ತಮಿಳು ಚಿತ್ರರಂಗದ ನಟ ಅಜಿತ್ ಅಭಿನಯದ ವಲಿಮೈ ಚಿತ್ರದ ಮೋಷನ್ ಪೋಸ್ಟರ್ ಅನ್ನು ಚಿತ್ರ ತಂಡವು ಬಿಡುಗಡೆ ಮಾಡಿದ್ದು, ಚಿತ್ರದಲ್ಲಿ ಅಜಿತ್ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಅಜಿತ್ ಅಭಿಮಾನಿಗಳು ಅವರ ಮುಂದಿನ ಚಿತ್ರ ವಲಿಮೈ ಮೋಷನ್ ಪೋಸ್ಟರ್ನಲ್ಲಿ ತಮ್ಮ ನೆಚ್ಚಿನ ನಟನ ಫಸ್ಟ್ ಲುಕ್ ನೋಡಲು ಕಾತುರತೆಯಿಂದ ಕಾಯುತ್ತಿದ್ದ ಸಮಯ ಕೊನೆಗೂ ಬಂದೊದಗಿದೆ. ವಲಿಮೈ ಚಿತ್ರವನ್ನು ಎಚ್. ವಿನೋತ್ ನಿರ್ದೇಶಿಸುತ್ತಿದ್ದು, ಹಿಂದಿಯ ಬೋನಿ ಕಪೂರ್ ಚಿತ್ರದ ನಿರ್ಮಾಪಕರು ಆಗಿದ್ದಾರೆ ಎಂದು ಚಿತ್ರತಂಡವು ಹೇಳಿದೆ. ಈ ಮೋಷನ್ ಪೋಸ್ಟರ್ ನಲ್ಲಿ ಅಜಿತ್ ಪೊಲೀಸ್ ಅಧಿಕಾರಿಯಾಗಿ ಅನೇಕ ಕೆಟ್ಟ ಜನರ ಜೊತೆಗೆ ಒಂಟಿಯಾಗಿ ಹೋರಾಡುವಂತಹ ಪಾತ್ರವನ್ನು ಫಸ್ಟ್ ಲುಕ್ನಲ್ಲಿ ತೋರಿಸಿದ್ದಾರೆ.
ಮೋಷನ್ ಪೋಸ್ಟರ್ ನಲ್ಲಿ ಹಾಗೆಯೇ ಸಂಗೀತದ ಜೊತೆಗೆ "ಪವರ್ ಈಸ್ ಸ್ಟೇಟ್ ಆಫ್ ಮೈಂಡ್" ಎಂದು ಬರೆದಿದ್ದಾರೆ. ಈ ಮೋಷನ್ ಪೋಸ್ಟರ್ನಲ್ಲಿ ಅಜಿತ್ರನ್ನು ತುಂಬಾ ಚೆನ್ನಾಗಿ ತೋರಿಸಲಾಗಿದ್ದು ಅಭಿಮಾನಿಗಳಿಗೆ ಇಷ್ಟು ದಿನ ಕಾತುರತೆಯಿಂದ ಎದುರು ನೋಡಿದ್ದು ಸಾರ್ಥಕ ಎನಿಸುವಂತಿದೆ.
1 ನಿಮಿಷ 23 ಸೆಕೆಂಡುಗಳ ಮೋಷನ್ ಪೋಸ್ಟರ್ನಲ್ಲಿ ಅಜಿತ್ ಸ್ಪೋರ್ಟ್ಸ್ ಬೈಕ್ ಚಲಾಯಿಸುತ್ತಿರುವುದಾಗಿ ಹಾಗೂ ಅನೇಕರ ವಿರುದ್ಧ ಹೋರಾಡುವಂತಹ ಪೊಲೀಸ್ ಅಧಿಕಾರಿಯಾಗಿ ಅಭನಯಿಸಿದ್ದಾರೆ. ಚಿತ್ರ 2021ರಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಹೇಳಿದ್ದರೂ, ದಿನಾಂಕವನ್ನು ಎಲ್ಲಿಯೂ ಬಾಯಿ ಬಿಟ್ಟಿಲ್ಲ. ಆದರೆ, ಚಿತ್ರಮಂದಿರದಲ್ಲಿಯೇ ಬಿಡುಗಡೆಗೊಳಿಸುವುದಾಗಿ ಹೇಳಿದ್ದಾರೆ.
ಇದಲ್ಲದೇ ಚಿತ್ರತಂಡವು ವಲಿಮೈ ಚಿತ್ರದ ನಾಲ್ಕು ವಿಭಿನ್ನವಾದಂತಹ ಪೋಸ್ಟರ್ಗಳನ್ನೂ ಬಿಡುಗಡೆ ಮಾಡಿದ್ದು, ಅದರಲ್ಲಿ ಅಜಿತ್ ರನ್ನು ನಾಲ್ಕು ವಿಭಿನ್ನ ರೀತಿಯಲ್ಲಿ ತೋರಿಸಿರುವುದು ವಿಶೇಷವಾಗಿದೆ.
ಚಿತ್ರದ ಪೋಸ್ಟರ್ಗಳನ್ನು ನಿರ್ಮಾಪಕರಾದ ಬೋನಿ ಕಪೂರ್, ಮಗ ಅರ್ಜುನ್ ಕಪೂರ್ ಮತ್ತು ಸಹೋದರ ಅನಿಲ್ ಕಪೂರ್ ಸಹ ಶೇರ್ ಮಾಡಿಕೊಂಡಿದ್ದು, ಅನಿಲ್ ಕಪೂರ್ "ವಲಿಮೈ ಫಸ್ಟ್ ಲುಕ್ ಈಸ್ ಅಮೇಜಿಂಗ್" ಎಂದು ಬರೆದಿದ್ದಾರೆ. ಮಗ ಅರ್ಜುನ್ ಕಪೂರ್ ಸಹ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದು "ಸೂಪರ್ ಎಕ್ಸೈಟೆಡ್ ಫಾರ್ ತಲಾ ಅಜಿತ್ ಸರ್ ಅವರ ನೆಕ್ಸ್ಟ್ ವಿಥ್ ಡ್ಯಾಡ್ ಆಂಡ್ ವಿನೋತ್.. ದ ವಿನ್ನಿಂಗ್ ಕಾಂಬೋ ಈಸ್ ಬ್ಯಾಕ್ ಅಂಡ್ ಹೌ!!!" ಎಂದು ಬರೆದಿದ್ದಾರೆ.
ಮೊದಲಿಗೆ ಈ ಫಸ್ಟ್ ಲುಕ್ ಅನ್ನು ಮೇ 1 ರಂದು ಅಜಿತ್ ಅವರ 50ನೆಯ ಹುಟ್ಟುಹಬ್ಬದಂದು ಬಿಡುಗಡೆ ಮಾಡಲು ನಿರ್ಧರಿಸಿತ್ತು. ಆದರೆ, ಕೋವಿಡ್-19 ಎರಡನೆಯ ಅಲೆಯು ಅಪ್ಪಳಿಸಿ ಸುಮಾರು ಜನರಿಗೆ ತುಂಬಾ ನಷ್ಟವನ್ನು ಉಂಟು ಮಾಡಿತು ಮತ್ತು ಅನೇಕರು ತಮ್ಮ ಕೆಲಸಗಳನ್ನು ಸಹ ಕಳೆದುಕೊಂಡು ಪರದಾಡುವ ಕೆಟ್ಟ ಸಮಯ ಬರುತ್ತದೆಯೆಂದು ನಾವು ಊಹಿಸಿರಲಿಲ್ಲ. ಹಾಗಾಗಿ ಇದರ ಬಿಡುಗಡೆಯನ್ನು ಮುಂದೂಡಲಾಗಿತ್ತು ಎಂದು ಬೋನಿ ಕಪೂರ್ ಹೇಳುತ್ತಾರೆ.
ನಟ ಅಜಿತ್ ಸಹ ತಮ್ಮ ಅಭಿಮಾನಿಗಳಿಗೆ ಸ್ವಲ್ಪ ತಾಳ್ಮೆಯಿಂದ ಇರುವಂತೆ ಕೋರಿದ್ದಾರೆ ಮತ್ತು ಸಿನಿಮಾ ನಿಮಗೆ ಮನೋರಂಜನೆ, ಆದರೆ ನನಗೆ ಇದೊಂದು ವೃತ್ತಿ ಎಂದು ಹೇಳಿದ್ದಾರೆ. ನಾವು ಯಾವುದೇ ಚಿತ್ರ ಮಾಡುತ್ತಿದ್ದರೆ ಅದು ಸಮಾಜಕ್ಕೆ ಒಳ್ಳೆಯದಾಗಬೇಕು ಮತ್ತು ನಮ್ಮ ಕೆಲಸಗಳೇ ನಮ್ಮ ಗೌರವವನ್ನು ನಿರ್ಧರಿಸುತ್ತವೆ" ಎಂದು ಬರೆದಿದ್ದಾರೆ. ಹುಮಾ ಖುರೇಷಿ ಮತ್ತು ಕಾರ್ತಿಕೇಯ ಗುಮ್ಮಕೊಂಡ ಸಹ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ