• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Keerthy Suresh: ಕೀರ್ತಿ ಸುರೇಶ್​ ಎಷ್ಟು ಚೆನ್ನಾಗಿ ಪಿಟೀಲು ನುಡಿಸ್ತಾರೆ ಗೊತ್ತಾ: ಇಲ್ಲಿದೆ ವಿಡಿಯೋ..!

Keerthy Suresh: ಕೀರ್ತಿ ಸುರೇಶ್​ ಎಷ್ಟು ಚೆನ್ನಾಗಿ ಪಿಟೀಲು ನುಡಿಸ್ತಾರೆ ಗೊತ್ತಾ: ಇಲ್ಲಿದೆ ವಿಡಿಯೋ..!

ಕೀರ್ತಿ ಸುರೇಶ್​

ಕೀರ್ತಿ ಸುರೇಶ್​

Keerthy Suresh Playing Violin Video: ಸಿನಿಮಾಗಳ ವಿಷಯ ಹೀಗಿದ್ದರೆ, ಲಾಕ್​ಡೌನ್​ನಲ್ಲಿ ಮನೆಯಲ್ಲಿ ಸಖತ್ ಎಂಜಾಯ್​ ಮಾಡುತ್ತಿದ್ದಾರೆ. ಅಭಿನಯಿಸುವುದರ ಜೊತೆಗೆ ಕೀರ್ತಿಗೆ ಬೇರೆ ಟ್ಯಾಲೆಂಟ್​ ಸಹ ಇದೆ. ಅವರಿಗೆ ವಯೋಲಿನ್​ ನುಡಿಸುವುದು ತುಂಬಾ ಇಷ್ಟವಂತೆ.

  • Share this:

ಕೀರ್ತಿ ಸುರೇಶ್​ ಅವರ ಅಭಿನಯದ ಬಗ್ಗೆ ಅವರ ಸಿನಿಮಾ ಮಹಾನಟಿ ನೋಡಿದರೆ ಹೇಳಬಹುದು. ಪ್ರತಿಭೆ ಇದ್ದರೂ ಅವಕಾಶಗಳು ಸಿಗದೆ ಪರದಾಡುತ್ತಿದ್ದ ನಟಿಗೆ ಖ್ಯಾತಿಯ ಜೊತೆಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಆಫರ್ ತಂದುಕೊಟ್ಟಿತ್ತು ಈ ಸಿನಿಮಾ. ಇದಾದ ನಂತರ ಕೀರ್ತಿ, ಕಾಲಿವುಡ್​-ಟಾಲಿವುಡ್​ ಎನ್ನದೆ ಬಾಲಿವುಡ್​ಗೂ ಕಾಲಿಟ್ಟರು.


'ಮಹಾನಟಿ' ಸಿನಿಮಾದ ನಂತರ ಕೀರ್ತಿ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಕೀರ್ತಿ ನಟಿಸಿರುವ 'ಮಿಸ್ ಇಂಡಿಯಾ' ರಿಲೀಸ್​ಗೆ ರೆಡಿಯಾಗಿದೆ. ಇತ್ತೀಚೆಗಷ್ಟೆ ಅವರ 'ಪೆಂಗ್ವಿನ್'​ ಚಿತ್ರ ಸಹ ಒಟಿಟಿ ಮೂಲಕ ತೆರೆಕಂಡಿದೆ. ಇನ್ನು 'ಮಿಸ್​ ಇಂಡಿಯಾ' ಸಹ ಒಟಿಟಿ ಮೂಲಕ ತೆರೆಕಾಣುವ ಅವಕಾಶವಿದೆ ಎನ್ನಲಾಗುತ್ತಿದೆ.


Karthik Subbaraj produced Keerthy Suresh acted Penguin Official Trailer
ಪೆಂಗ್ವಿನ್​ ಪೋಸ್ಟರ್


ಉಳಿದಂತೆ ಕೀತಿ ತೆಲುಗಿನಲ್ಲಿ ನಿತಿನ್​ ಜೊತೆ 'ರಂಗ್​ ದೇ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ 'ಗುಡ್​ ಲಕ್​ ಸಖಿ' ಎನ್ನುವ ಚಿತ್ರದ ಚಿತ್ರೀಕರಣ ಇನ್ನೂ ಮುಗಿದಿಲ್ಲ. ರಜಿನಿಕಾಂತ್​ ಜೊತೆ ಸಹ ಸಿನಿಮಾಗೆ ಸಹಿ ಮಾಡಿದ್ದಾರೆ. ಕೀರ್ತಿ.


Rhea Chakraborty: ಸುಶಾಂತ್​ ಸಿಂಗ್​ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಿ: ಗೃಹಸಚಿವ ಅಮಿತ್​ ಶಾಗೆ ರಿಯಾ ಚಕ್ರವರ್ತಿ ಮನವಿ


ಸಿನಿಮಾಗಳ ವಿಷಯ ಹೀಗಿದ್ದರೆ, ಲಾಕ್​ಡೌನ್​ನಲ್ಲಿ ಮನೆಯಲ್ಲಿ ಸಖತ್ ಎಂಜಾಯ್​ ಮಾಡುತ್ತಿದ್ದಾರೆ. ಅಭಿನಯಿಸುವುದರ ಜೊತೆಗೆ ಕೀರ್ತಿಗೆ ಬೇರೆ ಟ್ಯಾಲೆಂಟ್​ ಸಹ ಇದೆ. ಅವರಿಗೆ ವಯೋಲಿನ್​ ನುಡಿಸುವುದು ತುಂಬಾ ಇಷ್ಟವಂತೆ. ಎಷ್ಟು ಚೆನ್ನಾಗಿ ಪಿಟೀಲು ನುಡಿಸುತ್ತಾರೆ ಅಂತ ನೀವೇ ನೋಡಿ ಆನಂದಿಸಿ.




ತಮಿಳು ನಟ ವಿಜಯ್​ ಅವರ ಹುಟ್ಟುಹಬ್ಬಕ್ಕೆ ಸರ್ಪ್ರೈಸ್​ ಕೊಡಲು ಕೀರ್ತಿ ಈ ವಿಡಿಯೋ ಪೋಸ್ಟ್ ಮಾಡಿದ್ದರು. ವಿಜಯ್​ ಅವರ 'ಮಾಸ್ಟರ್' ಸಿನಿಮಾದ 'ಕುಟ್ಟಿ ಸ್ಟೋರಿ..' ಹಾಡನ್ನು ವಯೋಲಿನ್​ನಲ್ಲಿ ನುಡಿಸಿದ್ದಾರೆ.


ಕೀರ್ತಿ ಸುರೇಶ್
ಕೀರ್ತಿ ಸುರೇಶ್


ಈ ವಿಡಿಯೋ ಮೂಲಕ ವಿಜಯ್​ ಅವರಿಗೆ ಹುಟ್ಟುಹಬ್ಬದ ಶುಭಕೋರಿದ್ದರು ಕೀರ್ತಿ. ಒಂದು ಕಡೆ ವಿಜಯ್​ ಅಭಿಮಾನಿಗಳು ಈ ವಿಡಿಯೋ ನೋಡಿ, ವೈರಲ್​ ಮಾಡಿದ್ದರು. ಜೊತೆಗೆ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆಯನ್ನೇ ಸುರಿಸಿದ್ದರು.


ಮುದ್ದಿನ ನಾಯಿ ಜೊತೆಗೆ ಕೀರ್ತಿ ತೆಗೆಸಿಕೊಂಡ ಫೋಟೋಗಳು




ಇನ್ನು ವರ್ಲ್ಡ್​ ಮ್ಯೂಸಿಕ್​ ಡೇ ಅಂದು ವಯೋಲಿನ್​ ಹಿಡಿದಚಿತ್ರವನ್ನೂ ಹಂಚಿಕೊಂಡಿದ್ದರು ಕೀರ್ತಿ. ಲಾಕ್​ಡೌನ್​ನಿಂದಾಗಿ ತಮ್ಮ ಹಳೇ ಪ್ರತಿಭೆಗೆ ಸಮಯ ಕೊಡಲು ಅವಕಾಶ ಸಿಕ್ಕಿದೆ ಎಂದು ಖುಷಿ ಪಟ್ಟಿದ್ದರು.




ಇತ್ತೀಚೆಗಷ್ಟೆ ಕೀರ್ತಿ ಸುರೇಶ್ ಅಭಿನಯದ ಪೆಂಗ್ವಿನ್​ ಸಿನಿಮಾ ಒಟಿಟಿ ಮೂಲಕ ತೆರೆ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹೊಸಬರ ತಂಡ ಕೆಲಸ ಮಾಡಿದ್ದ ಈ ಚಿತ್ರ ಸಸ್ಪೆನ್ಸ್​ ಥ್ರಿಲ್ಲರ್​ ಆಗಿದೆ.

Published by:Anitha E
First published: