• Home
  • »
  • News
  • »
  • entertainment
  • »
  • Vaishnavi Gowda: ವಿದ್ಯಾಭರಣ್ ವಿರುದ್ಧ ಯುವತಿಯಿಂದ ಆರೋಪ, ಗರ್ಲ್​ಫ್ರೆಂಡ್ ಇದ್ದಿದ್ದು ನಿಜ!

Vaishnavi Gowda: ವಿದ್ಯಾಭರಣ್ ವಿರುದ್ಧ ಯುವತಿಯಿಂದ ಆರೋಪ, ಗರ್ಲ್​ಫ್ರೆಂಡ್ ಇದ್ದಿದ್ದು ನಿಜ!

ವೈಷ್ಣವಿ-ವಿದ್ಯಾಭರಣ್

ವೈಷ್ಣವಿ-ವಿದ್ಯಾಭರಣ್

ನಟಿ ವೈಷ್ಣವಿ ಗೌಡ ಅವರ ಎಂಗೇಜ್ಮೆಂಟ್ ವಿಚಾರ ದಿನಕ್ಕೊಂಡು ಟ್ವಿಸ್ಟ್ ಪಡೆಯುತ್ತಿದೆ. ಇನ್ನೂ ಎಂಗೇಜ್ಮೆಂಟ್ ಆಗಿಲ್ಲ ಎಂದು ನಟಿ ಹೇಳಿದ್ರೆ ನನಗೆ ಗರ್ಲ್​ಫ್ರೆಂಡ್ ಇದ್ದಿದ್ದು ನಿಜ ಎಂದಿದ್ದಾರೆ ವಿದ್ಯಾಭರಣ್.

  • News18 Kannada
  • Last Updated :
  • Bangalore, India
  • Share this:

ಕಿರುತೆರೆ ನಟಿ ವೈಷ್ಣವಿ ಗೌಡ (Vaishnavi Gowda) ಅವರ ನಿಶ್ಚಿತಾರ್ಥ (Engagement) ನಡೆದಿದೆ ಎನ್ನುವ ವಿಚಾರಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಇದು ನಿಶ್ಚಿತಾರ್ಥ ಅಲ್ಲ. ಜಸ್ಟ್ ಕುಟುಂಬದವರು ಮಾತನಾಡಿದ್ದಾರೆ ಅಷ್ಟೇ ಎಂದು ಅಗ್ನಿಸಾಕ್ಷಿ ನಟಿ (Actress) ವೈಷ್ಣವಿ ಗೌಡ ಅವರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದರೂ ಈ ಘಟನೆ ಸುತ್ತ ಮತ್ತಷ್ಟು ಅಪ್ಡೇಟ್​ಗಳು ಕೇಳಿ ಬರುತ್ತಿವೆ. ಈ ಹಿಂದೆ ಸಿನಿಮಾ ಒಂದರಲ್ಲಿ ನಟಿಸಿದ್ದ ವಿದ್ಯಾಭರಣ್ (Vidyabharan) ಅವರ ಜೊತೆ ವೈಷ್ಣವಿ ಗೌಡ ನಿಶ್ಚಿತಾರ್ಥ ಆಗಿದೆ ಎನ್ನುವುದು ವೈರಲ್ ಆದ ಸುದ್ದಿ. ಆದರೆ ಇದು ಕೇವಲ ತಾಂಬೂಲ ಬದಲಾಯಿಸಿದ್ದು ಮಾತ್ರ, ಎಂಗೇಜ್ಮೆಂಟ್ ಅಲ್ಲ ಎಂದು ನಟಿ ಹೇಳಿದ್ದಾರೆ. ಈಗ ಮತ್ತೊಂದು ವಿವಾದ ಶುರುವಾಗಿದ್ದು ವಿದ್ಯಾಭರಣ್ ಅವರ ಮಾಜಿ ಗರ್ಲ್​ಫ್ರೆಂಡ್ ಚರ್ಚೆ ಶುರುವಾಗಿದೆ. ಅದೇ ರೀತಿ ಕುಟುಂಬಸ್ಥರಷ್ಟೇ ಇದ್ದ ಕಾರ್ಯಕ್ರಮದಿಂದ ಫೋಟೋ ಲೀಕ್ ಆಗಿದ್ದು ಹೇಗೆ ಎನ್ನುವುದು ಕೂಡಾ ಚರ್ಚೆಯಾಗಿದೆ.


ಯುವತಿಯ ಆಡಿಯೋ ವೈರಲ್


ನಟಿ ವೈಷ್ಣವಿ ಗೌಡ ಮತ್ತು ವಿದ್ಯಾಭರಣ್ ನಿಶ್ಚಿತಾರ್ಥ ಎಂದು ಪೋಟೊ ವೈರಲ್ ಆದ ವಿಚಾರವಾಗಿ ಪ್ರತಿಕ್ರಿಯಿಸಿದ ವಿದ್ಯಾಭರಣ್ ಮೇಲೆ ಮತ್ತೊಬ್ಬ ಯುವತಿ ಆರೋಪ ಮಾಡಿದ್ದಾರೆ. ಆಡಿಯೋ ವೈರಲ್ ಅಗ್ತಿದ್ದಂತೆ ನಟ ವಿದ್ಯಾಭರಣ್ ಸ್ಪಷ್ಟನೆ ಕೊಟ್ಟಿದ್ದು, ವೈಷ್ಣವಿ ಜೊತೆಗೆ ನನ್ನ ನಿಶ್ಚಿತಾರ್ಥ ನಡೆದಿಲ್ಲ. ಎರಡು ಕುಟುಂಬದ ನಡುವೆ ಕೇವಲ ಮಾತುಕತೆಯಾಗಿ 10 ದಿನವಾಗಿದೆ ಎಂದಿದ್ದಾರೆ.




ಫೋಟೋ ವೈರಲ್ ಆಗಿದ್ದು ಎಲ್ಲಿಂದ?


ನಾವಿನ್ನೂ ಒಬ್ಬರಿಗೊಬ್ಬರು ಮಾತನಾಡಿಲ್ಲ. ಅದರೆ ಈ ಪೋಟೋ ಎಲ್ಲಿಂದ ವೈರಲ್ ಅಗಿದೆ ಅನ್ನೋದು ಗೊತ್ತಿಲ್ಲ. ನಮ್ಮ ಕುಟುಂಬದ ವರ್ಚಸ್ಸನ್ನ ಹಾಳು ಮಾಡಲು ಹಿತಶತ್ರುಗಳು ಮುಂದಾಗಿದ್ದಾರೆ. ನಾನು ಯಾವುದೇ ಹುಡುಗಿಯರೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ: Actress Vaishnavi Gowda: 'ಅಗ್ನಿಸಾಕ್ಷಿ'ಯಾಗಿ ಮದುವೆ ಆಗಲು ರೆಡಿಯಾದ್ರಾ ವೈಷ್ಣವಿ? ಹುಡುಗ ಇವರೇನಾ?


ನೇರವಾಗಿ ಬಂದು ಆರೋಪ ಮಾಡ್ಬೇಕಿತ್ತು!


ನನಗೆ ಈ ಹಿಂದೆ ಗರ್ಲ್ ಫ್ರೆಂಡ್ ಇದ್ದಿದ್ದು ನಿಜ. ನನ್ನ ಫ್ರೆಂಡ್ ಸರ್ಕಲ್ ಗೂ ಗೊತ್ತಿತ್ತು. ಆದರೆ ಅವರೆಲ್ಲಾ ಇಷ್ಟು ಕೀಳುಮಟ್ಟಕ್ಕೆ ಇಳಿಯೋದಿಲ್ಲ. ಆಕೆ ನೇರವಾಗಿ ಬಂದು ಆರೋಪವನ್ನ ಮಾಡಬಹುದಿತ್ತು. ನನ್ನ ಮೊದಲ ಫಿಲ್ಮ್ ಬಂದಾಗಲೇ ಇವರು ಆರೋಪ ಮಾಡಬಹುದಿತ್ತು ಎಂದಿದ್ದಾರೆ.




ಹೆಸರು ಹೇಳಲು ಧೈರ್ಯವಿಲ್ಲದಿರುವ ಅಕೆ ಆರೋಪ ಮಾಡುತ್ತಿದ್ದಾಳೆ. ನಾಳೆ ಕಮೀಷನರ್ ಗೆ ದೂರು ನೀಡುತ್ತೇನೆ. ನನ್ನ ಮೇಲೆ ಇಷ್ಟೆಲ್ಲ ಆರೋಪ ಮಾಡೋ ಬದಲು ಆಕೆಯೇ ಕಂಪ್ಲೈಂಟ್ ಕೊಡಬಹುದಿತ್ತು. ನಮ್ಮ ಏಳಿಗೆಯನ್ನ ಸಹಿಸಲು ಸಾಧ್ಯವಾಗದೇ ಇರೋ ಹಿತ ಶತ್ರುಗಳು ಇದನ್ನೆಲ್ಲಾ ಮಾಡ್ತಿದ್ದಾರೆ ಎಂದಿದ್ದಾರೆ.




ಇನ್​ಸ್ಟಾಗ್ರಾಮ್ ಖಾತೆ ಡಿಲೀಟ್


ನಾನು ಇನ್ಸ್ಟಾಗ್ರಾಂ ಅನ್ನ ಮೊದಲೇ ಡಿಲೀಟ್ ಮಾಡಿದ್ದೇನೆ. ನನ್ನ ಇನ್ಸ್ಟಾಗ್ರಾಂ ಹ್ಯಾಕ್ ಅಗಿತ್ತು, ತುಂಬಾ ಹಿಂದೆಯೇ ಡಿಲೀಟ್ ಅಗಿದೆ. ಇಂತಹ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಇವತ್ತು ಬುದ್ಧಿ ಕಲಿಸಿಲ್ಲ ಅಂದ್ರೆ ನಾಳೆ ಇದೇ ರೀತಿ ಸಾಕಷ್ಟು ಜನರಿಗೆ ಅಗುತ್ತೆ ಎಂದಿದ್ದಾರೆ.


Actress Vaishnavi Gowda ready to marriage photo viral in social media
'ಅಗ್ನಿಸಾಕ್ಷಿ'ಯಾಗಿ ಮದುವೆ ಆಗಲು ರೆಡಿಯಾದ್ರಾ ವೈಷ್ಣವಿ?


ಅಪ್ಪ ನನಗೆ ಇದೆಲ್ಲಾ ಕಾಮನ್ ಕಣೋ ಏನೂ ಆಗಲ್ಲ. ನಾನಿದ್ದೀನಿ ಬಿಡು ಎಂದು ಹೇಳಿದ್ದಾರೆ. ವೈಷ್ಣವಿಗೆ ಮಾಧ್ಯಮದ ಮೂಲಕ ಹೇಳಲು ಇಚ್ಛೆ ಪಡೋದೇನಂದ್ರೆ ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ನಾವು ಮುಂದೆ ಮದುವೆ ಆಗ್ತೀವೋ ಇಲ್ವೋ ಗೊತ್ತಿಲ್ಲ. ಕಾಣದ ಹಿತ ಶತ್ರುಗಳು ಈ ರೀತಿ ಮಾಡಿದ್ದಾರೆ ಇದರಿಂದ ಹೊರ ಬರುತ್ತೇನೆ ಎಂದಿದ್ದಾರೆ. ಹೀಗೆ ಹೇಳಿ ತಮ್ಮ ಮೇಲಿನ ಆರೋಪದ ಬಗ್ಗೆ ವಿದ್ಯಾಭರಣ್ ಸ್ಪಷ್ಟನೆ ನೀಡಿದ್ದಾರೆ.

Published by:Divya D
First published: