ಹರಿಕೃಷ್ಣ ದಾಂಪತ್ಯದಲ್ಲಿ ಅಪಸ್ವರ; ಹೆಂಡತಿ ಕಂಠಕ್ಕೆ ಕತ್ತರಿ ಹಾಕಿದ್ರಾ ಸಂಗೀತ ನಿರ್ದೇಶಕ?

ವಿ ಹರಿಕೃಷ್ಣ ಅವರು ಸಂಗೀತ ಸಂಯೋಜಿಸಿದರುವ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರದಲ್ಲಿ ವಾಣಿ ಅವರ ಕಂಠದಲ್ಲಿ ಒಂದು ಹಾಡನ್ನು ಹಾಡಿಸಲಾಗಿತ್ತು. ಆದರೆ, ಅದೇ ಏನಾಯಿತೋ ಗೊತ್ತಿಲ್ಲ ಈ ಹಾಡಿಗೆ ಈಗ ಅನುರಾಧ ಕಂಠವಾಗಿದ್ದಾರೆ. ಇದು ವಾಣಿ ಅವರಿಗೆ ನೋವು ಮೂಡಿಸಿದೆ.

Seema.R | news18
Updated:August 1, 2019, 6:17 PM IST
ಹರಿಕೃಷ್ಣ ದಾಂಪತ್ಯದಲ್ಲಿ ಅಪಸ್ವರ; ಹೆಂಡತಿ ಕಂಠಕ್ಕೆ ಕತ್ತರಿ ಹಾಕಿದ್ರಾ ಸಂಗೀತ ನಿರ್ದೇಶಕ?
ಹಿನ್ನೆಲೆ ಗಾಯಕಿ ವಾಣಿ ಹರಿಕೃಷ್ಣ
  • News18
  • Last Updated: August 1, 2019, 6:17 PM IST
  • Share this:
ವಿ.ಹರಿಕೃಷ್ಣ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ. ಜಿ.ಕೆ. ವೆಂಕಟೇಶ್​ ಮೊಮ್ಮಗಳನ್ನು ವಾಣಿ ಹರಿಕೃಷ್ಣ ಕೂಡ ಗಾಯಕಿ. ಸಂಸಾರ ನೌಕೆಯಲ್ಲಿ ಜೊತೆಯಾದ ಈ ಇಬ್ಬರು ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.

ಗಂಡ ಹರಿಕೃಷ್ಣ ಸಂಯೋಜನೆಯಲ್ಲಿ ಈಗಾಗಲೇ ಹಲವು ಹಾಡುಗಳನ್ನು ಹಾಡಿರುವ ವಾಣಿ ಹರಿಕೃಷ್ಣ ಅವರಿಗೆ ಈಗ ಗಂಡನೇ ತಮ್ಮ ಹಾದಿಗೆ ತೊಡಕಾಗಿದ್ದಾರಾ ಎಂಬ ಅನುಮಾನ ಮೂಡಿದೆ. ಕಾರಣ ಅವರ ಕಂಠದಿಂದ ಹೊರಹೊಮ್ಮಿರುವ ಹಾಡನ್ನು ಬೇರೆ ಗಾಯಕಿಯಿಂದ ಹರಿಕೃಷ್ಣ ಹಾಡಿಸಿರುವುದು.

ಹರಿಕೃಷ್ಣ ಅವರು ಸಂಗೀತ ಸಂಯೋಜಿಸಿದರುವ ಬಹು ನಿರೀಕ್ಷಿತ ಚಿತ್ರ 'ಕುರುಕ್ಷೇತ್ರ'ದಲ್ಲಿ ವಾಣಿ ಅವರ ಕಂಠದಲ್ಲಿ ಒಂದು ಹಾಡನ್ನು ಹಾಡಿಸಲಾಗಿತ್ತು. ಆದರೆ, ಅದೇ ಏನಾಯಿತೋ ಗೊತ್ತಿಲ್ಲ ಈ ಹಾಡಿಗೆ ಈಗ ಅನುರಾಧಾ ಭಟ್​ ಕಂಠವಾಗಿದ್ದಾರೆ. ಇದು ವಾಣಿ ಅವರ ನೋವಿಗೆ ಕಾರಣವಾಗಿದೆ.ತಮ್ಮ ಗಂಡನ ಸಂಗೀತ ನಿರ್ದೆಶನದ ಚಿತ್ರಗಳಲ್ಲೇ ಈ ರೀತಿಯಾದ ಕಹಿ ಅನುಭವವಾಗಿರುವುದು ಅವರಿಗೆ ಹೆಚ್ಚು ನೋವು ಮೂಡಿಸಿದೆ. ಈ ಬಗ್ಗೆ ತಮ್ಮ ಫೇಸ್​ ಬುಕ್​ ಖಾತೆಯಲ್ಲಿ ಮನನೊಂದು ಬರೆದುಕೊಂಡಿರುವ ಅವರು, ಬದುಕು ಬೇಡ ಎಂಬ ಮಟ್ಟಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: Ramayan: ಬಾಲಿವುಡ್​ನಲ್ಲಿ 500 ಕೋಟಿ ವೆಚ್ಚದಲ್ಲಿ ಸಿದ್ಧವಾಗಲಿಗೆ ರಾಮಾಯಣ..!

ಈಗಾಗಲೇ ಸುಪ್ರಸಿದ್ದ ಗಾಯಕಿಯಾಗಿರುವ ವಾಣಿ ಅವರಿಗೆ ಈ ರೀತಿ ಮಾಡಿರುವುದಕ್ಕೆ ಅವರ ಅಭಿಮಾನಿಗಳು ಬೇಸರಿಸಿಕೊಂಡಿದ್ದಾರೆ.ಸಿನಿಮಾ ಚಿತ್ರರಂಗದಲ್ಲಿ ಒಬ್ಬರ ಅವಕಾಶವನ್ನು ಒಬ್ಬರು ಕಿತ್ತುಕೊಳ್ಳುವುದು ಸಾಮಾನ್ಯ. ಆದರೆ, ಗಂಡನೇ ಈ ರೀತಿ ಮಾಡಿರುವುದು ಅಚ್ಚರಿ ಜೊತೆ ಹಲವು ಅನುಮಾನ ಹುಟ್ಟು ಹಾಕಿದೆ. ಖ್ಯಾತ ಸಂಗೀತಗಾರೊಬ್ಬರ ಮೊಮ್ಮಗಳಿಗೆ ಆಗಿರುವ ಈ ಅನುಭವ ಚಿತ್ರರಂಗದಲ್ಲಿ ಯಾವುದೇ ಪ್ರತಿಭೆಗೆ ಮುಂದಾಗಬಾರದು ಎಂಬುದು ಅಭಿಮಾನಿಗಳ ಕೋರಿಕೆಯಾಗಿದೆ.

First published:August 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading