ವಸಿಷ್ಠ ಸಿಂಹ ಬರ್ತ್‌ಡೇಗೆ ಭರ್ಜರಿ ಗಿಫ್ಟ್‌; ಮಲಯಾಳಂನಲ್ಲೂ ನಿರ್ಮಾಣವಾಗಲಿದೆ ಕಾಲಚಕ್ರ

ನಾಳೆ (ಅಕ್ಟೋಬರ್ 18) ಟಗರು ಖ್ಯಾತಿಯ ಚಿಟ್ಟೆ, ಆರಡಿ ಕಟೌಟ್‌, ಕಂಚಿನ ಕಂಠದ ಖಡಕ್‌ ಹುಡುಗ ವಸಿಷ್ಠ ಎನ್‌ ಸಿಂಹ ಅವರ ಹುಟ್ಟುಹಬ್ಬ. ಆದರೆ ಅವರ ಹುಟ್ಟುಹಬ್ಬಕ್ಕೆ ಒಂದು ದಿನವೇ ಅವರಿಗೆ ಭರ್ಜರಿ ಗಿಫ್ಟ್‌ ದೊರೆತಿದೆ. ಹೌದು, ವಸಿಷ್ಠ ನಾಯಕನಾಗಿರುವ ಕಾಲಚಕ್ರ ಸಿನಿಮಾ ರಿಲೀಸ್‌ಗೂ ಮುನ್ನವೇ ಮಲಯಾಳಂ ರಿಮೇಕ್‌ ಹಕ್ಕು ಮಾರಾಟವಾಗಿದೆ.

news18-kannada
Updated:October 18, 2020, 1:58 PM IST
ವಸಿಷ್ಠ ಸಿಂಹ ಬರ್ತ್‌ಡೇಗೆ ಭರ್ಜರಿ ಗಿಫ್ಟ್‌; ಮಲಯಾಳಂನಲ್ಲೂ ನಿರ್ಮಾಣವಾಗಲಿದೆ ಕಾಲಚಕ್ರ
Vasishta Simha
  • Share this:
ಮಲಯಾಳಂ ಚಿತ್ರರಂಗದ ಖ್ಯಾತ ನಿರ್ಮಾಪಕರೊಬ್ಬರು ಕಾಲಚಕ್ರ ಚಿತ್ರದ ಕಥೆಯನ್ನು ಇಷ್ಟಪಟ್ಟಿದ್ದು, ಮಾಲಿವುಡ್‌ನಲ್ಲೂ ರಿಮೇಕ್‌ ಮಾಡಲು ಮುಂದಾಗಿದ್ದಾರೆ. ಆದರೆ ಚಿತ್ರತಂಡ ಆ ನಿರ್ಮಾಪಕ ಯಾರು? ನಿರ್ಮಾಣ ಸಂಸ್ಥೆ ಯಾವುದು? ಮಲಯಾಳಂ ಸಿನಿಮಾ ಯಾವಾಗ ಪ್ರಾರಂಭ? ಯಾರೆಲ್ಲಾ ಅಭಿನಯಿಸಲಿದ್ದಾರೆ ಎಂಬುದನ್ನು ಸದ್ಯಕ್ಕಿನ್ನೂ ಸೀಕ್ರೆಟ್‌ ಆಗಿಟ್ಟಿದ್ದು, ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಅನೌನ್ಸ್‌ ಆಗಲಿದೆ.

ವಿಶೇಷ ಅಂದರೆ ಅಕ್ಟೋಬರ್‌ 19ರಂದು ವಸಿಷ್ಠ ಸಿಂಹ ಅವರ ಹುಟ್ಟುಹಬ್ಬದ ಸಂದರ್ಭದಲ್ಲೇ ಕಾಲಚಕ್ರ ಚಿತ್ರದ ರಿಮೇಕ್‌ ಹಕ್ಕು ಮಾರಾಟವಾಗಿರುವುದು ಚಿತ್ರತಂಡದಲ್ಲಿ ಸಂತಸ ಮೂಡಿಸಿದೆ. ವಸಿಷ್ಠ ನಾಲ್ಕು ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ಕಾಲಚಕ್ರದ ಟೀಸರ್‌ ಹಾಗೂ ಹಾಡುಗಳನ್ನು ಅಭಿನಯ ಚಕ್ರವರ್ತಿ ಬಾದ್ಶಾ ಕಿಚ್ಚ ಸುದೀಪ್‌ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದರು. ಈಗಾಗಲೇ ಟೀಸರ್‌ ಹಾಗೂ ಹಾಡುಗಳ ಮೂಲಕವೇ ಕೊಂಚ ಮಟ್ಟಿಗೆ ಸೌಂಡ್‌ ಮಾಡಿದೆ.

ನಿರ್ದೇಶಕ ಸುಮಂತ್‌ ಕ್ರಾಂತಿ ಅವರೇ ರಚಿಸಿ, ರಶ್ಮಿ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ನಿರ್ಮಿಸಿರುವ ಸಿನಿಮಾ ಕಾಲಚಕ್ರ. ಸೈಕಲಾಜಿಕಲ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಕಾಲಚಕ್ರ ಚಿತ್ರದಲ್ಲಿ ವಸಿಷ್ಠ ಅವರ ಭಿನ್ನ, ವಿಭಿನ್ನ ಪಾತ್ರಗಳು ಈಗಾಗಲೇ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ, ನಿರೀಕ್ಷೆ ಮೂಡಿಸಿದೆ.ಕಾಲಚಕ್ರ ಹಾಡುಗಳಿಗೆ ಗುರುಕಿರಣ್‌ ಸಂಗೀತವಿದ್ದು, ಚೇತನ್‌ ಕುಮಾರ್‌, ಕವಿರಾಜ್‌, ಸಂತೋಷ್‌ ನಾಯಕ್‌ ಸಾಹಿತ್ಯ ರಚಿಸಿದ್ದು, ಸಂಚಿತ್‌ ಹೆಗಡೆ, ಕೈಲಾಶ್‌ ಖೇರ್‌, ಪಂಚಮ್‌ ಜೀವ ಹಾಡಿದ್ದಾರೆ. ಎಲ್‌ಎಂ ಸೂರಿ ಛಾಯಾಗ್ರಹಣ, ಸೌಂದರ್‌ ರಾಜ್‌ ಸಂಕಲನ, ಡಿಫರೆಂಟ್‌ ಡ್ಯಾನಿ ಸಾಹಸ ನಿರ್ದೇಶನ, ಹಾಗೂ ಮಾಸ್ಟರ್‌ ಮುರಳಿ ಅವರ ನೃತ್ಯ ನಿರ್ದೇಶಿಸಿದ್ದಾರೆ. ವಸಿಷ್ಠ ಸಿಂಹಗೆ ರಕ್ಷಾ ಜೋಡಿಯಾಗಿದ್ದು ದೀಪಕ್‌ ಶೆಟ್ಟಿ, ಸುಚೇಂದ್ರ ಪ್ರಸಾದ್‌ ಪ್ರಮುಖ ತಾರಾಗಣದಲ್ಲಿದ್ದಾರೆ. ಈಗಷ್ಟೇ ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ಪ್ರದರ್ಶನ ಪ್ರಾರಂಭಿಸಿದ್ದು, ಹೊಸ ಸಿನಿಮಾಗಳು ರಿಲೀಸ್‌ ಆಗಲು ಶುರುವಾಗುತ್ತಿದ್ದಂತೆಯೇ ಕಾಲಚಕ್ರವನ್ನೂ ತೆರೆಗೆ ತರುವ ಐಡಿಯಾ ಚಿತ್ರತಂಡದ್ದು.
Published by: Rajesh Duggumane
First published: October 18, 2020, 1:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading