Valmiki Trailer: ವಾಲ್ಮೀಕಿಯಲ್ಲಿ ಉದ್ದುದ್ದ ಗಡ್ಡ ಬಿಟ್ಟ ರೌಡಿ ವರುಣ್​, ಮುಗ್ಧೆಯಾಗಿ ಮಿಂಚಿದ ಪೂಜಾ ಹೆಗ್ಡೆ..!

Valmiki Trailer: ಫಿದಾ ಖ್ಯಾತಿಯ ನಟ ವರುಣ್​ ತೇಜ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ವಾಲ್ಮೀಕಿ. ಇದರ ಟ್ರೈಲರ್​ ಬಿಡುಗಡೆಯಅಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 

Anitha E | news18-kannada
Updated:September 10, 2019, 4:25 PM IST
Valmiki Trailer: ವಾಲ್ಮೀಕಿಯಲ್ಲಿ ಉದ್ದುದ್ದ ಗಡ್ಡ ಬಿಟ್ಟ ರೌಡಿ ವರುಣ್​, ಮುಗ್ಧೆಯಾಗಿ ಮಿಂಚಿದ ಪೂಜಾ ಹೆಗ್ಡೆ..!
ವಾಲ್ಮೀಕಿ ಚಿತ್ರದಲ್ಲಿ ವರುಣ್ ತೇಜ್​
Anitha E | news18-kannada
Updated: September 10, 2019, 4:25 PM IST
ಕನ್ನಡದ ಮಾಸ್ಟರ್‍ಪೀಸ್ ಕೆಜಿಎಫ್ ಸಿನಿಮಾದ ಸಕ್ಸಸ್ ಎಲ್ಲ ಚಿತ್ರರಂಗಗಳಲ್ಲೂ ಹೊಸ ಟ್ರೆಂಡ್ ಆರಂಭಿಸಿದೆ. ಉದ್ದ ಕೂದಲು ಮತ್ತು ಗಡ್ಡ, ವಿಲನ್‍ನಂತಹ ನಾಯಕನಿರುವ ಗ್ಯಾಂಗ್‍ಸ್ಟರ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿಸಿದೆ. ಸದ್ಯ ಇದೇ ರೀತಿಯ ಸಿನಿಮಾ 'ವಾಲ್ಮೀಕಿ' ಟಾಲಿವುಡ್‍ನಲ್ಲಿ ಸದ್ದು ಮಾಡ್ತಿದೆ.

'ಫಿದಾ' ಖ್ಯಾತಿಯ ನಟ ವರುಣ್​ ತೇಜ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ವಾಲ್ಮೀಕಿ'. ಇದರ ಟ್ರೈಲರ್​ ಬಿಡುಗಡೆಯಅಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.



ಇದನ್ನೂ ಓದಿ: Puneeth Rajkumar: ಯುವರತ್ನ ಸಿನಿಮಾ ಚಿತ್ರೀಕರಣದ ವೇಳೆ ಗಲಾಟೆ: ಸಿಟ್ಟಿಗೆದ್ದ ವಿದ್ಯಾರ್ಥಿಗಳಿಂದ ಪ್ರತಿಭಟನೆ..!

ಸಿನಿಮಾ ನಿರ್ದೇಶಕ ರಿಯಲ್​ ಲೈಫ್​ ಗ್ಯಾಂಗ್​ಸ್ಟರ್​ ಅನ್ನೇ ಸಿನಿಮಾದ ನಾಯಕನಾಗಿ ಆಯ್ಕೆ ಮಾಡಿಕೊಂಡು ಸಿನಿಮಾ ತೆಗೆಯುವುದೇ ಈ ಚಿತ್ರದ ಒನ್​ಲೈನ್​ ಸ್ಟೋರಿ. ಇದರಲ್ಲಿ ವರುಣ್​ ತೇಜ್​ ಲುಕ್​ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗುತ್ತಿದೆ.

ಹರೀಶ್ ಶಂಕರ್ ನಿರ್ದೇಶನದ 'ವಾಲ್ಮೀಕಿ' ತಮಿಳಿನ 'ಜಿಗರ್​ ಥಂಡ' ಚಿತ್ರದ ರಿಮೇಕ್ ಆಗಿದ್ದರೂ, ನಾಯಕ ವರುಣ್‍ತೇಜ್ ಲುಕ್ ಮತ್ತು ರಿವರ್ಸ್ ಸ್ಕ್ರೀನ್‍ಪ್ಲೇ 'ಕೆ.ಜಿ.ಎಫ್' ಸಿನಿಮಾವನ್ನು ನೆನಪಿಸುವಂತಿದೆ.

Varun Tej starrer Valmiki Movie trailer has been released
'ವಾಲ್ಮೀಕಿ' ಸಿನಿಮಾದಲ್ಲಿ ವರುಣ್​ ತೇಜ್​ ಹಾಗೂ ಪೂಜಾ ಹೆಗ್ಡೆ

Loading...

ವರುಣ್ ತೇಜ್ ಜತೆಗೆ ಅಥರ್ವಾ ಹಾಗೂ ಪೂಜಾ ಹೆಗ್ಡೆ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಾಲ್ಮೀಕಿಗೆ ಮಿಕಿ ಜೆ ಮೇಯರ್ ಸಂಗೀತವಿದ್ದು, ಇದೇ ತಿಂಗಳ 20ರಂದು ರಿಲೀಸ್ ಆಗಲಿದೆ.

Tanya Hope: ಕೆಂಪು ಬಣ್ಣದ ತುಂಡುಡುಗೆ ತೊಟ್ಟು ಪಡ್ಡೆಗಳ ನಿದ್ದೆ ಕೆಡಿಸಿದ 'ಯಜಮಾನ'ನ ಬಸಣ್ಣಿ ತಾನ್ಯಾ..!

First published:September 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...