Surya 42: ಇವ್ರು ಒನ್​ ಮ್ಯಾನ್​ ಆರ್ಮಿ; ಸೂರ್ಯ 42 ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್!​

ಸೂರ್ಯ 42 ಮೋಷನ್ ಪೋಸ್ಟರ್‌ನಲ್ಲಿರುವ ಅದ್ಧೂರಿತನವನ್ನು ನೋಡಿದರೆ ಇದು ಭಾರೀ ಬಜೆಟ್ ಮೂವಿ ಎಂದು ಹೇಳಬಹುದು. ಸೂರ್ಯ ಡಿಫರೆಂಟ್​ ಲುಕ್​ ನೋಡಿದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. 

ಸೂರ್ಯ 42 ಪೋಸ್ಟರ್​

ಸೂರ್ಯ 42 ಪೋಸ್ಟರ್​

  • Share this:
ತಮಿಳಿನ ಸ್ಟಾರ್​ ನಟ ಸೂರ್ಯ (Actor Surya) ಅಭಿನಯದ ಬಹುನಿರೀಕ್ಷಿತ ಚಿತ್ರ ಸೂರ್ಯ 42 ಮೋಷನ್ ಪೋಸ್ಟರ್ ರಿಲೀಸ್  (Motion poster release)​ ಹಾಗೂ ಪ್ರೋಮೋ ರಿಲೀಸ್​ ಆಗಿದೆ. ಸೂರ್ಯ ಅವರಿಗೆ ಶಿವ ಅವರು ಆ್ಯಕ್ಷನ್ ಕಟ್​ ಹೇಳಿದ್ದಾರೆ. ವಂಶಿ ಮತ್ತು ಪ್ರಮೋದ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ಸ್ ಬ್ಯಾನರ್ (UV Creations Banner) ಅಡಿಯಲ್ಲಿ ಚಿತ್ರ ನಿರ್ಮಾಣವಾಗ್ತಿದೆ. ಮೋಷನ್ ಪೋಸ್ಟರ್‌ನಲ್ಲಿರುವ ಅದ್ಧೂರಿತನವನ್ನು ನೋಡಿದರೆ ಇದು ಭಾರೀ ಬಜೆಟ್ (BudgetTam)​ ಮೂವಿ ಎಂದು ಹೇಳಬಹುದು. ಸೂರ್ಯ ಡಿಫರೆಂಟ್​ ಲುಕ್​ ನೋಡಿದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. 

10 ಭಾಷೆಗಳಲ್ಲಿ ಚಿತ್ರ ರಿಲೀಸ್​

ಆಗಸ್ಟ್ 8 ರಿಂದ ಸೂರ್ಯ 42 ಚಿತ್ರದ ಶೂಟಿಂಗ್​ ಶುರುವಾಗಿದೆ. ಅಂದಿನಿಂದ ರೆಗ್ಯುಲರ್ ಆಗಿ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರವನ್ನು 10 ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಈ ಚಿತ್ರದಲ್ಲಿ ದಿಶಾ ಪಟಾನಿ ನಾಯಕಿಯಾಗಿ ನಟಿಸುತ್ತಿದ್ದು, ಯೋಗಿ ಬಾಬು, ರೆಡಿನ್ ಕಿಂಗ್ಸ್ಲಿ, ಕೋವೈ ಸರಳಾ ಮುಂತಾದವರು ಈ ಚಿತ್ರದಲ್ಲಿ ಇತರ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಸೂರ್ಯ 42 ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ನೀಡುತ್ತಿದ್ದಾರೆ.ಸೂರ್ಯ 42 ಚಿತ್ರದ ಪ್ರೋಮೋ ರಿಲೀಸ್​

ಯುದ್ಧಭೂಮಿಯಲ್ಲಿ ಹದ್ದು ಹಾರಿಹೋಗುವುದರೊಂದಿಗೆ ಪ್ರೋಮೋ ಪ್ರಾರಂಭವಾಗುತ್ತದೆ. ಅಲ್ಲಿ ಕುದುರೆ ಸವಾರಿ ಮಾಡುವ ಯೋಧರು ಕತ್ತಿಗಳು ಮತ್ತು ಕೊಡಲಿಗಳಿಂದ ಪರಸ್ಪರ ಹೊಡೆದುಕೊಳ್ಳುವುದನ್ನು ನಾವು ನೋಡಬಹುದು. ನಂತರ ಹದ್ದು ಯೋಧನ ಬಳಿಗೆ ಹಾರಿಹೋಗುತ್ತದೆ.

ಪೋಸ್ಟರ್ ಹಂಚಿಕೊಂಡ ಸೂರ್ಯ

ಬಂಡೆಯೊಂದರ ಮೇಲೆ ನಿಂತಿದ್ದ ನಾಯಕನ ಅವನ ಕೆಳಗೆ ನಡೆಯುತ್ತಿದ್ದ ಯುದ್ಧವನ್ನು ನೋಡುತ್ತಿರುತ್ತಾನೆ. ಆಗ ಹದ್ದು ಭುಜದ ಮೇಲೆ ಕುಳಿತುಕೊಳ್ಳುತ್ತದೆ. ಸೂರ್ಯ ಆ ಏಕಾಂಗಿ ಯೋಧ, ಏಕವ್ಯಕ್ತಿ ಸೈನ್ಯ. ಚಿತ್ರದ ಮೋಷನ್ ಪೋಸ್ಟರ್ ಅನ್ನು ಹಂಚಿಕೊಂಡ ಸೂರ್ಯ, ನಾವು ನಮ್ಮ ಸಾಹಸವನ್ನು ಪ್ರಾರಂಭಿಸುತ್ತಿದ್ದಂತೆ ನಿಮ್ಮೆಲ್ಲರ ಶುಭಾಶಯಗಳನ್ನು ನಾವು ಬಯಸುತ್ತೇವೆ ಎಂದು ಮೋಷನ್ ಪೋಸ್ಟರ್ ಹಂಚಿಕೊಳ್ಳುವಾಗ ಸೂರ್ಯ  ಟ್ವೀಟ್ ಮಾಡಿದ್ದಾರೆ.

ಚಿತ್ರವು 3D ಸ್ವರೂಪದಲ್ಲಿ ಚಿತ್ರೀಕರಣಗೊಳ್ಳಲಿದ್ದು, 10 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪ್ಯಾನ್-ಇಂಡಿಯಾ ಟ್ರೆಂಡ್ ಆಗಿರುವುದರಿಂದ, #Suriya42 ಚಿತ್ರಕ್ಕಿಟ್ಟಿರೋ ತಾತ್ಕಾಲಿಕ ಹೆಸರಗಾಗಿದೆ. ಈ ಮೂವಿ ಮೂಲಕ ನಟ ಸೂರ್ಯ ಪ್ಯಾನ್​ ಇಂಡಿಯಾ ಸ್ಟಾರ್​ ಆಗಲು ಹೊರಟಿದ್ದಾರೆ.ಸಾಲು ಸಾಲು ಸಿನಿಮಾ ನೀಡಿದ ಸೂರ್ಯ

ಸೂರ್ಯ ಅಭಿಮಾನಿಗಳಿಗೆ 2022 ಅತ್ಯುತ್ತಮ ವರ್ಷವಾಗಲಿದೆ. ಸುರರಾಯ್ ಪೊಟ್ರು ಚಿತ್ರದ ನಟನೆಗೆ ರಾಷ್ಟ್ರೀಯ ಶ್ರೇಷ್ಠ ನಟ ಪ್ರಶಸ್ತಿ ಪಡೆದರು. ಆಸ್ಕರ್ ಲಿಸ್ಟ್​ಗೆ ಆಯ್ಕೆಯಾಗಿರುವುದು ವಿಕ್ರಮ್ ಚಿತ್ರದಲ್ಲಿ ಸೂರ್ಯ ರೋಲೆಕ್ಸ್ ಆಗಿ ಮಿಂಚಿರುವುದು. ಇವೆಲ್ಲಾ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಇದೀಗ ಈ ಅದ್ಧೂರಿ ಆ್ಯಕ್ಷನ್ ಎಂಟರ್‌ಟೈನರ್‌ ಚಿತ್ರದ ಪೋಸ್ಟರ್​ ರಿಲೀಸ್ ಆಗಿದ್ದು, ಅಭಿಮಾನಿಗಳ ಉತ್ಸಾಹ ಹೆಚ್ಚಾಗುತ್ತಿದೆ. ಈ ಚಿತ್ರದ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ. ಛಾಯಾಗ್ರಹಣ - ವೆಟ್ರಿ ಪಳನಿಸಾಮಿ, ಕಲೆ - ಮಿಲನ್, ಸಂಕಲನ - ನಿಶಾದ್ ಯೂಸುಫ್, ಸಾಹಸ - ಸುಪ್ರೀಮ್ ಸುಂದರ್, ಸಾಹಿತ್ಯ - ಮದನ್ ಕರ್ಕಿ, ನೃತ್ಯ ಸಂಯೋಜನೆ - ಶೋಭಿ, ಪ್ರೊ - ಜಿಎಸ್‌ಕೆ ಮೀಡಿಯಾ, ಬ್ಯಾನರ್‌ಗಳು - ಸ್ಟುಡಿಯೋ ಗ್ರೀನ್, ಯುವಿ ಕ್ರಿಯೇಷನ್ಸ್, ನಿರ್ಮಾಪಕರು - ಕೆ.ಇ.ಜ್ಞಾನವೇಲ್ ರಾಜ, ವಂಶಿ - ಪ್ರಮೋದ್, ಶಿವ ನಿರ್ದೇಶನ ಜವಾಬ್ದಾರಿ ಹೊಂದಿದ್ದಾರೆ.
Published by:Pavana HS
First published: