• Home
 • »
 • News
 • »
 • entertainment
 • »
 • Varun Dhawan: ಪಾಪರಾಜಿಗಳಿಗೆ ಸಾಮಾಜಿಕ ಅಂತರದ ಪಾಠ ಮಾಡಿದ ಬಾಲಿವುಡ್​ ನಟ ವರುಣ್​ ಧವನ್​

Varun Dhawan: ಪಾಪರಾಜಿಗಳಿಗೆ ಸಾಮಾಜಿಕ ಅಂತರದ ಪಾಠ ಮಾಡಿದ ಬಾಲಿವುಡ್​ ನಟ ವರುಣ್​ ಧವನ್​

ಸಾಮಾಜಿಕ ಅಂತರವನ್ನು  ಮರೆತು ಗುಂಪು ಗುಂಪಾಗಿ ಫೋಟೋ ಕ್ಲಿಕ್ಕಿಸಲು ಫೋಟೋಗ್ರಾಫರ್​ಗಳು ವರುಣ್ ಧವನ್ ಅವರ ಹತ್ತಿರ ಬರುತ್ತಿದ್ದಂತೆ, ದಯವಿಟ್ಟು ಸಾಮಾಜಿಕ ಅಂತರವನ್ನು ಕಾಪಾಡಿ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಸಾಮಾಜಿಕ ಅಂತರವನ್ನು  ಮರೆತು ಗುಂಪು ಗುಂಪಾಗಿ ಫೋಟೋ ಕ್ಲಿಕ್ಕಿಸಲು ಫೋಟೋಗ್ರಾಫರ್​ಗಳು ವರುಣ್ ಧವನ್ ಅವರ ಹತ್ತಿರ ಬರುತ್ತಿದ್ದಂತೆ, ದಯವಿಟ್ಟು ಸಾಮಾಜಿಕ ಅಂತರವನ್ನು ಕಾಪಾಡಿ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಸಾಮಾಜಿಕ ಅಂತರವನ್ನು  ಮರೆತು ಗುಂಪು ಗುಂಪಾಗಿ ಫೋಟೋ ಕ್ಲಿಕ್ಕಿಸಲು ಫೋಟೋಗ್ರಾಫರ್​ಗಳು ವರುಣ್ ಧವನ್ ಅವರ ಹತ್ತಿರ ಬರುತ್ತಿದ್ದಂತೆ, ದಯವಿಟ್ಟು ಸಾಮಾಜಿಕ ಅಂತರವನ್ನು ಕಾಪಾಡಿ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

 • Share this:

  ಬಾಲಿವುಡ್ ನ ಯಂಗ್ ಅಂಡ್ ಹ್ಯಾಂಡ್ಸಮ್ ವರುಣ್ ಧವನ್ ಮದುವೆಯಾದ ನಂತರ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೋವಿಡ್ ಸಮಯದಲ್ಲೂ ಬಹುತೇಕ ದೊಡ್ಡ ದೊಡ್ಡವರ ಚಿತ್ರಗಳು ಸಹ ಸೆಟ್ಟೇರಲುಕಷ್ಟವಾಗುತ್ತಿರುವ ಈ ಸಂದರ್ಭದಲ್ಲಿ ವರುಣ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಇದೇ ಹಿನ್ನೆಲೆಯಲ್ಲಿ ಹಾರರ್ ಸಿನಿಮಾ ಭೇಡಿಯಾ ಚಿತ್ರದ ಚಿತ್ರೀಕರಣಕ್ಕಾಗಿ ನಟ ವರುಣ್ ಧವನ್ ಅರುಣಾಚಲ ಪ್ರದೇಶದಲ್ಲಿ ಬೀಡು ಬಿಟ್ಟಿದ್ದರು. ಕೃತಿ ಸನೋನ್ ನಾಯಕಿಯಾಗಿ ನಟಿಸಿರುವ ಭೇಡಿಯಾ ಸಿನಿಮಾದ ಚಿತ್ರೀಕರಣವನ್ನು ಮುಗಿಸಿಕೊಂಡು ಮುಂಬೈಗೆ ಮರಳಿದ್ದಾರೆ. ಈ ವೇಳೆ ಪಾಪರಾಜಿಗಳು ಅವರ ಫೋಟೋಗಾಗಿ ಮುಗಿಬಿದ್ದಿದ್ದಾರೆ. ನಟನ ಫೋಟೋಗಾಗಿ ಅವರು ಸಾಮಾಜಿಕ ಅಂತರವನ್ನೇ ಮರೆತಿದ್ದಾರೆ. ದೇಶದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಕೊರೋನಾ ಮುನ್ನೆಚ್ಚರಿಕೆ ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದೇ ಹಿನ್ನಲೆ ವರುಣ್​ ಕೂಡ ಅವರಿಗೆ ಈ ಪಾಠವನ್ನು ತಿಳಿಸಿದ್ದಾರೆ.


  ಸಾಮಾಜಿಕ ಅಂತರವನ್ನು  ಮರೆತು ಗುಂಪು ಗುಂಪಾಗಿ ಫೋಟೋ ಕ್ಲಿಕ್ಕಿಸಲು ಫೋಟೋಗ್ರಾಫರ್​ಗಳು ವರುಣ್ ಧವನ್ ಅವರ ಹತ್ತಿರ ಬರುತ್ತಿದ್ದಂತೆ, ದಯವಿಟ್ಟು ಸಾಮಾಜಿಕ ಅಂತರವನ್ನು ಕಾಪಾಡಿ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
  ವರುಣ್ ಎಷ್ಟೇ ಕೇಳಿಕೊಂಡರೂ ಫೋಟೋ ಕ್ಲಿಕ್ಕಿಸುವುದು ಮುಂದುವರೆದಿತ್ತು. ಆದರೂ ಮತ್ತೊಮ್ಮೆ ವರುಣ್ ತಾಳ್ಮೆ ಕಳೆದುಕೊಳ್ಳದೇ ಸಾಮಾಜಿಕ ಅಂತರ ಅನುಸರಿಸಿ ಎಂದು ಕೇಳಿಕೊಂಡಡು. ಅಷ್ಟರಲ್ಲಿ ಅಭಿಮಾನಿಯೊಬ್ಬರು ಸೆಲ್ಫಿಗಾಗಿ ಮುಂದೆ ಬಂದಾಗ ವರುಣ್ ಧವನ್ ನಿರಾಕರಿಸಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಈಗಾಗಲೇ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ನಾವು ನಮ್ಮ ಕರ್ತವ್ಯ ಮರೆಯಬಾರದು ಎಂದು ಜವಾಬ್ದಾರಿ ಮೆರೆದಿದ್ದಾರೆ.


  ಈಗಾಗಲೇ ಸಾಂಕ್ರಾಮಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಸಾಮಾಜಿಕ ಅಂತರ ಪಾಲಿಸಲೇಬೇಕು ಎಂದು ವರುಣ್ ಅವರು ಹೇಳುತ್ತಿರುವ ವೀಡಿಯೋವನ್ನು ಪಾಪಾರಾಜಿಯೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು, ವರುಣ್ ಅವರನ್ನು ಕೆಲವು ದಿನಗಳ ಹಿಂದೆ ಅರುಣಾಚಲ ಪ್ರದೇಶದಲ್ಲಿ ಅಭಿಮಾನಿಗಳ ಗುಂಪು ಸೆಲ್ಫಿಗಾಗಿ ಮಾಸ್ಕ್ ತೆಗೆಯಿರಿ ಎಂದು ಕೇಳಿದ್ದರು. ಯಾರು ಮಾಸ್ಕ್ ತೆಗೆಯಬಾರದು, ನಾನು ತೆಗೆಯುವುದಿಲ್ಲ, ಇದು ನಮ್ಮ ಜವಾಬ್ದಾರಿ ಎಂದು ಹೇಳುವ ಮೂಲಕ ಜನರಲ್ಲಿ ಅರಿವನ್ನು ಮೂಡಿಸಿದ್ದರು.


  ಇದನ್ನು ಓದಿ: ಒಟಿಟಿಯಲ್ಲಿ ತಲೈವಿ ಬಿಡುಗಡೆ; ಕಂಗನಾ ರನೌತ್​ ಹೇಳಿದ್ದೇನು?


  ಇನ್ನೂ ಫೋಟೋಗ್ರಾಫರ್‌ನ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ವರುಣ್ ಅವರನ್ನು ಟ್ರೋಲ್ ಮಾಡಿದ್ದಾರೆ. 'ರಜೆಯನ್ನು ಕಳೆಯಲು ಪ್ರವಾಸಕ್ಕೆ ಹೋಗಿ ಬಂದು ಈಗ  ಸಂಗತಿಯನ್ನು ಈ ರೀತಿಯಾಗಿ ಪ್ರದರ್ಶಿಸಿದ್ದೀರಿ' ಎಂದು ಆರೋಪಿಸಿದ್ದಾರೆ. ಆದರೆ ವರುಣ್ ಇದಕ್ಕೆ ಬಿಸಿ ಮುಟ್ಟುವಂತೆ ಉತ್ತರ ನೀಡಿದ್ದು, 'ನಾನು ಕೆಲಸದ ಕಾರಣ ಹೊರಗಿದ್ದು, ಈಗ ಕೆಲಸ ಮುಗಿಸಿ ಬಂದಿದ್ದೇನೆ. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ ಎಂದಿದ್ದಾರೆ'.


  ಇನ್ನು ಬುಧವಾರ ಅಭಿಮಾನಿಯೊಬ್ಬರು ವರುಣ್ ಹುಟ್ಟು ಹಬ್ಬಕ್ಕಾಗಿ ಅವರ ಎಲ್ಲಾ ಸಿನಿಮಾ ಪಾತ್ರಗಳನ್ನು ಸೇರಿಸಿ ಗ್ರಾಫಿಕ್ಸ್ ಮಾಡಿಕೊಟ್ಟಿದ್ದರು. ಅದರಲ್ಲಿ 'ಎಲ್ಲರೂ ಸುರಕ್ಷಿತವಾಗಿರಿ' ಎನ್ನುವ ಮೆಸೇಜ್ ಕೂಡ ಇತ್ತು. ಆದರೆ ಇಂಟರ್ನೆಟ್‌ನಲ್ಲಿ ಇದಕ್ಕೆ ವ್ಯಾಪಕ ಟೀಕೆಗಳು ಬಂದವು. ಸೋಶಿಯಲ್ ಮೀಡಿಯಾ ತುಂಬಾ ದಯವಿಟ್ಟು ಸಹಾಯ ಮಾಡಿ, ಆಕ್ಸಿಜನ್‌ಗೆ ನೆರವಾಗಿ ಎನ್ನುವ ಸಂಕಷ್ಟದ ಸಂದೇಶಗಳು ಹರಿದಾಡುತ್ತಿರುವ ಈ ಸಮಯದಲ್ಲಿ ನೀವು ಈ ರೀತಿ ಪೋಸ್ಟ್ ಹಾಕಿದ್ದು ಸರಿ ಇಲ್ಲ ಎಂದು ಅಭಿಮಾನಿಗಳು ಹೇಳಿದ ಕೂಡಲೇ ವರುಣ್ ಟ್ವೀಟ್ ಡಿಲೀಟ್ ಮಾಡಿದ್ದಾರೆ.


  ಅಲ್ಲದೇ 'ಅಭಿಮಾನಿ ಬೇಡಿಕೆಯ ಅನುಗುಣವಾಗಿ ಶೇರ್ ಮಾಡಿದೆ. ಹೌದು ಇದು ಸರಿಯಾದ ವೇದಿಕೆಯಲ್ಲ' ಎಂದು ಸಮಜಾಯಿಷಿ ಕೊಟ್ಟಿದ್ದರು.


  ಅರುಣಾಚಲ ಪ್ರದೇಶದ ಕೋವಿಡ್ ಪ್ರಕರಣಗಳು ಇಲ್ಲದ ಕಾರಣ ಶೂಟಿಂಗ್ ಅಚ್ಚಕಟ್ಟಾಗಿ ನಡೆದಿದೆ. ನಾಯಕಿ ಕೃತಿ ಸನೋನ್ ಕೂಡ ಮುಂಬೈಗೆ ಮರಳಿದ್ದಾರೆ. ನಿರ್ದೇಶಕ ಅಮರ್ ಕೌಶಿಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ವರುಣ್ ಧವನ್ ಅವರ ಮೊದಲ ಹಾರರ್ ಸಿನಿಮಾ ಇದಾಗಲಿದೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು