ಅಜಯ್​ ದೇವಗನ್​ ತಂದೆ ಸಾಹಸ ನಿರ್ದೇಶಕ ವೀರು ದೇವಗನ್​ ನಿಧನ

ಬಾಲಿವುಡ್​ನ ಖ್ಯಾತ ನಟ ಅಜಯ್​ ದೇವಗನ್​ ಅವರ ತಂದೆ ನಿಧನರಾಗಿದ್ದಾರೆ. ಅವರ ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಇಂದು ಬೆಳಿಗ್ಗೆ ಮುಂಬೈನಲ್ಲಿ ವೀರು ದೇವಗನ್​ ಇಹಲೋಕ ತ್ಯಜಿಸಿದ್ದಾರೆ. 

Anitha E | news18
Updated:May 27, 2019, 6:04 PM IST
ಅಜಯ್​ ದೇವಗನ್​ ತಂದೆ ಸಾಹಸ ನಿರ್ದೇಶಕ ವೀರು ದೇವಗನ್​ ನಿಧನ
ವೀರು ದೇವಗನ್​ ಹಾಗೂ ಅಜಯ್​ ದೇವಗನ್​
Anitha E | news18
Updated: May 27, 2019, 6:04 PM IST
ಬಾಲಿವುಡ್​ನ ಖ್ಯಾತ ಸಾಹಸ ನಿರ್ದೇಶಕ ವೀರು ದೇವಗನ್​ ಇನ್ನಿಲ್ಲ. ಬಾಲಿವುಡ್​ನ ಸೆಲೆಬ್ರಿಟಿ ಸಾಹಸ ನಿರ್ದೇಶಕರಾಗಿದ್ದ ವೀರು 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ವೀರು ದೇವಗನ್​ 'ಹಿಂದೂಸ್ತಾನ್​ ಕಿ ಕಸಮ್​' ಸಿನಿಮಾ ನಿರ್ದೇಶಿಸಿದ್ದು, ಅದರಲ್ಲಿ ಮಗ ಅಜಯ್​ ದೇವಗನ್​ ನಾಯಕನಾಗಿದ್ದು, ಅಮಿತಾಭ್​ ಸಹ ಪ್ರಮುಖ​ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರ ಮತ್ತೊಬ್ಬ ಮಗ ಅನಿಲ್​ ದೇವಗನ್​ ಸಹ ನಿರ್ದೇಶಕರಾಗಿದ್ದಾರೆ.ಅಜಯ್​ ದೇವಗನ್​ ಅವರ ತಂದೆಯ ನಿಧನದ ಬಗ್ಗೆ ಖ್ಯಾತ ಸಿನಿ ವಿಶ್ಲೇಷಕ ತರನ್​ ಆದರ್ಶ್​ ಅವರು ಟ್ವೀಟ್​ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

 ವೀರು ದೇವಗನ್​ ಅವರು 'ಕ್ರಾಂತಿ', 'ಸಿಂಗಾಸನ್'​ ಹಾಗೂ 'ಸೌರಭ್'​ ಎಂಬ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವೀರು ಅವರು ಇತ್ತೀಚೆಗೆ ಸಿನಿಮಾ ಮಂದಿಯ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲವಂತೆ. ಆದರೆ 'ಟೋಟಲ್​ ಧಮಾಲ್​' ಸಿನಿಮಾದ ಪ್ರೀಮಿಯರ್​ನಲ್ಲಿ ವೀರು ಅವರು ಕಡೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಸೈಲೆಂಟ್ ಆಗಿದ್ದೇಕೆ ಕಿರಿಕ್ ಹುಡುಗಿ: ಏಕೆ ಹೀಗಾದ್ರು ಸಂಯುಕ್ತಾ ಹೆಗ್ಡೆ..!

ವೀರು ದೇವಗನ್ ನಿರ್ದೇಶನದ​ 'ಹಿಂದೂಸ್ತಾನ್​ ಕಿ ಕಸಮ್​' ಸಿನಿಮಾ ಆ ಕಾಲಕ್ಕೆ ಬಾಕ್ಸಾಫಿಸ್​ನಲ್ಲಿ ನೆಲಕಚ್ಚಿತ್ತು. ಆದರೆ ಅದರಲ್ಲಿನ ಸಾಹಸ ದೃಶ್ಯಗಳು ಆ ಕಾಲದ ಸಿನಿಮಾಗಳಿಗೆ ಹೋಲಿಸಲು ಸಾಧ್ಯವಾಗಷ್ಟು ಉತ್ತಮವಾಗಿತ್ತು.

ಇನ್ನೂ 1991ರಲ್ಲಿ ತೆರೆಕಂಡ  'ಪೂಲ್​ ಔಟ್​ ಕಾಂಟೆ' ಚಿತ್ರದಲ್ಲಿ ಅಜಯ್​ ದೇವಗನ್​ ಕಾಲೇಜಿಗೆ ಎಂಟ್ರಿ ಆಗುವ ದೃಶ್ಯದಲ್ಲಿ ಎರಡು ಬೈಕ್​ಗಳ ಮೇಲೆ ಕಾಲುಗಳನ್ನು ಸ್ಟ್ರೆಚ್​ ಮಾಡುತ್ತಾ ಬರುತ್ತಾರೆ. ಅದನ್ನು ನಿರ್ದೇಶಿಸಿದ್ದು ವೀರು ಅವರೇ.

ಇಂದಿಗೂ ಇದೇ ದೃಶ್ಯವನ್ನು ಅಜಯ್​ ಅಭಿನಯದ ಎರಡು ಸಿನಿಮಾಗಳಲ್ಲಿ ಗ್ರಾಫಿಕ್ಸ್​ ಮಾಡಿ ಬಳಸಿಕೊಳ್ಳಲಾಗಿದೆ. ಆದರೆ ಆ ಕಾಲಕ್ಕೆ ಅಜಯ್​ ಅವರ ಕೈಯಲ್ಲಿ ನಿಜವಾಗಿಯೂ ಆ ಸ್ಟಂಟ್​ ಅನ್ನು ವೀರು ಅವರೇ ಮಾಡಿಸಿದ್ದರು.

First published:May 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...