ವಿಂಗ್​ ಕಮಾಂಡರ್​ ಅಭಿನಂದನ್​ ಬಗ್ಗೆ ವ್ಯಂಗ್ಯವಾಡಿದ ಕನ್ನಡದ 'ಸಿಲ್ಕ್​' ಸಿನಿಮಾದ ನಟಿ

ಪಾಕ್​ಸೇನೆಯ ವಶದಲ್ಲಿರುವ ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್​ ಅಭಿನಂದನ್​ ಕುರಿತು ಕನ್ನಡ ಸಿನಿಮಾದಲ್ಲಿ ಅಭಿನಯಿಸಿರುವ ನಟಿಯೊಬ್ಬರು ಅಣಕಿಸಿದ್ದಾರೆ. ಅಲ್ಲದೆ ವ್ಯಂಗ್ಯ ಮಾಡುವ ಮೂಲಕ ಟ್ವೀಟ್​ ಮಾಡಿದ್ದಾರೆ. ಇದನ್ನು ಕಂಡ ತಕ್ಷಣ ಬಾಲಿವುಡ್​ ನಟಿ ಆಕೆಯನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತೀಯ ಸೇನೆಯ 
ಬಗ್ಗೆ ಹಗುರವಾಗಿ ಮಾತನಾಡಿದ ನಟಿ ವೀಣಾ ಮಲ್ಲಿಕರನ್ನು ತರಾಟೆಗೆ ತೆಗೆದುಕೊಂಡ ನಟಿ ಸ್ವರಾ ಭಾಸ್ಕರ್​

ಭಾರತೀಯ ಸೇನೆಯ ಬಗ್ಗೆ ಹಗುರವಾಗಿ ಮಾತನಾಡಿದ ನಟಿ ವೀಣಾ ಮಲ್ಲಿಕರನ್ನು ತರಾಟೆಗೆ ತೆಗೆದುಕೊಂಡ ನಟಿ ಸ್ವರಾ ಭಾಸ್ಕರ್​

  • News18
  • Last Updated :
  • Share this:
-ಅನಿತಾ ಈ, 

ಪುಲ್ವಾಮ ದಾಳಿ ನಂತರ ಭಾರತ ಬಾಲಾಕೋಟ್​ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ನಂತರ ಭಾರತ-ಪಾಕ್​ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೀಗಿರುವಾಗಲೇ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿಯೊಬ್ಬರು ಪಾಕ್​ ಸೇನೆಯ ವಶದಲ್ಲಿರುವ ವಿಂಗ್​ ಕಮಾಂಡರ್​ ಅಭಿನಂದನ್​ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಕಾಡಿನ ರಕ್ಷಣೆಗೆ ಟೊಂಕ ಕಟ್ಟಿದ ಡಿಬಾಸ್​ : ಸಸಿ ನೆಡಲು ದರ್ಶನ್​ ಮನವಿ

ಹೌದು, ಕನ್ನಡ ಸಿನಿಮಾದಲ್ಲಿ ನಟಿರುವ ಪಾಕಿಸ್ತಾನಿ ವೀಣಾ ಮಲ್ಲಿಕ್​ ಅಭಿನಂದನ್​ ಅವರನ್ನು ಅಣಕಿಸುತ್ತಾ ಟ್ವೀಟ್​ ಮಾಡಿದ್ದಾರೆ. ಎರಡೂ ದೇಶಗಳ ನಡುವೆ ಇಂತಹ ಪರಿಸ್ಥಿತಿ ಇರುವಾಗಲೇ ಪಾಕಿಸ್ತಾನಿ ನಟಿ ವೀಣಾ ಮಲ್ಲಿಕ್​ ಭಾರತದ ವಾಯು ಸೇನ್ ವಿಂಗ್​ ಕಮಾಂಡರ್​ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ.

'ಈಗಷ್ಟೇ ಬಂದಿದ್ದೀರಿ, ನಿಮಗೆ ತುಂಬಾ ಚೆನ್ನಾಗಿ ಅತಿಥಿ ಸತ್ಕಾರ ನಡೆಲಿದೆ' ಎಂದು ವ್ಯಂಗ್ಯವಾಡುವ ಮೂಲಕ ವೀಣಾ ಟ್ವೀಟ್​ ಮಾಡಿದ್ದಾರೆ.ಕನ್ನಡದಲ್ಲಿ 2013ರಲ್ಲಿ ತೆರೆಕಂಡಿದ್ದ  'ಸಿಲ್ಕ್​' ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ನಟಿ ಸಿಲ್ಕ್​ ಸ್ಮಿತಾರ ಜೀವನಾಧಾರಿತ ಈ ಸಿನಿಮಾವನ್ನು ತ್ರಿಶೂಲ್​  ಎಂಬುವರು ಕತೆ ಬರೆದು ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಸಿಲ್ಕ್​ ಪಾತ್ರ ಮಾಡಲು ಆಗ ಪಾಕಿಸ್ತಾನಿ ನಟಿ ವೀಣಾ ಮಲ್ಲಿಕ್​ರನ್ನು ಸ್ಯಾಂಡಲ್​ವುಡ್​ಗೆ ಕರೆತರಲಾಗಿತ್ತು.

ಸಿನಿಮಾ ತೆರೆಕಂಡರೂ ಹೆಚ್ಚು ಕಾಲ ಸಿನಿಮಾ ಮಂದಿರಗಳಲ್ಲಿ ಉಳಿಯಲಿಲ್ಲ. ಸದಾ ಹಸಿ ಬಿಸಿ ದೃಶ್ಯಗಳಿರುವ ಸಿನಿಮಾಗಳಲ್ಲೇ ನಟಿಸುವ ವೀಣಾ ಮಲ್ಲಿಕ್​ ಈ ಸಿನಿಮಾದಲ್ಲಿ ಸಾಕಷ್ಟು ಬೋಲ್ಡ್​ ಸೀನ್​ಗಳಲ್ಲಿ ಕಾಣಿಸಿಕೊಂಡಿದ್ದರು. ​

ಕೇವಲ ಕನ್ನಡ ಮಾತ್ರವಲ್ಲದೆ ಬೆರಳೆಣಿಕೆಯಷ್ಟು ಹಿಂದಿ ಸಿನಿಮಾಗಳಲ್ಲೂ ಅಭಿನಯಿಸಿರುವ ವೀಣಾ ಮಲ್ಲಿಕ್​ರ ಟ್ವೀಟ್​ಗೆ ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ ಸಹ ಖಾರವಾಗಿಯೇ ಪ್ರತಿಕ್ರಿಯಿಸಿದ್ದು, ಅವರು ಬರೆದಿರುವುದನ್ನು ಖಂಡಿಸಿದ್ದಾರೆ.

'ವೀಣಾ ನಿಮಗೆ ನಾಚಿಕೆಯಾಗಬೇಕು. ನಿಮ್ಮ ಕೆಟ್ಟ ಮನಸ್ಥಿತಿ ಹಾಗೂ ಸಣ್ಣ ಬುದ್ದಿ... ನಮ್ಮ ಸೈನ್ಯದ ಅಧಿಕಾರಿ ನಮ್ಮ ಹೀರೋ... ಪಾಕ್​ನ ಬಂಧನದಲ್ಲಿದ್ದರೂ ನಮ್ಮ ಅಧಿಕಾರಿಯ ಸ್ವಾಭಿಮಾನ ಕೊಂಚವೂ ಕಡಿಮೆಯಾಗಿಲ್ಲ. ಕನಿಷ್ಠ ಪಾಕ್​ನ ಸೇನಾಧಿಕಾರಿಗಳು ನಮ್ಮ ಅಧಿಕಾರಿಯನ್ನು ಪ್ರಶ್ನಿಸುವಾಗ ಕೊಂಚ ಸನ್ನಡತೆ ತೋರಿದ್ದಾರೆ' ಎಂದು ಸ್ವರಾ ಟ್ವೀಟ್​ ಮಾಡಿದ್ದಾರೆ.ಹಿಂದಿ ಬಿಗ್​ಬಾಸ್ ಸೀಸನ್​ 4ರಲ್ಲಿ ಸ್ಪರ್ಧಿಯಾಗಿ ಭಾರತಕ್ಕೆ ಬಂದಿದ್ದು, ಈಗ ಆ ಕಾರ್ಯಕ್ರಮದ ನಿರೂಪಕ ಹಾಗೂ ಸ್ಟಾರ್​ ನಟ ಸಲ್ಮಾನ್​ರನ್ನೇ ಟ್ವೀಟ್​ ಮೂಲಕ ಕೆಣಕಿದ್ದಾರೆ. ಅಷ್ಟೇ ಅಲ್ಲ ಭಾರತೀಯ ಸೇನೆ, ಪ್ರಧಾನಿ ನರೇಂದ್ರ ಮೋದಿ, ನಟ ಅಜಯ್​ ದೇವಗನ್​, ಕಂಗನಾ ರಣಾವತ್​ ​ ಅಕ್ಷಯ್​ ಕುಮಾರ್​ ಅವರಿಗೂ ಬಾಲಾಕೋಟ್​ ವೈಮಾನಿಯ ದಾಳಿ ಕುರಿತಂತೆ ಟ್ವೀಟ್​ ಮೂಲಕ ವ್ಯಂಗ್ಯವಾಗಿದ್ದಾರೆ. ಈ ನಡುವೆ ಬುಧವಾರ ಬೆಳಗ್ಗೆ ಪಾಕಿಸ್ತಾನದ ಜೆಟ್​ ಎಫ್​-16 ಯುದ್ಧವಿಮಾನ ಭಾರತ ವಾಯು ವಲಯ ಗಡಿ ದಾಟಿತ್ತು. ಆಗ ಅದನ್ನು ಹಿಮ್ಮೆಟಿಸಲು ಮುಂದಾಗಿದ್ದ ಭಾರತದ ಮಿಗ್​-21 ವಿಮಾನ ಕಾರ್ಯದಲ್ಲಿ ಯಶಸ್ವಿಯಾಗಿತ್ತು. ಆದರೆ ಈ ವೇಳೆ ಮಿಗ್​-21 ವಿಮಾನ ಪತನಗೊಂಡು, ಅದರಿಂದ ಪ್ಯಾರಾಚೂಟ್​ ಮೂಲಕ ಕೆಳಗಿದ ವಿಂಗ್​ ಕಮಾಂಡರ್​ ಅಭಿನಂದನ್​ ಅವರನ್ನು ಪಾಕ್​ ಸೈನ್ಯ ಬಂಧಿಸಿತ್ತು.

ಪಾಕಿಸ್ತಾನಿ ನಟಿ ವೀಣಾ ಮಲ್ಲಿಕ್​ ಬಿಗ್​ಬಾಸ್​ ಮೂಲಕ ಭಾರತಕ್ಕೆ ಎಂಟ್ರಿಕೊಟ್ಟಿದ್ದರು. ಇದಾದನ ನಂತರ ಕೆಲವು ಸಿನಿಮಾಗಳಲ್ಲಿ ಅಭಿಯಿಸುತ್ತಾ ಭಾರತದಲ್ಲೇ ಇರುವಾಗ ಪಾಕಿಸ್ತಾನದ ವಿರುದ್ಧ ಸಹ ಸಾಕಷ್ಟು ಹೇಳಿಕೆಗಳನ್ನು ನೀಡಿ ವಿವಾದಕ್ಕೀಡಾಗಿದ್ದರು. ಅಲ್ಲದೆ ಈಕೆ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಿತ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ.

PHOTOS: ಜಿಮ್​ಗೆ ಹೋಗುವ ಮುನ್ನ ಕ್ಯಾಮೆರಾಗೆ ಪೋಸ್​ ಕೊಟ್ಟ ನಟಿ ಸಾರಾ ಅಲಿಖಾನ್​ರ ಕೆಲ ಚಿತ್ರಗಳು..!


 
First published: