Love Story: ಟ್ರೈನ್​​ನಲ್ಲೇ ಕಿಸ್ ಮಾಡಿದ್ರು ರೌಡಿ ಬೇಬಿ; ಸಾಯಿ ಪಲ್ಲವಿ ‘ಲವ್ ಸ್ಟೋರಿ‘ ಹೇಗಿದೆ ಗೊತ್ತಾ?

Love Story: ಸಾಯಿ ಪಲ್ಲವಿ ಮತ್ತು ನಾಗಚೈತ್ಯತ ಅವರ ಈ ಮುದ್ದಾದ ‘ಲವ್​ ಸ್ಟೋರಿ‘ ಟೀಸರ್​ ನೋಡಿದ ಅಭಿಮಾನಿಗಳಿಂದ ಮಚ್ಚುಗೆ ವ್ಯಕ್ತವಾಗುತ್ತಿದೆ.

ಸಾಯಿ ಪಲ್ಲವಿ

ಸಾಯಿ ಪಲ್ಲವಿ

 • Share this:
  ತಮಿಳು ಚಿತ್ರನಟಿ ಸಾಯಿ ಪಲ್ಲವಿ ತಮ್ಮ ‘ಲವ್​ ಸ್ಟೋರಿ‘ಯನ್ನು ಬಿಚ್ಚಿಟ್ಟಿದ್ದಾರೆ. ಪ್ರೇಮಿಗಳ ದಿನಾಚರಣೆಯಂದು ಸಾಯಿ ಪಲ್ಲವಿ ತಮ್ಮ ‘ಲವ್​ ಸ್ಟೋರಿ‘ಯನ್ನು ಅಭಿಮಾನಿಗಳ ಮುಂದೆ ಹೇಳಿದ್ದಾರೆ. ಅಭಿಮಾನಿಗಳೂ ಕೂಡ ಈ ‘ಲವ್​ ಸ್ಟೋರಿ‘ ನೋಡಿ ಫಿದಾ ಆಗಿದ್ದಾರೆ. ಅಷ್ಟಕ್ಕೂ ಈ ಸ್ಟೋರಿ ರಿಯಲ್​ ಲೈಫ್​​ ಸ್ಟೋರಿ ಅಲ್ಲಾ … ರೀಲ್​ ಲೈಫ್​ ಲವ್​ ಸ್ಟೋರಿ.

  ಹೌದು. ನಟ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ‘ಲವ್​ ಸ್ಟೋರಿ‘ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಹಾಡುಗಳಿಂದ ಕೂಡಿದ ಟೀಸರ್​ ರಿಲೀಸ್​ ಆಗಿದೆ. ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ಚಿತ್ರತಂಡ ಇವರಿಬ್ಬರ ‘ಲವ್​ ಸ್ಟೋರಿ‘ಯನ್ನು ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದಾರೆ. ಇನ್ನು ಬಿಡುಗಡೆಗೊಂಡ ಟೀಸರ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

  ಸಾಯಿ ಪಲ್ಲವಿ ಮತ್ತು ನಾಗಚೈತ್ಯತ ಅವರ ಈ ಮುದ್ದಾದ ‘ಲವ್​ ಸ್ಟೋರಿ‘ ಟೀಸರ್​ ನೋಡಿದ ಅಭಿಮಾನಿಗಳಿಂದ ಮಚ್ಚುಗೆ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ ಈ ಸಿನಿಮಾ ಯಾವಾಗ ರಿಲೀಸ್​ ಆಗಲಿದೆ ಎಂದು ಅಭಿಮಾನಿಗಳು ನಿರ್ದೇಶಕರ ಬಳಿ ಪ್ರಶ್ನೆ ಮಾಡುತ್ತಿದ್ದಾರಂತೆ.

  ಲವ್​ ಸ್ಟೋರಿ


  ನಿರ್ದೇಶಕ ಶೇಖರ್​​ ಕಮ್ಮುಲಾ ಸಾರಥ್ಯದಲ್ಲಿ ಲವ್​ ಸ್ಟೋರಿ ಸಿನಿಮಾ ಮೂಡಿ ಬರುತ್ತಿದೆ. ಈ ಹಿಂದೆ ಸಾಯಿ ಪಲ್ಲವಿ ಅವರನ್ನು ಹಾಕಿಕೊಂಡು ಶೇಖರ್​ ಕಮ್ಮುಲಾ ಫಿದಾ ಸಿನಿಮಾ ಮಾಡಿದ್ದರು. ಇದೀಗ ‘ಲವ್​ ಸ್ಟೋರಿ‘ ಮೂಲಕ ಆ್ಯಕ್ಷನ್​ ಕಟ್ಟ್ ಹೇಳುತ್ತಿದ್ದಾರೆ.

  ಇದನ್ನೂ ಓದಿ: ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆಯಾ ರಾಬರ್ಟ್? ಅಭಿಮಾನಿಗಳ ಪ್ರಶ್ನೆಗೆ ತರುಣ್​ ಸುಧೀರ್​ ಕೊಟ್ರು ಉತ್ತರ!   
  First published: