Vaishnavi Gowda: ರಾ ರಾ ರಕ್ಕಮ್ಮ ಎಂದು ಹೆಜ್ಜೆ ಹಾಕಿದ ವೈಷ್ಣವಿ ಗೌಡ - ಕಾಮೆಂಟ್​ಗಳ ಮಳೆ ಸುರಿಸಿದ ಅಭಿಮಾನಿಗಳು

Kannada serial Actress: ಬ್ಲಾಕ್ ಡ್ರೆಸ್ ಹಾಕಿಕೊಂಡು ಡ್ಯಾನ್ಸ್​ ಮಾಡಿರುವ ಅವರ ಈ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಕ್ರೆಜ್​ ಸೃಷ್ಟಿಸಿದೆ.  ವೈಷ್ಣವಿ ಗೌಡ ಸಾಮಾಜಿಕ ಜಾಲಾತಾಣದಲ್ಲಿ ಹೆಚ್ಚು ಆಕ್ಟೀವ್​ ಇದ್ದು ರೀಲ್ಸ್​ಗಳನ್ನು ಮಾಡಿ ಹಾಕುತ್ತಿರುತ್ತಾರೆ.

ನಟಿ ವೈಷ್ಣವಿ ಗೌಡ

ನಟಿ ವೈಷ್ಣವಿ ಗೌಡ

  • Share this:
ರಾ.ರಾ. ರಕ್ಕಮ್ಮ (Ra Ra rakkamma) ಹಾಡು ಬಹು ನಿರೀಕ್ಷಿತ ವಿಕ್ರಾಂತ್ ರೋಣ (Vikranth Rona)  ಚಿತ್ರದ್ದು. ಕಳೆದ ವಾರವಷ್ಟೇ ಅದರ ಲಿರಿಕಲ್ ವಿಡಿಯೋ (Lyrical Video)  ಬಿಡುಗಡೆಯಾಗಿದೆ. ಇದು ಕಿಚ್ಚನ ಅಭಿಮಾನಿಗಳನ್ನು ಮಾತ್ರವಲ್ಲದೇ, ಸ್ಯಾಂಡಲ್​ವುಡ್​ನಲ್ಲಿಯೇ (Sandalwood) ಕಿಚ್ಚು ಹತ್ತಿಸಿದೆ. ಹಲವಾರು ಸೆಲೆಬ್ರಿಟಿಗಳು ಈ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ.  ಸಾಮಾಜಿಕ ಜಾಲಾತಾಣದಲ್ಲಿ ರೀಲ್ಸ್​ ಮಾಡುವುದು ಒಂದು ಟ್ರೆಂಡ್​ ಆಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳು ಕೂಡ ರೀಲ್ಸ್​ ಮಾಡುತ್ತಾರೆ. ಮೊನ್ನೆಯಷ್ಟೇ ಕಿಚ್ಚ ಸುದೀಪ್ ಜಾಕ್ಲಿನ್​ ಗಾಗಿ ರಕ್ಕಮ್ಮ ಹಾಡಿಗೆ ರೀಲ್ಸ್ ಮಾಡಿದ್ದಾರೆ.  ರಾ..ರಾ..ರಕ್ಕಮ್ಮ ಹಾಡು ರಿಲೀಸ್ ಆದ ಕೆಲವೇ ದಿನಗಳಲ್ಲಿ ಜನರಿಗೆ ಬಹಳ ಇಷ್ಟವಾಗಿದೆ. ಆ ಹಾಡನ್ನು ಕೇಳಿದವರ್ಯಾರು ಹೆಜ್ಜೆ ಹಾಕದೇ ಇರುವುದಿಲ್ಲ.  ಇಷ್ಟು ಕ್ರೇಜ್ ಹುಟ್ಟು ಹಾಕಿರುವ ಈ ಹಾಡಿಗೆ ಇದೀಗ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಸಹ ರೀಲ್ಸ್​ ಮಾಡಿದ್ದು, ಅಭಿಮಾನಿಗಳು ಕಾಮೆಂಟ್​ ಮಳೆಯನ್ನು ಸುರಿಸಿದ್ದಾರೆ.

ಬ್ಲಾಕ್ ಡ್ರೆಸ್ ಹಾಕಿಕೊಂಡು ಡ್ಯಾನ್ಸ್​ ಮಾಡಿರುವ ಅವರ ಈ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಕ್ರೆಜ್​ ಸೃಷ್ಟಿಸಿದೆ.  ವೈಷ್ಣವಿ ಗೌಡ ಸಾಮಾಜಿಕ ಜಾಲಾತಾಣದಲ್ಲಿ ಹೆಚ್ಚು ಆಕ್ಟೀವ್​ ಇದ್ದು ರೀಲ್ಸ್​ಗಳನ್ನು ಮಾಡಿ ಹಾಕುತ್ತಿರುತ್ತಾರೆ. ಅವರ ರೀಲ್ಸ್​ ಹಾಗೂ ಫೊಟೋಗಳನ್ನು ಅವರ ಅಭಿಮಾನಿಗಳು ಶೇರ್​ ಮಾಡುತ್ತಿರುತ್ತಾರೆ.
ಯೂಟ್ಯೂಬ್​ ಚಾನೆಲ್​ ಮೂಲಕ ಸದ್ದು ಮಾಡುತ್ತಿದ್ದಾರೆ ವೈಷ್ಣವಿ

ಇನ್ನು ವೈಷ್ಣವಿ ಅವರು ತಮ್ಮದೆ ಒಂದು ಯೂಟ್ಯೂಬ್ ಚಾನೆಲ್ ಒಂದನ್ನು ಮಾಡಿಕೊಂಡಿದ್ದಾರೆ. ಅದರಲ್ಲಿ ವೈಷ್ಣವಿ ಹೊಸ ಹೊಸ ವಿಡಿಯೋಗಳನ್ನು ಮಾಡಿ ಹಾಕಿ ಅಭಿಮಾನಿಗಳಿಗೆ ಉತ್ತಮ ಮಾಹಿತಿ ನೀಡುತ್ತಾರೆ.  ಆ ಚಾನೆಲ್​ನಲ್ಲಿ ಶಾಪಿಂಗ್, ಮೇಕಪ್ ಹೀಗೆ ಹೆಣ್ಣು ಮಕ್ಕಳಿಗೆ ಬೇಕಾಗುವ, ತುಂಬಾ ಸುಲಭದಲ್ಲಿ ಹಾಗೂ ಅತಿ ಕಡಿಮೆ ಬೆಲೆಯಲ್ಲಿ ಸಿಗುವ ವಸ್ತುಗಳ ಬಗ್ಗೆ ವಿಡಿಯೋ ಮಾಡಿ ಹಾಕಿ, ಅಗತ್ಯ ಮಾಹಿತಿ ಒದಗಿಸುತ್ತಾರೆ.

ಇದನ್ನೂ ಓದಿ: ಟ್ರೋಲಿಗರಿಗೆ ಸಮಂತಾ ತಿರುಗೇಟು! ನಟಿ ಉತ್ತರ ಕಂಡು ಕಾಮೆಂಡ್ ಡಿಲೀಟ್ ಮಾಡಿದ ಕಿಡಿಗೇಡಿ

ಅಗ್ನಿಸಾಕ್ಷಿ ಧಾರವಾಹಿ ಮೂಲಕ ಖ್ಯಾತರಾಗಿದ್ದ ನಟಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಎಂದರೆ ಜನರಿಗೆ ಅದೇನೋ ಪ್ರೀತಿ, ಅಭಿಮಾನ. ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಪರಿಚಯವಿರುವ ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. `ಅಗ್ನಿ ಸಾಕ್ಷಿ' ಸೀರಿಯಲ್ ಮೂಲಕ ಮನೆ ಮಾತಾಗಿರುವ ವೈಷ್ಣವಿ ಹಲವು ಉತ್ಪನ್ನಗಳ ರಾಯಭಾರಿಯೂ ಹೌದು.

ಒಂದು ದಿನ ತಮ್ಮ ತಾಯಿಯೊಂದಿಗೆ ಮಂದಿರಕ್ಕೆ ಹೋದಾಗ ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್‌ನಲ್ಲಿ ನಟಿಸಲು ಆಫರ್ ನೀಡಿದರು. ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.

ಫುಲ್ ಬ್ಯುಸಿ ಇದ್ದಾರೆ ವೈಷ್ಣವಿ

ಭರತನಾಟ್ಯಂ,ಕುಚಿಪುಡಿ ಮತ್ತು ಬೆಲ್ಲಿ ಡ್ಯಾನ್ಸಿಂಗ್‌ನಲ್ಲಿ ಪರಿಣಿತಿ ಇರುವ ಇವರು `ಗಿರಿಗಿಟ್ಲೆ' ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿದ್ದಾರೆ. `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡಿದ್ದರು. `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಕೂಡ ಭಾಗವಹಿಸಿದ್ದರು.

ಇದನ್ನೂ ಓದಿ: ಪಾಪ ಪಾಂಡು ಶಾಲಿನಿಯ ಡಿಸೈನ್​ ಡಿಸೈನ್​ ಬ್ಲೌಸ್​ಗಳು! ಶಾಲಿವುಡ್​ನಲ್ಲಿ ಏನೆಲ್ಲಾ ಇದೆ ಗೊತ್ತಾ?

ಇನ್ನು, ನಟಿ ವೈಷ್ಣವಿ ಗೌಡ ಇತ್ತೀಚೆಗೆ ಹೊಸ ಮನೆ ಖರೀದಿಸಿದ್ದು, ಅವರ ಮನೆ ಗೃಹ ಪ್ರವೇಶಕ್ಕೆ ಕನ್ನಡ ಬಿಗ್ ಬಾಸ್ ಸೀಸನ್ 8ರ ಎಲ್ಲಾ ಸ್ಪರ್ಧಿಗಳು ಸಹ ಪಾಲ್ಗೊಂಡಿದ್ದರು. ಸೀಮಿತ ಆಪ್ತರನ್ನು ಮಾತ್ರ ಆಹ್ವಾನಿಸಿದ್ದ ವೈಷ್ಣವಿ, ತಮ್ಮ ಸೋಶಿಯಲ್ ಮಿಡಿಯಾ  ಇನ್‍ಸ್ಟಾಗ್ರಾಮ್‍ನಲ್ಲಿ ದೊಡ್ಮನೆ ಮಂದಿಯೊಂದಿಗಿನ ಪೋಟೋ ವನ್ನು ಹಂಚಿಕೊಂಡಿದ್ದರು. ನಟ ರಾಜೀವ್, ದಿವ್ಯ ಉರುಡುಗ, ಅರವಿಂದ್ ಕೆಪಿ, ರಘು, ಪ್ರಶಾಂತ್ ಸಂಬರಗಿ ಸೇರಿದಂತೆ ಹಲವರು ಮಂದಿ ಪಾಲ್ಗೊಳ್ಳುವ ಮೂಲಕ ವೈಷ್ಣವಿ ಅವರಿಗೆ ಶುಭ ಹಾರೈಸಿದರು.
Published by:Sandhya M
First published: