HOME » NEWS » Entertainment » VAMIKA IS THE NAME OF VIRAT KOHLI AND ANUSHKA SHARMAS BABY GIRL AND HERE THE FIRST PHOTO AE

ಮಗಳಿಗೆ ನಾಮಕರಣ ಮಾಡಿದ ವಿರುಷ್ಕಾ ದಂಪತಿ: ಮಗುವಿನ ಮೊದಲ ಫೋಟೋ ಹಂಚಿಕೊಂಡ ಅನುಷ್ಕಾ ಶರ್ಮಾ..!

ಅನುಷ್ಕಾ ಶರ್ಮಾ ಮಗಳ ಜೊತೆಗಿನ ಮೊದಲ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಮಗಳಿಗೆ ನಾಮಕರಣ ಮಾಡಿದ್ದು, ಅವಳ ಹೆಸರನ್ನೂ ಬಹಿರಂಗಪಡಿಸಿದ್ದಾರೆ.

Anitha E | news18-kannada
Updated:February 1, 2021, 1:19 PM IST
ಮಗಳಿಗೆ ನಾಮಕರಣ ಮಾಡಿದ ವಿರುಷ್ಕಾ ದಂಪತಿ: ಮಗುವಿನ ಮೊದಲ ಫೋಟೋ ಹಂಚಿಕೊಂಡ ಅನುಷ್ಕಾ ಶರ್ಮಾ..!
ಮಗಳ ಜೊತೆ ವಿರಾಟ್​ ಹಾಗೂ ಅನುಷ್ಕಾ ಶರ್ಮಾ
  • Share this:
ಅನುಷ್ಕಾ ಶರ್ಮಾ (Anushka Sharma) ಹಾಗೂ ವಿರಾಟ್​ ಕೊಹ್ಲಿ (Virat Kohli) ತಮ್ಮ ಮಗಳನ್ನು ಆದಷ್ಟು ಮಾಧ್ಯಮ ಹಾಗೂ ತಮ್ಮ ತಾರಾ ವರ್ಚಸ್ಸಿನಿಂದ ದೂರ ಇಡಲು ಪ್ರಯತ್ನಿಸುತ್ತಿರುವ ವಿಷಯ ತಿಳಿದೇ ಇದೆ. ಮಗು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಮಗಳ ಒಂದು ಫೋಟೋವನ್ನೂ ಹಂಚಿಕೊಂಡಿಲ್ಲ ಈ ಸ್ಟಾರ್​ ದಂಪತಿ. ಅಲ್ಲದೆ ಸ್ಟಾರ್​ ಕಿಡ್ಸ್​ಗಳ ಹಿಂದೆ ಬೀಳುವ ಪಾಪರಾಜಿಗಳಿಗೆ ತಮ್ಮ ಮಗಳ ಫೋಟೋಗಳನ್ನು ಬಲವಂತವಾಗಿ ತೆಗೆದಯದಂತೆ ಮನವಿ ಸಹ ಮಾಡಿದ್ದರು. ಮಗಳು ಹುಟ್ಟಿದ್ದ ಖುಷಿಯಲ್ಲಿ ಅನುಷ್ಕಾ ಹಾಗೂ ವಿರಾಟ್​ ಪಾಪರಾಜಿಗಳಿಗೆ ವಿಶೇಷವಾಗಿ ಉಡುಗೊರೆ ನೀಡುವ ಮೂಲಕ ಮಗಳ ಫೋಟೋಗಳನ್ನು ತೆಗೆಯದಂತೆ ಮನವಿ ಮಾಡಿದ್ದರು. ಅಲ್ಲದೆ ತಾವೇ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನ ಕುರಿತಾದ ಅಪ್ಡೇಟ್​ಗಳನ್ನು ಆಗಾಗ ನೀಡುವುದಾಗಿಯೂ ತಿಳಿಸಿದ್ದರು. ಈ ದಂಪತಿ ಹೇಳಿದಂತೆ ಈಗ ಮಗಳ ಕುರಿತಾದ ಒಂದು ಸುದ್ದಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. 

ಅನುಷ್ಕಾ ಶರ್ಮಾ ಮಗಳ ಜೊತೆಗಿನ ಮೊದಲ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಮಗಳಿಗೆ ನಾಮಕರಣ ಮಾಡಿದ್ದು, ಅವಳ ಹೆಸರನ್ನೂ ಬಹಿರಂಗಪಡಿಸಿದ್ದಾರೆ.





ಅನುಷ್ಕಾ ಹಂಚಿಕೊಂಡಿರುವ ಫೋಟೋಗೆ ವಿರಾಟ್​ ಕೊಹ್ಲಿ ಸಹ ಕಮೆಂಟ್​ ಮಾಡಿದ್ದು, ಇದು ನನ್ನ ಇಡೀ ಜಗತ್ತು ಒಂದು ಫ್ರೇಮಿನಲ್ಲಿದೆ ಎಂದು ಬರೆದಿದ್ದಾರೆ. ಇನ್ನು ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಮಗಳಿಗೆ ವಾಮಿಕಾ  (Vamika) ಎಂದು ಹೆಸರಿಟ್ಟಿದ್ದಾರೆ.



Vamika is the name of virat kohli and anushka sharmas baby girl and here the first photo ae
ಮಗಳು ವಾಮಿಕಾ ಜೊತೆ ವಿರಾಟ್​ ಹಾಗೂ ಅನುಷ್ಕಾ ಶರ್ಮಾ


ಪ್ರೀತಿಯಿಂದ ಜೊತೆಗೆ ಜೀವಿಸುತ್ತಿದ್ದ ನಮ್ಮ ಜೀವನದಲ್ಲಿ ಪುಟ್ಟ ಮಗಳು ವಾಮಿಕಾ ಬಂದ ನಂತರ ಎಲ್ಲವೂ ಸಂಪೂರ್ಣವಾಗಿ ಬದಲಾಗಿದೆ. ಖುಷಿ, ದುಖಃ, ಬೇಸರ, ಚಿಂತೆಯಂತಹ ಎಲ್ಲ ರೀತಿಯ ಭಾವನೆಗಳೂ ಒಂದೇ ಕ್ಷಣದಲ್ಲಿ ಅನುಭವಕ್ಕೆ ಬರುತ್ತವೆ. ಸರಿಯಾಗಿ ನಿದ್ದೆ ಆಗುತ್ತಿಲ್ಲ. ಆದರೆ, ನಮ್ಮ ಹೃದಯ ಪ್ರೀತಿಯಿಂದ ತುಂಬಿದೆ. ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದಕ್ಕೆ ಧನ್ಯವಾದಗಳು ಎಂದು ಅನುಷ್ಕಾ ಶರ್ಮಾ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗಾಗಿ ಬಾಗಿಲು ತೆರೆದ ಚಿತ್ರಮಂದಿರಗಳು

ತಿಳಿಸಿದ್ದಾರೆ. "ನಿಮ್ಮ ಪ್ರೀತಿ, ಪ್ರಾರ್ಥನೆ, ಅಭಿನಂದನೆಗಳಿಗೆ ಧನ್ಯವಾದಗಳು. ಅನುಷ್ಕಾ ಮತ್ತು ಮಗು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.ಅಷ್ಟೇ ಅಲ್ಲದೆ, ಹೊಸ ಜೀವನದ ಅಧ್ಯಯನ ಪ್ರಾರಂಭಿಸಲು ನಾವು ಸಿದ್ಧರಾಗಿದ್ದೇವೆ. ಈ ಸಮಯದಲ್ಲಿ ನಮ್ಮ ಖಾಸಗಿತನಕ್ಕೆ ಗೌರವ ನೀಡುತ್ತೀರಾ ಎಂಬ ಭರವಸೆ ಇದೆ" ಎಂದು ಅವರು ತಿಳಿಸಿದ್ದಾರೆ.








View this post on Instagram






A post shared by Virat Kohli (@virat.kohli)






ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಅವರ ಜೀವನದಲ್ಲಿ ಜನವರಿ 11 ನಿಜಕ್ಕೂ ಮರೆಯಲಾಗದ ದಿನ. ಮೊದಲ ಮಗುವಿಗಾಗಿ ಕಾತರದಿಂದ ಎದುರು ನೋಡುತ್ತಿದ್ದ ಈ ದಂಪತಿಯ ಜೀವನಕ್ಕೆ ಜ.11ರಂದು ಮುದ್ದಾದ ಹೆಣ್ಣು ಮಗುವಿನ ಎಂಟ್ರಿಯಾಗಿತ್ತು. ತಮಗೆ ಹೆಣ್ಣು ಮಗುವಾದ ವಿಷಯವನ್ನು ಟೀ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು.

ಇದನ್ನೂ ಓದಿ: Nithya Menen: ಮಾದಕ ನೋಟದಿಂದಲೇ ಮತ್ತೇರಿಸುತ್ತಿರುವ ಸ್ಯಾಂಡಲ್​ವುಡ್​ ನಟಿ ನಿತ್ಯಾ ಮೆನನ್​..!

'ನಿಮ್ಮ ಪ್ರೀತಿ, ಪ್ರಾರ್ಥನೆ, ಅಭಿನಂದನೆಗಳಿಗೆ ಧನ್ಯವಾದಗಳು. ಅನುಷ್ಕಾ ಮತ್ತು ಮಗು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದರು. ಅಷ್ಟೇ ಅಲ್ಲದೆ, ಹೊಸ ಜೀವನದ ಅಧ್ಯಯನ ಪ್ರಾರಂಭಿಸಲು ನಾವು ಸಿದ್ಧರಾಗಿದ್ದೇವೆ. ಈ ಸಮಯದಲ್ಲಿ ನಮ್ಮ ಖಾಸಗಿತನಕ್ಕೆ ಗೌರವ ನೀಡುತ್ತೀರಾ ಎಂಬ ಭರವಸೆ ಇದೆ' ಎಂದು ಮನವಿ ಸಹ ಮಾಡಿದ್ದರು.
Published by: Anitha E
First published: February 1, 2021, 11:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories