ಬರಲಿದೆ ಸ್ಯಾಂಡಲ್​ವುಡ್​ ಸ್ಟಾರ್ಸ್​​ಗಳ 'ನಮ್ಮ ಭಾರತ' ವಿಶೇಷ ಗೀತೆ..!

ನಮ್ಮ ಭಾರತ

ನಮ್ಮ ಭಾರತ

ಅದ್ವಿಕ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಧ್ವನಿ ನೀಡಿರುವುದು ಅನಿರುದ್ಧ್ ಶಾಸ್ತ್ರಿ. ಹಾಗೆಯೇ ಲಕ್​ ಲಕ್ ಲಕ್​ಪತಿ ಕ್ಯಾಚಿ ಸಾಹಿತ್ಯ ಬರೆದಿದ್ದ ಭಜರಂಗಿ ಮೋಹನ್ ಇಲ್ಲೂ ಕೂಡ ಪದಗಳನ್ನು ಜೋಡಿಸಿ ದೇಶ ಭಕ್ತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

  • Share this:

ಸ್ಯಾಂಡಲ್​ವುಡ್ ಚಿರ ಯುವಕ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು 58ನೇ ವಸಂತಕ್ಕೆ ಲಕ್ ಲಕ್ ಲಕ್​ಪತಿ ಕರುನಾಡಿಗೆ ಅಧಿಪತಿ...ಸಾಹಿತ್ಯದ ಭರ್ಜರಿ ಗೀತೆ ಅರ್ಪಿಸಿದ್ದ ವರುಣ್ ಸ್ಟುಡಿಯೋಸ್ ಇದೀಗ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದೆ.


ಕಳೆದ ಭಾರಿ ಶಿವಣ್ಣ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದ ತಂಡ ಈ ಬಾರಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಗೀತೆಯೊಂದನ್ನು ಅರ್ಪಿಸುತ್ತಿದೆ. ಈ ಗೀತೆಗೆ ಸ್ಯಾಂಡಲ್​ವುಡ್ ಸ್ಟಾರ್​ಗಳೂ ಕೂಡ ಕೈ ಜೋಡಿಸುತ್ತಿರುವುದು ವಿಶೇಷ.


ಅದ್ವಿಕ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಧ್ವನಿ ನೀಡಿರುವುದು ಅನಿರುದ್ಧ್ ಶಾಸ್ತ್ರಿ. ಹಾಗೆಯೇ ಲಕ್​ ಲಕ್ ಲಕ್​ಪತಿ ಕ್ಯಾಚಿ ಸಾಹಿತ್ಯ ಬರೆದಿದ್ದ ಭಜರಂಗಿ ಮೋಹನ್ ಇಲ್ಲೂ ಕೂಡ ಪದಗಳನ್ನು ಜೋಡಿಸಿ ದೇಶ ಭಕ್ತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಈಗಾಗಲೇ ದೇಶಭಕ್ತಿಯನ್ನು ಸಾರುವ ಕನ್ನಡ ಗೀತೆಯ ರೆಕಾರ್ಡಿಂಗ್​ ಕೆಲಸಗಳು ಪ್ರಾರಂಭವಾಗಿದ್ದು, ಆಗಸ್ಟ್ 15 ರಂದು ಬಿಡುಗಡೆ ಮಾಡುವುದಾಗಿ ನಿರ್ಮಾಪಕ ವರುಣ್ ಗೌಡ ತಿಳಿಸಿದ್ದಾರೆ. ಅಲ್ಲದೆ ವರುಣ್ ಸ್ಟುಡಿಯೋಸ್ ಕಡೆಯಿಂದ ಈ ಹಿಂದೆ ಬಿಡುಗಡೆಯಾಗಿದ್ದ ಹಾಡಿಗಿಂತ ಈ ಗೀತೆಯು ವಿಭಿನ್ನವಾಗಿರಲಿದೆ. ಈ ಹಾಡು ನಮ್ಮ‌ನಿಮ್ಮೊಳಗಿನ ದೇಶಭಕ್ತಿಗೆ ಮೀಸಲು ಎಂದಿದ್ದಾರೆ ನಿರ್ಮಾಪಕರು.ಇನ್ನು ಈ ವಿಶೇಷ ಹಾಡಿನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಇರಲಿದ್ದು, ಇವರೊಂದಿಗೆ ಸ್ಯಾಂಡಲ್​ವುಡ್​ನ ಇನ್ನಿತರ ಯಾವ ಸ್ಟಾರ್​ಗಳು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಆಗಸ್ಟ್​ 15 ರಂದು ಬಹಿರಂಗವಾಗಲಿದೆ.

Published by:zahir
First published: