HOME » NEWS » Entertainment » VAISHNAVI GOWDA WARNED CHAKRAVARTHI CHANDRACHUD FOR MAKING WRONG STATEMENT ABOUT HER AND RAGHUS FRIENDSHIP AE

Bigg Boss 8: ಚಕ್ರವರ್ತಿ ಚಂದ್ರಚೂಡರನ್ನು ತರಾಟೆಗೆ ತೆಗೆದುಕೊಂಡ ವೈಷ್ಣವಿ ಗೌಡ: ಅಷ್ಟಕ್ಕೂ ಆಗಿದ್ದೇನು ಗೊತ್ತಾ..!

ಸದಾ ಸೈಲೆಂಟ್​ ಆಗಿರುವ ವೈಷ್ಣವಿ ಈಗ ಕೊಂಚ ತಾಳ್ಮೆ ಕಳೆದುಕೊಂಡಂತೆ ಕಾಣುತ್ತಿದೆ. ಮಾತು ಜಾರಿದ ಚಕ್ರವರ್ತಿ ಚಂದ್ರಚೂಡ ಅವರಿಗೆ ಈ ಯೋಗ ಟೀಚರ್ ಸರಿಯಾಗಿಯೇ ಕ್ಲಾಸ್​ ತೆಗೆದುಕೊಂಡಿದ್ದಾರೆ.

Anitha E | news18-kannada
Updated:June 24, 2021, 8:35 PM IST
Bigg Boss 8: ಚಕ್ರವರ್ತಿ ಚಂದ್ರಚೂಡರನ್ನು ತರಾಟೆಗೆ ತೆಗೆದುಕೊಂಡ ವೈಷ್ಣವಿ ಗೌಡ: ಅಷ್ಟಕ್ಕೂ ಆಗಿದ್ದೇನು ಗೊತ್ತಾ..!
ವೈಷ್ಣವಿ ಗೌಡ ಹಾಗೂ ಚಕ್ರವರ್ತಿ ಚಂದ್ರಚೂಡ
  • Share this:
ಕಿರುತೆರೆಯಲ್ಲಿ ಸನ್ನಿಧಿ ಪಾತ್ರಧಾರಿಯಾಗಿ ಖ್ಯಾತಿ ಪಡೆದಿರುವ ವೈಷ್ಣವಿ ಗೌಡ ತಾಳ್ಮೆ ಹಾಗೂ ಮೃದು ಭಾಷಿಯಾಗಿಯೇ ಬಿಗ್ ಬಾಸ್​ ಮನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್​ ಮನೆಯಲ್ಲಿ ತಾಳ್ಮೆ ಕಳೆದುಕೊಂಡು ಸಿಟ್ಟಿನಿಂದ ವರ್ತಿಸಿದ್ದನ್ನು ಎಣಿಸಿ ಹೇಳಬಹುದಷ್ಟೆ. ಇಂತಹ ಸೌಮ್ಯ ಸ್ವಭಾವದ ವೈಷ್ಣವಿ ಮತ್ತೆ ಬಿಗ್ ಬಾಸ್​ 8ರ ಸೆಕೆಂಡ್​ ಇನ್ನಿಂಗ್ಸ್​​ಗೆ ಮತ್ತೆ ಕಾಲಿಟ್ಟಿದ್ದಾರೆ. ಮನೆಗೆ ಕಾಲಿಟ್ಟ ಕೂಡಲೇ ಕೊಟ್ಟ ಟಾಸ್ಕ್​ನಲ್ಲಿ ಗೆಲ್ಲುವ ಮೂಲಕ ಆಟಕ್ಕೆ ಕಿಕ್​ ಸ್ಟಾರ್ಟ್​ ಕೊಟ್ಟ ಈ ಯೋಗ ಟೀಚರ್ ಸದ್ಯ ಮನೆಯಲ್ಲಿ ಮೊದಲ ದಿನವೇ ತಮ್ಮ ಮನಸ್ಸಿನಲ್ಲಿರುವ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಯಾರ ಮೇಲೆ ಬೇಸರ ಇದ್ದರೂ ವೈಷ್ಣವಿ ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಸಾಧಿಸುವುದಿಲ್ಲ. ಎಲ್ಲವನ್ನೂ ಎದುರೇ ಹೇಳಿ  ಸುಮ್ಮನಾಗುವ ಅವರು ಈಗ ಮನೆಯಲ್ಲಿ ಒಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ನಿನ್ನೆ ನಡೆದ ನಾಮಿನೇಷನ್​ ಪ್ರಕ್ರಿಯೆಯಲ್ಲೇ ವೈಷ್ಣವಿ ಒಂದು ಮಾತು ಹೇಳಿದ್ದರು. ಯಾರ ಬಗ್ಗೆ ಏನಾದರೂ ಮಾತನಾಡುವ ಮುನ್ನ ಅವರಿಗೂ ಕುಟುಂಬ ಇರುತ್ತದೆ ಅನ್ನೋದನ್ನು ನೆನಪಿನಲ್ಲಿಟ್ಟುಕೊಂಡು ಮಾತನಾಡಿ ಎಂದಿದ್ದರು. ಅದಕ್ಕೆ ಕಾರಣ, ನಿನ್ನೆ ನಾಮಿನೇಟ್ ಮಾಡುವಾಗ ವೈಷ್ಣವಿ ಚಕ್ರವರ್ತಿ ಚಂದ್ರಚೂಡ ಅವರನ್ನು ನಾಮಿನೇಟ್ ಮಾಡುವಾಗ ಈ ಮಾತನ್ನು ಹೇಳಿದ್ದರು.

ವೈಷ್ಣವಿ ಆಗ ಆ ಮಾತನ್ನು ಹೇಳಿದ್ದಕ್ಕೆ ಕಾರಣ ಸಾಕಷ್ಟು ಮಂದಿಗೆ ತಿಳಿದಿರಲಿಲ್ಲ. ಆದರೆ ಈಗ ಮನೆಯಲ್ಲಿ ಈ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಹೌದು, ಚಕ್ರವರ್ತಿ ಅವರು ಮಾತನಾಡಿರುವ ವಿಡಿಯೋ ಒಂದನ್ನು ನೋಡಿದ್ದಾರಂತೆ ವೈಷ್ಣವಿ. ಆ ವಿಡಿಯೋದಲ್ಲಿ ಚಕ್ರವರ್ತಿಯವರು ಮನೆಯಲ್ಲಿ ಮೂರು ಜೋಡಿಗಳಿದ್ದಾರೆ, ನಾನೇ ಅವರಿಗೆ ತಾಳಿ ತಂದು ಕೊಡುತ್ತಿದ್ದೆ ಎಂದು ಚಕ್ರವರ್ತಿ ಹೇಳಿದ್ದಾರಂತೆ. ಈ ಕುರಿತಾಗಿ ಮಾತನಾಡಿರುವ ವೈಷ್ಣವಿ, ಏನೇ ಮಾತನಾಡು ಮೊದಲು ನಮಗೂ ಕುಟುಂಬ ಇದೆ ಅನ್ನೋದನ್ನು ಮರೆಯಬೇಡಿ ಎಂದು ಕ್ಲಾಸ್​ ತೆಗೆದುಕೊಂಡಿದ್ದಾರೆ.
ಅಷ್ಟೇ ಅಲ್ಲ ಚಕ್ರವರ್ತಿ ಅವರು ತಾನು ಹಾಗೆ ಹೇಳಿಯೇ ಇಲ್ಲ ಎಂದು ವಾದಿಸುವಾಗ, ವೈಷ್ಣವಿ ನಾನು ಯಾರ ಜೊತೆ ಮಾತನಾಡಿದರೂ ಅವರೊಂದಿಗೆ ಸಂಬಂಧ ಇದೆ ಎಂದರ್ಥನಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ಚಕ್ರವರ್ತಿ ನಾನು ಹಾಗೆ ಯಾರೊಂದಿಗೂ ವರ್ತಿಸುವುದಿಲ್ಲ ಎಂದು ಮತ್ತೆ ವೈಷ್ಣವಿ ಅವರ ಸಿಟ್ಟನ್ನು ಕೆಣಕಿದ್ದಾರೆ.

ಇದನ್ನೂ ಓದಿ: Bigg Boss 8 Nomination: ಮೊದಲ ದಿನವೇ ನಾಮಿನೇಟ್​ ಆದ ದಿವ್ಯಾ ಸುರೇಶ್​-ಮಂಜು: ಟಾರ್ಗೆಟ್​ ಮಾಡಿದ್ರಾ ಅರವಿಂದ್​-ದಿವ್ಯಾ ಉರುಡುಗ..!

ವೈಷ್ಣವಿ ಹಾಗೂ ರಘು ನಡುವೆ ಇರುವ ಸ್ನೇಹಕ್ಕೆ ಬೇರೆಯದ್ದೇ ಅರ್ಥ ಕೊಟ್ಟು ಮಾತನಾಡಿದ್ದಾರೆ ಎಂದು ವೈಷ್ಣವಿ ಸಿಟ್ಟಿಗೆದಿದ್ದಾರೆ. ವೈಷ್ಣವಿ ಹಾಗೂ ಚಕ್ರವರ್ತಿ ಚಂದ್ರಚೂಡ ಅವರ ಈ ಖಾರವಾದ ಮಾತುಕತೆಯಾವ ಹಂತ ತಲುಪಲಿದೆ ಅನ್ನೋದು ಇಂದು ರಾತ್ರಿ ಪ್ರಸಾರವಾಗಲಿರುವ ಸಂಚಿಕೆಯಲ್ಲಿ ತಿಳಿಯಲಿದೆ.

ರಘು ಗೌಡ ಕಿವಿಗೆ ಹೂವಿಟ್ಟ ಸ್ಪರ್ಧಿಗಳು

ಬಿಗ್ ಬಾಸ್​ ಮನೆಯಲ್ಲಿ ಈಗ ಹೊಸ ಟಾಸ್ಕ್​ ನೀಡಲಾಗಿದ್ದು, ಮನೆಯಲ್ಲಿ ಒಂದು ಗುಲಾಬಿ ಹೂ, ಹುಂಡಿ ಹಾಗೂ ಬಾಕ್ಸಿಂಗ್​ ಗ್ಲೌಸ್ ಅನ್ನು ನೀಡಲಾಗಿದೆ. ಈ ಹೂವನ್ನು ತಂದು ರಘು ಅವರ ಕೈಗೆ ಕೊಟ್ಟು ಯಾರಿಗಾದರೂ ಕೊಡಿ ಎಂದು ಇತರೆ ಸ್ಪರ್ಧಿಗಳು ಹೇಳುತ್ತಾರೆ. ಆದ ರಘು ಅದನ್ನು ವೈಷ್ಣವಿ ಅವರಿಗೆ ನೀಡುತ್ತೇನೆ ಎನ್ನುತ್ತಾರೆ. ಆದರೆ ಪ್ರಶಾಂತ್​ ಸಂಬರಗಿ ಮಾತ್ರ ಅದಕ್ಕೆ ಅಡ್ಡಿ ಮಾಡುವಂತೆ ಮಾತನಾಡುತ್ತಾರೆ. ಆಗ ರೇಗುವ ರಘು ನಮಗೂ ವಾಯ್ಸ್​ ಏರಿಸೋಕೆ ಬರುತ್ತೆ ಎನ್ನುತ್ತಾರೆ. ಆದರೆ ಇದಕ್ಕಿದ್ದಂತೆಯೇ ಮನೆಯವರೆಲ್ಲ ಸೇರಿ ಜೋರಾಗಿ ನಗುತ್ತಾರೆ. ಆಗಲೇ ತಿಳಿಯೋದು ರಘು ಅವರಿಗೆ ಹೂ ಕೊಟ್ಟ ಮನೆಯವರು ಅವರನ್ನು ಮಂಗ ಮಾಡಿದ್ದಾರೆ ಅಂತ.
ಆದರೆ, ನಿಜಕ್ಕೂ ಈ ಟಾಸ್ಕ್​ ಆದರೂ ಏನು. ಆ ಮೂರು ವಸ್ತುಗಳನ್ನು ಬಿಗ್​ ಬಾಸ್​ ಏತಕ್ಕಾಗಿ ನೀಡಿದ್ದಾರೆ ಅದನ್ನೋದು ಇನ್ನೇನು ಕೆಲವೇ ಗಂಟೆಗಳಲ್ಲಿ ಪ್ರಸಾರವಾಗಲಿರುವ ಸಂಚಿಕೆಯಿಂದ ತಿಳಿಯಲಿದೆ.
Published by: Anitha E
First published: June 24, 2021, 8:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories