• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Vanitha Vijayakumar: ಮಾಜಿ ಪತಿ ಪೀಟರ್ ಪೌಲ್ ಸಾವು ನೆನೆದು ನಟಿ ವನಿತಾ ಕಣ್ಣೀರು! ಭಾವುಕ ಪೋಸ್ಟ್​ ವೈರಲ್

Vanitha Vijayakumar: ಮಾಜಿ ಪತಿ ಪೀಟರ್ ಪೌಲ್ ಸಾವು ನೆನೆದು ನಟಿ ವನಿತಾ ಕಣ್ಣೀರು! ಭಾವುಕ ಪೋಸ್ಟ್​ ವೈರಲ್

ಮಾಜಿ ಪತಿ ಪೀಟರ್ ಪೌಲ್,ವನಿತಾ

ಮಾಜಿ ಪತಿ ಪೀಟರ್ ಪೌಲ್,ವನಿತಾ

ನೀವು ಈ ಪ್ರಪಂಚವನ್ನು ಬಿಟ್ಟು ಹೋಗಿದ್ದು ನನಗೆ ತುಂಬಾನೇ ದುಃಖವಾಗಿದೆ ಎಂದು ನಟಿ ವನಿತಾ ವಿಜಯ್​ ಕುಮಾರ್​ ಬರೆದುಕೊಂಡಿದ್ದಾರೆ.

 • Trending Desk
 • 4-MIN READ
 • Last Updated :
 • Karnataka, India
 • Share this:

ಇತ್ತೀಚೆಗೆ ಎಂದರೆ ಏಪ್ರಿಲ್ 29 ರಂದು ಚೆನ್ನೈನಲ್ಲಿ ತಮಿಳು ಚಲನಚಿತ್ರೋದ್ಯಮದಲ್ಲಿ ವಿಎಫ್ಎಕ್ಸ್ ಎಡಿಟರ್ ಆಗಿದ್ದ ಪೀಟರ್ ಪೌಲ್ ನಿಧನರಾದರು. ಈಗ ತಮ್ಮ ಪತಿ ಪೀಟರ್ ಪೌಲ್ ನಿಧನದ ನಂತರ ತಮಿಳು ಚಿತ್ರರಂಗದ ನಟಿ ವನಿತಾ ವಿಜಯ್ ಕುಮಾರ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್​ವೊಂದನ್ನು ಬರೆದುಕೊಂಡಿದ್ದಾರೆ. 


ನಟಿ ವನಿತಾ ಅವರು ತಮಿಳಿನ ಪ್ರಸಿದ್ಧ ನಟ ವಿಜಯ್ ಕುಮಾರ್ ಅವರ ಮಗಳಾಗಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಹೇರಲಾದ ಲಾಕ್​ಡೌನ್​ ಸಮಯದಲ್ಲಿ ವನಿತಾ ತನ್ನ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದಾಗ ಇವರಿಬ್ಬರ ಭೇಟಿಯಾಗಿದೆ.


ವನಿತಾ ಮತ್ತು ಪೀಟರ್ ಇಬ್ಬರೂ ಜೂನ್ 2020 ರಲ್ಲಿ ಮದುವೆಯಾದ್ರಂತೆ..


ಜೂನ್ 2020 ರಲ್ಲಿ ಇವರಿಬ್ಬರು ವಿವಾಹವಾದರು. ಆದರೆ ಪೀಟರ್ ಪಾಲ್ ಇನ್ನೂ ತನ್ನ ಮೊದಲ ಹೆಂಡತಿಯ ಜೊತೆಗೆ ಸಂಸಾರ ಮಾಡುತ್ತಿದ್ದಾನೆ, ಆಕೆಗೆ ವಿಚ್ಛೇದನ ನೀಡಿಲ್ಲ ಅಂತ ತಿಳಿದಾಗ ವನಿತಾ ಮದುವೆಯಾದ ನಾಲ್ಕು ತಿಂಗಳಲ್ಲಿಯೇ ಆ ಸಂಬಂಧದಿಂದ ಹೊರ ಬಂದಿದ್ದಾರೆ.


ಪೀಟರ್ ಪೌಲ್ ಅವರ ಮೊದಲ ಪತ್ನಿ ತನಗಾದ ಅನ್ಯಾಯಕ್ಕೆ ನ್ಯಾಯ ಪಡೆಯಲು ಹಲವು ಮಾಧ್ಯಮಗಳು, ಮತ್ತು ಸಂಘ-ಸಂಸ್ಥೆಗಳನ್ನು ಸಂಪರ್ಕಿಸಿ ಸಹಾಯ ಬೇಡಿದಾಗ ಈ ವನಿತಾ ಹಾಗೂ ಪೀಟರ್ ಮದುವೆಯ ವಿಷಯವು ದೊಡ್ಡ ವಿವಾದವಾಯಿತು.


ಮಾಜಿ ಪತಿ ಪೀಟರ್ ಪೌಲ್,ವನಿತಾ


ಈ ನಡುವೆ ಅತಿಯಾದ ಧೂಮಪಾನ ಮತ್ತು ಮದ್ಯಪಾನದಿಂದಾಗಿ ಪೀಟರ್ ಅವರು ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಆ ಸಂದರ್ಭದಲ್ಲಿ ವನಿತಾ ಅವರು ಪೀಟರ್ ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಯನ್ನೂ ಖರ್ಚು ಮಾಡಿದರು.


ತದನಂತರ, ಪೀಟರ್ ಈಗಲೂ ತನ್ನ ಮೊದಲನೆಯ ಪತ್ನಿಯೊಂದಿಗೆ ಸಂಸಾರ ನಡೆಸುತ್ತಿರುವುದು ತನಗೆ ತಿಳಿದಿರಲಿಲ್ಲ ಅಂತ ಹೇಳಿಕೆ ನೀಡುವ ಮೂಲಕ ವನಿತಾ ಆ ಮದುವೆಯಿಂದ ಹೊರ ಬಂದಿದ್ದರು.


ಆನಂತರ ಪೀಟರ್ ಪೌಲ್ ನಿಧನರಾದ ಸುದ್ದಿ ಬಂದಾಗ, ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಒಂದು ಭಾವನಾತ್ಮಕವಾದ ಟಿಪ್ಪಣಿಯೊಂದನ್ನು ಬರೆದುಕೊಂಡಿದ್ದಾರೆ.


ಏನೆಲ್ಲಾ ಬರೆದಿದ್ದಾರೆ ವನಿತಾ ತಮ್ಮ ದಿವಂಗತ ಪತಿಯ ಬಗ್ಗೆ ನೋಡಿ..


ಏಪ್ರಿಲ್ 29 ರಂದು ನಿಧನರಾಗುವವರೆಗೆ ಪೀಟರ್ ಪೌಲ್ ಒಂದು ವರ್ಷಕ್ಕೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಗಳು ತಿಳಿಸಿವೆ. ವನಿತಾ ಅವರು ತಮ್ಮ ಪೋಸ್ಟ್ ನಲ್ಲಿ "ಯಾರು ತಮಗೆ ಸಹಾಯ ಮಾಡಿಕೊಳ್ಳುತ್ತಾರೋ, ಆ ದೇವರು ಅವರಿಗೆ ಖಂಡಿತವಾಗಿಯೂ ಸಹಾಯ ಮಾಡುತ್ತಾನೆ ಎಂದು ನನ್ನ ತಾಯಿ ಒಮ್ಮೆ ನನಗೆ ಹೇಳಿದ್ದರು.


ಇದು ಖಂಡಿತವಾಗಿಯೂ ಪ್ರತಿಯೊಬ್ಬರೂ ಕಲಿಯಬೇಕಾದ ಪಾಠವಾಗಿದೆ. ಜೀವನದ ಅನೇಕ ದಾರಿಗಳಲ್ಲಿ ಜನರು ತಮ್ಮದೇ ಆದ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಮುಂದೆ ಸಾಗುತ್ತಾರೆ.


ನೀವು ಆ ದಾರಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ಮತ್ತು ಕೆಟ್ಟ ಜನರ ವಿರುದ್ಧ ಮತ್ತು ನೀವು ಅನುಭವಿಸಿದ ಆಘಾತದ ವಿರುದ್ಧ ಹೋರಾಡಿದ ನಂತರ ನೀವು ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಂಡುಕೊಳ್ಳುತ್ತೀರಿ ಎಂದು ನನಗೆ ಖಾತ್ರಿಯಿದೆ.


ನೀವು ಈ ಪ್ರಪಂಚದಿಂದ ಬೇರ್ಪಟ್ಟಿದ್ದಕ್ಕಾಗಿ ನನಗೆ ತುಂಬಾನೇ ದುಃಖವಾಗಿದೆ, ನೀವು ಖಂಡಿತವಾಗಿಯೂ ಉತ್ತಮ ಸ್ಥಳದಲ್ಲಿರುತ್ತೀರಿ ಎಂದು ನನಗೆ ತಿಳಿದಿದೆ ಮತ್ತು ಅಂತಿಮವಾಗಿ ನೀವು ಎಲ್ಲಿದ್ದರೂ ಅಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಂಡುಕೊಂಡಿದ್ದೀರಿ" ಅಂತ ಬರೆದಿದ್ದಾರೆ.


ಭಾವುಕ ಪೋಸ್ಟ್ ನೊಂದಿಗೆ ಇನ್ನೇನು ಹಂಚಿಕೊಂಡಿದ್ದಾರೆ ನೋಡಿ ನಟಿ


ಈ ಪೋಸ್ಟ್ ಅನ್ನು ಹಾಕಿದ ನಂತರ ಮರುದಿನ ಲೇಖಕಿ ನಿಕ್ಕಿ ಬನಾಸ್ ಅವರು ಬರೆದಿರುವ ಟಿಪ್ಪಣಿಯೊಂದನ್ನು ಪೋಸ್ಟ್ ಮಾಡಿದ್ದಾರೆ.


"ಕೆಲವು ಹಂತದಲ್ಲಿ, ನೀವು ಜೀವನದಲ್ಲಿ ಎಲ್ಲವನ್ನೂ ಬಿಟ್ಟು ಮುಂದುವರಿಯಬೇಕು. ಇದು ಜಗತ್ತಿನಲ್ಲಿ ಮಾಡಲು ತುಂಬಾನೇ ಕಷ್ಟಕರವಾದ ಕೆಲಸ ಅಂತ ಅನ್ನಿಸಬಹುದು, ಆದರೆ ಅಂತಿಮವಾಗಿ ಜೀವನದಲ್ಲಿ ಮುಂದುವರೆಯಲು ನಿಮ್ಮೆಲ್ಲಾ ಶಕ್ತಿಯನ್ನು ಒಟ್ಟುಗೂಡಿಸಿಕೊಳ್ಳಬೇಕು.


ಕೆಲವು ಜನರು ಮತ್ತು ಸಂದರ್ಭಗಳು ನಿಮಗೆ ಇಷ್ಟವಾಗುವುದಿಲ್ಲ, ಕೆಲವು ಅವಕಾಶಗಳು ಕೈ ತಪ್ಪಿ ಹೋಗುತ್ತವೆ. ನಾವು ಅಂದುಕೊಂಡದ್ದು ನಡೆಯದೆ ಇದ್ದರೂ ಸಹ ಸರಿ ಅಂತ ಅಂದುಕೊಂಡು ಮುಂದಕ್ಕೆ ಸಾಗಬೇಕು.
ಯಾರ ಜೀವನವೂ ಪರಿಪೂರ್ಣವಾಗಿರುವುದಿಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಏಳು-ಬೀಳುಗಳು ಇರುತ್ತವೆ. ಆದ್ದರಿಂದ ನಿಮ್ಮ ನಿಯಂತ್ರಣದಿಂದ ಹೊರಗಿರುವ ವಿಷಯಗಳು ಬದಲಾಗುತ್ತವೆ ಎಂದು ನೀವು ಬಯಸಿದಾಗ ಮತ್ತು ಆಶಿಸುತ್ತಿರುವಾಗ, ನಿಮ್ಮ ಜೀವನದಲ್ಲಿ ಮುಂದೆ ಸಾಗಲು ಆರಂಭಿಸಿ, ಏಕೆಂದರೆ ಅದು ನಿಮ್ಮನ್ನು ನಿಮ್ಮ ನಿಜವಾದ ಹಾದಿಗೆ ಕರೆದೊಯ್ಯುತ್ತದೆ" ಎಂದು ಆ ಪೋಸ್ಟ್ ಹೇಳುತ್ತದೆ.


ಇದನ್ನೂ ಓದಿ: Salman Khan: ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಾರಾ ಸಲ್ಲು? ದೀದಿ ಪಕ್ಕ ನಿಂತು ಫೋಟೋಗೆ ಸಖತ್​ ಪೋಸ್


ವನಿತಾ ಅವರ ಅಭಿಮಾನಿಗಳು ಸಹ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಅವರಿಗೆ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು.

First published: