Urvashi Rautela: ಐರಾವತ ಚಿತ್ರದ ನಾಯಕಿ ಊರ್ವಶಿ ವಿಡಿಯೋ ನೋಡಿ ಜೂನಿಯರ್​ ರಾಖಿ ಸಾವಂತ್​ ಎಂದ ನೆಟ್ಟಿಗರು..!

Urvashi Rautela: ಸ್ಯಾಂಡಲ್​ವುಡ್​ನಲ್ಲಿ ಡಿಬಾಸ್​ ದರ್ಶನ್​ ಅವರೊಂದಿಗೆ ಐರಾವತ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದ ನಟಿ ಊರ್ವಶಿ ಪ್ರೇಮಿಗಳ ದಿನದಂದು ಒಂದು ವಿಡಿಯೋ ಪೋಸ್ಟ್​ ಮಾಡಿದ್ದು, ಅದರಿಂದ ಅಪಹಾಸ್ಯಕ್ಕೀಡಾಗಿದ್ದಾರೆ.

Anitha E | news18-kannada
Updated:February 15, 2020, 8:50 AM IST
Urvashi Rautela: ಐರಾವತ ಚಿತ್ರದ ನಾಯಕಿ ಊರ್ವಶಿ ವಿಡಿಯೋ ನೋಡಿ ಜೂನಿಯರ್​ ರಾಖಿ ಸಾವಂತ್​ ಎಂದ ನೆಟ್ಟಿಗರು..!
ಸಿನಿಮಾಗಳಲ್ಲಿ ಹೆಚ್ಚಾಗಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ನಟಿ ಊರ್ವಶಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
  • Share this:
ತಮ್ಮ ಬೋಲ್ಡ್​ ಇಮೇಜ್​ ಹಾಗೂ ಡಾನ್ಸಿಂಗ್​ ವಿಡಿಯೋಗಳಿಗೆ ಖ್ಯಾತರಾಗಿರುವ ನಟಿ ಊರ್ವಶಿ ರೌಟೆಲ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಊರ್ವಶಿ ತಮ್ಮ ಡಾನ್ಸಿಂಗ್​ ವಿಡಿಯೋ ಹಾಗೂ ಹಾಟ್​ ಫೋಟೋಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ.

ಊರ್ವಶಿ ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು 'ಭೂಲ್​ ಭುಲಯ್ಯ' ಸಿನಿಮಾದಲ್ಲಿನ ಮಂಜುಲಿಕಾ ಪಾತ್ರವನ್ನು ನೆನಪಿಸುವಂತಿತ್ತು. ಇದರಿಂದಾಗಿ ಚರ್ಚೆಗೀಡಾಗಿದ್ದರು. ಆದರೆ ಊರ್ವಶಿ ಪ್ರೇಮಿಗಳ ದಿನದಂದು ಒಂದು ವಿಡಿಯೋ ಪೋಸ್ಟ್​ ಮಾಡಿದ್ದು, ಅದರಿಂದ ಅಪಹಾಸ್ಯಕ್ಕೀಡಾಗಿದ್ದಾರೆ.





ಹೌದು, ಊರ್ವಶಿ ರೌಟೆಲ ತಮ್ಮ ಸಿನಿಮಾ ಹಾಗೂ ಡಾನ್ಸಿಂಗ್​ ವಿಡಿಯೋಗಳಿಂದ ಗಳಿಸಿರುವ ಖ್ಯಾತಿಗೆ ಕಪ್ಪು ಚುಕ್ಕೆ ಇಟ್ಟಂತಿದೆ ಈ ವಿಡಿಯೋ. ಅದರಲ್ಲೂ ಅವರು ಸದಾ ವಿವಾದಗಳಿಂದಲೇ ಸದ್ದು ಮಾಡುವ ನಟಿ ರಾಖಿ ಸಾವಂತ್​ ಅವರನ್ನು ನೆನಪಿಸುವಂತಿದೆ ಈ ವಿಡಿಯೋ. ಅಷ್ಟಕ್ಕೂ ಊರ್ವಶಿ ಮಾಡಿರುವ ವಿಡಿಯೋ ಆದರೂ ಏನು ಗೊತ್ತಾ..?




ಪ್ರೇಮಿಗಳ ದಿನದಂದು ದೆಹಲಿಯ ಹುಡುಗಿಯರು ಯಾವ ರೀತಿ ವರ್ತಿಸುತ್ತಾರೆ ಎಂದು ತೋರಿಸಲು ಮಾಡಿರುವ ಈ ವಿಡಿಯೋ ಇದು. ಇದನ್ನು ನೋಡಿದ ನಟ್ಟಿಗರು ಮತ್ತಿನಲ್ಲಿದ್ದೀರಾ ಎಂದು ಕೇಳಿದರೆ, ಟ್ರೋಲಿಗರು ಜೂನಿಯರ್​ ರಾಖಿ ಸಾವಂತ್​ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಸರಿಲೇರು ನೀಕೆವ್ವರು ಚಿತ್ರದಲ್ಲಿ ತಮ್ಮನ್ನಾ ಹೆಜ್ಜೆ ಹಾಕಿದ ಹಾಡಿಗೆ ಕುಣಿದ ಮಹೇಶ್​ ಬಾಬು ಮಗಳು ಸಿತಾರಾ: ವಿಡಿಯೋ ವೈರಲ್​..!

ಊರ್ವಶಿ ಅವರ ಡಾನ್ಸಿಂಗ್​ ವಿಡಿಯೋಗಳನ್ನು ನಳೋಡಿದರೆ ಅವರು ಎಷ್ಟು ಪ್ರತಿಭಾವಂತೆ ಎಂದು ತಿಳಿಸಯುತ್ತದೆ. ಕಷ್ಟಪಟ್ಟು ಗಳಿಸಿರುವ ಹೆಸರನ್ನು ಇಂತಹ ವಿಡಿಯೋಗಳಿಂದ ಕಳೆದುಕೊಳ್ಳಬೇಡಿ ಎಂದು ಅಭಿಮಾನಿಗಳು ಎಚ್ಚರಿಸುತ್ತಿದ್ದಾರೆ.

Nikhil - Revathi: ನಿಖಿಲ್​ ಕುಮಾರಸ್ವಾಮಿ ಜೊತೆ ಫುಲ್​ ಮಾಡರ್ನ್​ ಲುಕ್​ನಲ್ಲಿ ಕಾಣಿಸಿಕೊಂಡ ರೇವತಿ..!
First published:February 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ