ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ(Gali Janardhan Reddy)ಪುತ್ರ ಕಿರೀಟಿ(Kireeti) ಸ್ಯಾಂಡಲ್ ವುಡ್(Sandalwood) ಅಂಗಳಕ್ಕೆ ಬಂದಾಗಿದೆ. ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ. ‘ವಾರಾಹಿ ಫಿಲ್ಮಂ ಪ್ರೊಡಕ್ಷನ್’ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ರಾಧಾ ಕೃಷ್ಣ(Radha Krishna) ನಿರ್ದೇಶನದಲ್ಲಿ ತೆಲುಗು-ಕನ್ನಡ ಭಾಷೆಯಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ಅವರು ಆಗಮಿಸಿ ಕ್ಲ್ಯಾಪ್ ಮಾಡಿದ್ದಾರೆ. ಇದೇ ವೇಳೆ ಜಬರ್ದಸ್ತ್ ಆ್ಯಕ್ಷನ್(Action) ಸೀನ್ ಇರೋ ಟೀಸರ್(Teaser) ರಿಲೀಸ್ ಆಗಿದ್ದು, ಸಖತ್ ವೈರಲ್ ಆಗುತ್ತಿದೆ. ಈ ಸಿನಿಮಾದಲ್ಲಿ ತುಂಬಾ ಸರ್ಪ್ರೈಸ್(Surprise)ಗಳು ಇದೆ ಎಂದು ಕಿರೀಟಿ ಹೇಳಿದ್ದರು. ಇದೀಗ ಒಂದೊಂದಾಗಿ ಈ ಸಿನಿಮಾ ವಿಚಾರಗಳು ತಿಳಿದುಬರುತ್ತಿದೆ. ಇದೀಗ ಹೊರ ಬಂದಿರ ಸುದ್ದಿ ತಿಳಿದಿ ಕನ್ನಡ ಸಿನಿರಸಿಕರು ಫುಲ್ ದಿಲ್ ಖುಷ್ ಆಗಿದ್ದಾರೆ. ಅದೇನು ಅಂತೀರಾ? ಮುಂದೆ ನೋಡಿ.
ಮತ್ತೆ ಒಂದಾಗ್ತಿದ್ದಾರೆ ‘ರಣಧೀರ’ ಜೋಡಿ!
ಹೌದು, ವಿಶೇಷವೆಂದರೆ ಈ ಸಿನಿಮಾದ ಮೂಲಕ ‘ರಣಧೀರ’ ಜೋಡಿ ಈ ಸಿನಿಮಾ ಮೂಲಕ ಮತ್ತೆ ಒಂದಾಗುತ್ತಿದೆ. ನಟ ರವಿಚಂದ್ರನ್ ಹಾಗೂ ಖುಷ್ಬು ಕಿರೀಟಿಯ ಈ ಸಿನಿಮಾ ಮೂಲಕ ಒಟ್ಟಿಗೆ ನಟಿಸುತ್ತಿದ್ದಾರೆ. ರವಿಚಂದ್ರನ್ ಹಾಗೂ ಖುಷ್ಬು ಸಖತ್ ಹಿಟ್ ಪೇರ್ ಎನಿಸಿಕೊಂಡಿತ್ತು. ‘ಯುಗ ಪುರುಷ' ಸಿನಿಮಾದ ಬಳಿಕ ಈ ಜೋಡಿ ನಾಯಕ-ನಾಯಕಿಯಾಗಿ ನಟಿಸಿದ್ದಿಲ್ಲ. ಇದೀಗ ಕಿರೀಟಿಯ ಹೊಸ ಸಿನಿಮಾದಲ್ಲಿ ರವಿಚಂದ್ರನ್ ಹಾಗೂ ಖುಷ್ಬು ಪತಿ-ಪತ್ನಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸುದ್ದಿ ತಿಳಿದು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಮ್ಯಾಜಿಕ್ ಅಜ್ಜಿ ಸಿನಿಮಾದಲ್ಲಿ ನಟಿಸಿದ್ದ ಖುಷ್ಬು!
ರವಿಚಂದ್ರನ್ ಜೊತೆ ಅಷ್ಟೇ ಅಲ್ಲದೇ ಖುಷ್ಬು ಅಂಬರೀಶ್, ವಿಷ್ಣುವರ್ಧನ್, ಟೈಗರ್ ಪ್ರಭಾಕರ್ ಅವರೊಟ್ಟಿಗೂ ಖುಷ್ಬು ನಟಿಸಿದ್ದಾರೆ. 90ರ ದಶಕದ ಅಂತ್ಯದ ವರೆಗೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಖುಷ್ಬು ನಂತರದ ವರ್ಷಗಳಲ್ಲಿ ಕನ್ನಡ ಚಿತ್ರರಂಗದಿಂದ ದೂರಾದರು. 2005 ರಲ್ಲಿ ಬಿಡುಗಡೆ ಆದ 'ಮ್ಯಾಜಿಕ್ ಅಜ್ಜಿ' ಖುಷ್ಬು ಕನ್ನಡದಲ್ಲಿ ನಟಿಸಿದ್ದರು. ಇದಾದ ಬಳಿಕ ಈ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಕಮ್ಬ್ಯಾಕ್ ಮಾಡ್ತಿದ್ದಾರೆ.
ಇದನ್ನೂ ಓದಿ: ಜನಾರ್ದನ ರೆಡ್ಡಿ ಮಗನ ಜಬರ್ದಸ್ತ್ ಎಂಟ್ರಿ.. ಫಸ್ಟ್ ಸಿನಿಮಾದಲ್ಲಿ ಫೇಮಸ್ ನಟಿಮಣಿಯರ ಜೊತೆ ರೊಮ್ಯಾನ್ಸ್!
ಕಿರೀಟಿ ಸಿನಿಮಾಗೆ ಶ್ರೀಲೀಲಾ, ಜೆನಿಲಿಯಾ ನಾಯಕಿಯರು!
ಮೊದಲ ಸಿನಿಮಾದಲ್ಲೇ ಕಿರೀಟಿ ಇಬ್ಬರು ನಾಯಕಿಯರು. ಸ್ಯಾಂಡಲ್ವುಡ್ನ ಕ್ಯೂಟ್ ಹುಡುಗಿ ಶ್ರೀಲೀಲಾ ಒಬ್ಬರಾದರೆ, ಬಾಲಿವುಡ್ನ ಕ್ಯೂಟ್ ಬೆಡಗಿ ಜೆನಿಲಿಯಾ ರಿತೇಶ್ ದೇಶ್ ಮುಖ್. ಆದರೆ ಸದ್ಯಕ್ಕೆ ಜೆನಿಲಿಯಾ ಪಾತ್ರ ಸಸ್ಪೆನ್ಸ್ನಲ್ಲಿದೆ.ಶಿವರಾಜ್ ಕುಮಾರ್ ನಟನೆಯ ಸತ್ಯ ಇನ್ ಲವ್ ನಂತರ ಜೆನಿಲಿಯಾ ಮತ್ತೆ ಕನ್ನಡ ಸಿನಿಮಾವನ್ನು ಮಾಡಿರಲಿಲ್ಲ. ನಟ ರಿತೇಶ್ ದೇಶಮುಖ ಅವರನ್ನು ಮದುವೆಯಾದ ನಂತರ ಅವರು ಸಿನಿಮಾ ರಂಗದಿಂದಲೇ ದೂರವಾಗಿದ್ದರು. ಇದೀಗ ಕಿರೀಟಿ ನಟನೆಯ ಚೊಚ್ಚಲು ಸಿನಿಮಾದ ಮೂಲಕ ಮತ್ತೆ ಚಿತ್ರೋದ್ಯಮಕ್ಕೆ ಕಮ್ ಬ್ಯಾಕ್ ಆಗುತ್ತಿದ್ದಾರೆ.
ಇದನ್ನೂ ಓದಿ: ಸಿನಿಮಾ ಚೆನ್ನಾಗಿದ್ರೂ ಸಿಕ್ತಿಲ್ಲ ಥಿಯೇಟರ್.. `ಓಲ್ಡ್ ಮಾಂಕ್‘ಗೆ ಪರಭಾಷೆ ಚಿತ್ರಗಳಿಂದ ಸಮಸ್ಯೆ!
ಭಾರೀ ಬಜೆಟ್ನಲ್ಲಿ ತಯಾರಾಗಲಿದೆ ಸಿನಿಮಾ!
ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಲಿದೆ. ಇನ್ನೂ ಹೆಸರಿಡದ ಈ ಸಿನಿಮಾವನ್ನು ಭಾರೀ ಬಜೆಟ್ ನಲ್ಲಿ ತಯಾರಿಸುತ್ತಿದ್ದು, ಹೆಸರಾಂತರ ತಾರಾಬಳಗವ ಇರಲಿದೆ. ಸಾಯಿ ಕೊರಪಾಠಿ ನಿರ್ಮಿಸಲಿರುವ ಚಿತ್ರಕ್ಕೆ ರಾಕ್ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಲಿದ್ದು, ಬಾಹುಬಲಿ ಸಿನಿಮಾದ ಕಣ್ಣು ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣವನ್ನು ವಹಿಸಲಿದ್ದಾರೆ. ರವೀಂದರ್ ಆರ್ಟ್ ಡೈರೆಕ್ಟರ್ ಆಗಿ, ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಆಕ್ಷನ್ ಸೀಕ್ವೆನ್ಸ್ಗಳಿಗೆ ನೃತ್ಯ ಸಂಯೋಜನೆ ಮಾಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ