Vendhu Thanindhathu Kaadu Movie Review: ಗ್ಯಾಂಗ್‌ಸ್ಟರ್ ಆದ ಸಿಂಬು, ಇತರ ಮಾಸ್ ಚಿತ್ರಗಳಿಗಿಂತ ಹೇಗೆ ಭಿನ್ನವಾಗಿದೆ?

ವೆಂದು ತಣಿಂದದ್ ಕಾಡ್ ಚಲನಚಿತ್ರದಲ್ಲಿ ಸಿಲಂಬರಸನ್ (ಸಿಂಬು) ಗ್ಯಾಂಗ್‌ಸ್ಟರ್ ಆಗಿ ಅಭಿನಯಿಸಿದ್ದು ವೀಕ್ಷಕರನ್ನು ಹಿಡಿದುಡುವಲ್ಲಿ ಕೊಂಚ ಹಿನ್ನಡೆ ಕಂಡಿದೆ ಎಂಬುದು ಖಾತ್ರಿಯಾಗಿದೆ. ಒಟ್ಟಿನಲ್ಲಿ ಚಿತ್ರಕ್ಕೆ ಗೌತಮ್ ಮೆನನ್ ನಿರ್ದೇಶನ ಇದ್ದರೂ ಕೆಲವೊಂದು ಕಡೆ ಚಿತ್ರವು ನಿರ್ದೇಶನದ ಕೊರತೆಯನ್ನು ಎದುರಿಸಿದ್ದು ಅಲ್ಲಿ ಚಿತ್ರದ ಕಥೆಯೇ ಹೆಚ್ಚಾಗಿ ಮೈಳೈಸಿದಂತೆ ಕಂಡುಬಂದಿದೆ.

ವೆಂದು ತಣಿಂದದ್ ಕಾಡ್

ವೆಂದು ತಣಿಂದದ್ ಕಾಡ್

 • Share this:
  ತಣಿಂದದ್ ಕಾಡ್ (Vendhu Thanindhathu Kaadu) ಚಲನಚಿತ್ರದಲ್ಲಿ ಸಿಲಂಬರಸನ್ (ಸಿಂಬು) ಗ್ಯಾಂಗ್‌ಸ್ಟರ್ ಆಗಿ ಅಭಿನಯಿಸಿದ್ದು ವೀಕ್ಷಕರನ್ನು ಹಿಡಿದುಡುವಲ್ಲಿ ಕೊಂಚ ಹಿನ್ನಡೆ ಕಂಡಿದೆ ಎಂಬುದು ಖಾತ್ರಿಯಾಗಿದೆ. ಒಟ್ಟಿನಲ್ಲಿ ಗೌತಮ್ ಮೆನನ್ (Gautham Menon) ನಿರ್ದೇಶನ ಚಿತ್ರಕ್ಕಿದ್ದರೂ ಕೆಲವೊಂದು ಕಡೆ ಚಿತ್ರವು ನಿರ್ದೇಶನದ ಕೊರತೆಯನ್ನು ಎದುರಿಸಿದ್ದು ಅಲ್ಲಿ ಚಿತ್ರದ ಕಥೆಯೇ ಹೆಚ್ಚಾಗಿ ಮೈಳೈಸಿದಂತೆ ಕಂಡುಬಂದಿದೆ. ನಿರ್ದೇಶನಕ್ಕಿಂತ ಹೆಚ್ಚಾಗಿ ಸಿನಿಮಾವು ಜೇಮೋಹನ್ ಕಥಾ ರಚನೆಯ ಪ್ರಭಾವಕ್ಕೆ ಒಳಗಾಗಿರುವಂತೆ ಕಂಡುಬಂದಿದೆ. ಏಕೆಂದರೆ, ಚಿತ್ರದಲ್ಲಿ ನಿರ್ದೇಶನವು (Direction) ಕೆಲವು ಕಡೆ ಕಳೆದು ಹೋದಂತೆ ತೋರಿದೆ, ಇದೇ ರೀತಿಯ ಸಮಸ್ಯೆಯನ್ನು ರಜನೀಕಾಂತ್ (Rajinikanth) ಅಭಿನಯದ ಹಾಗೂ ಪಾ ರಂಜಿತ್ ನಿರ್ದೇಶನದ ಕಾಲ ಮತ್ತು ಕಬಾಲಿ ಎದುರಿಸಿತ್ತು.

  ಗ್ಯಾಂಗ್‌ಸ್ಟರ್ ಕಥೆಯಾದರೂ ಎಡವಿದ್ದೆಲ್ಲಿ?
  ವೆಂದು ತಣಿಂದದ್ ಕಾಡು ಅತ್ಯಮೂಲ್ಯವಾದ ಗ್ಯಾಂಗ್‌ಸ್ಟರ್ ಪ್ರಧಾನ ಕಥೆಯನ್ನು ಹೊಂದಿದ್ದರೂ ನಿರ್ದೇಶಕ ಹಾಗೂ ಕಥೆಗಾರ ಎರಡನ್ನೂ ಚಿತ್ರ ನಂಬಿಕೊಂಡು ಒಂದು ರೀತಿಯ ಇಬ್ಬಂದಿಯನ್ನು ವೀಕ್ಷಕರಲ್ಲಿ ಉಂಟುಮಾಡಿದೆ. ಒಂದು ರೀತಿ ಅವಸರ ಅವಸರವಾಗಿ ಕಥೆಯನ್ನು ಮುಗಿಸಿದಂತೆ ಚಿತ್ರದಲ್ಲಿ ಕೆಲವೊಂದು ಸನ್ನಿವೇಶಗಳನ್ನು ತೋರಿಸಲಾಗಿದೆ.

  ತಮಿಳು ಚಿತ್ರ ರಂಗದಲ್ಲಿ ಇದುವರೆಗೆ ಬಂದಿರುವ ಹಲವಾರು ಗ್ಯಾಂಗ್‌ಸ್ಟರ್ ಚಿತ್ರಗಳಿಂದ ವೆಂದು ತಣಿಂದದ್ ಕಾಡ್ ಕೊಂಚ ವಿಭಿನ್ನವಾಗಿದೆ. ಗೌತಮ್ ನಿರ್ದೇಶನಲ್ಲಿ ಈ ಹಿಂದೆ ಮೂಡಿಬಂದಿದ್ದ ಅನೇಕ ಚಿತ್ರಗಳಾದ ಎನೈ ನೋಕಿ ಪಾಯುಮ್ ತೋಟ ಹಾಗೂ ಅಚ್ಚಮ್ ಎನ್ಬದು ಮದಮೈಯಡನಂತೆ ಈ ಚಿತ್ರ ಕೂಡ ದಿಕ್ಕುತಪ್ಪಿದೆ ಎಂದಲ್ಲ.

  ಇದನ್ನೂ ಓದಿ: RRR Oscar Nominations: ಆಸ್ಕರ್ ರೇಸ್​ನಲ್ಲಿ ರಾಜಮೌಳಿ ಸಿನಿಮಾ! ತ್ರಿಬಲ್ ಆರ್​​ಗೆ ಒಲಿಯುತ್ತಾ ಅದೃಷ್ಟ?

  ದಕ್ಷಿಣ ತಮಿಳುನಾಡಿನ ಒಂದು ಸಣ್ಣ ಹಳ್ಳಿಯ ಮುತ್ತು ಎಂಬ ವ್ಯಕ್ತಿ ಮುಂಬೈನಲ್ಲಿ ದರೋಡೆಕೋರನಾಗುವ ಬಗ್ಗೆ ಚಿತ್ರವು ಕಥೆಯನ್ನು ಹೊಂದಿದೆ. ಆದರೆ, ಇದೇ ಕಥೆಯನ್ನು ಚಿತ್ರವು ತಮಿಳು ರಸಿಕರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸದೆಯೇ ಹಿಂದಿ ಪ್ರಭಾವಕ್ಕೆ ಒಳಗಾದಂತೆ ಕಂಡಿದೆ. ಇಲ್ಲಿ ಕಥಾನಾಯಕನಿಗಿಂತಲೂ ಚಿತ್ರಕಥೆ ಹಾಗೂ ಬರಹಗಾರ ಹೆಚ್ಚು ಸ್ಕೋಪ್ ತೆಗೆದುಕೊಂಡಂತೆ ಕಾಣುತ್ತಿದೆ.

  ಕಥಾನಾಯಕ ಮುತ್ತುವಿನ ಪಾತ್ರ ಹೇಗಿದೆ?
  ಚಿತ್ರದಲ್ಲಿ ಸಂಪೂರ್ಣ ಹಳ್ಳಿಗನಾಗಿ ಕಾಣುವ ಮುತ್ತು ತಮ್ಮ ಪಾತ್ರಕ್ಕೆ ಉಚಿತ ನ್ಯಾಯವನ್ನೇ ಒದಗಿಸಿದ್ದಾರೆ. ಹಳ್ಳಿಯ ಪೋಸ್ಟ್‌ಮ್ಯಾನ್ ಹಾಗೂ ಮುತ್ತು ಜೊತೆಗಿನ ಸಂವಾದವನ್ನು ಚಿತ್ರದಲ್ಲಿ ತುಂಬಾ ಚೆನ್ನಾಗಿಯೇ ಕಟ್ಟಿಕೊಡಲಾಗಿದ್ದು, ಮುತ್ತುವಿನ ಮೃತ ತಂದೆ ಸ್ವರ್ಗದಿಂದಲೇ ಮುತ್ತುವಿಗೆ ಮುಂದಿನ ದಾರಿ ತೋರಿಸುತ್ತಾನೆ ಎಂಬ ಭರವಸೆಯನ್ನು ನೀಡುತ್ತಾನೆ.

  [embed]https://youtu.be/AwG-AtAtiB8[/embed]

  ಈ ಸಂವಾದ ಸಣ್ಣದಾಗಿದ್ದರೂ ಅದನ್ನು ತುಂಬಾ ಸರಳವಾಗಿ ಹಾಗೂ ಮನಮುಟ್ಟುವಂತೆ ಚಿತ್ರದಲ್ಲಿ ತೋರಿಸಲಾಗಿದೆ. ನಿಮಿಷಗಳ ನಂತರ ಮುತ್ತುವಿನ ಸಂಪೂರ್ಣ ಭೂಮಿ ಅಗ್ನಿಗೆ ಆಹುತಿಯಾಗುತ್ತದೆ. ಆತನ ಬದುಕಿಗೆ ಆಧಾರವಾಗಿದ್ದ ಒಂದೇ ಒಂದು ಆಸ್ತಿ ಕೂಡ ನಶಿಸಿ ಹೋಗುತ್ತದೆ.

  ಮುತ್ತು ಹಾಗೂ ಆತನ ತಾಯಿ ಮುಂಬೈನಲ್ಲಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಬಂಧುವಿನ ನೆರವನ್ನು ಪಡೆಯುವುದಾಗಿ ತೀರ್ಮಾನಿಸುತ್ತಾರೆ. ಹೀಗೆ ಮುತ್ತುವಿನ ಇನ್ನೊಂದು ದಾರಿ ಆರಂಭವಾಗುತ್ತದೆ. ಹೆಚ್ಚಿನ ಮುಖ್ಯವಾಹಿನಿಯ ಚಿತ್ರಗಳಲ್ಲಿ ಕಂಡುಬರುವಂತೆಯೇ ನಾಯಕನ ಪರಿಚಯದ ಸಮಯದಲ್ಲಿ ಒಂದು ರೀತಿಯ ಬೆಂಕಿಯ ಪ್ರಭಾವಳಿ ಇದೆ ಆದರೆ ಅದು ವೀಕ್ಷಕರಿಗೆ ಬೇಕಾಗಿರುವಂತಿಲ್ಲ.

  ಚಿತ್ರದಲ್ಲಿ ಮೌನ ಹಾಗೂ ಸಂಭಾಷಣೆಯೇ ಹೆಚ್ಚು ಎದ್ದುಕಾಣುವಂತಿದೆ
  ಇನ್ನು ಚಿತ್ರದಲ್ಲಿ ಉತ್ತಮವೆನಿಸುವ ಅಂಶವೆಂದರೆ ಮುತ್ತುವಿನ ಕಥಾಪಾತ್ರವಾಗಿದೆ. ಮುತ್ತುವಿನ ಜೀವನ ಪಯಣದಲ್ಲಿ ವೀರಾವೇಶವಿದ್ದರೂ ಹೀರೋಯಿಸಂ ಕಾಣೆಯಾಗಿದೆ. ಮುತ್ತು ಊರಲ್ಲಿಯೇ ಇದ್ದರೆ ಆತ ರಕ್ತ ಹರಿಸುತ್ತಾನೆ ಎಂಬುದಾಗಿ ಭವಿಷ್ಯಕಾರನೊಬ್ಬ ನುಡಿದಿದ್ದರಿಂದ ಆತನ ತಾಯಿ ಹಳ್ಳಿಯಿಂದ ಹೊರಗೆ ಮುತ್ತುವನ್ನು ದೂರ ಎಲ್ಲಾದರೂ ಕಳುಹಿಸಬೇಕೆಂದು ಬಯಸುತ್ತಾಳೆ.

  ಇದನ್ನೂ ಓದಿ:  Kajol: ಆನ್​ಸ್ಕ್ರೀನ್ ಸೊಸೆಗೆ ಜಯಾ, ಅಮಿತಾಭ್ ಬಚ್ಚನ್ ಬಗ್ಗೆ ಐಶ್​ಗಿಂತ ಹೆಚ್ಚು ಕಾಳಜಿ!

  ಸಂಭಾಷಣೆಗಳು ಕೂಡ ಒಂದು ರೀತಿ ಅನುವಾದಿಸಿದಂತಿದೆ. ಮುತ್ತು ಹಳ್ಳಿ ಬಿಟ್ಟು ಮುಂಬೈನತ್ತ ಪ್ರಯಾಣ ಬೆಳೆಸುವಾಗ ಆತನ ತಾಯಿ ದಿಕ್ಕಿಲ್ಲದವರಿಗೆ ದೇವರೇ ದಾರಿ ತೋರಿಸುತ್ತಾನೆ ಎಂದು ಹೇಳುವಾಗ ಮುತ್ತು ಅದಕ್ಕುತ್ತರವಾಗಿ ದೇವರು ಇಲ್ಲದಿದ್ದರೆ ದೆವ್ವ ದಾರಿ ತೋರಿಸುತ್ತದೆ ಎಂದು ಹಾಸ್ಯಮಯವಾಗಿ ಹೇಳುತ್ತಾನೆ.

  ಈ ಸಂವಾದ ಕೊಂಚ ವೀರೋಚಿತವಾಗಿದೆ ಎಂಬುದು ಭಾಸವಾಗುತ್ತದೆ. ಎಆರ್ ರೆಹಮಾನ್ ಸಂಗೀತ ಚಿತ್ರದಲ್ಲಿದ್ದರೂ ಚಿತ್ರದಲ್ಲಿ ಹಲವಾರು ಕಡೆ ಮೌನ ಮತ್ತು ಸಂಭಾಷಣೆಗಳೇ ಮುಖ್ಯವಾಗಿ ಧ್ವನಿಸುತ್ತದೆ. ಒಟ್ಟಿನಲ್ಲಿ ಚಿತ್ರದಲ್ಲಿ ಸಾಮರಸ್ಯದ ಕೊರತೆ ಅತಿಯಾಗಿ ಕಂಡುಬಂದಿದ್ದು ಕ್ಲೈಮ್ಯಾಕ್ಸ್ ಕೂಡ ಎಣಿಸಿದಂತೆ ಬಂದಿಲ್ಲ ಎಂಬುದು ಯಾರಿಗಾದರೂ ಅರಿವಾಗುತ್ತದೆ.

  ನಿರ್ದೇಶನ ಹಾಗೂ ಕಥಾರಚನೆಯ ಹೊಂದಾಣಿಕೆಯ ಕೊರತೆ ಸಿನಿಮಾ ಎಡವಲು ಕಾರಣವಾಗಿದೆ. ಒಂದು ರೀತಿಯ ಗೊಂದಲದ ಗೂಡಾಗಿ ವೆಂದು ತಣಿಂದದು ಕಾಡು ಮೂಡಿ ಬಂದಿದೆ.
  Published by:Ashwini Prabhu
  First published: