Malgudi Days | ಕನಸುಗಾರನ ಕೈಯಲ್ಲಿ ಮಾಲ್ಗುಡಿ ಮೊದಲ ಹಾಡು; ಸದ್ದು ಮಾಡುತ್ತಿದೆ ‘ಊರೊಂದು ಕರೆದಂತೆ’

ಲಕ್ಷ್ಮೀನಾರಾಯಣ ಮಾಲ್ಗುಡಿ ಎಂಬ ಕಾಲ್ಪನಿಕ ಪಾತ್ರದ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಕಿರಿಯ ವಯಸ್ಸಿನ ಹುಡುಗಿಯೊಬ್ಬಳೊಂದಿಗೆ ಈ ವೃದ್ಧನ ಸ್ನೇಹ ಸಂಬಂಧವು ಕಥೆಯ ಸೊಗಡಾಗಿದೆ. ಫೆಬ್ರುವರಿ 7ರಂದು ಸಿನಿಮಾ ತೆರೆ ಕಾಣಲಿದೆ.

news18
Updated:January 21, 2020, 5:36 PM IST
Malgudi Days | ಕನಸುಗಾರನ ಕೈಯಲ್ಲಿ ಮಾಲ್ಗುಡಿ ಮೊದಲ ಹಾಡು; ಸದ್ದು ಮಾಡುತ್ತಿದೆ ‘ಊರೊಂದು ಕರೆದಂತೆ’
ವಿಜಯ ರಾಘವೇಂದ್ರ ಜೊತೆ ಹಾಡಿನ ವೀಕ್ಷಣೆ ಮಾಡುತ್ತಿರುವ ವಿ. ರವಿಚಂದ್ರನ್
  • News18
  • Last Updated: January 21, 2020, 5:36 PM IST
  • Share this:
ಬೆಂಗಳೂರು(ಜ. 21): ವಿಜಯ ರಾಘವೇಂದ್ರ ಅಭಿನಯದ, ವಿನೂತನ ಕಥಾ ಹಂದರದ 'ಮಾಲ್ಗುಡಿ ಡೇಸ್' ಸಿನಿಮಾದ ವಿಡಿಯೋ ಹಾಡೊಂದು ಬಿಡುಗಡೆಯಾಗಿದೆ. ಹಿರಿಯ ನಟ/ನಿರ್ದೇಶಕ ವಿ. ರವಿಚಂದ್ರನ್ ಅವರು ಇಂದು ಸಂಜೆ 4ಕ್ಕೆ ‘ಊರೊಂದು ಕರೆದಂತೆ, ಹಿಂದೆನೊ ಮರೆತಂತೆ’ ಶೀರ್ಷಿಕೆಯ ದೃಶ್ಯ ಗೀತೆಯನ್ನು ಬಿಡುಗಡೆಗೊಳಿಸಿದ್ದಾರೆ. ಪಿಆರ್​ಕೆ ಆಡಿಯೋ ಕಂಪನಿಯ ಯೂಟ್ಯೂಬ್ ತಾಣದಲ್ಲಿ ಬಿಡುಗಡೆಯಾದ ಒಂದೇ ಗಂಟೆಯ ಅವಧಿಯಲ್ಲಿ 7 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.

ಗಗನ್ ಬದೇರಿಯಾ ಅವರು ಸಂಗೀತ ಸಂಯೋಜಿಸಿರುವ ಈ ಹಾಡಿಗೆ ರಘು ದೀಕ್ಷಿತ್ ಮತ್ತು ವೈಷ್ಣವಿ ರವಿ ಅವರ ಕಂಠಸಿರಿ ಇದೆ.

ಇದನ್ನೂ ಓದಿ: Kotigobba 3: ಕೋಟಿಗೊಬ್ಬ 3 ಸಿನಿಮಾ ಬಗ್ಗೆ ಹೊಸ ಸುದ್ದಿ ಕೊಟ್ಟ ಕಿಚ್ಚ ಸುದೀಪ್

ಸ್ವಯಂ ಪ್ರಭಾ ಎಂಟರ್​ಟೈನ್ಮೆಂಟ್ ಬ್ಯಾನರ್​ನಡಿ ಕೆ. ರತ್ನಾಕರ್ ಕಾಮತ್ ನಿರ್ಮಿಸಿರುವ “ಮಾಲ್ಗುಡಿ ಡೇಸ್” ಸಿನಿಮಾವನ್ನು ಕಿಶೋರ್ ಮೂಡಬಿದ್ರೆ ನಿರ್ದೇಶಿಸಿದ್ಧಾರೆ. 65 ವರ್ಷದ ವಯೋವೃದ್ಧನ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಅವರ ಅಭಿನಯದ ಬಗ್ಗೆ ಈಗಾಗಲೇ ಟಾಕ್ ಜೋರಾಗಿ ನಡೆಯುತ್ತಿದೆ.


ಲಕ್ಷ್ಮೀನಾರಾಯಣ ಮಾಲ್ಗುಡಿ ಎಂಬ ಕಾಲ್ಪನಿಕ ಪಾತ್ರದ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಕಿರಿಯ ವಯಸ್ಸಿನ ಹುಡುಗಿಯೊಬ್ಬಳೊಂದಿಗೆ ಈ ವೃದ್ಧನ ಸ್ನೇಹ ಸಂಬಂಧವು ಕಥೆಯ ಸೊಗಡಾಗಿದೆ. ವಿಜಯ ರಾಘವೇಂದ್ರ ಜೊತೆ ಗ್ರೀಷ್ಮಾ ಶ್ರೀಧರ್, ತೇಜಸ್ವಿನಿ, ಅರ್ಜುನ್ ಕಾಪಿಕಾಡ್ ಮೊದಲಾದವರು ನಟಿಸಿದ್ದಾರೆ. ಫೆಬ್ರುವರಿ 7ರಂದು ಸಿನಿಮಾ ತೆರೆ ಕಾಣಲಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:January 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ