• Home
  • »
  • News
  • »
  • entertainment
  • »
  • Urvashi Rautela: ಅಯ್ಯೋ, RP ಅಂದ್ರೆ ರಿಷಭ್​ ಪಂತ್ ಅಲ್ವಂತೆ ಇವ್ರಂತೆ! ರಿಯಲ್​ ಆರ್​ಪಿ ಫೋಟೋ ನೋಡಿ ನೆಟ್ಟಿಗರು ಶಾಕ್

Urvashi Rautela: ಅಯ್ಯೋ, RP ಅಂದ್ರೆ ರಿಷಭ್​ ಪಂತ್ ಅಲ್ವಂತೆ ಇವ್ರಂತೆ! ರಿಯಲ್​ ಆರ್​ಪಿ ಫೋಟೋ ನೋಡಿ ನೆಟ್ಟಿಗರು ಶಾಕ್

ರಿಷಭ್​ ಪಂತ್​, ಊರ್ವಶಿ

ರಿಷಭ್​ ಪಂತ್​, ಊರ್ವಶಿ

ಇತ್ತೀಚಿಗೆ ಈ ನಟಿ ಹೆಸರು ಕ್ರಿಕೆಟಿಗ ರಿಷಬ್‌ ಪಂತ್‌ (Rishab Pant) ಜೊತೆಗೆ ಥಳುಕು ಹಾಕಿಕೊಂಡಿತ್ತು. ಅವರಿಬ್ಬರೂ ಜೊತೆಗೆ ಓಡಾಡುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿತ್ತು.

  • Share this:

ನಟಿ ಊರ್ವಶಿ ರೌಟೇಲಾ (Urvashi Rautela) ಹಿಂದಿಯಲ್ಲಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಖತ್‌ ಬೋಲ್ಡ್‌ ಆಂಡ್‌ ಬ್ಯೂಟಿಫುಲ್‌ (Bold & Beautifull) ಆಗಿರೋ ಈ ನಟಿ ಮಾಡೆಲಿಂಗ್‌ (Modeling) ಕ್ಷೇತ್ರದಲ್ಲಿ ಜಾಸ್ತಿ ಫೇಮಸ್‌. ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಸದಾ ಆಕ್ಟಿವ್ ಆಗಿರುವ ಊರ್ವಶಿ ಆಗಾಗ ಟ್ರೋಲ್‌ ಕೂಡ ಆಗುವುದಿದೆ. ಇತ್ತೀಚಿಗೆ ಈ ನಟಿ ಹೆಸರು ಕ್ರಿಕೆಟಿಗ ರಿಷಬ್‌ ಪಂತ್‌ (Rishab Pant) ಜೊತೆಗೆ ಥಳುಕು ಹಾಕಿಕೊಂಡಿತ್ತು. ಅವರಿಬ್ಬರೂ ಜೊತೆಗೆ ಓಡಾಡುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿತ್ತು. ಒಮ್ಮೆ ಸಾಮಾಜಿಕ ಜಾಲತಾಣದಲ್ಲಿ ಆರ್‌ ಪಿ (RP) ಹೆಸರಿನ ವ್ಯಕ್ತಿ ತನಗಾಗಿ ತನ್ನ ಹೋಟೆಲ್‌ ಹೊರಗೆ ಗಂಟೆ ಗಟ್ಟಲೆ ಕಾಯುತ್ತಿದ್ದರು ಎಂಬುದಾಗಿ ಅವರು ಬರೆದುಕೊಂಡಿದ್ದರು.


ಇದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿತ್ತು. ಇದಾದ ಮೇಲೆ ಊರ್ವಶಿ ರೌಟೇಲಾ ಮಾಡಿದ ಪೋಸ್ಟ್‌ ಗಳಿಗೆ ಜನರು ರಿಶಬ್‌ ಪಂತ್‌ ರನ್ನೇ ಟ್ಯಾಗ್‌ ಮಾಡುತ್ತಿದ್ದರು. ಈ ವಿಷಯಕ್ಕೇ ಅನೇಕ ಸಲ ಊರ್ವಶಿ ಟ್ರೋಲ್‌ ಕೂಡ ಆಗಿದ್ದಿದೆ. ಇದೀಗ ಕೊನೆಗೂ ಊರ್ವಶಿ, ಆರ್‌ ಪಿ ಯಾರು ಅನ್ನೋದನ್ನು ಬಹಿರಂಗ ಪಡಿಸಿದ್ದಾರೆ.


ರಿಶಬ್‌ ಪಂತ್‌ ಅಲ್ಲ, ರಾಮ್‌ ಪೋತಿನೇನಿ!


ಮಾಡೆಲ್ ಹಾಗೂ ನಟಿ ಊರ್ವಶಿ ರೌಟೇಲಾ ಮತ್ತು ಕ್ರಿಕೆಟಿಗ ರಿಷಬ್ ಪಂತ್ ಅವರ ಲಿಂಕ್-ಅಪ್ ವದಂತಿಯು ಹಿಂದೆಂದಿಗಿಂತಲೂ ಹೆಚ್ಚು ಸುದ್ದಿ ಮಾಡಿತ್ತು. ಅದರಲ್ಲೂ ವಿಶೇಷವಾಗಿ ಅವರ ಪರೋಕ್ಷ ಸಾಮಾಜಿಕ ಮಾಧ್ಯಮದ ಮಾತಿನ ಯುದ್ಧದ ನಂತರದಲ್ಲಿ.



ಇದೀಗ, ನಟಿ ಅಂತಿಮವಾಗಿ ತನ್ನ ಆರ್‌ಪಿ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಊರ್ವಶಿ ರೌಟೇಲಾ ಅವರು ದಕ್ಷಿಣ ನಟ ರಾಮ್ ಪೋತಿನೇನಿ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡು ಇವರೇ ತಮ್ಮ RP ಎಂದು ಬಹಿರಂಗಪಡಿಸಿದ್ದಾರೆ.


ಆರ್​​ಪಿ ಅಂದ್ರೆ ರಿಷಬ್ ಪಂತ್​ ಅಲ್ವಂತೆ!


ಊರ್ವಶಿ ಅವರ ಈ ಪೋಸ್ಟ್‌ಗೆ ನೆಟಿಜನ್‌ಗಳು ಶೀಘ್ರವಾಗಿ ಪ್ರತಿಕ್ರಿಯೆ ನೀಡಿದ್ರು. ಒಬ್ಬರು.. ಓಹ್‌ ಇವರೇನಾ ನಿಮ್ಮ ಆರ್‌ ಪಿ ಎಂದು ಬರೆದಿದ್ದಾರೆ. ಮತ್ತೊಬ್ಬರು 'ಮತ್ಲಬ್ ಪಂತ್ ಕಾ ಪತಾ ಕಟ್' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ದೇಖ್ ರೆ ಹೋ ರಿಸಾಭ್ ಭಾಯ್.. ಎಂದು ಹೇಳಿದ್ದಾರೆ. ಇನ್ನೊಬ್ಬ ವ್ಯಕ್ತಿ "ಇವರೇನಾ ನಿಮ್ಮ ಆರ್‌ ಪಿ, ನಾವು ಸುಮ್ಮನೇ ರಿಶಬ್‌ ಪಂತ್‌ ಅಂತ ತಿಳಿದಿದ್ದೆವು ಎಂದು ಹೇಳಿದ್ದಾರೆ.


ಇದನ್ನೂ ಓದಿ: ಬ್ರಹ್ಮಾಸ್ತ್ರದಲ್ಲಿ ದೇವ್ ಆಗ್ತಾರಾ ಯಶ್? KGF ಸ್ಟಾರ್​ ಕೈಯಲ್ಲಿ 2 ಬಿಗ್ ಆಫರ್


ಇನ್ನು, ತಮಿಳಿನ ತಾರೆಯಾಗಿರುವ ರಾಮ್ ಪೋತಿನೇನಿ ಅವರೊಂದಿಗಿನ ಚಿತ್ರದಲ್ಲಿ ಊರ್ವಶಿ ಕಾಣಿಸಿಕೊಳ್ಳಬಹುದು ಎಂಬ ಸುದ್ದಿ ಹರಡಿದೆ. ಅವರು ದೇವದಾಸು ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದರು. ನಂತರ ಮಾಸ್ ಎಂಟರ್ಟೈನರ್ಗಳಾದ ಹೈಪರ್ ಮತ್ತು ರೆಡಿ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಮ್ ಕೊನೆಯದಾಗಿ ಲಿಂಗುಸಾಮಿಯವರ 'ದಿ ವಾರಿಯರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.ಈ ಮಧ್ಯೆ ಊರ್ವಶಿ ಅವರ ಆರ್‌ ಪಿ ಕಣ್ಣಾಮುಚ್ಚಾಲೆ ಕ್ರಿಕೆಟಿಗ ರಿಶಬ್‌ ಪಂತ್‌ ಗೂ ನುಂಗಲಾರದ ತುತ್ತಾಗಿತ್ತು. ಇದನ್ನು ಅವರು ಪರೋಕ್ಷವಾಗಿ ಹೇಳಿದ್ದರು ಕೂಡ.


ರಿಷಬ್ ಪಂತ್​ಗೆ ಮತ್ತೆ ಟಾಂಗ್​ ಕೊಟ್ರಾ?


ಒಮ್ಮೆ, “ಕೆಲವರು ಜನಪ್ರಿಯತೆ ಮತ್ತು ಇಂಪಾರ್ಟೆನ್ಸ್‌ ಪಡೆಯುವುದಕ್ಕಾಗಿ ಸಂದರ್ಶನಗಳಲ್ಲಿ ಹೇಗೆ ಸುಳ್ಳು ಹೇಳುತ್ತಾರೆ ಎಂಬುದು ತಮಾಷೆಯಾಗಿದೆ. ಕೆಲವರು ಖ್ಯಾತಿ ಮತ್ತು ಹೆಸರಿಗಾಗಿ ಹಪಹಪಿಸುತ್ತಿರುತ್ತಾರೆ ಎಂಬುದನ್ನು ನೋಡಿದರೆ ದುಃಖವಾಗುತ್ತೆ. ಅವರನ್ನು ದೇವರು ಆಶೀರ್ವದಿಸಲಿ ಎಂದಿದ್ದರು. ಅದಕ್ಕೆ ಹ್ಯಾಶ್‌ ಟ್ಯಾಗ್‌ ನಲ್ಲಿ "ಮೇರಾಪೀಛಾಛೋಡೋಬೆಹನ್” ಎಂದು ಹಾಕಿಕೊಂಡಿದ್ದರು.


ಇದನ್ನೂ ಓದಿ: ಕಾಂತಾರ ಸಿನಿಮಾಗೆ 'ತಲೈವಾ' ಫುಲ್ ಫಿದಾ, ರಜನಿಕಾಂತ್​ ತೋರಿದ ಪ್ರೀತಿಗೆ ಕಾಲಿಗೆ ಬಿದ್ದ ರಿಷಬ್​ ಶೆಟ್ಟಿ


ಒಟ್ಟಾರೆ, ಬೆಕ್ಕಿಗೆ ಆಟ ಆದ್ರೆ ಇಲಿಗೆ ಪ್ರಾಣ ಸಂಕಟ ಅನ್ನೋ ಹಾಗೆ ಊರ್ವಶಿ ರೌಟೇಲಾ ಆರ್‌ ಪಿ ಆಟಕ್ಕೆ ಸುಖಾ ಸುಮ್ಮನೆ ರಿಶಬ್‌ ಪಂತ್‌ ಹೆಸರು ತಳುಕು ಹಾಕಿಕೊಂಡಿತ್ತು.

Published by:ವಾಸುದೇವ್ ಎಂ
First published: