ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಮದುವೆಯಾಗಿ ಕೆಲವೇ ದಿನಕ್ಕೆ ಈಗ ನಟಿ ಹರಿಪ್ರಿಯಾ ಅವರ ನಿಶ್ಚಿತಾರ್ಥ ನಡೆದಿದೆ. ನಟ ವಸಿಷ್ಠ ಸಿಂಹ ಜೊತೆ ಹರಿಪ್ರಿಯಾ (Haripriya) ನಿಶ್ಚಿತಾರ್ಥ ನಡೆದಿದ್ದು ಎಲ್ಲರಿಗೂ ಅಚ್ಚರಿ ತಂದಿದೆ. ಇದೊಂಥರಾ ಸ್ಯಾಂಡಲ್ವುಡ್ (Sandalwood) ಸೇರಿ ಇತರ ಚಿತ್ರರಂಗದಲ್ಲಿಯೂ ವಿವಾಹಗಳ (Marriage) ಸಮಯ. ಬಹಳಷ್ಟು ಸ್ಟಾರ್ ನಟ, ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಕಳೆದೊಂದು ವರ್ಷದಲ್ಲಿ ಕತ್ರೀನಾ ಕೈಫ್ ಟು ನಯನತಾರಾ ತನಕ ಬಹಳಷ್ಟು ತಾರೆಗಳು ಮದುವೆಯಾದರು. ಈಗ ಸ್ಯಾಂಡಲ್ವುಡ್ನಲ್ಲಿಯೂ ಸಾಲು ಸಾಲು ಮದುವೆ ಸುದ್ದಿ ಕೇಳಿಬರುತ್ತಿದೆ. ಇದರಲ್ಲಿ ಸ್ಯಾಂಡಲ್ವುಡ್ ಲೇಟೆಸ್ಟ್ ಟಾಕ್ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಬಗ್ಗೆ (Vasishta Simha).
ದಿಢೀರ್ ನಿಶ್ಚಿತಾರ್ಥ
ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ನಿಶ್ಚಿತಾರ್ಥ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಕಾರಣ ಇವರು ಪ್ರೇಮಿಗಳೆಂಬುದು ಯಾರಿಗೂ ಗೊತ್ತಿರಲಿಲ್ಲ. ಬರೀ ಸ್ನೇಹಿತರಷ್ಟೇ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ಎಲ್ಲರ ಅನಿಸಿಕೆಗಳನ್ನು ಸುಳ್ಳಾಗಿಸಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಲವರ್ಸ್ ಆಗಿ ಯಾಕೆ ಹೈಲೈಟ್ ಆಗಿಲ್ಲ?
ಸಾಮಾನ್ಯವಾಗಿ ಯಾವುದೇ ಜೋಡಿ ಡೇಟ್ ಮಾಡುತ್ತಿದ್ದರೆ ಅದು ಬೇಗನೆ ಬೆಳಕಿಗೆ ಬರುತ್ತದೆ. ಆದರೆ ಇವರ ವಿಚಾರದಲ್ಲಿ ಹಾಗಾಗಿಲ್ಲ. ಇವರು ಸ್ನೇಹಿತರಾಗಿಯೇ ಹೊರಗೆ ಕಾಣಿಸಿಕೊಂಡರು. ಜೊತೆಯಲ್ಲಿ ಒಂದೇ ಒಂದು ಸಿನಿಮಾ ಕೂಡಾ ಮಾಡದೆ ಇವರು ಪ್ರೀತಿಯಲ್ಲಿ ಬಿದ್ದರು.
View this post on Instagram
ಲವ್ ಸುಳಿವು ಸಿಕ್ಕಿದ್ದು ಯಾವಾಗ?
ಬೆಂಗಳೂರಿನ ಏರ್ಪೋರ್ಟ್ನಲ್ಲಿ ಒಂದೇ ಬಣ್ಣದ ಔಟ್ಫಿಟ್ನಲ್ಲಿ ವಸಿಷ್ಠ ಹಾಗೂ ಹರಿಪ್ರಿಯಾ ಕೈಕೈ ಹಿಡಿದುಕೊಂಡು ಹೆಜ್ಜೆ ಹಾಕಿದಾಗಲೇ ಇವರ ರಿಲೇಷನ್ಶಿಪ್ ರಿವೀಲ್ ಆಯಿತು. ನಾವು ಸ್ನೇಹಿತರು ಎಂದೇ ಹೇಳಿದರೂ ಯಾವ ಫ್ರೆಂಡ್ಸ್ ಕೂಡಾ ಹೀಗೆ ಕೈ ಕೈ ಹಿಡಿದು ಓಡಾಡಲ್ಲ ಎಂದು ನೆಟ್ಟಿಗರು ಚರ್ಚೆ ಮಾಡಿದ್ರು. ಫೋಟೊ ಒಂದನ್ನು ನೋಡಿ ನೆಟ್ಟಿಗರು ಊಹಿಸಿದ್ದು ಈಗ ನಿಜವಾಗಿದೆ.
ಇದನ್ನೂ ಓದಿ: Vasishta Simha-Haripriya: ಇಂದು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ವಸಿಷ್ಠ-ಹರಿಪ್ರಿಯಾ!
ನಟಿ ಇತ್ತೀಚೆಗೆ ದುಬೈನಲ್ಲಿ ತೆಗೆದ ವಿಡಿಯೋ ಒಂದನ್ನು ಶೇರ್ ಮಾಡಿ ನನ್ನ ಸನ್ಶೈನ್ ಜೊತೆ ಒಂದು ಕಾಫಿ ಕುಡಿಯುತ್ತೇನೆ ಎಂದು ಕ್ಯಾಪ್ಶನ್ ಬರೆದಿದ್ದಾರೆ. ಕಿಟಕಿಯ ಹೊರಗಲ್ಲ ಕ್ಯಾಮೆರಾ ಹಿಂದೆ ಅವರ ಸನ್ಶೈನ್ ಇದೆ ಎನ್ನುವುದು ಯಾರಿಗೂ ಗೊತ್ತಾಗಲೇ ಇಲ್ಲ. ವಸಿಷ್ಠ ಹಾಗೂ ಅವರು ಇತ್ತೀಚೆಗೆ ದುಬೈಗೆ ಹಾರಿದ್ದರು.
View this post on Instagram
View this post on Instagram
View this post on Instagram
ನಟಿ ವಸಿಷ್ಠ ಸಿಂಹ ಬರ್ತ್ಡೇ ದಿನ ಸ್ಪೆಷಲ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಇದರಲ್ಲಿ ವಸಿಷ್ಠ ಸಿಂಹ ಜೊತೆ ಅವರು ಡ್ಯಾನ್ಸ್ ಮಾಡುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಹ್ಯಾಪಿ ಬರ್ತ್ಡೇ ಪಾರ್ಟ್ನರ್ ಎಂದು ವಿಶ್ ಮಾಡಿದ್ದರು. ಸರಿಯಾಗಿ ಗಮನಿಸಿದರೆ ಹಿಂದಿನಿಂದಲೇ ಅವರ ಪೋಸ್ಟ್ಗಳಲ್ಲಿ ಅವರಿಬ್ಬರ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎನ್ನುವುದು ರಿವೀಲ್ ಆಗಿದೆ.
ಇವರು ಜೊತೆಯಾಗಿ ನಟಿಸಿದ ಸಿನಿಮಾ ರಿಲೀಸ್ ಆಗಬೇಕಷ್ಟೆ
ಹರಿಪ್ರಿಯಾ ಹಾಗೂ ವಸಿಷ್ಠ ಅಭಿನಯದ ಸಿನಿಮಾ ಸಿದ್ಧವಾಗುತ್ತಿದೆ. ಈ ಸಿನಿಮಾ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಇಲ್ಲ. ಸಿನಿಮಾ ಶೂಟಿಂಗ್ ಸೆಟ್ನಲ್ಲಿಯೇ ಆಪ್ತರಾದ ಈ ಜೋಡಿ ನಂತರ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ