• Home
  • »
  • News
  • »
  • entertainment
  • »
  • Varisu: ರಿಲೀಸ್ ಆಗಿ 2ನೇ ದಿನಕ್ಕೇ 291 ಶೋ ಕಳೆದುಕೊಂಡು ಕಂಗಾಲಾದ ವಾರಿಸು, ರಶ್ಮಿಕಾ ನಟಿಸಿದ್ದೇ ಕಾರಣವೇ?

Varisu: ರಿಲೀಸ್ ಆಗಿ 2ನೇ ದಿನಕ್ಕೇ 291 ಶೋ ಕಳೆದುಕೊಂಡು ಕಂಗಾಲಾದ ವಾರಿಸು, ರಶ್ಮಿಕಾ ನಟಿಸಿದ್ದೇ ಕಾರಣವೇ?

ವಾರಿಸು

ವಾರಿಸು

ರಿಲೀಸ್ ಆಗಿ ಬರೀ ಎರಡನೇ ದಿನಕ್ಕೇ ವಾರಿಸು ಸಿನಿಮಾ ಮುಗ್ಗರಿಸಿದೆ. ಕರ್ನಾಟಕದಲ್ಲಿ ಹೊಡೆತ ಎದುರಿಸಿದ ವಾರಿಸು ಕಂಗಾಲಾಗಿದೆ. ಒಂದೇ ದಿನದಲ್ಲಿ 291 ಶೋ ಕಳೆದುಕೊಂಡಿದೆ.

  • News18 Kannada
  • Last Updated :
  • Bangalore, India
  • Share this:

ಜನವರಿ 11ರಂದು ತುನಿವು (Thunivu) ಹಾಗೂ ವಾರಿಸು (Varisu) ಸಿನಿಮಾ ಜೊತೆಯಾಗಿ ರಿಲೀಸ್ ಆಗಿದೆ. ಕರ್ನಾಟಕದಲ್ಲಿಯೂ  (Karnataka) ಸಿನಿಮಾಗಳು ರಿಲೀಸ್ ಆಗಿವೆ. ಆದರೆ ಎರಡನೇ ದಿನಕ್ಕೇ ಫಲಿತಾಂಶ ನಿರಾಸೆ ತಂದಿದೆ. ವಿಜಯ್ ಅಭಿನಯದ ವಾರಿಸು ಸಿನಿಮಾ  (Cinema) ರಿಲೀಸ್ ಆಗಿ ಬರೀ ಎರಡನೇ ದಿನಕ್ಕೇ ಬರೋಬ್ಬರು 291 ಶೋಗಳನ್ನು ಕಳೆದುಕೊಂಡಿರುವುದು ಸಿನಿಮಾ ಇನ್ನು ಕರ್ನಾಟಕದಲ್ಲಿ ತನ್ನ ರೇಸ್ ಮುಂದುವರಿಸುವುದು ಕಷ್ಟ ಎನ್ನುವ ಸಿಗ್ನಲ್ ಕೊಟ್ಟಿದೆ. ಆದರೆ ತುನಿವು ಈ ಭೀತಿ ಎದುರಿಸಿಲ್ಲ. ಸ್ವಲ್ಪ ಮುಗ್ಗರಿಸಿದರೂ ವಾರಿಸು ಸಿನಿಮಾಗಿಂತ ಹೆಚ್ಚು ಶೋ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.


ತಮಿಳಿನ ಸ್ಟಾರ್ ನಟರಾದ ವಿಜಯ್ ಹಾಗೂ ಅಜಿತ್ ಅವರು ಈಗಾಗಲೇ ಬಾಕ್ಸ್ ಆಫೀಸ್​ನಲ್ಲಿ ಹಲವು ಸಲ ಎದುರುಬದುರಾಗಿದ್ದಾರೆ. ಈ ಹಿಂದೆಯೂ ಈ ನಟರ ಸಿನಿಮಾಗಳು ಒಟ್ಟಿಗೆ ಸಂಕ್ರಾಂತಿ ದಿನ ರಿಲೀಸ್ ಆಗಿತ್ತು. ಈಗ ಮತ್ತೊಮ್ಮೆ ಇವರ ಸಿನಿಮಾ ಒಟ್ಟಿಗೆ ರಿಲೀಸ್ ಆಗಿದೆ.




ಆರಂಭದ ಲೆಕ್ಕಾಚಾರ ಗಮನಿಸಿದರೆ ವಾರಿಸು ಸಿನಿಮಾ ತುನಿವು ಸಿನಿಮಾವನ್ನು ಬೀಟ್ ಮಾಡಿ ಓಡುತ್ತಿತ್ತು. ಆದರೆ ಈ ಗೆಲುವು ಒಂದೇ ದಿನಕ್ಕೆ ಸೀಮಿತವಾಗಿದ್ದು ಎರಡನೇ ದಿನಕ್ಕೇ ವಾರಿಸು ಮುಗ್ಗರಿಸಿದೆ. ಎರಡನೇ ದಿನಕ್ಕೆ ಸುಮಾರು 300 ಶೋ ಕಳೆದುಕೊಂಡಿರುವ ವಾರಿಸು ಬಲವಾದ ಹೊಡೆತ ತಿಂದಿದೆ.


ಒಂದೇ ದಿನಕ್ಕೆ 300 ಶೋ ಕಳೆದುಕೊಂಡ ಸಿನಿಮಾ


ವಾರಿಸು ಬೆಂಗಳೂರಿನಲ್ಲಿ ಮೊದಲ ದಿನ ಬರೋಬ್ಬರಿ 757 ಪ್ರದರ್ಶನಗಳನ್ನು ಪಡೆದುಕೊಂಡು ಅಬ್ಬರಿಸಿತು. ಆದರೆ ಎರಡನೇ ದಿನ ವಾರಿಸು ಪಡೆದಿದ್ದು ಬರೀ 466 ಪ್ರದರ್ಶನಗಳನ್ನು ಮಾತ್ರ. ಈ ಮೂಲಕ ವಾರಿಸು ಮೊದಲ ದಿನದ ದಾಖಲೆಗಿಂತ 291 ಪ್ರದರ್ಶನಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿದೆ.


ಇದನ್ನೂ ಓದಿ: Varisu Movie Leaked: ವಾರಿಸು HD ಫುಲ್ ಮೂವಿ ರಿಲೀಸ್ ದಿನವೇ ಲೀಕ್! ವಿಜಯ್-ರಶ್ಮಿಕಾ ಸಿನಿಮಾಗೆ ಹೊಡೆತ


ವಾರಿಸು ಬೆಂಗಳೂರಿನಲ್ಲಿ ಎರಡನೇ ದಿನ ಶೋ ಕಳೆದುಕೊಂಡರೂ ಅಜಿತ್ ನಟನೆಯ ತುನಿವು ಈ ನಷ್ಟ ಅನುಭವಿಸಿಲ್ಲ. ಮೊದಲ ದಿನ ರಾಜಧಾನಿಯಲ್ಲಿ 568 ಪ್ರದರ್ಶನಗಳನ್ನು ಪಡೆದುಕೊಂಡಿದ್ದ ತುನಿವು ಎರಡನೇ ದಿನ ಬೆಂಗಳೂರಿನಲ್ಲಿ 397 ಪ್ರದರ್ಶನಗಳನ್ನು ಪಡೆದುಕೊಂಡಿದೆ.


ತುನಿವು ಶೋಗಳ ಸಂಖ್ಯೆ ಕಮ್ಮಿಯಾಗಿದ್ದರೂ ಒಂದನೇ ದಿನದಿಂದ ಎರಡನೇ ದಿನಕ್ಕೆ ಕಳೆದುಕೊಂಡ ಶೋಗಳ ಸಂಖ್ಯೆ ವಾರಿಸುಗಿಂತ ತಮ್ಮಿ ಇದೆ ಎನ್ನುವುದೇ ಪಾಸಿಟಿವ್ ವಿಚಾರ.


ಬಾಲಯ್ಯ ಅವರಿಗೆ ತೆಲುಗು ಸಿನಿ ಪ್ರೇಕ್ಷಕರು ಫಿದಾ ಆಗಿದ್ದು ಅವರ ಸಿನಿಮಾ ರಿಲೀಸ್​ನಿಂದ ವಾರಿಸು ಹಾಗೂ ತುನಿವು ಕ್ರೇಜ್ ಸಡನ್ನಾಗಿ ಕಡಿಮೆ ಆಗಿದೆ. ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಸಿನಿಮಾ ಜ.12ರಂದು ರಿಲೀಸ್ ಆಗಿದೆ.


ರಶ್ಮಿಕಾ ಇದ್ದದ್ದೇ ಕಾರಣವಾ?


ರಶ್ಮಿಕಾ ಅವರ ಬಗ್ಗೆ ಕನ್ನಡ ಸಿನಿಪ್ರೇಮಿಗಳಿಗೆ ಅಂತಹ ಆಸಕ್ತಿ ಇಲ್ಲ. ವಾರಿಸು ಸಿನಿಮಾದಲ್ಲಿ ವಿಜಯ್​ಗೆ ಜೋಡಿಯಾಗಿರುವುದು ರಶ್ಮಿಕಾ ಮಂದಣ್ಣ. ಹಾಗಾಗಿ ಪ್ರೇಕ್ಷಕರು ಸಿನಿಮಾ ರಿಜೆಕ್ಟ್ ಮಾಡುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.


ವಾರಿಸು


ವಾರಿಸು ಚಿತ್ರ ಮೊದಲ ದಿನ ಕರ್ನಾಟಕದಲ್ಲಿ 5.65 ಕೋಟಿ ಗಳಿಕೆ ಮಾಡಿದ್ದು, ಅಜಿತ್ ಅಭಿನಯದ ತುನಿವು ಸಿನಿಮಾ 4.77 ಕೋಟಿ ಗಳಿಸಿದೆ. ಕಲೆಕ್ಷನ್ ಏನೋ ಮಾಡಿತು, ಆದರೆ ಇದು ಒಂದೇ ದಿನಕ್ಕೆ ಸ್ಟಾಪ್ ಆಗುತ್ತಾ ಎನ್ನುವುದು ಸದ್ಯದ ಕುತೂಹಲ. ಕಡಿಮೆ ಶೋ ಆದರೂ ನಡೆಯುತ್ತಲೇ ಇದ್ದರೇ ಲಾಭ ಬರುತ್ತಿತ್ತು. ಆದರೆ ಈ ರೀತಿ ದಿಢೀರ್ ಮುಗ್ಗರಿಸಿದರೆ ಸಿನಿಮಾ ಮೇಲೇಳೋದು ಕಷ್ಟ ಅಂತಿದ್ದಾರೆ ಮೂವಿ ಟ್ರೇಡ್ ಎಕ್ಸ್​ಪರ್ಟ್ಸ್​.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು