• Home
  • »
  • News
  • »
  • entertainment
  • »
  • Samantha: ಸಮಂತಾ ಜೊತೆ ವರುಣ್ ಧವನ್‌ರನ್ನು ನೋಡಿ "ಊ ಅಂತೀಯಾ" ಎಂದ ಅಭಿಮಾನಿಗಳು!

Samantha: ಸಮಂತಾ ಜೊತೆ ವರುಣ್ ಧವನ್‌ರನ್ನು ನೋಡಿ "ಊ ಅಂತೀಯಾ" ಎಂದ ಅಭಿಮಾನಿಗಳು!

ಸಮಂತಾ-ವರುಣ್ ಧವನ್

ಸಮಂತಾ-ವರುಣ್ ಧವನ್

ವರುಣ್ ಧವನ್ ಹಾಗೂ ಸಮಂತಾ ಅವರಿಬ್ಬರೂ ರಾಜ್ ಮತ್ತು ಡಿಕೆ ಅವರ ಮುಂದಿನ ವೆಬ್ ಸಿರೀಸ್ ‘ಸಿಟಾಡೆಲ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಯಾಮ್ ಮತ್ತು ವರುಣ್ ಒಟ್ಟಿಗೆ ಅಂಧೇರಿಯಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದರು ಎಂದು ಹೇಳಲಾಗುತ್ತಿದೆ.

  • Share this:

ಮೊನ್ನೆ ಮೊನ್ನೆಯಷ್ಟೇ ಬಾಲಿವುಡ್ ನಟ (Bollywood Hero) ವರುಣ್ ಧವನ್ (Varun Dhawn) ಅವರು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಜೊತೆ ದಳಪತಿ ವಿಜಯ್ (Dalapathi Vijay) ಮತ್ತು ನಟಿ ಪೂಜಾ ಹೆಗ್ಡೆ (Pooja Hegde) ಅವರ ಬೀಸ್ಟ್‌ನ (Beast) ‘ಹಲಾಮಿತಿ ಹಬೀಬೊ’ ಎಂಬ ವೈರಲ್ ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ತುಂಬಾನೇ ವೈರಲ್ ಆಗಿರುವ ಸುದ್ದಿ ನೋಡಿದ್ದೆವು. ಅದನ್ನು ಮರೆಯುವ ಮುಂಚೆಯೇ ವರುಣ್ ಅವರ ಮತ್ತೊಂದು ಸುದ್ದಿ ಹೊರ ಬಂದಿದೆ ನೋಡಿ. ಇವರ ಹೊಸ ಸುದ್ದಿಯೂ ಸಹ ಇವರ ಅಭಿಮಾನಿಗಳ (Fans) ಮನಸ್ಸನ್ನು ತುಂಬಾನೇ ಖುಷಿ ಪಡಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಟ ವರುಣ್ ಧವನ್ ಮತ್ತು ತೆಲುಗಿನ ನಟಿ ಸಮಂತಾ ರುತ್ ಪ್ರಭು ಅವರು ಇಬ್ಬರು ಒಟ್ಟಾಗಿ ಕಳೆದ ರಾತ್ರಿ ಮುಂಬೈ ನಗರದಲ್ಲಿ ಕಾಣಿಸಿಕೊಂಡರು. ಈ ಫೋಟೋ, ವಿಡಿಯೋ ವೈರಲ್ ಆಗಿದ್ದು ಅಭಿಮಾನಿಗಳು ಸಖತ್ ಕಾಮೆಂಟ್ ಮಾಡುತ್ತಿದ್ದಾರೆ.


ಒಟ್ಟಿಗೆ ಕಾಣಿಸಿಕೊಂಡ ವರುಣ್-ಸಮಂತಾ


ವರುಣ್ ಧವನ್ ಹಾಗೂ ಸಮಂತಾ ಅವರಿಬ್ಬರೂ ರಾಜ್ ಮತ್ತು ಡಿಕೆ ಅವರ ಮುಂದಿನ ವೆಬ್ ಸಿರೀಸ್ ‘ಸಿಟಾಡೆಲ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಯಾಮ್ ಮತ್ತು ವರುಣ್ ಒಟ್ಟಿಗೆ ಅಂಧೇರಿಯಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದರು ಎಂದು ಹೇಳಲಾಗುತ್ತಿದೆ. ಇವರಿಬ್ಬರನ್ನು ನೋಡಿದ ಛಾಯಾಗ್ರಾಹಕರು ಅವರಿಬ್ಬರನ್ನು ಒಂದೇ ಫ್ರೇಮ್‌ನಲ್ಲಿ ಸೆರೆ ಹಿಡಿಯಲು ಅವರ ಫೋಟೋಗಳನ್ನು ಕ್ಲಿಕ್ಕಿಸಲು ಮುಗಿಬಿದ್ದರು.


ತಾರೆಯರನ್ನು ಸುತ್ತುವರೆದ ಫೋಟೋಗ್ರಾಪರ್ಸ್


ಈ ಪಾಪರಾಜಿಗಳಲ್ಲಿ ನಟ ವರುಣ್ ಮತ್ತು ನಟಿ ಸಮಂತಾ ಸಹ ತುಂಬಾನೇ ಜನಪ್ರಿಯರಾಗಿದ್ದಾರೆ ಮತ್ತು ಇಬ್ಬರೂ ಸ್ಟಾರ್ ನಟರು ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆ ಸ್ಥಳದಿಂದ ಹೊರಡುವಾಗ, ಸಮಂತಾ ರುತ್ ಪ್ರಭು ಮತ್ತು ವರುಣ್ ಧವನ್ ಅವರನ್ನು ಪಾಪರಾಜಿಗಳು ಸುತ್ತುವರೆದಿದ್ದರು.


ಸಮಂತಾರನ್ನು ರಕ್ಷಿಸಿದ ವರುಣ್


ಆಗ ವರುಣ್ ನಟಿ ಸಮಂತಾಗೆ ಹೆದರಿಕೆಯಾಗುವಂತೆ ಮಾಡಬೇಡಿ ಎಂದು ಅಲ್ಲಿರುವ ಛಾಯಾಗ್ರಾಹಕರನ್ನು ಕೇಳಿದರು ಮತ್ತು ಇತರ ಜನರಿಂದ ನಟಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಸಂತಾ ಕಾರಿನ ಒಳಗೆ ಕೂರಿಸಿ ಬಂದರು. ಈ ನಟನ ಈ ಗುಣಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಇಷ್ಟ ಪಟ್ಟಿದ್ದಾರೆ.


ಇದನ್ನೂ ಓದಿ: Gangubai Kathiawadi: 100 ಕೋಟಿ ಕ್ಲಬ್ ಸೇರಿದ 'ಗಂಗೂಬಾಯಿ'! ಇದುವರೆಗೂ ಸಿನಿಮಾ ಗಳಿಸಿದ್ದೆಷ್ಟು?


ಅಭಿಮಾನಿಗಳಿಂದ ತರಹೇವಾರಿ ಕಾಮೆಂಟ್


ವರುಣ್ ಅವರ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿದ ಅಭಿಮಾನಿಗಳು "ಅವರು ತುಂಬಾ ಒಳ್ಳೆಯವರು, ಎಷ್ಟು ಮುದ್ದಾಗಿದೆ ಈ ವಿಡಿಯೋ," ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟೇ ಅಲ್ಲದೆ "ವರುಣ್ ತುಂಬಾ ವಿನಮ್ರ ವ್ಯಕ್ತಿ" ಮತ್ತು "ವರುಣ್ ಭಾಯ್ ನಿಮಗೆ ಒಳ್ಳೆಯ ಮನಸ್ಸಿದೆ" ಎಂದು ಸಹ ಹೇಳಿ ಹೊಗಳಿದ್ದಾರೆ.


ವರುಣ್ ಸಭ್ಯ ವ್ಯಕ್ತಿ ಎಂದ ಫ್ಯಾನ್ಸ್


"ವರುಣ್ ನಟಿಯ ಸುರಕ್ಷತೆಯ ದೃಷ್ಟಿಯಿಂದ ತನ್ನ ತೋಳುಗಳನ್ನು ಹಾಗೆಯೇ ಚಾಚಿಕೊಂಡು ಕಾರಿನವರೆಗೆ ಹೋದ ರೀತಿ ತುಂಬಾನೇ ಮುದ್ದಾಗಿತ್ತು" ಎಂಬಂತಹ ಕಾಮೆಂಟ್‌ಗಳನ್ನು ಸಹ ಅಭಿಮಾನಿಗಳು ಹಾಕಿದ್ದಾರೆ. “ನಟಿ ಸಮಂತಾ ಅವರ ಜೊತೆಗೆ ನಡೆದುಕೊಂಡ ರೀತಿಯೇ ಹೇಳುತ್ತದೆ. ವರುಣ್ ಧವನ್ ಎಂತಹ ಸಭ್ಯ ವ್ಯಕ್ತಿ ಅಂತ” ಎಂದು ಇನ್ನೊಬ್ಬರು ಪ್ರತಿಕ್ರಿಯೆಯನ್ನು ಹಾಕಿದ್ದಾರೆ.


 ಹೊಸ ವೆಬ್ ಸಿರೀಸ್ ‘ಸಿಟಾಡೆಲ್’ ಬಗ್ಗೆ ಮಾತನಾಡಿದ ವರುಣ್, ಆಕ್ಷನ್-ಪ್ಯಾಕ್ಡ್ ಸೀರಿಸ್‌ಗಾಗಿ ಅವೆಂಜರ್ಸ್ ಖ್ಯಾತಿಯ ರುಸ್ಸೊ ಬ್ರದರ್ಸ್ ಅವರೊಂದಿಗೆ ಸಹಯೋಗ ಹೊಂದಲಿದ್ದಾರೆ ಎಂದು ಹೇಳಿದ್ದು ಈ ಹಿಂದೆ ವರದಿಯಾಗಿತ್ತು. ನಟಿ ಸಮಂತಾ ಈ ಹಿಂದೆ ‘ದಿ ಫ್ಯಾಮಿಲಿ ಮ್ಯಾನ್ 2’ ಸೀರಿಸ್‌ಗಾಗಿ ರಾಜ್ ಮತ್ತು ಡಿಕೆ ಅವರೊಂದಿಗೆ ಈ ಹಿಂದೆಯೂ ಕೆಲಸ ಮಾಡಿದ್ದಾರೆ.


ಇದನ್ನೂ ಓದಿ: Puneeth Rajkumar: ‘ಜೇಮ್ಸ್' ಸಿನಿಮಾದಿಂದ ಮತ್ತೊಂದು ಹಾಡು, "ಸಲಾಮ್ ಸೋಲ್ಜರ್" ಎಂದ ಪವರ್ ಸ್ಟಾರ್


ಅಂತಾರಾಷ್ಟ್ರೀಯ ಮಟ್ಟದ ಸ್ಟಂಟ್ ಸಂಯೋಜಕರು


ಈ ವೆಬ್ ಸೀರಿಸ್‌ಗೆ ತುಂಬಾನೇ ಹತ್ತಿರವಾಗಿರುವ ಮೂಲವೊಂದು ಮನರಂಜನಾ ಮಾಧ್ಯಮಕ್ಕೆ "ಈ ವೆಬ್ ಸೀರಿಸ್‌ ತಂಡವು ಇದನ್ನು ಬೃಹತ್ ಪ್ರಮಾಣದಲ್ಲಿ ಚಿತ್ರೀಕರಿಸಲು ಯೋಜನೆ ಹಾಕಿಕೊಂಡಿದ್ದು, ಅದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಿದ ಸ್ಟಂಟ್ ಸಂಯೋಜಕರನ್ನು ಇಲ್ಲಿಗೆ ಕರೆಯಿಸಲಾಗಿದೆ. ವರುಣ್ ಮತ್ತು ಸಮಂತಾ ಇಬ್ಬರೂ ಈ ಸೀರಿಸ್‌ನಲ್ಲಿ ಹೊಡಿ ಬಡಿ ದೃಶ್ಯಗಳಲ್ಲಿ ನಟಿಸಲು ಮುಂದಿನ ವರ್ಷ ವಿವಿಧ ರೀತಿಯ ಅನೇಕ ಕಾರ್ಯಾಗಾರಗಳು ಮತ್ತು ತರಬೇತಿ ಸೆಷನ್‌ಗಳನ್ನು ಮಾಡಲಿದ್ದಾರೆ" ಎಂದು ಹೇಳಿದ್ದಾರೆ.

Published by:Annappa Achari
First published: