ಅಗ್ನಿಸಾಕ್ಷಿ ಧಾರಾವಾಹಿ (Serial) ಖ್ಯಾತಿಯ ನಟಿ ವೈಷ್ಣವಿ ಗೌಡ (Vaishnavi Gowda) ಅವರ ಮದುವೆ (Marriage) ವಿಚಾರ ದೊಡ್ಡಮಟ್ಟದಲ್ಲಿ ಚರ್ಚೆಯಾಗಿದೆ. ನಟಿಯ ನಿಶ್ಚಿತಾರ್ಥ, ಮದುವೆ, ಮದುವೆಯಾಗುವ ಹುಡುಗ, ಆಡಿಯೋ ಲೀಕ್, ಆರೋಪ, ಕೇಸ್ ಎಂಬೆಲ್ಲ ವಿಚಾರಗಳು ಬಂದು ದೊಡ್ಡ ಸುದ್ದಿಯಾಗಿದೆ. ಈ ವಿಚಾರ ಸಾಕಷ್ಟು ಚರ್ಚೆಯಾಗಿದ್ದು ಈಗ ನಟಿ ಹೊಸದೊಂದು ವಿಡಿಯೋವನ್ನು (Video) ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ವೈಷ್ಣವಿ ಅವರು ಮೊದಲಬಾರಿಗೆ ಈಗ ಟ್ಯಾಟೂ (Tattoo) ಹಾಕಿಸಿಕೊಂಡಿದ್ದಾರೆ. ಅದರ ವಿಡಿಯೋವನ್ನು ಅವರು ಫ್ಯಾನ್ಸ್ (Fans) ಜೊತೆ ಶೇರ್ ಮಾಡಿದ್ದಾರೆ.
ಟ್ಯಾಟೂ ಹಾಕಿಸಿಕೊಂಡ ನಟಿ
ನಟಿ ವೈಷ್ಣವಿ ಗೌಡ ಅವರು ಮೊದಲ ಬಾರಿಗೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಟ್ಯಾಟೂ ನಟಿ ತಮ್ಮ ಎಡಗೈಗೆ ಹಾಕಿಸಿಕೊಂಡಿದ್ದು ಟ್ಯಾಟೂ ಹಾಕಿಸಿಕೊಂಡ ಫೊಟೋ, ವಿಡಿಯೋ ಕ್ಲಿಪ್ ಎಲ್ಲವನ್ನೂ ಸೇರಿಸಿಕೊಂಡು ಒಂದು ವಿಡಿಯೋ ಮಾಡಿದ್ದಾರೆ.
ನಟಿ ಪೋಸ್ಟ್ ಜೊತೆ ಏನು ಬರೆದಿದ್ದಾರೆ?
ನಟಿ ವಿಡಿಯೋ ಜೊತೆ ಇದು ತಮ್ಮ ಮೊದಲ ಟ್ಯಾಟೂ ಎಂದು ಕ್ಯಾಪ್ಶನ್ ಬರೆದಿದ್ದಾರೆ. ಅದೇ ರೀತಿ ತಾವು ಹಾಕಿಸಿಕೊಂಡ ಟ್ಯಾಟೂ ಅರ್ಥವನ್ನೂ ತಿಳಿಸಿದ್ದಾರೆ. ದಿ ರೈಸಿಂಗ್ ವುಮೆನ್ ಸಿಂಬಲ್ ಎನ್ನುವುದು ನಟಿ ಹಾಕಿಸಿಕೊಂಡ ಟ್ಯಾಟೂ ಅರ್ಥ. ಇದನ್ನು ಕ್ಯಾಪ್ಶನ್ನಲ್ಲಿಯೇ ರಿವೀಲ್ ಮಾಡಿದ್ದಾರೆ.
View this post on Instagram
ಇದನ್ನೂ ಓದಿ: Vaishnavi Gowda: ಎಲ್ಲಾ ಮೊದಲೇ ಗೊತ್ತಾಗಿದ್ದು ಒಳ್ಳೇದಾಯ್ತು ಎಂದ ನಟಿ ವೈಷ್ಣವಿ! ಮದುವೆ ಕ್ಯಾನ್ಸಲ್
ಟ್ಯಾಟೂ ವಿಡಿಯೋ ವೈರಲ್
ನಟಿಯ ವಿಡಿಯೋಗೆ 20 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 72 ಮಂದಿ ವಿಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಗಳು ವಿಡಿಯೋಗೆ ನೈಸ್, ಡೋಂಟ್ ವರಿ ವೈಶೂ ಎಂದು ಕಾಮೆಂಟ್ ಮಾಡಿದ್ದಾರೆ. ವಿಡಿಯೋ ನೋಡಿ ಅಭಿಮಾನಿಗಳು ಎಲ್ಲವೂ ಸರಿಯಾಗುತ್ತದೆ ಎಂದು ಧೈರ್ಯ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ