• Home
  • »
  • News
  • »
  • entertainment
  • »
  • Varun Dhawan in Citadel: ಸಿಟೆಡಾಲ್​ ತಂಡ ಸೇರಿದ ಬಾಲಿವುಡ್ ನಟ! ವರುಣ್ ಧವನ್​ಗೆ ಬಿಗ್ ಆಫರ್

Varun Dhawan in Citadel: ಸಿಟೆಡಾಲ್​ ತಂಡ ಸೇರಿದ ಬಾಲಿವುಡ್ ನಟ! ವರುಣ್ ಧವನ್​ಗೆ ಬಿಗ್ ಆಫರ್

ರುಸ್ಸೋ ಬ್ರದರ್ಸ್ ನಿರ್ಮಿಸುತ್ತಿರುವ ಸಿರೀಸ್​ನಲ್ಲಿ ಪ್ರಿಯಾಂಕ ಚೋಪ್ರಾ ನಟಿಸುತ್ತಿದ್ದಾರೆ. ಪಿಗ್ಗಿ ಪಾಲಿಗೆ ಇದು ದೊಡ್ಡ ಅವಕಾಶ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಈಗ ಮತ್ತೊಬ್ಬ ಭಾರತೀಯ ನಟ ಈ ರುಸ್ಸೋ ಬ್ರದರ್ಸ್ ಸಿರೀಸ್ ಭಾಗವಾಗಲಿದ್ದಾರೆ.

ರುಸ್ಸೋ ಬ್ರದರ್ಸ್ ನಿರ್ಮಿಸುತ್ತಿರುವ ಸಿರೀಸ್​ನಲ್ಲಿ ಪ್ರಿಯಾಂಕ ಚೋಪ್ರಾ ನಟಿಸುತ್ತಿದ್ದಾರೆ. ಪಿಗ್ಗಿ ಪಾಲಿಗೆ ಇದು ದೊಡ್ಡ ಅವಕಾಶ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಈಗ ಮತ್ತೊಬ್ಬ ಭಾರತೀಯ ನಟ ಈ ರುಸ್ಸೋ ಬ್ರದರ್ಸ್ ಸಿರೀಸ್ ಭಾಗವಾಗಲಿದ್ದಾರೆ.

ರುಸ್ಸೋ ಬ್ರದರ್ಸ್ ನಿರ್ಮಿಸುತ್ತಿರುವ ಸಿರೀಸ್​ನಲ್ಲಿ ಪ್ರಿಯಾಂಕ ಚೋಪ್ರಾ ನಟಿಸುತ್ತಿದ್ದಾರೆ. ಪಿಗ್ಗಿ ಪಾಲಿಗೆ ಇದು ದೊಡ್ಡ ಅವಕಾಶ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಈಗ ಮತ್ತೊಬ್ಬ ಭಾರತೀಯ ನಟ ಈ ರುಸ್ಸೋ ಬ್ರದರ್ಸ್ ಸಿರೀಸ್ ಭಾಗವಾಗಲಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ (Priyanka chopra) ಸಿಟೆಡಾಲ್ (Citadel) ಎಂಬ ಸಿರೀಸ್​ನಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಇದ್ಯಾಕಪ್ಪಾ ದೇಸಿ ಗರ್ಲ್ ಸಿನಿಮಾ ಬಿಟ್ಟು ಸಿರೀಸ್​ಗೆ ಹೋದ್ರು ಅನ್ಬೇಡಿ. ರುಸ್ಸೋ ಬ್ರದರ್ಸ್ (Russo Brothers) ನಿರ್ಮಿಸುತ್ತಿರುವ ಸಿರೀಸ್ ಇದು. ಪಿಗ್ಗಿ ಪಾಲಿಗೆ ದೊಡ್ಡ ಅವಕಾಶ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಈಗ ಮತ್ತೊಬ್ಬ ಭಾರತೀಯ ನಟ ಈ ಸಿರೀಸ್ ಭಾಗವಾಗಲಿದ್ದಾರೆ. 


ವರುಣ್ ಧವನ್ ಪ್ರೈಮ್ ವಿಡಿಯೋ ವೈಜ್ಞಾನಿಕ ಕಾಲ್ಪನಿಕ ಸಿರೀಸ್ ಸಿಟೆಡಾಲ್‌ನ ಭಾರತೀಯ ವರ್ಷನ್​ನಲ್ಲಿ ನಟಿಸುವುದನ್ನು ಖಚಿತಪಡಿಸಲಾಗಿದೆ. ನಿರ್ಮಾಪಕರಾದ ಜೋ ಮತ್ತು ಆಂಥೋನಿ ರುಸ್ಸೋ ಅವರು ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಸ್ಟಾರ್‌ನ ಪ್ರಚಾರದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫ್ರ್ಯಾಂಚೈಸ್‌ನಲ್ಲಿ ಭಾರತೀಯ ನಟನನ್ನು ಕೂಡಾ ಸ್ವಾಗತಿಸುವ ಬಗ್ಗೆ ಖಷಿ ವ್ಯಕ್ತಪಡಿಸಿದ್ದಾರೆ.
ಸಿಟಾಡೆಲ್ ಮಹತ್ವಾಕಾಂಕ್ಷೆಯ ಸ್ಟ್ರೀಮಿಂಗ್ ಫ್ರ್ಯಾಂಚೈಸ್ ಆಗಿದೆ. ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ 'ಮದರ್‌ಶಿಪ್' ಸರಣಿಯಲ್ಲಿ ನಟಿಸಿದ್ದಾರೆ, ಇದು ಈ ವರ್ಷದ ಆರಂಭದಲ್ಲಿ ಚಿತ್ರೀಕರಣಗೊಂಡಿದ್ದರೂ ಇನ್ನೂ ರಿಲೀಸ್ ಬಗ್ಗೆ ಮಾಹಿತಿ ಸಿಕ್ಕಿಲ್ಲ.


ಗುಡ್​ನ್ಯೂಸ್ ಕೊಟ್ಟ ರುಸ್ಸೋ ಬ್ರದರ್ಸ್


ನಾವು ನಿಮಗೆ ಸಿಟಾಡೆಲ್ ಭಾರತೀಯ ಸೀಸನ್ ತರಲಿದ್ದೇವೆ ಎಂದು ಅಧಿಕೃತವಾಗಿ ಘೋಷಿಸಲು ಖುಷಿ ಇದೆ. ಈ ಡಿಟೆಕ್ಟಿವ್ ಸಿರೀಸ್ ಚಿತ್ರೀಕರಣವನ್ನು ಜನವರಿ 2023 ರಲ್ಲಿ ಪ್ರಾರಂಭಿಸಲಾಗುತ್ತದೆ ಎಂದು ರುಸ್ಸೋ ಬ್ರದರ್ಸ್ ಹೇಳಿದ್ದಾರೆ. ಕೊನೆಯ ಎರಡು ಅವೆಂಜರ್ಸ್ ಸಿನಿಮಾಗಳಿಂದ ಖ್ಯಾತಿ ಪಡೆದ ರುಸ್ಸೋ ಸಹೋದರರು ತಮ್ಮ ಪೋಸ್ಟ್‌ನಲ್ಲಿ ಈ ಬಗ್ಗೆ ಬರೆದಿದ್ದಾರೆ.


ಅವರು ನಿರ್ದೇಶಕ ರಾಜ್ ನಿಡಿಮೋರು ಮತ್ತು ಕೃಷ್ಣ ಡಿಕೆ ಅವರನ್ನೂ ಟ್ಯಾಗ್ ಮಾಡಿದ್ದಾರೆ. ಅವರು ನಿರ್ಮಾಣದ ಮೇಲ್ವಿಚಾರಣೆಯನ್ನು ಸಹ ನೋಡಿಕೊಳ್ಳಲಿದ್ದಾರೆ. ಅವರು ಸೀತಾ ಆರ್ ಮೆನನ್ ಅವರೊಂದಿಗೆ ಬರಹಗಾರರಾಗಿಯೂ ಕೆಲಸ ಮಾಡಲಿದ್ದಾರೆ. ಇದರಲ್ಲಿ ಸಮಂತಾ ರುತ್ ಪ್ರಭು ಕೂಡ ನಟಿಸುತ್ತಾರೆ ಎಂಬ ವದಂತಿಗಳಿವೆ.


ಇದನ್ನೂ ಓದಿ: ಮತ್ತೆ ನೆಟ್ಟಿಗರಿಗೆ ಆಹಾರವಾದ ಪಿಗ್ಗಿ; ಪತಿ ವಯಸ್ಸನ್ನೇ ತಪ್ಪಾಗಿ ನಮೂದಿಸಿ ಪೋಸ್ಟ್​ ಹಾಕಿದ್ದ ಪ್ರಿಯಾಂಕ ಚೋಪ್ರಾ


ಸಿಟಾಡೆಲ್ ವರ್ಲ್ಡ್​ನಲ್ಲಿ ಮತ್ತೊಂದು ಪ್ರೊಡಕ್ಷನ್. ಈ ಬಾರಿ ಭಾರತದಲ್ಲಿ ಪ್ರಾರಂಭವಾಗುವುದನ್ನು ನೋಡಲು ನಾವು ರೋಮಾಂಚನಗೊಂಡಿದ್ದೇವೆ. ಡಿಕೆ ಮತ್ತು ರಾಜ್‌ರಂತೆ ಸ್ಪೂರ್ತಿದಾಯಕ ಚಲನಚಿತ್ರ ನಿರ್ಮಾಪಕರೊಂದಿಗೆ ಕೆಲಸ ಮಾಡುವುದನ್ನು ಗೌರವವೆಂದು ಪರಿಗಣಿಸುತ್ತೇವೆ ಎಂದು ಆಂಥೋನಿ ಮತ್ತು ಜೋ ರುಸ್ಸೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ವರುಣ್ ಧವನ್​ಗೆ ಬಿಗ್ ಆಫರ್


ರುಸ್ಸೋ ಬ್ರದರ್ಸ್ ಸಿರೀಸ್​ನಲ್ಲಿ ವರುಣ್ ಧವನ್​​ಗೆ ಅವಕಾಶ ಸಿಕ್ಕಿದ್ದು ನಿಜಕ್ಕೂ ಗಮರ್ನಾ. ಹೀರೋಗಳಿಗೆ ಟಫ್ ಕಾಂಪಿಟೇಷನ್ ಇರುವ ಬಾಲಿವುಡ್​ನಲ್ಲಿ ವರುಣ್ ಧವನ್ ಈ ಪಾತ್ರ ಗಿಟ್ಟಿಸಿಕೊಂಡಿದ್ದಕ್ಕೆ ಅವರ ಅಭಿಮಾನಿಗಳು ಭೇಷ್ ಎಂದಿದ್ದಾರೆ. ಈ ಮೂಲಕ ನಟ ಹಾಲಿವುಡ್​ ರೇಂಜ್​​ನಲ್ಲಿ ಮಿಂಚಲಿದ್ದಾರೆ ಎನ್ನುವುದಂತೂ ಪಕ್ಕಾ ಆಗಿದೆ.


ಪ್ರಿಯಾಂಕ ಚೋಪ್ರಾ ಸಮಾನ ಸಂಭಾವನೆ


ಪ್ರಿಯಾಂಕಾ ಚೋಪ್ರಾ ಕೊನೆಗೂ ಹಾಲಿವುಡ್‌ನಲ್ಲಿ ತನ್ನ ಮೇಲ್ ಕೋಸ್ಟಾರ್‌ನಷ್ಟು ಸಂಭಾವನೆ ಪಡೆದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಸಿಟೆಡಾಲ್​ನಲ್ಲಿ ಅವರು ಗೇಮ್ ಆಫ್ ಥ್ರೋನ್ಸ್ ಅಲುಮ್ ರಿಚರ್ಡ್ ಮ್ಯಾಡೆನ್ ಅವರೊಂದಿಗೆ ಪ್ರಮುಖ ಪಾತ್ರ ಮಾಡಿದ್ದಾರೆ.


ಬಾಲಿವುಡ್‌ನಲ್ಲಿ ನಾನು ಯಾವತ್ತೂ ಸಮಾನ ಸಂಭಾವನೆ ಹೊಂದಿರಲಿಲ್ಲ. ನಾನು 60ರಷ್ಟು ಸಿನಿಮಾಗಳನ್ನು ಮಾಡಿದ್ದೇನೆ. ಆದರೆ ಸಹ-ನಟನಷ್ಟೇ ಸಂಭಾವನೆ ಎಂದಿಗೂ ಸಿಗಲಿಲ್ಲ. ಹೀರೋಗಳು ಪಡೆಯುವ ಸಂಭಾವನೆಯ 10% ರಷ್ಟು ನಾನು ಸಂಭಾವನೆ ಪಡೆಯುತ್ತಿದ್ದೆ ಎಂದು ಅವರು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

Published by:Divya D
First published: