CoolieNo1: ಬ್ಯಾಂಕಾಕ್​ನಲ್ಲಿ ಸೆಟ್ಟೇರಿತು ವರುಣ್​-ಸಾರಾ ಅಲಿಖಾನ್​ರ ಹೊಸ ಸಿನಿಮಾ..!

CoolieNo1: 1995ರಲ್ಲಿ ತೆರೆಕಂಡಿದ್ದ ಕೂಲಿ ನಂ1 ಸಿನಿಮಾ ಈಗ ಮತ್ತೆ ಹಿಂದಿಯಲ್ಲೇ ರಿಮೇಕ್​ ಆಗುತ್ತಿದೆ. ವರುಣ್​ ಧವನ್​ ಹಾಗೂ ಸಾರಾ ಅಲಿ ಖಾನ್​ ಜೋಡಿ ಈಗ ಮೋಡಿ ಮಾಡಲು ಸಜ್ಜಾಗಿದ್ದಾರೆ.

Anitha E | news18
Updated:August 10, 2019, 5:20 PM IST
CoolieNo1: ಬ್ಯಾಂಕಾಕ್​ನಲ್ಲಿ ಸೆಟ್ಟೇರಿತು ವರುಣ್​-ಸಾರಾ ಅಲಿಖಾನ್​ರ ಹೊಸ ಸಿನಿಮಾ..!
ಕೂಲಿ ನಂ 1ಚಿತ್ರದಲ್ಲಿ ವರುಣ್​ ಹಾಗೂ ಸಾರಾ ಅಲಿ ಖಾನ್​
  • News18
  • Last Updated: August 10, 2019, 5:20 PM IST
  • Share this:
ಖ್ಯಾತ ನಿರ್ದೇಶಕ ಡೇವಿಡ್​ ಧವನ್​ ಅವರ ಬಹು ನಿರೀಕ್ಷಿತ ಕಾಮಿಡಿ ಸಿನಿಮಾದಲ್ಲಿ 'ಕೂಲಿ ನಂ 1'. ನಟ ಗೋವಿಂದ ಅಭಿನಯದ ಈ ಸಿನಿಮಾದಲ್ಲಿ ಮತ್ತೆ ರಿಮೇಕ್​ ಮಾಡಲಾಗುತ್ತಿದ್ದು, ಅದನ್ನು ನಿರ್ದೇಶಕ ಡೇವಿಡ್​ ಧವನ್​ ನಿರ್ದೇಶಿಸುತ್ತಿದ್ದಾರೆ.

ಈ ಸಿನಿಮಾದಲ್ಲಿ ನಿರ್ದೇಶಕ ಡೇವಿಡ್​ ಧವನ್​ ಅವರ ಮಗ ವರುಣ್​ ಧವನ್​ ನಾಯಕನಾಗಿ ಅಭಿನಯಿಸುತ್ತಿದ್ದು, ಅವರಿಗೆ ಸಾರಾ ಅಲಿ ಖಾನ್ ಜೊತೆಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ನಿನ್ನೆಯಷ್ಟೆ ಬ್ಯಾಂಕಾಕ್​ನಲ್ಲಿ ಆರಂಭವಾಗಿದೆ.

Good morning people. Dropping a new video on my YouTube channel. Thoda 😛🤪smile bhi zaroori hain hope it makes you smile #vdfunnyshavingvideo https://t.co/pROezB51WX
ಸಿನಿಮಾ ವ್ಯವಹಾರಗಳ ವಿಶ್ಲೇಷಕ ತರನ್​ ಆದರ್ಶ್​ ಅವರು ಈ ವಿಷಯವನ್ನು ಹಾಗೂ ಚಿತ್ರಗಳನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.ವಸು ಭಗ್ನಾನಿ, ಜಾಕಿ ಭಗ್ನಾ ಹಾಗೂ ದೀಪ್ಶಿಕಾ ದೇಶ್​ಮುಖ್​ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಇದು ಮುಂದಿನ ವರ್ಷ ಅಂದರೆ 2020ರ ಮೇ 1ರಂದು ಕಾರ್ಮಿಕರ ದಿನಾಚರಣೆಗೆ ತೆರೆಕಾಣಲಿದೆ.

ಇದನ್ನೂ ಓದಿ: Mardaani 2: ಮತ್ತೆ ಪೊಲೀಸ್​ ಅಧಿಕಾರಿಯಾಗಿ ರಾಣಿ ಮುಖರ್ಜಿ: ಮರ್ದಾನಿ 2 ರಿಲೀಸ್​ ಡೇಟ್​ ಫಿಕ್ಸ್​..!

ನಿರ್ದೇಶಕ ಡೇವಿಡ್​ ಧವನ್​ ಅವರೇ ನಿರ್ದೇಶಿಸಿದ್ದ 'ಕೂಲಿ ನಂ1' ಚಿತ್ರ 1995ರಲ್ಲಿ ಜೂನ್​ 30ಕ್ಕೆ ತೆರೆಕಂಡಿತ್ತು. ಇದರಲ್ಲಿ ಗೋವಿಂದ ಹಾಗೂ ಕರಿಷ್ಮಾ ಕಪೂರ್​ ನಟಿಸಿದ್ದು, ಆ ಕಾಲಕ್ಕೆ 23 ಕೋಟಿ ಬಾಚಿಕೊಳ್ಳುವ ಮೂಲಕ ಹಿಟ್​ ಸಿನಿಮಾ ಆಗಿತ್ತು.

Shah Rukh Khan: ಕಿಂಗ್​ ಖಾನ್​ ಶಾರುಕ್​ಗೆ ಡಾಕ್ಟರೇಟ್​ ನೀಡಿ ಗೌರವಿಸಿದ ಮೆಲ್ಬೋರ್ನ್​ನ ವಿಶ್ವವಿದ್ಯಾಲಯ..!
First published:August 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ