• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Tongue Twisters: ಆಯುಷ್ಮಾನ್​ ಕೊಟ್ಟ ಸವಾಲನ್ನು ಸ್ವೀಕರಿಸಿದ ನಟ ವರುಣ್​ ಧವನ್​: ವಿಡಿಯೋ ವರಲ್​..!

Tongue Twisters: ಆಯುಷ್ಮಾನ್​ ಕೊಟ್ಟ ಸವಾಲನ್ನು ಸ್ವೀಕರಿಸಿದ ನಟ ವರುಣ್​ ಧವನ್​: ವಿಡಿಯೋ ವರಲ್​..!

ವರುಣ್​ ಧವನ್​

ವರುಣ್​ ಧವನ್​

Gulabo Sitabo: ಸಿನಿ ರಂಗದ ಸ್ನೇಹಿತರಿಗೆ ನಾನಾ ರೀತಿಯ ಸವಾಲುಗಳನ್ನು ಕೊಡುತ್ತಾ ಸೆಲೆಬ್ರಿಟಿಗಳು ಟೈಮ್​ ಪಾಸ್​ ಮಾಡುತ್ತಿದ್ದಾರೆ. ನಟ ಆಯುಷ್ಮಾನ್​ ಖುರಾನಾ ಇನ್​ಸ್ಟಾಗ್ರಾಂನಲ್ಲಿ ತಮ್ಮ ಸೆಲೆಬ್ರಿಟಿ ಸ್ನೇಹಿತರಿಗೆ ಒಂದು ಟಂಗ್​ ಟ್ವಿಸ್ಟರ್​ (ನಾಲಗೆ ತಿರುಚುವ) ಚಾಲೆಂಜ್​ ಕೊಟ್ಟಿದ್ದಾರೆ.

ಮುಂದೆ ಓದಿ ...
  • Share this:

ಲಾಕ್​ಡೌನಲ್ಲಿ ಸ್ಟಾರ್​ ನಟರು ಸಾಕಷ್ಟು ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲೇ ಬ್ಯುಸಿಯಾಗಿದ್ದಾರೆ. ಹಾಡುವುದು, ಕುಣಿಯುವುದು ಹೀಗೆ ನಾನಾ ರೀತಿಯಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.


ಸಿನಿ ರಂಗದ ಸ್ನೇಹಿತರಿಗೆ ನಾನಾ ರೀತಿಯ ಸವಾಲುಗಳನ್ನು ಕೊಡುತ್ತಾ ಸೆಲೆಬ್ರಿಟಿಗಳು ಟೈಮ್​ ಪಾಸ್​ ಮಾಡುತ್ತಿದ್ದಾರೆ. ನಟ ಆಯುಷ್ಮಾನ್​ ಖುರಾನಾ ಇನ್​ಸ್ಟಾಗ್ರಾಂನಲ್ಲಿ ತಮ್ಮ ಸೆಲೆಬ್ರಿಟಿ ಸ್ನೇಹಿತರಿಗೆ ಒಂದು ಟಂಗ್​ ಟ್ವಿಸ್ಟರ್​ (ನಾಲಗೆ ತಿರುಚುವ) ಚಾಲೆಂಜ್​ ಕೊಟ್ಟಿದ್ದಾರೆ.
ಆಯುಷ್ಮಾನ್​ ಖುರಾನಾ ಕೊಟ್ಟಿರುವ ಈ ಸವಾಲನ್ನು ವರುಣ್​ ಧವನ್​ ಸ್ವೀಕರಿಸಿದ್ದು, ಸಖತ್​ ಮಜವಾಗಿದೆ ಎಂದು ಈ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಜೊತೆಗೆ ಈ ಸವಾಲನ್ನು ನಟಿಯರಾದ ನೋರಾ ಫತೇಹಿ, ಕತ್ರಿನಾ ಕೈಫ್​ ಹಾಗೂ ಅಭಿಷೇಕ್​ ಬಚ್ಚನ್​ ಅವರಿಗೆ ಪಾಸ್​ ಮಾಡಿದ್ದಾರೆ.ಜೂನ್​ 12ರಂದು ಮೆಜಾನ್​ ಪ್ರೈಂನಲ್ಲಿ ಅಮಿತಾಭ್​ ಬಚ್ಚನ್​ ಹಾಗೂ ಅಭಿಷೇಕ್​ ಬಚ್ಚನ್​ ಅವರ ಅಭಿನಯದ ಗುಲಾಬೊ ಸಿತಾಬೊ ಪ್ರದರ್ಶವಾಗಲಿದೆ. ಚಿತ್ರಮಂದಿರದಲ್ಲಿ ತೆರೆ ಕಾಣುವ ಮೊದಲೇ ಈ ಚಿತ್ರ ನೇರವಾಗಿ ಒಟಿಟಿ ಮೂಲಕ ಪ್ರದರ್ಶನಗೊಳ್ಳಲಿದೆ.


Varun Dhawan accepted the tongue twisters challenge given by Ayushmann Khurrana
ಗುಲಾಬೊ ಸಿತಾಬೊ ಸಿನಿಮಾದಲ್ಲಿ ಆಯುಷ್ಮಾನ್ ಖುರಾನ​ ಹಾಗೂ ಅಮಿತಾಭ್​ ಬಚ್ಚನ್​


ಇದನ್ನೂ ಓದಿ: ರೊಮ್ಯಾಂಟಿಕ್​ ಮೂಡ್​ನಲ್ಲಿ ಪಿಯಾನೋ ಮುಂದೆ ಕುಳಿತ ಕಂಗನಾ..!


ಈ ಸಿನಿಮಾದ ಹೆಸರಿಡುವ ಪದಗಳನ್ನೇ ಬಳಸಿ ಮಾಡಿರುವ ಈ ಟಂಗ್​ ಟ್ವಿಸ್ಟರ್​ ಚಾಲೆಂಜ್​ ಅನ್ನು ನೀಡುವ ಮೂಲಕ ಆಯಷ್ಮಾನ್​ ಸಿನಿಮಾದ ಪ್ರಚಾರವನ್ನೂ ಮಾಡುತ್ತಿದ್ದಾರೆ. ವರುಣ್​ ಧವನ್​ ಜೊತೆಗೆ ಕರಣ್​ ಜೋಹರ್​, ಅರ್ಜು ನ್​ ಕಪೂರ್​, ತಾಪ್ಸಿ ಹಾಗೂ ಗಾಯಕ ಬಾದ್​ಷಾ ಅವರಿಗೂ ಈ ಚಾಲೆಂಜ್​ ನೀಡಿದ್ದಾರೆ.


Chiranjeevi Sarja: ಮಡುಗಟ್ಟಿದ್ದ ದುಖಃವನ್ನು ಹೊರ ಹಾಕಿದ ಅರ್ಜುನ್​ ಸರ್ಜಾ


ಇದನ್ನೂ ಓದಿ: Rana-Miheeka Wedding: ರಾಣಾ ದಗ್ಗುಬಾಟಿ-ಮಿಹಿಕಾರ ವಿವಾಹ ಮುಂದಕ್ಕೆ: ಸದ್ಯದಲ್ಲೇ ಹೊಸ ದಿನಾಂಕ ಪ್ರಕಟ..!

Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು