VIDEO: ಕೊನೆಗೂ ಬಾಲಿವುಡ್ ಮಂದಿಯ ಕೈಗೆ ಸಿಕ್ಕ ಡ್ಯಾನ್ಸರ್ ಬಾಬಾ ಜಾಕ್ಸನ್..!

ವಾವ್ಹ್...ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್ ಬಾಗ್ ಯುವರಾಜ್​ ವಿಡಿಯೋವನ್ನು ಹಂಚಿಕೊಂಡರೆ, ಅತ್ತ ಸುನೀಲ್ ಶೆಟ್ಟಿ, ರವೀನಾ ಟಂಡನ್, ಅನುಪಮ್ ಖೇರ್, ರೆಮೊ ಡಿಸೋಜಾ ಸೇರಿದಂತೆ ಬಾಲಿವುಡ್ ಖ್ಯಾತನಾಮರು ಬಾಬಾ ಜಾಕ್ಸನ್ ಸ್ಟೆಪ್ಸ್​ಗೆ ಮರುಳಾಗಿದ್ದರು.

zahir | news18-kannada
Updated:January 23, 2020, 9:05 PM IST
VIDEO: ಕೊನೆಗೂ ಬಾಲಿವುಡ್ ಮಂದಿಯ ಕೈಗೆ ಸಿಕ್ಕ ಡ್ಯಾನ್ಸರ್ ಬಾಬಾ ಜಾಕ್ಸನ್..!
.
  • Share this:
ಕೆಲದಿನಗಳ ಹಿಂದೆಯಷ್ಟೇ  ಯುವ ಡ್ಯಾನ್ಸರ್ ಒಬ್ಬ ಟಿಕ್ ಟಾಕ್ ಮೂಲಕ ಇಡೀ ಬಾಲಿವುಡ್​ನ್ನೇ ತನ್ನತ್ತ ತಿರುಗಿ ನೋಡುವಂತೆ​ ಮಾಡಿದ್ದನು. ಥೇಟ್ ಮೈಕೆಲ್ ಜಾಕ್ಸನ್ ತರ ಸ್ಟೆಪ್ಸ್​ ಹಾಕುವ ಈತನ ಮೋಡಿಗೆ ಸಿನಿರಂಗದ ತಾರೆಯರು ನಿಬ್ಬೆರಗಾಗಿದ್ದರು.

ಅದರಲ್ಲೂ ಬಾಲಿವುಡ್​ನ ಡ್ಯಾನ್ಸ್ ಕಿಂಗ್ ಹೃತಿಕ್ ರೋಷನ್ ಬಳುಕುವ ಬಳ್ಳಿಯಂತೆ ನರ್ತಿಸುತ್ತಿದ್ದ ಯುವ ಪ್ರತಿಭೆಯನ್ನು ನೋಡಿ  ಮೂಕವಿಸ್ಮಿತರಾಗಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಹೃತಿಕ್, ಅತ್ಯಂತ ನಯವಾದ ಏರ್​ವಾಕರ್ ಎಂದು ಹಾಡಿ ಹೊಗಳಿದ್ದರು. ಅಷ್ಟೇ ಅಲ್ಲದೆ ಯಾರೀತ ಎಂದು ಪ್ರಶ್ನಿಸುವ ಮೂಲಕ ತೆರೆ ಮರೆಯ ಪ್ರತಿಭೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಚಾರಿಸಿದ್ದರು.


ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದ್ದು, ಈ ಡ್ಯಾನ್ಸರ್ ಹೆಸರು ಯುವರಾಜ್ ಸಿಂಗ್. ಟಿಕ್​ಟಾಕ್​ನಲ್ಲಿ ಬಾಬಾ ಜಾಕ್ಸನ್ 2020 ಎಂದೇ ಜನಪ್ರಿಯ. ಕಳೆದ ಕೆಲ ದಿನಗಳಿಂದ ಯುವರಾಜ್​ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿ ಬಿಗ್ ಬಿ ಅಮಿತಾಭ್ ಬಚ್ಚನ್ ಸಹ ಪ್ರತಿಕ್ರಿಯಿಸಿದ್ದರು.ವಾವ್ಹ್...ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್ ಬಾಗ್ ಯುವರಾಜ್​ ವಿಡಿಯೋವನ್ನು ಹಂಚಿಕೊಂಡರೆ, ಅತ್ತ ಸುನೀಲ್ ಶೆಟ್ಟಿ, ರವೀನಾ ಟಂಡನ್, ಅನುಪಮ್ ಖೇರ್, ರೆಮೊ ಡಿಸೋಜಾ ಸೇರಿದಂತೆ ಬಾಲಿವುಡ್ ಖ್ಯಾತನಾಮರು ಬಾಬಾ ಜಾಕ್ಸನ್ ಸ್ಟೆಪ್ಸ್​ಗೆ ಮರುಳಾಗಿದ್ದರು.


ಸದ್ಯ ಬಾಬಾ ಜಾಕ್ಸನ್​ನನ್ನು ಸ್ಟ್ರೀಟ್ ಡ್ಯಾನ್ಸರ್ಸ್ ತಂಡ ಪತ್ತೆ ಹಚ್ಚಿದೆ. ಅಲ್ಲದೆ ಈತನನ್ನೇ ಮುಂದಿಟ್ಟು ತಮ್ಮ ಚಿತ್ರದ ಪ್ರೊಮೋಷನ್ ಕೆಲಸಗಳನ್ನು ಪ್ರಾರಂಭಿಸಿದ್ದಾರೆ. ಚಿತ್ರದ ನಾಯಕ ನಟ ವರುಣ್ ಧವನ್, ನಾಯಿ ಶ್ರದ್ಧಾ ಕಪೂರ್ ಹಾಗೂ ಮತ್ತಿತರ ಸಂಗಡಿಗರು ಸೇರಿ ಬಾಬಾ ಜಾಕ್ಸನ್​ ಜೊತೆಗೆ ಮುಕಾಬಲಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೆ ನಿಜವಾದ ಸ್ಟ್ರೀಟ್ ಡ್ಯಾನ್ಸರ್ ಬಾಬಾ ಜಾಕ್ಸನ್ ಎಂದು ವರುಣ್ ಧವನ್ ಹೇಳಿದ್ದಾರೆ. 
View this post on Instagram
 

With the one they call @babajackson2019. The real street dancer Bahut maaza ayaaa keep breaking the Internet🔥🆒3️⃣


A post shared by Varun Dhawan (@varundvn) on


ಒಟ್ಟಿನಲ್ಲಿ ಟಿಕ್ ಟಾಕ್ ವಿಡಿಯೋ ಮೂಲಕ ಬಾಲಿವುಡ್​ನಾದ್ಯಂತ ಸಂಚಲನ ಸೃಷ್ಟಿಸಿದ್ದ ಬಾಬಾರನ್ನು ಪತ್ತೆ ಹಚ್ಚುವಲ್ಲಿ ಕೊನೆಗೂ ವರುಣ್ ಧವನ್ ಟೀಂ ಯಶಸ್ವಿಯಾಗಿದ್ದಾರೆ.

First published:January 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ