೆಳಗಿನ ಶೋಗೆ ಕೇವಲ 9 ಮಂದಿ ಪ್ರೇಕ್ಷಕರು ಮಾತ್ರ ಬಂದಿದ್ದರು.

news18-kannada
Updated:October 15, 2020, 5:10 PM IST
ಮೊದಲ ದಿನ ಪ್ರೇಕ್ಷಕರ ನೀರಸ ಪ್ರತಿಕ್ರಿಯೆ: ವೀಕೆಂಡ್‌ನತ್ತ ಎಲ್ಲರ ಚಿತ್ತ!
ಸಾಂದರ್ಭಿಕ ಚಿತ್ರ
  • Share this:
ಅನ್‌ಲಾಕ್‌ 5 ಘೋಷಣೆಯಾಗಿ ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳನ್ನು ತೆರೆಯಲು ಅನುಮತಿ ನೀಡಿದ್ದೇ, ಭಾರತದಾದ್ಯಂತ ಎಲ್ಲರ ಚಿತ್ರರಂಗಗಳಲ್ಲೂ ಹೊಸ ಹುರುಪು ಮೂಡಿತ್ತು. ಪ್ರೇಕ್ಷಕರು ಸಿನಿಮಾ ಮಂದಿರಗಳಿಗೆ ಬರುತ್ತಾರಾ..? ಇಲ್ಲವಾ..? ಎಂಬ ಅನುಮಾನ ಕಾಡಲಾರಂಭಿಸಿತ್ತು. ಜೊತೆಗೆ ನಿರ್ಮಾಪಕರು ಹಾಗೂ ಪ್ರದರ್ಶಕರ ನಡುವಿನ ಗೊಂದಲ ಹಾಗೂ ನಿರ್ಮಾಪಕರು ಹಾಗೂ ಡಿಜಿಟಲ್‌ ಸರ್ವೀಸ್‌ ಪ್ರೊವೈಡರ್‌ಗಳ ಹಗ್ಗಜಗ್ಗಾಟದಿಂದಾಗಿ ಬರೋಬ್ಬರಿ 7 ತಿಂಗಳ ಬಳಿಕ ಇಂದು ಥಿಯೇಟರ್‌ಗಳು ಓಪನ್‌ ಆದರೂ ಹೊಸ ಸಿನಿಮಾಗಳು ರಿಲೀಸ್‌ ಆಗಿಲ್ಲ. ಕೊರೋನಾ ಭಯದ ಜತೆಗೆ ಈಗಾಗಲೇ ಥಿಯೇಟರ್‌ಗಳಲ್ಲಿ ಹಾಗೂ ಓಟಿಟಿಗಳಲ್ಲಿ ರಿಲೀಸ್‌ ಆಗಿರುವ, ಟಿವಿಯಲ್ಲೂ ಪ್ರಸಾರವಾಗಿರುವ ಸಿನಿಮಾಗಳನ್ನೇ ಮತ್ತೆ ರೀ-ರಿಲೀಸ್‌ ಮಾಡಿರುವ ಪರಿಣಾಮ ಪ್ರೇಕ್ಷಕ ಮಹಾಪ್ರಭು ಥಿಯೇಟರ್‌ಗಳತ್ತ ಮುಖ ಮಾಡಲು ಉತ್ಸಾಹ ತೋರಿಲ್ಲ. ಹೌದು, ಲಾಕ್​ಡೌನ್​ ಅನ್‌ಲಾಕ್‌ ಆಗಿದ್ದರೂ ಸಹ ರಾಜ್ಯದ ಹಲವೆಡೆಗಳಲ್ಲಿ ಥಿಯೇಟರ್‌ಗಳು ಬಾಗಿಲು ತೆರೆದಿಲ್ಲ.

ಮೂರು ತಿಂಗಳ ಹಿಂದೆಯೇ ಸಿನಿಮಾ ರಿಲೀಸ್‌ಗೆ ಉತ್ಸಾಹ ತೋರಿದ್ದ ಮಲ್ಟಿಪ್ಲೆಕ್ಸ್‌ಗಳು ಸಹ ಸದ್ಯ ಮೌನವಹಿಸಿವೆ. ಹೀಗಾಗಿಯೇ ಕೆಲವೇ ಥಿಯೇಟರ್‌ಗಳಲ್ಲಿ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಇವತ್ತು ಕೆಲವೇ ಶೋಗಳನ್ನು ಪ್ಲ್ಯಾನ್‌ ಮಾಡಲಾಗಿತ್ತು.

After 7 months theaters reopened and not getting good response from movie lovers
ಶಾರದಾ ಚಿತ್ರಮಂದಿರ


ಎಸ್‌ಪಿ ರಸ್ತೆಯ ಶಾರದಾ ಥಿಯೇಟರ್‌ನಲ್ಲಿ ಜಯಮ್ಮನ ಮಗ ಖ್ಯಾತಿಯ ನಿರ್ದೇಶಕ ವಿಕಾಸ್‌ ನಾಯಕನಾಗಿ ನಟಿಸಿ, ನಿರ್ದೇಶಿಸಿದ್ದ ಕಾಣದಂತೆ ಮಾಯವಾದನು ಸಿನಿಮಾ ಪ್ರದರ್ಶನವಿತ್ತು. ಬೆಳಗ್ಗೆ 10:15ಕ್ಕೆ ಹಾಗೂ ಮಧ್ಯಾಹ್ನ 1:15ಕ್ಕೆ ಎರಡು ಶೋಗಳಿದ್ದವು. ಬೆಳಗಿನ ಶೋಗೆ ಕೇವಲ 9 ಮಂದಿ ಪ್ರೇಕ್ಷಕರು ಮಾತ್ರ ಬಂದಿದ್ದರು.

ಇದನ್ನೂ ಓದಿ: ಅಧೀರನ ಪಾತ್ರಕ್ಕಾಗಿ ತಯಾರಿ ನಡೆಸುತ್ತಿರುವ ಸಂಜಯ್​ ದತ್: ಇಲ್ಲಿವೆ ಲೆಟೆಸ್ಟ್ ಫೋಟೋ​..!

ಥಿಯೇಟರ್‌ನಲ್ಲಿ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರೇಕ್ಷಕರು, ಏಳು ತಿಂಗಳ ಬಳಿಕ ಮತ್ತೆ ಥಿಯೇಟರ್‌ಗೆ ಬಂದು ಸಿನಿಮಾ ನೋಡಿ ಸಂಭ್ರಮಿಸಿದರು. ಅದೇ ರೀತಿ ಬೇರೆ ಬೇರೆ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳಲ್ಲೂ ಬೆರಳೆಣಿಕೆಯಷ್ಟು ಜನ ಮಾತ್ರ ಸಿನಿಮಾ ವೀಕ್ಷಿಸಿದ್ದಾರೆ.

ಇನ್ನು ಮಧ್ಯಾಹ್ನ 2:15ರಿಂದ ರಾತ್ರಿವರೆಗೆ ಲಿಡೋ ಮಾಲ್‌ನ ಐನಾಕ್ಸ್‌ನಲ್ಲಿ ನಾಲ್ಕು ಸಿನಿಮಾಗಳ, ನಾಲ್ಕು ಶೋಗಳಿದ್ದವು. ಆದರೆ ಮ್ಯಾಟಿನೀ ಶೋಗೆ ಒಂದೂ ಟಿಕೆಟ್‌ ಬುಕ್‌ ಆಗದ ಕಾರಣ ಶೋವನ್ನೇ ಕ್ಯಾನ್ಸಲ್‌ ಮಾಡಬೇಕಾಯಿತು. ಶುಭ ಶುಕ್ರವಾರದಿಂದ ಅರ್ಥಾತ್‌ ಅಕ್ಟೋಬರ್‌ 16ರಿಂದ ಕೆಲ ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಶೋಗಳನ್ನು ಪ್ಲ್ಯಾನ್‌ ಮಾಡಿದ್ದಾರೆ.
Single screens will open tomorrow in Bangalore Rural District
ದೊಡ್ಡಬಳ್ಳಾಪುರದ ಸೌಂದರ್ಯ ಮಹಲ್​ ಚಿತ್ರಮಂದಿರ


ಚಿರು ಸರ್ಜಾ ನಾಯಕನಾಗಿ ನಟಿಸಿದ್ದ ಶಿವಾರ್ಜುನ ಸಿನಿಮಾ ಕೆಜಿ ರಸ್ತೆಯ ಪ್ರಮುಖ ಥಿಯೇಟರ್‌ ಸಂತೋಷ್‌, ಮಾಗಡಿ ರಸ್ತೆಯ ಪ್ರಸನ್ನ ಸೇರಿದಂತೆ ರಾಜ್ಯಾದ್ಯಂತ 20ಕ್ಕೂ ಹೆಚ್ಚು ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಸ್‌ಗಳಲ್ಲಿ ರಿಲೀಸ್‌ ಆಗಲಿದೆ. ಅಕ್ಟೋಬರ್‌ 17೧೭ರಂದು ಚಿರು ಸರ್ಜಾ ಅವರ ಹುಟ್ಟುಹಬ್ಬ ಇರುವ ಕಾರಣ ಅಭಿಮಾನಿಗಳು ಥಿಯೇಟರ್‌ಗಳಿಗೆ ಬರುವ ಸಾಧ್ಯತೆಯಿದೆ. ಹಾಗೇ ಶಿವಾಜಿ ಸೂರತ್ಕಲ್‌, ದಿಯಾ, ಲವ್‌ ಮಾಕ್ಟೇಲ್‌, 5 ಅಡಿ 7 ಅಂಗುಲ, ವಜ್ರಮುಖಿ, ಸಿನಿಮಾಗಳೂ ರೀ-ರಿಲೀಸ್‌ ಆಗುತ್ತಿವೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ ಚಂದನ್​-ಕವಿತಾ ಫೋಟೋ: ಬೇಗ ಸಿಹಿ ಸುದ್ದಿ ಕೊಡಿ ಎಂದ ನೆಟ್ಟಿಗರು..!

ಕನ್ನಡ ಮಾತ್ರವಲ್ಲದೇ ತಮಿಳಿನ ಧಾರಾಳಪ್ರಭು, ತೆಲುಗಿನ ಭೀಷ್ಮ, ಹಿಂದಿಯ ಥಪ್ಪಡ್‌ ಹಾಗೂ ಹಾಲಿವುಡ್‌ ಸಿನಿಮಾ ಮೈ ಸ್ಪೈ ಸೇರಿದಂತೆ ಹಲವು ಪರಭಾಷಾ ಸಿನಿಮಾಗಳೂ ಸಹ ರೀ-ರಿಲೀಸ್‌ ಆಗುತ್ತಿದೆ. ಜಿಟಿ ಮಾಲ್‌ನ ಪಿವಿಆರ್‌ ಸಿನಿಮಾಸ್‌ನಲ್ಲಿ ೫ ಸ್ಕ್ರೀನ್‌ಗಳಿದ್ದು ಸದ್ಯ ಮೂರು ಸ್ಕ್ರೀನ್‌ಗಳಲ್ಲಿ ನಾಳೆಯಿಂದ ಪ್ರದರ್ಶನ ಪ್ರಾರಂಭಿಸುತ್ತಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಯಿಂದ ರಾತ್ರಿವರೆಗೆ 8ರವರೆಗೆ ಶೋಗಳಿರಲಿದ್ದು, ಮುಂದಿನ ದಿನಗಳಲ್ಲಿ ಹೇಗೆ ಪ್ರೇಕ್ಷಕರ ಪ್ರತಿಕ್ರಿಯೆ‌ ಸಿಗುತ್ತೆ ಎಂಬುದರ ಮೇಲೆ ಸ್ಕ್ರೀನ್‌ಗಳು ಹಾಗೂ ಶೋಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಒಟ್ಟಾರೆ ಈ ವೀಕೆಂಡ್‌ನತ್ತ ಸದ್ಯ ಎಲ್ಲರ ಚಿತ್ತ ನೆಟ್ಟಿದೆ.
Published by: Anitha E
First published: October 15, 2020, 4:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading