ಬಹುಬೇಡಿಕೆ ನಟಿ ರಶ್ಮಿಕಾ ಮಂದಣ್ಣ (Rashmika Mandanna), ಹಿಂದಿ, ತೆಲುಗು, ತಮಿಳು, ಕನ್ನಡ ಎಲ್ಲಾ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕಿರಿಕ್ ಪಾರ್ಟಿ (Kirik Party) ಮೂಲಕ ಸಿನಿಮಾಕ್ಕೆ ಪದಾರ್ಪಣೆ ಮಾಡಿದ ಕೊಡಗಿನ ಬೆಡಗಿಯ ಸಕ್ಸಸ್ ಪ್ರಯಾಣ ನಿಲ್ಲದೇ ಓಡುತ್ತಿದೆ. ಎಲ್ಲಾ ಸಿನಿ ಬೆಲ್ಟ್ ನಲ್ಲೂ ರಶ್ಮಿಕಾಗೆ ಸಖತ್ ಬೇಡಿಕೆ. ಸಿನಿ ರಸಿಕರಂತೂ ರಶ್ಮಿಕಾ ನಟನೆಗೆ, ಡ್ಯಾನ್ಸ್ಗೆ, ಬ್ಯೂಟಿಗೆ ಬೋಲ್ಡ್ ಆಗಿ ಹೋಗಿದ್ದಾರೆ. ಈಕೆಯನ್ನು ನ್ಯಾಷನಲ್ ಕ್ರಶ್ ಅಂತಾನೂ ಕರೆಯಲಾಗಿತ್ತು. ಕೈ ತುಂಬಾ ಚಿತ್ರಗಳು. ಟಿವಿ ಜಾಹೀರಾತುಗಳು, (TV Commercial) ವಿಜಯ್ ದೇವರಕೊಂಡ (Vijay Devarkonda) ಜೊತೆಗಿನ ಲವ್ ಅಫೇರ್ ಹೀಗೆ ಪ್ರತಿದಿನ ರಶ್ಮಿಕಾ ಸುದ್ದಿಯಲ್ಲಿರುತ್ತಾರೆ.
ರಶ್ಮಿಕಾ ತೆಲುಗಿನಲ್ಲಿ ಪುಷ್ಪ 2, ಹಿಂದಿಯಲ್ಲಿ ರಣಬೀರ್ ಕಪೂರ್ ಜೊತೆ ಅನಿಮಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರಸ್ತುತ ತಮಿಳಿನಲ್ಲಿ ವಿಜಯ್ ಜೊತೆ ನಟಿಸಿರುವ ವರಿಸು ಚಿತ್ರ ಚಿತ್ರಮಂದಿರಗಳಿಗೆ ಕಾಲಿಟ್ಟಿದೆ.
ರಶ್ಮಿಕಾ ಬ್ಯೂಟಿ ಸೀಕ್ರೆಟ್
ನಟನೆಗೂ ಸೈ, ಬ್ಯೂಟಿಗೂ ಕಮ್ಮಿ ಇಲ್ಲ ಎನ್ನುವ ಹಾಗೆ ಇರುವ ರಶ್ಮಿಕಾ ಬ್ಯೂಟಿ ಸೀಕ್ರೆಟ್ ಬಗ್ಗೆ ಅಂತೂ ಹಲವರಿಗೆ ಕುತೂಹಲ. ನಟಿಯರು ಅಂದಮೇಲೆ ಕಾಸ್ಟ್ಲಿ ಕಾಸ್ಮೆಟಿಕ್ಸ್, ಸಲೂನ್, ಸ್ಪಾ, ಹೇರ್ ಕೇರ್ ಪ್ರತಿಯೊಂದನ್ನೂ ತಪ್ಪದೇ ಪಾಲಿಸುತ್ತಾರೆ. ಆದಾಗ್ಯೂ ರಶ್ ಕೆಲವೊಂದು ಬ್ಯೂಟಿ ಟಿಪ್ಸ್ಗಳನ್ನು ಅನುಸರಿಸುತ್ತಾರೆ. ರಶ್ಮಿಕಾ ಮಂದಣ್ಣ ಕೆಲವು ಹೋಮ್ಮೇಡ್ ಫೇಸ್ ಪ್ಯಾಕ್ಗಳನ್ನು ಸಹ ಬಳಸುತ್ತಾರಂತೆ.
ನ್ಯಾಷನಲ್ ಕ್ರಶ್, ಕಿರಿಕ್ ಬೆಡಗಿ ಹೇಗೆ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ ಅಂತಾ ನೋಡೋಣ ಬನ್ನಿ.
ಮನೆಯಲ್ಲಿ ತಯಾರಿಸಿದ ಫೇಸ್ಪ್ಯಾಕ್
ರಶ್ಮಿಕಾ ಮಂದಣ್ಣ ಅವರ ಬ್ಯೂಟಿ ಸೀಕ್ರೆಟ್ ಅವರ ಅಜ್ಜಿ ಹೇಳಿಕೊಟ್ಟ ಹೋಮ್ಮೇಡ್ ಫೇಸ್ ಪ್ಯಾಕ್ ಅಂತೆ. ರಶ್ಮಿಕಾ ಮನೆಯಲ್ಲಿಯೇ ಕೆಲವೊಮ್ಮೆ ತಮ್ಮ ಸ್ಕಿನ್ ಕಾಳಜಿ ಮಾಡುತ್ತಾರಂತೆ. ಅದಕ್ಕಾಗಿ ಅವರು ಅಜ್ಜಿ ಹೇಳಿದಂತೆ ಅಕ್ಕಿ ಹಿಟ್ಟು ಮತ್ತು ಅರಿಶಿಣ ಎರಡನ್ನೂ ಮಿಕ್ಸ್ ಮಾಡಿ ಬಳಸುತ್ತಾರಂತೆ. ಇದು ಅವರ ಸ್ಕಿನ್ ಹೊಳೆಯೋದಕ್ಕೆ ಮತ್ತು ತಾಜಾ ಆಗಿರಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಚರ್ಮದ ಅಲರ್ಜಿ ಪರೀಕ್ಷೆ
ಸ್ಕಿನ್ ಬಗ್ಗೆ ಹೆಚ್ಚು ಕಾಳಜಿ ವಹಿಸುವ ರಶ್ಮಿಕಾ ಚರ್ಮಕ್ಕೆ ಅಲರ್ಜಿ ಉಂಟು ಮಾಡುವ ಆಹಾರಗಳನ್ನು ಸೇವಿಸೋದೇ ಇಲ್ವಂತೆ. ಯಾವ್ಯಾವ ಆಹಾರ ಇವರಿಗೆ ಅಲರ್ಜಿ ಇದೆ ಎಂಬುದನ್ನು ಕೆಲ ಪರೀಕ್ಷೆಗೆ ಒಳಗಾಗಿ ಕಂಡುಕೊಂಡಿದ್ದಾರಂತೆ.
ಆಹಾರದ ಬಗ್ಗೆ ನಿಗಾ
ರಶ್ಮಿಕಾ ತುಂಬಾ ಡಯಟ್ ಪ್ರಿಯರಂತೆ. ದೇಹದ ಫಿಟ್ನೆಸ್ ಜೊತೆ ಸ್ಕಿನ್ ಆರೋಗ್ಯಕ್ಕೆ ತಕ್ಕಂತೆ ಆಹಾರಗಳನ್ನು ಸೇವಿಸುತ್ತಾರಂತೆ. ಆಯಿಲ್ ಫುಡ್ನಿಂದ ಆದಷ್ಟು ರಶ್ಮಿಕಾ ದೂರವಂತೆ.
ಸನ್ಸ್ಕ್ರೀನ್ ಮಿಸ್ ಮಾಡೋದೇ ಇಲ್ಲ ರಶ್ಮಿಕಾ
ಸೌಂದರ್ಯದ ಕಾಳಜಿಯಲ್ಲಿ ಸನ್ಸ್ಕ್ರೀನ್ ಪ್ರಮುಖವಾಗಿದೆ ಅಂತಾ ನಿಮಗೆಲ್ಲಾ ಗೊತ್ತು. ಹಾಗೆಯೇ ರಶ್ಮಿಕಾ ಕೂಡ ಮನೆಯಲ್ಲಿದ್ದರೂ, ಹೊರಗೆ ಹೋದರೂ ಕೂಡ ಸನ್ಸ್ಕ್ರೀನ್ ಮಿಸ್ ಮಾಡೋದೆ ಹಚ್ಚಿಕೊಳ್ಳುತ್ತಾರಂತೆ.
ವಿಟಮಿನ್ ಸಿ ಸೀರಮ್
ರಶ್ಮಿಕಾ ವಿಟಮಿನ್ ಸಿ ಸೀರಮ್ ಅನ್ನು ನಿಯಮಿತವಾಗಿ ಬಳಸುತ್ತಾರೆ. ಇದು ಕೂಡ ರಶ್ಮಿಕಾ ಬ್ಯೂಟಿಯ ಮಂತ್ರವಾಗಿದೆ.
ಮಾಯಿಶ್ಚರೈಸರ್ ಮಂತ್ರ
ರಶ್ಮಿಕಾ ಚರ್ಮವನ್ನು ಕಾಳಜಿ ಮಾಡಲು ಮಾಯಿಶ್ಚರೈಸರ್ ಬಳಸುವುದಕ್ಕಿಂತ ಸರಳವಾದ ಮಾರ್ಗವಿಲ್ಲ ಎಂದಿದ್ದಾರೆ. ಕೆಲವು ಮಹಿಳೆಯರು ಮಾಯಿಶ್ಚರೈಸರ್ ಹಚ್ಚೋದನ್ನ ಮರೆತು ಬಿಡುತ್ತಾರೆ ಆದರೆ ಇದು ತಪ್ಪು ಎಂದಿದ್ದಾರೆ.
ಇದನ್ನೂ ಓದಿ:Malaika Arora: ಅರೆ, ಮಲೈಕಾ ಅರೋರ ಮುಖಕ್ಕೆ ಏನಾಯ್ತು!? ನೇಪಾಳದಲ್ಲಿರುವ ನಟಿ ಫೋಟೋಗಳು ವೈರಲ್
ಹೆಚ್ಚಾಗಿ ಫೇಸ್ ವಾಶ್ ಮಾಡದಂತೆ ರಶ್ಮಿಕಾ ಸಲಹೆ
ದಿನಕ್ಕೆ ತುಂಬಾ ಸಲ ಮುಖ ತೊಳೆಯದಂತೆ ರಶ್ಮಿಕಾ ಸಲಹೆ ನೀಡಿದ್ದಾರೆ. ಇವರು ಕೂಡ ಇದನ್ನೇ ಅನುಸರಿಸುತ್ತಾರೆ. ಹೆಚ್ಚು ಬಾರಿ ಮುಖ ತೊಳೆಯುವುದರಿಂದ ಮುಖ ಡ್ರೈ ಆಗುತ್ತದೆ ಎಂದು ರಶ್ಮಿಕಾ ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ