HOME » NEWS » Entertainment » UTTARA KANNADA AND SAGARA HEGGODU YOUTHS USED LOCKDOWN TIME TO MAKE SHORT FILMS HG

ಲಾಕ್​ಡೌನ್​ ಸಮಯವನ್ನ ಕಿರು ಚಿತ್ರ ನಿರ್ಮಾಣಕ್ಕಾಗಿ ಬಳಸಿಕೊಂಡ ಮಲೆನಾಡಿನ ಯುವಕರು

ಸಾಗರ ಸಮೀಪದ ಹೆಗ್ಗೋಡಿನ ಯುವಕರು ಸೇರಿ ವಿಭಿನ್ನವಾದ ಕಥೆಯನ್ನಿಟ್ಟುಕೊಂಡು ‘ಕ್ವಾರಂಟೈನ್​ ಕನ್ನಡ ಮೇಸ್ಟ್ರು‘ ಎಂಬ ಕಿರು ಚಿತ್ರ ನಿರ್ಮಿಸಿ ಯ್ಯೂಟೂಬ್​ನಲ್ಲಿ ಬಿಡುಗಡೆ ಮಾಡಿದ್ದಾರೆ. ಮೈಲಿಗಲ್ಲು ಪ್ರೊಡಕ್ಷನ್ಸ್‌ ಖಾತೆಯ ಮೂಲಕ ಈ ಕಿರು ಚಿತ್ರವನ್ನು ಬಿಡುಗಡೆ ಮಾಡಿದ್ದು, ಸಾಕಷ್ಟು ಜನರು ಕಿರು ಚಿತ್ರವನ್ನು ವೀಕ್ಷಿಸಿದ್ದಾರೆ.

news18-kannada
Updated:June 1, 2020, 9:42 PM IST
ಲಾಕ್​ಡೌನ್​ ಸಮಯವನ್ನ ಕಿರು ಚಿತ್ರ ನಿರ್ಮಾಣಕ್ಕಾಗಿ ಬಳಸಿಕೊಂಡ ಮಲೆನಾಡಿನ ಯುವಕರು
ಕ್ವಾರಂಟೈನ್​ ಕನ್ನಡ ಮೇಸ್ಟ್ರು
  • Share this:
ಸಾಕಷ್ಟು ಜನರು ಲಾಕ್​ಡೌನ್​​​ ಸಮಯವನ್ನ ಫ್ಯಾಮಿಲಿ ಜೊತೆ ಕಳೆಯಲು, ಸಿನಿಮಾ ನೋಡಲು, ಪುಸ್ತಕ ಓದಲು ಹೀಗೆ ನಾನಾ ಕೆಲಸಗಳಿಗೆ ಬಳಸುತ್ತಿದ್ದಾರೆ. ಇನ್ನು ಕೆಲವರು ಮೋಜು, ಮಸ್ತಿಗಾಗಿ ಸಮಯ ವ್ಯರ್ಥ ಮಾಡುವವರು ಇದ್ದಾರೆ. ಆದರೆ ಮಲೆನಾಡಿನ 2 ಯುವಕರ ತಂಡ ಲಾಕ್​​ಡೌನ್​ ಸಮಯವನ್ನು ಕಿರು ಚಿತ್ರ ನಿರ್ಮಿಸಲು ಬಳಸಿಕೊಂಡಿದ್ದಾರೆ. 

ಸಾಗರ ಸಮೀಪದ ಹೆಗ್ಗೋಡಿನ ಯುವಕರು ಸೇರಿ ವಿಭಿನ್ನವಾದ ಕಥೆಯನ್ನಿಟ್ಟುಕೊಂಡು ‘ಕ್ವಾರಂಟೈನ್​ ಕನ್ನಡ ಮೇಸ್ಟ್ರು‘ ಎಂಬ ಕಿರು ಚಿತ್ರ ನಿರ್ಮಿಸಿ ಯ್ಯೂಟೂಬ್​ನಲ್ಲಿ ಬಿಡುಗಡೆ ಮಾಡಿದ್ದಾರೆ. ಮೈಲಿಗಲ್ಲು ಪ್ರೊಡಕ್ಷನ್ಸ್‌ ಖಾತೆಯ ಮೂಲಕ ಈ ಕಿರು ಚಿತ್ರವನ್ನು ಬಿಡುಗಡೆ ಮಾಡಿದ್ದು, ಸಾಕಷ್ಟು ಜನರು ಕಿರು ಚಿತ್ರವನ್ನು ವೀಕ್ಷಿಸಿದ್ದಾರೆ.

ಪ್ರೈಮರಿ ಶಾಲಾ ಶಿಕ್ಷಕ ಈಗಿನ ತಲೆಮಾರಿನ ಯುವಕರ ಜತೆಗೆ ಲಾಕ್​ಡೌನ್​ ಸಮಯ ಕಳೆಯುತ್ತಿರುತ್ತಾರೆ. ಆದರೆ ಪ್ರಾಥಮಿಕ ಸಂಗತಿಗಳನ್ನು ಮರೆತ ಯುವಕರು, ತಮಗೆಲ್ಲವೂ ತಿಳಿದಿದೆ ಎಂಬ ಭ್ರಮೆಯಲ್ಲಿ ಸಮಯ ವ್ಯರ್ಥ ಮಾಡುತ್ತಿರುತ್ತಾರೆ. ಆದರೆ ಯುವಕರಿಗೆ ನಿಜವಾದ ಜೀವನ ದರ್ಶನ ತಿಳಿಸುವ ಕಿರುಚಿತ್ರ ಇದಾಗಿದೆ.

ಯುವ ನಿರ್ದೇಶಕ ಚೇತನ್ ದೇವರಾಜ್ (ತಿಪಟೂರು) ಚಿತ್ರಕ್ಕೆ ಯ್ಯಾಕ್ಷನ್ ಕಟ್ ಹೇಳಿದ್ದು, ಸಂಪದ ಭಾಗವತ್ ಚಿತ್ರೀಕರಣ ಹಾಗೂ ಸಂಕಲನ ಮಾಡಿದ್ದಾರೆ. ವಿಶೇಷವೆಂದರೆ ಮೂಲತಃ ತಿಪಟೂರಿನ ಚೇತನ್ ಸ್ವಂತ ಊರಿಗೆ ಹೋಗಲಾಗದೆ ಲಾಕ್​ಡೌನ್​ ಸಮಯವನ್ನ ಚಿಕ್ಕಹೊನ್ನೇಸರದಲ್ಲಿ ಚಿತ್ರ ನಿರ್ದೇಶಿಸುವ ಮೂಲಕ ಕಳೆದಿದ್ದಾರೆ.



ನಿಗೂಢ!. ಉತ್ತರ ಕನ್ನಡ ಸಿದ್ಧಾಪುರ ಸಮೀಪದ ಹುಲಿಮನೆ ಕ್ರಿಯೇಷನ್​​ ‘ನಿಗೂಢ‘ ಎಂಬ ಟೈಟಲ್​ ಇಟ್ಟುಕೊಂಡು ಕಿರು ಚಿತ್ರ ನಿರ್ಮಿಸಿದ್ದಾರೆ. ಊರಿನ ಕ್ರಾಸ್ ಬಳಿ ನೆಡೆದಿದೆ ಎನ್ನಲಾಗುತ್ತಿದ್ದ ಘಟನೆ ಏನು? ಅದರ ನಿಗೂಢ ನಡೆಗೆ ಕಾರಣವೇನು ಎಂಬುದನ್ನ ಕಂಡುಕೊಳ್ಳುವ ಯುವಪಡೆಯ ಹುಡುಕಾಟವೇ ಚಿತ್ರದ ಕಥಾವಸ್ತುವಾಗಿದೆ. ಸದ್ಯ ಈ ಕಿರು ಚಿತ್ರ ಯೂಟೂಬ್​ನಲ್ಲಿ ಬಿಡುಗಡೆ ಮಾಡಿದೆ. ಪೂರ್ಣ ಚಂದ್ರ ಹೆಗಡೆ ನಿಗೂಢ ಕಿರು ಚಿತ್ರ ನಿರ್ದೇಶನ ಮತ್ತು ಸಂಕಲನವನ್ನ ಮಾಡಿದ್ದಾರೆ.

First published: June 1, 2020, 9:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories