Vasishta Simha: ಹೊಸ ಅವತಾರದಲ್ಲಿ ಬಂದ್ರು ವಸಿಷ್ಠ ಸಿಂಹ - ‘Love ಲಿ ಚಿತ್ರದ ಪೋಸ್ಟರ್​ನಲ್ಲಿ ನಟನ ಡಿಫರೆಂಟ್​ ಲುಕ್

Sandalwood: ಇನ್ನು ಅವರ ಬಹುದಿನಗಳ ಕನಸು, ಆಡಿಯೋ ಲೇಬಲ್ ಅನ್ನು ಸಹ ಇತ್ತೀಚೆಗೆ ಲಾಂಚ್ ಮಾಡಿದ್ದಾರೆ. ಸಿಂಹ ಆಡಿಯೋ ಎನ್ನುವ ಲೇಬಲ್ ಅನ್ನು ನಟ ಆರಂಭಿಸಿದ್ದು, ಅದರ ಮೂಲಕವೇ ಅವರ ಚಿತ್ರ ಕಾಲಚಕ್ರದ ಹಾಡನ್ನು ರಿಲೀಸ್ ಮಾಡಿದ್ದು, ಇನ್ನಷ್ಟು ಹಾಡನ್ನು ರಿಲೀಸ್ ಮಾಡಬೇಕು ಎಂಬ ಕನಸನ್ನು ಕಟ್ಟಿಕೊಂಡಿದ್ದಾರೆ.

ಚಿತ್ರದ ಪೋಸ್ಟರ್​

ಚಿತ್ರದ ಪೋಸ್ಟರ್​

  • Share this:
ತಮ್ಮ ಧ್ವನಿ ಹಾಗೂ ನಟನೆಯಿಂದ ವಿಲನ್ ಪಾತ್ರಗಳಿಂದ ಹೆಸರು ಮಾಡಿದ್ದ, ಸ್ಯಾಂಡಲ್​ವುಡ್​ನ ಕಂಚಿನ ಕಂಠದ ನಟ ವಸಿಷ್ಠ ಸಿಂಹ (Vasishta Simha) ವಿಭಿನ್ನ ಪಾತ್ರದ ಮೂಲಕ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಹೌದು, ವಸಿಷ್ಠ ಸಿಂಹ ನಟನೆಯ ಹೊಸ ಚಿತ್ರ ‘Love ಲಿ’ ಯ ಪೋಸ್ಟರ್ (Poster) ರಿಲೀಸ್ ಆಗಿದ್ದು, ವಸಿಷ್ಠ ಲುಕ್ ನೋಡಿ ಅಭಿಮಾನಿಗಳು (Fans) ಫಿದಾ ಆಗಿದ್ದಾರೆ.  ರಕ್ತಸಿಕ್ತ ಕೈಯಲ್ಲಿ ಲಾಂಗ್ ಹಿಡಿದು, ಧಮ್ ಎಳೆಯುತ್ತಾ ಎಂಟ್ರಿ ಕೊಟ್ಟ ವಸಿಷ್ಠ ಅವರ ಲುಕ್ ಬಹಳ ಅದ್ಭುತವಾಗಿದ್ದು, ಇದು ಅವರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.

‘Love...ಲಿ’ ಪ್ರೇಮಕಥೆಯಾಗಿದ್ದು, ಜೊತೆಗೆ ರೌಡಿಸಂನ ವಿಭಿನ್ನ ಕಥಾಹಂದರವನ್ನು ಒಳಗೊಂಡಿದೆ ಎಂದು ಚಿತ್ರತಂಡ ತಿಳಿಸಿದೆ. ವಸಿಷ್ಠ ಸಿಂಹ ಅವರ ಗೆಳೆಯ, ‘ಮಫ್ತಿ’ ನಿರ್ದೇಶಕ ನರ್ತನ್ ಜೊತೆ ಕೆಲಸ ಮಾಡಿ ಅನುಭವವಿರುವ ಚೇತನ್ ಕೇಶವ್ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಬೆಂಗಳೂರು ಸುತ್ತಮುತ್ತ ಸಿನಿಮಾದ ಚಿತ್ರೀಕರಣ ಆಗಿದ್ದು, ಪೋಸ್ಟರ್ ಹೈಪ್ ಕ್ರಿಯೇಟ್ ಮಾಡಿದೆ.

ಹೆಚ್ಚಿದ ಅಭಿಮಾನಿಗಳ ನಿರೀಕ್ಷೆ

ಈ ಚಿತ್ರದ ಬಗ್ಗೆ ಸಧ್ಯಕ್ಕೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಆದರೇ ಈ ಪೋಸ್ಟರ್ ನೋಡಿರುವ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಅಲ್ಲದೇ ಈ ಚಿತ್ರದ ಇಂಟ್ರೊಡಕ್ಷನ್ ಸೀನ್ಸ್ ಅದ್ದೂರಿಯಾಗಿ ಮೂಡಿ ಬಂದಿರುವ ಬಗ್ಗೆ ಸಹ ಮಾಹಿತಿ ಇದೆ.

ರವೀಂದ್ರ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಹರೀಶ್ಕೊಂಬೆ ಕ್ಯಾಮೆರಾ ವರ್ಕ್ ಮಾಡುತ್ತಿದ್ದು, ಅನೂಪ್ ಸಿಳೀನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಇದನ್ನೂ ಓದಿ: ಟ್ರೋಲಿಗರಿಗೆ ಚಳಿ ಬಿಡಿಸಿದ ಪೂಜಾ ಹೆಗ್ಡೆ - ಐರೆನ್ ಲೆಗ್ ಅಂತಾ ಕರೆದವರಿಗೆ ರಾಧೆ ತಿರುಗೇಟು

ಇನ್ನು ವಸಿಷ್ಠ ಸಿಂಹ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್ಗಳಿವೆ. ಡಾನ್ ಜಯರಾಜ್ ಜೀವನ ಆಧರಿಸಿ ‘ಹೆಡ್ ಬುಷ್’ ‘ಸಿಂಬಾ’, ‘ಓದೆಲಾ ರೈಲ್ವೇ ಸ್ಟೇಷನ್’ ಸೇರಿ ಹಲವು ಸಿನಿಮಾಗಳಲ್ಲಿ ವಸಿಷ್ಠ ಬ್ಯುಸಿಯಾಗಿದ್ದಾರೆ.

ಫುಲ್ ಬ್ಯುಸಿ ಇದ್ದಾರೆ ವಸಿಷ್ಠ

ರಾಜಾಹುಲಿ' ಚಿತ್ರದ ಜಗ್ಗ ಪಾತ್ರದಿಂದ ಎಲ್ಲರ ಗಮನಸೆಳೆದ ವಶಿ‍ಷ್ಠ , ನಂತರ `ರುದ್ರತಾಂಡವ'ದಲ್ಲಿ ನಟಿಸಿ ಜನರಿಗೆ ಹೆಚ್ಚು ಹತ್ತಿರವಾಗಿದ್ದಾರೆ. 2016 ರಲ್ಲಿ ತೆರೆಕಂಡ `ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿನ ಅಭಿನಯಕ್ಕಾಗಿ ಫಿಲ್ಮ್‍ ಫೇರ್ ಮತ್ತು ಸೈಮಾ ಪ್ರಶಸ್ತಿ ಪಡೆದ ನಟನಿಗೆ, ಗಾಯಕರಾಗಬೇಕು ಎಂಬ ಆಸೆ ಇತ್ತಂತೆ. ಹಾಗಾಗಿ ಈಗಲೂ ಸಹ ನಟನೆಯ ಜೊತೆ ಗಾಯನವನ್ನು ಸಹ ಮಾಡುತ್ತಾರೆ. `ಕಿರಿಕ್ ಪಾರ್ಟಿ',`ದಯವಿಟ್ಟು ಗಮನಿಸಿ',`6ನೇ ಮೈಲಿ' ಮುಂತಾದ ಚಿತ್ರಗಳಿಗೆ ಹಾಡನ್ನು ಹಾಡಿದ್ದಾರೆ.

ಇದನ್ನೂ ಓದಿ: ಮತ್ತೋರ್ವ ಕನ್ನಡತಿಗೆ ಪರಭಾಷೆಯಲ್ಲಿ ರೆಡ್ ಕಾರ್ಪೆಟ್, ತೆಲುಗಿಗೆ ಹಾರಿದ 'ಸಲಗನ' ಬೆಡಗಿ!

ಇನ್ನು ಅವರ ಬಹುದಿನಗಳ ಕನಸು, ಆಡಿಯೋ ಲೇಬಲ್ ಅನ್ನು ಸಹ ಇತ್ತೀಚೆಗೆ ಲಾಂಚ್ ಮಾಡಿದ್ದಾರೆ. ಸಿಂಹ ಆಡಿಯೋ ಎನ್ನುವ ಲೇಬಲ್ ಅನ್ನು ನಟ ಆರಂಭಿಸಿದ್ದು, ಅದರ ಮೂಲಕವೇ ಅವರ ಚಿತ್ರ ಕಾಲಚಕ್ರದ ಹಾಡನ್ನು ರಿಲೀಸ್ ಮಾಡಿದ್ದು, ಇನ್ನಷ್ಟು ಹಾಡನ್ನು ರಿಲೀಸ್ ಮಾಡಬೇಕು ಎಂಬ ಕನಸನ್ನು ಕಟ್ಟಿಕೊಂಡಿದ್ದಾರೆ.
Published by:Sandhya M
First published: