ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಪ್ರೇಮಿಗಳ ದಿನಾಚರಣೆಯಂದು ತಮ್ಮ ಮುಂದಿನ ಚಿತ್ರವನ್ನು ಘೋಷಣೆ ಮಾಡಿದ್ದಾರೆ.
‘ಒಂದು ಮೊಟ್ಟೆಯ ಕಥೆ‘ ಸಿನಿಮಾದ ಯಶಸ್ಸಿನ ನಂತರ ರಾಜ್ ಬಿ ಶೆಟ್ಟಿ ಅವರು ರಿಷಭ್ ಶೆಟ್ಟಿ ನಿರ್ದೇಶನದ ಸ.ಹಿ.ಪ್ರಾ. ಶಾಲೆ ಸಿನಿಮಾದಲ್ಲಿ ನಟಿಸಿದ್ದರು. ಇದಾದ ನಂತರ ‘ಅಮ್ಮಚ್ಚಿ ಎಂಬ ಸವಿನೆನೆಪು‘, ‘ಮಹಿರಾ‘, ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ‘, ‘ಕಥಾ ಸಂಗಮ‘ದಲ್ಲಿ ಅಭಿನಯಿಸಿದ್ದರು.
ಆದರೆ ಇದೀಗ ಹೊಸ ಸಿನಿಮಾವೊಂದನ್ನು ರಾಜ್ ಬಿ ಶೆಟ್ಟಿ ಕೈಗೆತ್ತಿಕೊಂಡಿದ್ದಾರೆ. ಸದ್ದಿಲ್ಲದೆ ಈ ಸಿನಿಮಾದ ಶೂಟಿಂಗ್ ಕೂಡ ಮುಗಿಸಿದ್ದಾರೆ. ಪ್ರೇಮಿಗಳ ದಿನದಂದು ಹೊಸ ಸಿನಿಮಾದ ಹೆಸರಿನ ಜೊತೆಗೆ ಫಸ್ಟ್ ಲುಕ್ ಅನ್ನು ಪ್ರೇಕ್ಷಕರೆದುರು ತೆರೆದಿಟ್ಟಿದ್ದಾರೆ. ನೂತನ ಸಿನಿಮಾ ಹೆಸರೇನು ಗೊತ್ತಾ?
‘ಗರುಡ ಗಮನ ವೃಷಭ ವಾಹನ‘
ರಾಜ್ ಬಿ ಶೆಟ್ಟಿ ಅವರ ಮುಂದಿನ ಸಿನಿಮಾದ ಹೆಸರು ‘ಗರುಡ ಗಮನ ವೃಷಭ ವಾಹನ‘. ಈ ಸಿನಿಮಾದಲ್ಲಿ ನಿರ್ದೇಶನದ ಜೊತೆಗೆ ಮುಖ್ಯ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ನಿರ್ದೇಶಕ ರಿಷಭ್ ಶೆಟ್ಟಿ ಕೂಡ ಈ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇನ್ನು ಬಿಡುಗಡೆಗೊಂಡ ಸಿನಿಮಾದ ಪಸ್ಟ್ ಲುಕ್ ಪೋಸ್ಟರ್ ಭಾರೀ ಕುತೂಹಲದಿಂದ ಕೂಡಿದೆ. ಪೋಸ್ಟರ್ನಲ್ಲಿ ರಾಜ್ ಬಿ ಶೆಟ್ಟಿ ಮತ್ತು ರಿಷಭ್ ಶೆಟ್ಟಿ ಅವರ ಅರ್ಧ ಮುಖವನ್ನು ತೋರಿಸಲಾಗಿದೆ. ಅದರಲ್ಲಿ ರಾಜ್ ಬಿ ಶೆಟ್ಟಿ ಖಡಕ್ ಲುಕ್ ನೀಡಿದ್ದಾರೆ.
ಇದನ್ನೂ ಓದಿ: Love Story: ಟ್ರೈನ್ನಲ್ಲೇ ಕಿಸ್ ಮಾಡಿದ್ರು ರೌಡಿ ಬೇಬಿ; ಸಾಯಿ ಪಲ್ಲವಿ ‘ಲವ್ ಸ್ಟೋರಿ‘ ಹೇಗಿದೆ ಗೊತ್ತಾ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ