ನಾಲ್ಕು ಜನರು ಕೂರುವ ಜಾಗದಲ್ಲಿ ಒಬ್ಬರೇ ಕುಳಿತು ಟ್ರೋಲ್​ ಆದ ಐರಾವತ ನಟಿ ..!

Urvashi Rautela: ನಟಿ ಊರ್ವಶಿ ರೌಟೆಲ ಅವರಿಗೆ ಇತ್ತೀಚೆಗೆ ಏಕೋ ಟೈಮೇ ಸರಿಯಿಲ್ಲ ಅನ್ನಿಸುತ್ತೆ. ಇತ್ತೀಚೆಗಷ್ಟೆ ಪ್ರೇಮಿಗಳ ದಿನದಂದು ತಮ್ಮ ವಿಡಿಯೋದಿಂದಲೇ ಟ್ರೋಲ್ ಆಗಿದ್ದರು. ಈಗ ಮತ್ತೆ ಅವರೇ ಹಂಚಿಕೊಂಡಿರುವ ವಿಡಿಯೋದಿಂದಾಗಿ ಟ್ರೋಲ್​ ಆಗುತ್ತಿದ್ದಾರೆ.

Anitha E | news18-kannada
Updated:February 18, 2020, 4:24 PM IST
ನಾಲ್ಕು ಜನರು ಕೂರುವ ಜಾಗದಲ್ಲಿ ಒಬ್ಬರೇ ಕುಳಿತು ಟ್ರೋಲ್​ ಆದ ಐರಾವತ ನಟಿ ..!
ಊರ್ವಶಿ ರೌಟೆಲ
  • Share this:
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬರುವ ಅತಿಥಿಗಳಿಗಾಗಿ ಆಸನ ವ್ಯವಸ್ಥೆ ಮಾಡಲಾಗಿರುತ್ತದೆ. ಅದೇ ಕಾರ್ಯಕ್ರಮಕ್ಕೆ ಬರುವವರಲ್ಲಿ ನಾಲ್ಕು - ಐದು ಆಸನಗಳಲ್ಲಿ ಒಬ್ಬೊಬ್ಬರೇ ಕುಳಿತರೆ ಹೇಗಿರಬೇಡ. ಇಲ್ಲಿ ಆಗಿದ್ದೂ ಅದೆ. ನಟಿ ಊರ್ವಶಿ ರೌಟೆಲ ಏನು ಮಾಡಿದ್ರು ಅಂತೀರಾ...!

ನಟಿ ಊರ್ವಶಿ ರೌಟೆಲ ಅವರಿಗೆ ಇತ್ತೀಚೆಗೆ ಏಕೋ ಟೈಮೇ ಸರಿಯಿಲ್ಲ ಅನ್ನಿಸುತ್ತೆ. ಇತ್ತೀಚೆಗಷ್ಟೆ ಪ್ರೇಮಿಗಳ ದಿನದಂದು ತಮ್ಮ ವಿಡಿಯೋದಿಂದಲೇ ಟ್ರೋಲ್ ಆಗಿದ್ದರು. ಈಗ ಮತ್ತೆ ಅವರೇ ಹಂಚಿಕೊಂಡಿರುವ ವಿಡಿಯೋದಿಂದಾಗಿ ಟ್ರೋಲ್​ ಆಗುತ್ತಿದ್ದಾರೆ.

Urvashi Rautela said to whom i love you on valentines day trollers said second rakhi sawant to bollywood
ಸಿನಿಮಾಗಳಲ್ಲಿ ಹೆಚ್ಚಾಗಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ನಟಿ ಊರ್ವಶಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.


ಊರ್ವಶಿ ರೌಟೆಲ ಇತ್ತೀಚೆಗಷ್ಟೆ ನಡೆದ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆ ಕಾರ್ಯಕ್ರಮಕ್ಕಾಗಿ ಊರ್ವಶಿ ವಿನ್ಯಾಸಿತ ಕೆಂಪು ಬಣ್ಣದ ಹಾಫ್​ ಶೋಲ್ಡರ್​ ಗೌನ್​ ಅನ್ನು ಮಾಡಿಸಿಕೊಂಡಿದ್ದರು. ಅದನ್ನು ತೊಟ್ಟಿದ್ದ ಊರ್ವಶಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ನೆರೆದಿದ್ದವರು ಅವರನ್ನೇ ನೋಡುವಷ್ಟು ಮುದ್ದಾಗಿ ಕಾಣುತ್ತಿದ್ದರು. ಆದರೆ ಊರ್ವಶಿ ಕೂರುತ್ತಿದ್ದಂತೆಯೇ ನಾಲ್ಕು ಮಂದಿ ಕೂರಬೇಕಿದ್ದ ಆಸನಗಳು ತುಂಬಿಕೊಂಡಿತ್ತು. ಅದಕ್ಕೆ ಕಾರಣ ಊರ್ವಶಿ ತೊಟ್ಟಿದ್ದ ಆ ಕೆಂಪು ಬಣ್ಣದ ಗೌನ್​.
ಊರ್ವಶಿ ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದರ ಕ್ರೆಡಿಟ್​ ಅನ್ನು ತಮ್ಮ ತಂಡಕ್ಕೆ ಕೊಟ್ಟಿದ್ದಾರೆ. ಆದರೆ ಈ ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ನಾನಾ ರೀತಿಯ ಕಮೆಂಟ್​ ಮಾಡುತ್ತಿದ್ದಾರೆ.

Urvashi Rautelas heavy red dress latest Instagram video trolled on social media
ಊರ್ವಶಿ ರೌಟೆಲ


ಪ್ರೇಮಿಗಳ ದಿನದಂದು ಊರ್ವಶಿ ಥೇಟ್​ ರಾಖಿ ಸಾವಂತ್​ ತರ ಒಂದು ವಿಡಿಯೋ ಪೋಸ್ಟ್​ ಮಾಡಿ ಟ್ರೋಲ್​ ಆಗಿದ್ದರು. ಪ್ರೇಮಿಗಳ ದಿನದಂದು ದೆಹಲಿಯ ಹುಡುಗಿಯರು ಹೇಗೆಲ್ಲ ಇರುತ್ತಾರೆ ಅಂತ ಊರ್ವಶಿ ಅಣಕಿಸುವ ವಿಡಿಯೋ ಪೋಸ್ಟ್​ ಮಾಡಿದ್ದರು. ಆದರೆ ಆ ವಿಡಿಯೋ ನೋಡಿದ ನೆಟ್ಟಿಗರು ಊರ್ವಶಿ ಅವರನ್ನೇ ಜೂನಿಯರ್​ ರಾಖಿ ಸಾವಂತ್​ ಎಂದು ಟ್ರೋಲ್​ ಮಾಡಿದ್ದರು.
2013ರಲ್ಲಿ 'ಸಿಂಗ್​ ಸಾಬ್​ ದ ಗ್ರೇಟ್'​ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಊರ್ವಶಿ ಸದ್ಯ ಆಗೊಂದು ಈಗೊಂದು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಊರ್ವಶಿ ತಮ್ಮ ಬೋಲ್ಡ್​ ಫೋಟೋಶೂಟ್​ಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಕನ್ನಡದಲ್ಲಿ ದರ್ಶನ್​ ಜೊತೆ 'ಐರಾವತ' ಸಿನಿಮಾದಲ್ಲೂ ನಟಿಸಿದ್ದಾರೆ.

 Suhana Khan: ಕರಣ್​ ಜೋಹರ್​ ನಿರ್ಮಾಣದ ಈ ಸಿನಿಮಾದ ಮೂಲಕ ಶಾರುಖ್​​ ಮಗಳು ಸುಹಾನಾ ಬಾಲಿವುಡ್​ ಎಂಟ್ರಿ..!
First published:February 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ