• Home
  • »
  • News
  • »
  • entertainment
  • »
  • Actor Dhananjay: ವೀರಗಾಸೆಗೆ ಅವಮಾನ! ಹೆಡ್​ಬುಶ್​ಗೆ ಹೊಸ ತೊಂದರೆ, ಡಾಲಿ ಹೇಳಿದ್ದೇನು?

Actor Dhananjay: ವೀರಗಾಸೆಗೆ ಅವಮಾನ! ಹೆಡ್​ಬುಶ್​ಗೆ ಹೊಸ ತೊಂದರೆ, ಡಾಲಿ ಹೇಳಿದ್ದೇನು?

ಬೆಳ್ಳಿ ಪರದೆ ಮೇಲೆ ಭೂಗತ ಲೋಕದ ಕತೆ

ಬೆಳ್ಳಿ ಪರದೆ ಮೇಲೆ ಭೂಗತ ಲೋಕದ ಕತೆ

ಹೆಡ್ ಬುಶ್ ಸಿನಿಮಾದಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ವಿವಾದ ಸೃಷ್ಟಿಯಾಗಿರುವಾಗ ನಟ ಧನಂಜಯ್ ಅವರು ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಕಾಂತಾರ ಸಿನಿಮಾದ ಹಾಡು ಕಾಪಿ ವಿವಾದದ ಮಧ್ಯೆ ಇನ್ನೊಂದು ಕನ್ನಡ ಸಿನಿಮಾ ಕೂಡಾ ವಿವಾದಕ್ಕೆ ಸಿಕ್ಕಿಕೊಂಡಿದೆ. ಡಾಲಿ ಧನಂಜಯ್ (Dhananjay) ನಿರ್ದೇಶಿಸಿ ಅಭಿನಯಿಸಿದ ಹೆಡ್ ಬುಶ್ (Head  Bush) ಸಿನಿಮಾ ಬಗ್ಗೆ ಈ ಚರ್ಚೆ ಶುರುವಾಗಿದೆ. ಸಿನಿಮಾದಲ್ಲಿ ಕರ್ನಾಟಕದ ಕಲೆ ವಿರಗಾಸೆಗೆ (Veeragase) ಅವಮಾನ ಮಾಡಲಾಗಿದೆ ಎನ್ನುವ ಚರ್ಚೆ ಜೋರಾಗಿದೆ. ಡಾನ್ ಎಂ.ಪಿ ಜಯರಾಜ್ (MP Jayaraj) ಕುರಿತ ಸಿನಿಮಾವನ್ನು ಮಾಡಿದ ಡಾಲಿ (Daali) ನಿರ್ದೇಶಕನಾಗಿ ಮತ್ತೊಮ್ಮೆ ಮೆಚ್ಚುಗೆ ಗಳಿಸಿದ್ದು ಡಿಫರೆಂಟ್ ಪಾತ್ರದ ಮೂಲಕ ಪ್ರೇಕ್ಷರನ್ನು ರಂಜಿಸಿದ್ದಾರೆ. ಹೆಡ್ ಬುಶ್ ಸಿನಿಮಾ ರಿಲೀಸ್ (Release) ಆಗಿ ಉತ್ತಮ ವಿಮರ್ಶೆ ಪಡೆದುಕೊಂಡಿದ್ದರೂ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರಕ್ಕೆ ಬಂದರೆ ಅಷ್ಟಾಗಿ ಸದ್ದು ಮಾಡಿಲ್ಲ. ಈಗ ಸಿನಿಮಾ ಬಗ್ಗೆ  ಹೊಸ ವಿವಾದ ಸೃಷ್ಟಿಯಾಗಿದೆ.


ಏನಿದು ವಿವಾದ?


ಸಿನಿಮಾದಲ್ಲಿ ವೀರಗಾಸೆ ಮಾಡಿದರ ಮೇಲೆ ಡಾನ್ ಜಯರಾಜ್ ಹಲ್ಲೆ ಮಾಡಿರುವ ರೀತಿ ಆಗಿದೆ. ಹಾಗಾಗಿ ಇದರಿಂದ ವೀರಗಾಸೆಗೆ ಅವಮಾನ ಆಗಿದೆ ಎನ್ನುವುದು ಸದ್ಯ ಹುಟ್ಟಿಕೊಂಡಿರುವ ವಿವಾದ.


ಧನಂಜಯ್ ಏನಂದಿದ್ದಾರೆ?


ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೆೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ ಕೂಲಂಕುಷವಾಗಿ ವಿಮರ್ಶಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಅದರ ಕುರಿತಾಗಿ ನನ್ನ ವಿವರಣೆ ಈ ಕೆಳಗಿನ ಲಿಂಕಿನಲ್ಲಿದೆ ಎಂದು ಡಾಲಿ ಟ್ವೀಟ್ ಮಾಡಿದ್ದಾರೆ.


Kannada Film Head Bush Film Review Story
ಹೆಡ್ ಬುಷ್ ಸಿನಿಮಾ ಹೇಗಿದೆ ?ಇದನ್ನೂ ಓದಿ: Kantara Rishab Shetty Next Movie: ಕಾಂತಾರ ಸಿನಿಮಾ ಸೂಪರ್ ಹಿಟ್, ಮುಂದೇನ್ ಮಾಡ್ತಾರೆ ರಿಷಬ್?


ಫೈಟ್ ಸೀನ್ ಹೇಗಿದೆ?


ವೀರಗಾಸೆ ನಡೆಯುವಾಗ ವೀರಗಾಸೆ ವೇಷ ಹಾಕಿದ ಮಂದಿ ಮುಂದೆ ಬರುತ್ತಾರೆ. ಆದರೆ ನಿಜಕ್ಕೂ ವೀರಗಾಸೆ ಮಾಡುತ್ತಿದ್ದವರು ಈ ದಿಢೀರ್ ಬೆಳವಣಿಗೆಯಿಂದ ಹಿಂದೆ ಸರಿಯುತ್ತಾರೆ. ಈ ಸಂದರ್ಭ ಜಯರಾಜ್ ನಕಲಿಯಾಗಿ ಬಂದವರಿಗೆ ಹೊಡೆಯುತ್ತಾನೆ. ಇನ್ನೂ ಒಂದು ಅಂಶವೆಂದರೆ ಇಲ್ಲಿ ವಿಲನ್​​ಗಳು ವೀರಗಾಸೆ ವೇಷ ಹಾಕಿ ಬಂದಿರುವಾಗ ಅವರು ಶೂ ಧರಿಸಿರುತ್ತಾರೆ. ಇದು ಇನ್ನೊಂದು ಪ್ರಮುಖ ಅಂಶ. ಈ ಮೂಲಕವೇ ಜಯರಾಜ್​ಗೆ ಬಂದಿರುವವರು ನಿಜವಾದ ಕಲಾವಿದರಲ್ಲ ಎನ್ನುವುದು ಅರಿವಾಗುತ್ತದೆ.


ಮೇ 21ರಂದು ಹೆಡ್ ಬುಶ್ ರಿಲೀಸ್ ಆಗಿದ್ದು ಇದು ಬೆಂಗಳೂರಿನ ಡಾನ್ ಆಗಿದ್ದ ಎಂ.ಪಿ. ಜಯರಾಜ್ ಲೈಫ್ ಕುರಿತ ಸಿನಿಮಾ. ನಿಜ ಜೀವನಾಧಾರಿತ ಕಥೆ ಆದ ಕಾರಣ ಸಿನಿಮಾ ಬಗ್ಗೆ ವಿಶೇಷ ಕುತೂಹಲ ಇತ್ತು. ಬೆಂಗಳೂರಿನ ಜನರಿಗಂತೂ ಈ ಸಿನಿಮಾ ಬಗ್ಗೆ ಸ್ವಲ್ಪ ಹೆಚ್ಚೇ ಆಸಕ್ತಿ ಇತ್ತು.


ಇದನ್ನೂ ಓದಿ: Head Bush: ಡಾನ್​ ಜಯರಾಜ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​, ಭಾರಿ ಮೊತ್ತಕ್ಕೆ ಸೇಲಾಯ್ತು ಹೆಡ್​ ಬುಷ್​!


ಕ್ರೇಜಿ ಸ್ಟಾರ್ ಎಂಟ್ರಿ-ಪಾಯಲ್ ರಜಪೂತ್ ಸೂಪರ್


ಕ್ರೇಜಿ ಸ್ಟಾರ್ ರವಿಚಂದ್ರನ್ ಈ ಸಿನಿಮಾದಲ್ಲಿ ವಿಶೇಷವಾಗಿಯೇ ಬಂದು ಹೋಗ್ತಾರೆ. ಹೆಡ್ ಬುಷ್ ಅನ್ನೋ ಆಟದ ಇನ್ನೊಂದು ಅರ್ಥವನ್ನೂ ಒಬ್ಬ ಪ್ರೊಫೆಸರ್ ಆಗಿಯೂ ತಿಳಿಸಿಕೊಟ್ಟು ಹೋಗುತ್ತಾರೆ. ಪಾಯಲ್ ರಜಪೂತ್ ಇಲ್ಲಿ ಜಯರಾಜ್ ಜೋಡಿಯಾಗಿಯೇ ಮೋಡಿ ಮಾಡ್ತಾರೆ. ಸಂಸಾರದ ನೌಕೆಯನ್ನೂ ಒಂದಷ್ಟು ದಿನ ಸಾಗಿಸಿ ಹೋಗ್ತಾರೆ. ತೆಲುಗಿನ ನಟಿ ಹೆಡ್​ ಬುಶ್​ನಲ್ಲಿ ಸಖತ್ ಸಾಂಗ್​ನಲ್ಲಿ ಕಾಣಿಸಿಕೊಂಡಿದ್ದು ವಿಶೇಷ.

Published by:Divya D
First published: