• Home
 • »
 • News
 • »
 • entertainment
 • »
 • Vijay-Rashmika: ರಶ್ಮಿಕಾ ಮಂದಣ್ಣ 'ಕಿರಿಕ್​' ಎಫೆಕ್ಟ್​! ಕರ್ನಾಟಕದಲ್ಲಿ 291 ಶೋಗಳನ್ನು ಕಳೆದುಕೊಂಡ 'ವಾರಿಸು'

Vijay-Rashmika: ರಶ್ಮಿಕಾ ಮಂದಣ್ಣ 'ಕಿರಿಕ್​' ಎಫೆಕ್ಟ್​! ಕರ್ನಾಟಕದಲ್ಲಿ 291 ಶೋಗಳನ್ನು ಕಳೆದುಕೊಂಡ 'ವಾರಿಸು'

ವಾರಿಸು

ವಾರಿಸು

ವಾರಿಸು ತನ್ನ 2ನೇ ದಿನ ಕರ್ನಾಟಕದಲ್ಲಿ ಸುಮಾರು 300 ಪ್ರದರ್ಶನಗಳನ್ನು ಕಳೆದುಕೊಂಡಿದೆ ಅಂತ ಹೇಳಲಾಗುತ್ತಿದೆ. ಇದು ದಕ್ಷಿಣ ಭಾರತದ ರಾಜ್ಯದಲ್ಲಿ ಚಿತ್ರದ ಯಶಸ್ಸಿಗೆ ಸ್ವಲ್ಪ ಮಟ್ಟಿಗೆ ಬ್ರೇಕ್ ಹಾಕಿದೆ.

 • Trending Desk
 • 4-MIN READ
 • Last Updated :
 • Karnataka, India
 • Share this:

ಈ ಸಿನಮಾ ರಂಗದಲ್ಲಿ ಒಂದು ಚಿತ್ರ ಹಿಟ್ ಆದರೆ ಅದರ ಹಿಂದೆ ಶ್ರಮ ಪಟ್ಟವರ ಹೆಸರುಗಳು ಕೇಳಿ ಬರುತ್ತವೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಅದೇ ಚಿತ್ರ ಸೋಲುವುದಿರಲಿ, ಜಸ್ಟ್ ಶೋಗಳನ್ನು ಕಳೆದುಕೊಂಡರೂ ಸಾಕು ಅದಕ್ಕೆ ಅನೇಕ ಕಾರಣಗಳು ಹುಟ್ಟಿಕೊಳ್ಳುತ್ತವೆ ಅಂತ ಹೇಳಬಹುದು. ತಮಿಳು ನಟ ವಿಜಯ್ (Vijay) ಮತ್ತು ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅಭಿನಯದ ವಾರಿಸು (Varisu) ಚಿತ್ರ ಈಗಾಗಲೇ ದೇಶಾದ್ಯಂತ ಬಿಡುಗಡೆಯಾಗಿದ್ದು, ವಾರಿಸು ಚಿತ್ರವು ಜನವರಿ 11 ರಂದು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿತು ಮತ್ತು ವಿಶ್ವಾದ್ಯಂತ 46.2 ಕೋಟಿ ರೂಪಾಯಿ ಗಳಿಸಿತು. ಆದಾಗ್ಯೂ, ಈ ಚಿತ್ರವು ಭಾರತದಲ್ಲಿ ಎರಡನೇ ದಿನದಂದು 18 ಕೋಟಿ ರೂಪಾಯಿಗಳಿಂದ 20 ಕೋಟಿ ರೂಪಾಯಿಗಳವರೆಗೆ ಗಳಿಸಿದೆ ಎಂದು ಅಂದಾಜಿಸಲಾಗಿದೆ.


ಕರ್ನಾಟಕದಲ್ಲಿ ಶೋಗಳನ್ನ ಕಳೆದುಕೊಂಡ ವಾರಿಸು ಚಿತ್ರ


ಕೆಲವು ವರದಿಗಳ ಪ್ರಕಾರ, ವಾರಿಸು ತನ್ನ ಎರಡನೇ ದಿನ ಕರ್ನಾಟಕದಲ್ಲಿ ಸುಮಾರು 300 ಪ್ರದರ್ಶನಗಳನ್ನು ಕಳೆದುಕೊಂಡಿತು ಅಂತ ಹೇಳಲಾಗುತ್ತಿದೆ, ಇದು ದಕ್ಷಿಣ ಭಾರತದ ರಾಜ್ಯದಲ್ಲಿ ಚಿತ್ರದ ಯಶಸ್ಸಿಗೆ ಸ್ವಲ್ಪ ಮಟ್ಟಿಗೆ ಬ್ರೇಕ್ ಹಾಕಿತು ಅಂತ ಹೇಳಲಾಗುತ್ತಿದೆ. ಬಿಡುಗಡೆಯಾದ ದಿನದಂದು, ಈ ಚಿತ್ರವು ಬೆಂಗಳೂರಿನಲ್ಲಿ 757 ಶೋಗಳನ್ನು ಹೊಂದಿತ್ತು, ಆದರೆ ಮರುದಿನ ಅದು 466 ಶೋಗಳಿಗೆ ಇಳಿಕೆ ಆಗಿದೆ.
ಶೋಗಳನ್ನ ಕಳೆದುಕೊಂಡದ್ದು ಈ ಕಾರಣದಿಂದಾಗಿಯೇ?


ಈಗ, ರಾಜ್ಯದಲ್ಲಿ ಈ ಚಿತ್ರದ ಶೋಗಳ ಸಂಖ್ಯೆ ಹೀಗೆ ಧಿಡೀರನೆ ಕುಸಿಯಲು ನಟಿ ರಶ್ಮಿಕಾ ಮಂದಣ್ಣ ಎಲ್ಲೋ ಒಂದು ಕಡೆ ಕಾರಣ ಎಂಬ ವದಂತಿ ಹರಿದಾಡುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಕಳೆದ ವರ್ಷ ಪುಷ್ಪಾ ಚಿತ್ರ ಬಿಡುಗಡೆಯಾದಾಗ ಈ ನಟಿಯು ತಮ್ಮ ಚೊಚ್ಚಲ ಚಿತ್ರ ಕಿರಿಕ್ ಪಾರ್ಟಿಯ ಯಶಸ್ಸಿನ ಬಗ್ಗೆ ಮಾತನಾಡುವಾಗ ಪ್ರೊಡಕ್ಷನ್ ಹೌಸ್ ಪರಂವಾ ಸ್ಟುಡಿಯೋಸ್ ಹೆಸರನ್ನು ಹೇಳಲಿಲ್ಲ. ರಶ್ಮಿಕಾ 2016 ರಲ್ಲಿ ರಕ್ಷಿತ್ ಶೆಟ್ಟಿ ಅವರೊಂದಿಗೆ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ರಕ್ಷಿತ್ ಅವರು ಪರಂವಾ ಸ್ಟುಡಿಯೋಸ್‌ನ ಸಹ-ಸಂಸ್ಥಾಪಕರಾಗಿದ್ದಾರೆ. ಈ ಚಿತ್ರವನ್ನು ರಿಷಬ್​ ಶೆಟ್ಟಿ ಅವರು ನಿರ್ದೇಶಿಸಿದ್ದರು.


ಹೀಗೆ ಹತ್ತಿದ ಮೆಟ್ಟಿಲನ್ನೇ ಮರೆತು ಮಾತನಾಡುತ್ತಿರುವ ರಶ್ಮಿಕಾ ಮಂದಣ್ಣ ವಿರುದ್ಧ ಕನ್ನಡದ ಸಿನಿರಸಿಕರು ಕೆಂಡಾಮಂಡಲವಾಗಿದ್ದಾರೆ. ಇದು ವಾರಿಸು ಚಿತ್ರದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ ಎನ್ನಲಾಗುತ್ತಿದೆ.


ಕಿರಿಕ್ ಪಾರ್ಟಿ 2018 ರ ಅತ್ಯಂತ ಯಶಸ್ವಿ ಕನ್ನಡ ಚಿತ್ರಗಳಲ್ಲಿ ಒಂದಾಗಿತ್ತು. ರಶ್ಮಿಕಾ ಮಂದಣ್ಣ ಅವರ ಈ ಚೊಚ್ಚಲ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ಮತ್ತು ಅಚ್ಯುತ್ ಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ರೊಮ್ಯಾಂಟಿಕ್ ಕಾಮಿಡಿ ಇತ್ತೀಚೆಗೆ ಆರು ವರ್ಷಗಳನ್ನು ಪೂರೈಸುತ್ತಿದ್ದಂತೆ, ಅದರ ನಿರ್ದೇಶಕ ರಿಷಬ್​ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಥ್ರೋಬ್ಯಾಕ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಹೊರತುಪಡಿಸಿ ಎಲ್ಲರನ್ನೂ ಟ್ಯಾಗ್ ಮಾಡಿದ್ದಾರೆ.


ಯಾರೆಲ್ಲಾ ನಟಿಸಿದ್ದಾರೆ ಗೊತ್ತೇ ವಾರಿಸು ಚಿತ್ರದಲ್ಲಿ?


ವಾರಿಸು ಚಿತ್ರವನ್ನು ವಂಶಿ ಪೈಡಿಪಲ್ಲಿ ನಿರ್ದೇಶಿಸಿದ್ದು, ಇದೊಂದು ಆಕ್ಷನ್-ಡ್ರಾಮಾ ಚಿತ್ರವಾಗಿದೆ. ಚಿತ್ರವು ಒಬ್ಬ ವ್ಯಕ್ತಿಯ ಬಗ್ಗೆ ಇದ್ದು, ಅವನ ಸಾಕು ತಂದೆ ಅನಿರೀಕ್ಷಿತವಾಗಿ ಸಾಯುತ್ತಾನೆ ಮತ್ತು ಆಗ ಅವನ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ. ಆನಂತರ ಚಿತ್ರದ ನಾಯಕ ತನ್ನ ಕುಟುಂಬದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಹೇಗೆ ಪ್ರಯತ್ನಿಸುತ್ತಾನೆ ಎಂಬುದನ್ನು ಈ ಚಿತ್ರ ತೋರಿಸುತ್ತದೆ. ಈ ಚಿತ್ರದಲ್ಲಿ ಪ್ರಕಾಶ್ ರೈ, ಖುಷ್ಬು, ಪ್ರಭು, ಯೋಗಿ ಬಾಬು ಮತ್ತು ಸಂಗೀತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


ಇದನ್ನೂ ಓದಿ: Rashmika Mandanna: ನ್ಯಾಷನಲ್ ಕ್ರಶ್ ಬ್ಯೂಟಿ ಸೀಕ್ರೆಟ್ ಏನು? ರಶ್ಮಿಕಾಗೆ ಅಜ್ಜಿ ಹೇಳಿಕೊಟ್ಟ ಈ ಹಿಟ್ಟಿನ ಗುಟ್ಟೇನು?


ಈ ಚಿತ್ರವು ಅಜಿತ್ ಕುಮಾರ್ ಅಭಿನಯದ ತುನಿವು ಚಿತ್ರದೊಂದಿಗೆ ಸ್ಪರ್ಧಿಸುತ್ತಿದೆ. ಇದನ್ನು ಎಚ್ ವಿನೋದ್ ನಿರ್ದೇಶಿಸಿದ್ದಾರೆ. ಇದರಲ್ಲಿ ಮಂಜು ವಾರಿಯರ್ ಸಮುದ್ರಕಣಿ ಮತ್ತು ಪವನ್ ರೆಡ್ಡಿ ಸೇರಿದಂತೆ ಪ್ರಮುಖ ತಾರಾಗಣವಿದೆ. ಈ ಚಿತ್ರವನ್ನು ಬಾಲಿವುಡ್ ನ ಜನಪ್ರಿಯ ನಿರ್ಮಾಪಕ ಬೋನಿ ಕಪೂರ್ ಅವರು ನಿರ್ಮಿಸಿದ್ದಾರೆ.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು