news18-kannada Updated:October 20, 2020, 5:08 PM IST
ವಸಿಷ್ಠ ಸಿಂಹ
ಲಾಕ್ ಡೌನ್ ಮುಗಿದ ಮೇಲೆ ಚಿತ್ರರಂಗ ನಿಧಾನಕ್ಕೆ ಚೇತರಿಕೆ ಕಾಣುತ್ತಿದೆ. ಸ್ಯಾಂಡಲ್ ವುಡ್ ನ ಕೆಲಸ ಕಾರ್ಯಗಳು ದಿನದಿಂದ ದಿನಕ್ಕೆ ಬಿರುಸು ಪಡೆದುಕೊಳ್ಳುತ್ತಿವೆ. ಅದಕ್ಕೆ ಸಾಕ್ಷಿ ದಿನಕ್ಕೆ ಎರಡು-ಮೂರು ಚಿತ್ರಗಳು ಆರಂಭವಾಗುತ್ತಿರೋದು.
ಇದೇ ಸಾಲಿನಲ್ಲಿ ವಸಿಷ್ಠ ಸಿಂಹ ಅಭಿನಯದ ನೂತನ ಚಿತ್ರವೊಂದು ಇದೇ ತಿಂಗಳ ಕೊನೆಯಲ್ಲಿ ಆರಂಭವಾಗಲಿದೆ. ಚಿತ್ರದ ಶೀರ್ಷಿಕೆ ಗೌಪ್ಯವಾಗಿಟ್ಟಿರುವ ಚಿತ್ರತಂಡ ಮಾಸಾಂತ್ಯಕ್ಕೆ ಮುಹೂರ್ತ ನಡೆಸಿ, ಚಿತ್ರದ ಶೀರ್ಷಿಕೆ ಅನಾವರಣಗೊಳಿಸೋ ಆಲೋಚನೆಯಲ್ಲಿದೆ.
ಜನರತ್ನ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜನಾರ್ಧನ ವಿ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ವಚನ್ ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಜೊತೆಗೆ 'ಲೂಸಿಯಾ' ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ವಚನ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಅನೂಪ್ ಸೀಳಿನ್ ಸಂಗೀತವಿರುವ ಈ ಚಿತ್ರಕ್ಕೆ 'ಮಫ್ತಿ' ಖ್ಯಾತಿಯ ನವೀನ್ ಕುಮಾರ್ ಐ ಛಾಯಾಗ್ರಹಣವಿದೆ. 'ಟಗರು' ಖ್ಯಾತಿಯ ಮಾಸ್ತಿ ಅವರು ಸಂಭಾಷಣೆ ಬರೆಯುತ್ತಿದ್ದಾರೆ.ಹರೀಶ್ ಕೊಮ್ಮೆ ಅವರ ಸಂಕಲನವಿರುವ ಈ ಚಿತ್ರಕ್ಕಿದೆ.
ವಸಿಷ್ಠ ಸಿಂಹ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಖ್ಯಾತ ನಟ ಕಿಶೋರ್ ಕೂಡ ಕಾಣಿಸಿಕೊಳುತ್ತಿದ್ದಾರೆ. ಸಾಕಷ್ಟು ಪ್ರಸಿದ್ದ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆಯಂತೆ. ಒಟ್ಟಾರೆ ಕನ್ನಡ ಚಿತ್ರರಂಗದ ಸದ್ಯದ ಬೆಳವಣಿಗೆಗಳು ಚಿತ್ರೋದ್ಯಮದಲ್ಲಿ ಹೊಸ ಹುರುಪು ನೀಡುತ್ತಿವೆ ಅಂದರೆ ತಪ್ಪಾಗದು.
ವಿವಾದದಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾ; ಟೈಟಲ್ ಬದಲಾಯಿಸುತ್ತಾರಾ ಸಿಂಪಲ್ ಸ್ಟಾರ್?
Published by:
Harshith AS
First published:
October 20, 2020, 4:53 PM IST