• Home
  • »
  • News
  • »
  • entertainment
  • »
  • Varun Dhawan-Vestibular Hypofunction: ದೇಹದ ಬ್ಯಾಲೆನ್ಸ್ ತಪ್ಪಿಸೋ ರೋಗ! ವರುಣ್ ಧವನ್ ಆರೋಗ್ಯ ಸಮಸ್ಯೆ ಏನು?

Varun Dhawan-Vestibular Hypofunction: ದೇಹದ ಬ್ಯಾಲೆನ್ಸ್ ತಪ್ಪಿಸೋ ರೋಗ! ವರುಣ್ ಧವನ್ ಆರೋಗ್ಯ ಸಮಸ್ಯೆ ಏನು?

ಸಮಂತಾ ಅವರು ಇತ್ತೀಚೆಗೆ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡಿದ ಬೆನ್ನಲ್ಲೇ ಬಾಲಿವುಡ್ ನಟ ವರುಣ್ ಧವನ್ ಕೂಡಾ ತಾವು ಎದುರಿಸುತ್ತಿರುವ ಆರೋಗ್ಯ ಸಮಸ್ಯೆ ಬಗ್ಗೆ ರಿವೀಲ್ ಮಾಡಿದ್ದಾರೆ.

ಸಮಂತಾ ಅವರು ಇತ್ತೀಚೆಗೆ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡಿದ ಬೆನ್ನಲ್ಲೇ ಬಾಲಿವುಡ್ ನಟ ವರುಣ್ ಧವನ್ ಕೂಡಾ ತಾವು ಎದುರಿಸುತ್ತಿರುವ ಆರೋಗ್ಯ ಸಮಸ್ಯೆ ಬಗ್ಗೆ ರಿವೀಲ್ ಮಾಡಿದ್ದಾರೆ.

ಸಮಂತಾ ಅವರು ಇತ್ತೀಚೆಗೆ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡಿದ ಬೆನ್ನಲ್ಲೇ ಬಾಲಿವುಡ್ ನಟ ವರುಣ್ ಧವನ್ ಕೂಡಾ ತಾವು ಎದುರಿಸುತ್ತಿರುವ ಆರೋಗ್ಯ ಸಮಸ್ಯೆ ಬಗ್ಗೆ ರಿವೀಲ್ ಮಾಡಿದ್ದಾರೆ.

  • Trending Desk
  • Last Updated :
  • Bangalore, India
  • Share this:

ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ಡೇವಿಡ್ ಧವನ್ ಅವರ ಪುತ್ರ ಹಾಗೂ ಸ್ಟುಡೆಂಟ್ ಆಫ್ ದಿ ಇಯರ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವರುಣ್ ಧವನ್ (Varun Dhawan) ಬಾಲಿವುಡ್​​ನಲ್ಲಿ (Bollywood) ಫೇಮಸ್ ನಟ. ಸಾಕಷ್ಟು ಪ್ರಸಿದ್ಧಿ ಪಡೆದಿರುವ ನಾಯಕ ನಟ ವರುಣ್ ಧವನ್ ಅವರು ವೆಸ್ಟಿಬುಲಾರ್ ಹೈಪೋಫಂಕ್ಷನ್ (Vestibular Hypofunction) ಎಂಬ ಆರೋಗ್ಯ ಸ್ಥಿತಿಯಿಂದ ಬಳಲುತ್ತಿದ್ದಾರೆ. ಆ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಪ್ರಸ್ತುತ, ವರುಣ್ ಅವರ ಭೇಡಿಯಾ ಚಿತ್ರ ತೆರೆಕಾಣಲು ಸಜ್ಜಾಗುತ್ತಿದ್ದು ಅದರ ಪ್ರಚಾರ (Promotion) ಕಾರ್ಯದಲ್ಲಿ ನಟ (Actor) ಬ್ಯುಸಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಮಾಧ್ಯಮವನ್ನು (Media) ಉದ್ದೇಶಿಸಿ ಮಾತನಾಡಿ, ತಾವು ಯಾವ ಆರೋಗ್ಯ ಸ್ಥಿತಿಯಿಂದ ಬಳಲುತ್ತಿದ್ದಾರೆ ಎಂಬುದನ್ನು ರಿವೀಲ್ ಮಾಡಿದ್ದಾರೆ. ಇದೊಂದು ಸಮತೋಲನ ಕಾಯ್ದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಉಂಟಾಗುವ ಆರೋಗ್ಯ ಸ್ಥಿತಿಯಾಗಿದ್ದು (Disorder) ಅದರಿಂದ ತಾನು ಬಳಲುತ್ತಿರುವುದಾಗಿ ನಟ ಹೇಳಿಕೊಂಡಿದ್ದು ಕೋವಿಡ್ (Covid 19) ನಂತರದ ಅವಧಿಯಿಂದ ಅವರು ಸಾಕಷ್ಟು ಕಷ್ಟಪಡುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ.


ಮುಂಬೈನಲ್ಲಿ ನಡೆದ ಒಂದು ಈವೆಂಟ್ ನಲ್ಲಿ ಭಾಗವಹಿಸಿದ್ದ ನಟ ಮಾಧ್ಯಮದ ಮುಂದೆ ಮಾತನಾಡಿ, ಅವರಿಗೆ ಪ್ರಥಮ ಬಾರಿ ವೆಸ್ಟಿಬುಲಾರ್ ಹೈಪೋಫಂಕ್ಷನ್ ಇರುವುದು ಗೊತ್ತಾದಾಗ ಅವರು ಚಿತ್ರೀಕರಣದಿಂದ ಬಿಡುವು ತೆಗೆದುಕೊಳ್ಳಬೇಕಾಯಿತು. ಕೋವಿಡ್ ನಂತರದ ಸಮಯವು ತುಂಬಾ ಕಷ್ಟಕರವಾಗಿತ್ತು ಎಂದಿರುವ ನಟ ಆರೋಗ್ಯದಲ್ಲಿ ಹಲವು ಬದಲಾವಣೆಗಳನ್ನು ಅನುಭವಿಸಬೇಕಾಯಿತೆಂದು ಹೇಳಿದ್ದಾರೆ.


ಜುಗ್ ಜುಗ್ ಜೀಯೋ ಬಗ್ಗೆ ಮಾತು


ಇಂಡಿಯಾ ಟುಡೇ ಕಾನ್ಕ್ಲೇವ್ ನಲ್ಲಿ ಮಾತನಾಡಿದ ನಟ, ಜುಗ್ ಜುಗ್ ಜಿಯೋ ಚಿತ್ರಕ್ಕಾಗಿ ಸಾಕಷ್ಟು ಶ್ರಮವಹಿಸಿರುವುದಾಗಿ ಹೇಳಿದರು. ತಮ್ಮ ಮೇಲೆ ತಾವು ಎಷ್ಟು ಒತ್ತಡ ಹಾಕಿಕೊಂಡಿದ್ದರೆಂದರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ ಅನುಭವ ಇತ್ತು ಎಂದಿದ್ದಾರೆ.


ಇದನ್ನೂ ಓದಿ: Alia Bhatt - Ranbir Kapoor: ಹೆಣ್ಣುಮಗುವಿಗೆ ಜನ್ಮ ನೀಡಿದ ಆಲಿಯಾ ಭಟ್


ಇತ್ತೀಚೆಗೆ ನನ್ನನ್ನು ನಾನು ಸುಮ್ಮನಾಗಿಸಿಕೊಂಡು ಬಿಟ್ಟೆ, ನನಗೇನಾಗಿದೆ ಎಂಬುದು ನನಗೇ ಗೊತ್ತಾಗಲಿಲ್ಲ. ನಂತರ ದೇಹದಲ್ಲಿ ಬ್ಯಾಲೆನ್ಸ್ ಬಾಧಿಸುವ ವೆಸ್ಟಿಬುಲಾರ್ ಹೈಪೋಫಂಕ್ಷನ್ ಸಮಸ್ಯೆ ಇರುವ ಬಗ್ಗೆ ತಿಳಿಯಿತು ಎಂದು ಹೇಳಿದರು.


ಏನಿದು ವೆಸ್ಟಿಬುಲಾರ್ ಹೈಪೋಫಂಕ್ಷನ್?


ಇದೊಂದು ಡಿಸಾರ್ಡರ್ ಆಗಿದ್ದು ಇದರಲ್ಲಿ ಕಿವಿಯ ಆಂತರಿಕ ಭಾಗದಲ್ಲಿರುವ ಹಾಗೂ ಶರೀರ ಸಮತೋಲನಕ್ಕೆ ಪ್ರಮುಖವಾಗಿರುವ ಭಾಗವು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಇದು ಕಿವಿಯ ಒಳಭಾಗದಲ್ಲಿ ಒಂದೆಡೆಯಿದ್ದು ಕಣ್ಣುಗಳು ಹಾಗೂ ಮಾಂಸಖಂಡಗಳು ಒಂದಕ್ಕೊಂಡು ಪೂರಕವಾಗಿ ಸಂಯೋಜನೆಗೊಂಡು ವ್ಯಕ್ತಿಯು ನಿಂತಾಗ ಅಥವಾ ನಡೆಯುವಾಗ ಬೀಳದಂತೆ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.


ಇದನ್ನೂ ಓದಿ: Entertainment: ಮುಗಿಯದ ನಟಿ ಚಾರು ಸಂಸಾರದ ಜಗಳ, ನಟ ಕರಣ್ ಮೆಹ್ರಾ ಜೊತೆ ಹೆಂಡತಿಗೆ ಸಂಬಂಧ ಎಂದ ರಾಜೀವ್ ಸೇನ್


ಈ ವೆಸ್ಟಿಬುಲಾರ್ ಹೈಪೋಫಂಕ್ಷನ್ ಸರಿಯಾಗಿ ಕೆಲಸ ನಿರ್ವಹಿಸದೆ ಇದ್ದ ಸಂದರ್ಭದಲ್ಲಿ ಇದು ದೋಷಪೂರಿತ ಸಿಗ್ನಲ್ ಗಳನ್ನು ಮೆದುಳಿಗೆ ಅಳುಹಿಸಲು ಪ್ರಾರಂಭಿಸುತ್ತದೆ. ಇದರ ಪರಿಣಾಮವಾಗಿ ವ್ಯಕ್ತಿ ತಲೆ ತಿರುಗುತ್ತಿರುವ ಅಥವಾ ಸಮತೋಲನವನ್ನೇ ಕಳೆದುಕೊಳ್ಳುತ್ತಾನೆ.


ಭೇಡಿಯಾ ಚಿತ್ರದ ಬಗ್ಗೆ ಒಂದಿಷ್ಟು


ಚಿತ್ರದ ಟ್ರೈಲರ್ ಪ್ರಕಾರ, ಮುಖ್ಯ ಪಾತ್ರದಲ್ಲಿ ನಟಿಸಿರುವ ವರುಣ್ ಧವನ್ ಚಿತ್ರದಲ್ಲಿ ಮನುಷ್ಯನಿಂದ ಪ್ರಾಣಿಯಾಗುವಂತಹ ಪರಿಸ್ಥಿತಿಯನ್ನು ಅನುಭವಿಸುತ್ತಿರುತ್ತಾನೆ ಎಂದು ಹೇಳಬಹುದು. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಚಿತ್ರವು ನವೆಂಬರ್ 25 ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಅಮರ್ ಕೌಶಿಕ್ ಅವರ ನಿರ್ದೇಶನವಿರುವ ಈ ಚಿತ್ರದಲ್ಲಿ ನಾಯಕ ನಟಿಯಾಗಿ ಕೃತಿ ಸನೋನ್ ನಟಿಸಿದರೆ ಅಭಿಶೇಕ್ ಬ್ಯಾನರ್ಜೀ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Published by:Divya D
First published: