Urvashi Rautela: ಬ್ಲಾಕ್​ ಡ್ರೆಸ್​ನಲ್ಲಿ ಮಿರಿ ಮಿರಿ ಮಿಂಚಿದ ಊರ್ವಶಿ, ನಟಿ ನೋಡಿ ಕ್ಲೀನ್ ಬೋಲ್ಡ್ ಆದ ಫ್ಯಾನ್ಸ್

Urvashi Rautela Latest look: ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಊರ್ವಶಿ ರೌಟೇಲಾ ಅವರು ಈಗಾಗಲೇ ಹಲವು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಊರ್ವಶಿ ರೌಟೇಲಾ

ಊರ್ವಶಿ ರೌಟೇಲಾ

  • Share this:
ಚಿತ್ರರಂಗದ (Film Industry) ಥಳುಕು ಬಳುಕು ಅಪಾರವಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಈ ನಟಿಯರು (Actress) ತಮ್ಮ ಹೊಚ್ಚ ಹೊಸ ಉಡುಪುಗಳನ್ನು ಧರಿಸಿ ಕ್ಯಾಮೆರಾಗಳಿಗೆ (Camera) ಪೋಸು ನೀಡುವುದು ಬಲು ಸಾಮಾನ್ಯ. ಸಾಮಾನ್ಯವಾಗಿ ಈ ನಟಿಯರು ವೈವಿಧ್ಯಮಯ ವಿನ್ಯಾಸದ ಹಾಗೂ ಎಲ್ಲರಲ್ಲೂ ಆಕರ್ಷಕವಾಗಿ ಎದ್ದು ಕಾಣುವಂತಹ ಉಡುಗೆ ತೊಡುಗೆಗಳನ್ನು ಹಾಕಿಕೊಳ್ಳಲು ಬಯಸುತ್ತಿರುತ್ತಾರೆ.

ಬ್ಲಾಕ್​ ಡ್ರೆಸ್​ನಲ್ಲಿ ಮಿರಿ ಮಿರಿ ಮಿಂಚಿದ ನಟಿ

ಇನ್ನು ಚಿತ್ರರಂಗದ ಹಾಗೂ ಫ್ಯಾಷನ್ ಲೋಕದ ಮಾಯಾ ನಗರಿಯಾದ ಮುಂಬೈನಲ್ಲಿ ಪ್ರತಿನಿತ್ಯ ಏನಾದರೊಂದು ಈವೆಂಟ್ ಹಾಗೂ ಫೋಟೋ ಶೂಟುಗಳು ನಡೆಯುತ್ತಲೇ ಇರುತ್ತವೆ. ಹೀಗೆ ನಿತ್ಯ ನಡೆಯುವ ಕೆಲ ಪಾರ್ಟಿಗಳಲ್ಲಿ ಅಥವಾ ಸಮಾರಂಭಗಳಲ್ಲಿ ನಟಿಯರು ಉತ್ತಮವಾಗಿ ಅಲಂಕೃತಗೊಂಡು ಆಕರ್ಷಕವಾದ ಉಡುಪು ಧರಿಸಿ ಮನರಂಜನಾ ವಿಭಾಗದ ಮಾಧ್ಯಮದವರಿಗೆ ಪೋಸ್ ನೀಡುವುದು ಮಾಮೂಲಿ ವಿಚಾರ.

ನಟಿ ಊರ್ವಶಿ ರೌಟೇಲಾ ಸಹ ಇದಕ್ಕೆ ಹೊರತಾಗಿಲ್ಲ. ಅದ್ಭುತವಾಗಿ ಮೇಕ್ ಅಪ್ ಮಾಡಿಕೊಂಡು, ಆಕರ್ಷಿಸುವಂತಹ ಬಟ್ಟೆ ಧರಿಸಿ ಕ್ಯಾಮೆರಾಗೆ ಪೋಸು ನೀಡುತ್ತಿರುತ್ತಾರೆ. ಸದ್ಯ ಅವರು ಮಗದೊಮ್ಮೆ ಒಂದು ಚೆಂದದ ಉಡುಗೆ ತೊಟ್ಟು ಕ್ಯಾಮೆರಾಗೆ ಪೋಸು ನೀಡಿದ್ದಾರೆ. ಮಿನುಗುವ ಬ್ಲ್ಯಾಕ್ ದಿರಿಸಿನೊಂದಿಗೆ ಅವರು ಕ್ಯಾಮೆರಾಗೆ ಪೋಸು ನೀಡಿದ್ದು ಆ ಔಟ್ ಫಿಟ್ ಅವರಿಗೆ ಬಲು ಆಕರ್ಷಕವಾಗಿಯೇ ಕಾಣುತ್ತಿದೆ ಎನ್ನಬಹುದಾಗಿದೆ.

ಸಾಮಾನ್ಯವಾಗಿ ಕಪ್ಪು ಬಣ್ಣದ ಉಡುಪು ಯಾರಿಗೆ ಆಗಲಿ ಚೆನ್ನಾಗಿಯೇ ಕಾಣಿಸುತ್ತದೆ. ಪುರುಷರು ಕಪ್ಪು ಬಣ್ಣದ ಶರ್ಟ್ ಧರಿಸಿದರೂ ಅದು ಚೆನ್ನಾಗಿಯೇ ಕಾಣುತ್ತದೆ. ಹಾಗಾಗಿ ಕಪ್ಪು ಎಂಬುದು ಫ್ಯಾಷನ್ ಲೋಕದಲ್ಲಿ ತನ್ನದೆ ಆದ ಮಹತ್ವ ಹೊಂದಿದೆ ಎಂದರೆ ತಪ್ಪಿಲ್ಲ. ಈಗ ಊರ್ವಶಿ ಅವರು ಮುಂಬೈನಲ್ಲಿ ಪಾಪರಾಜಿಯವರ ಕಣ್ಣಿಗೆ ತಮ್ಮ ಹೊಳಪುಯುಕ್ತ ಕಪ್ಪು ಬಣ್ಣದ ಔಟ್ ಫಿಟ್ ನಲ್ಲಿ ಕಣ್ಣಿಗೆ ಬಿದ್ದಿದ್ದು ಆ ಪೋಸ್ ಈಗ ಫ್ಯಾಷನ್ ಅಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದೆ.ಇದನ್ನೂ ಓದಿ: ಪದೇ ಪದೇ ವೈಯಕ್ತಿಕ ವಿಚಾರ ಸುದ್ದಿಯಾಗ್ತಿರೋದಕ್ಕೆ ಬೇಸರಗೊಂಡ್ರಾ ಸ್ಯಾಮ್​?

ಈ ಸಂದರ್ಭದಲ್ಲಿ ಚಿತ್ರರಂಗದ ನಟಿ ಮಿಲಿಯನ್ ಮೌಲ್ಯದ ನಗು ಚೆಲ್ಲುವುದರೊಂದಿಗೆ ತಮ್ಮ ಕೆಲ ಅಭಿಮಾನಿಗಳೊಂದಿಗೂ ಫೋಟೊ ಕ್ಲಿಕ್ಕಿಸಿಕೊಂಡು ಅವರಲ್ಲೂ ಸಂತಸ ಉಂಟು ಮಾಡಿದ್ದಾರೆ. ಊರ್ವಶಿ ಕೊನೆಯ ಬಾರಿಗೆ 'ಬ್ಲ್ಯಾಕ್ ರೋಸ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಅಷ್ಟೆ ಅಲ್ಲದೆ, ಅವರು ಈ ಬಾರಿ ತಮ್ಮ ಕರಿಯರ್ ಅನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ಯಲು ಸಜ್ಜಾಗಿದಾರೆ ಎನ್ನಬಹುದಾಗಿದೆ. ಏಕೆಂದರೆ, ಇಷ್ಟರಲೇ ಅವರು ಓಟಿಟಿಯಲ್ಲಿ ಪ್ರಸಾರವಾಗಲಿರುವ ಹಾಲಿವುಡ್ ಯೋಜನೆಯೊಂದಕ್ಕೆ ಕೈಗೂಡಿಸುತ್ತಿದ್ದಾರೆ ಎಂಬ ವಿಷಯ ತಿಳಿದುಬಂದಿದೆ.ಊರ್ವಶಿ ಅವರು ಮೊದಲ ಬಾರಿಗೆ ಚಿತ್ರರಂಗಕ್ಕೆ 'ಸಿಂಗ್ ಸಾಬ್ ದಿ ಗ್ರೇಟ್' ಎಂಬ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಈ ಚಿತ್ರವು 2013 ರಲ್ಲಿ ತೆರೆಕಂಡಿತ್ತು. ತದನಂತರ ಇವರು ಕನ್ನಡ ಚಿತ್ರರಂಗಕ್ಕೆ 'ಮಿಸ್ಟರ್ ಐರಾವತ'ದ ಮೂಲಕ ಪಾದಾರ್ಪಣೆ ಮಾಡಿದ್ದರು. ಊರ್ವಶಿ ಅವರು 2015 ರಲ್ಲಿ ಮಿಸ್ ದೀವಾ ಯುನಿವರ್ಸ್ ಮನ್ನಣೆಗೂ ಭಾಜನರಾಗಿದ್ದಾರೆ ಹಾಗೂ ಮಿಸ್ ಯುನಿವರ್ಸ್ 2015 ರ ಬ್ಯೂಟಿ ಪೇಜಂಟ್ ನಲ್ಲಿ ಭಾರತವನ್ನೂ ಪ್ರತಿನಿಧಿಸಿದ್ದಾರೆ.ಇದನ್ನೂ ಓದಿ: ದಿಯಾ ಮಿರ್ಜಾ ಸೊಸೆ ಅಪಘಾತದಲ್ಲಿ ನಿಧನ, ಭಾವನಾತ್ಮಕ ಪೋಸ್ಟ್​ ಹಾಕಿದ ನಟಿ

ಭಾರೀ ಸಂಭಾವನೆ ಪಡೆದು ಸುದ್ದಿ ಮಾಡಿದ ಊರ್ವಶಿ

ಈ ನಡುವೆ ಅವರು ಮೊದಲ ಬಾರಿಗೆ ತಮಿಳು ಚಿತ್ರರಂಗದಲ್ಲೂ ಕಾಲಿಟ್ಟಿದ್ದು ದಿ ಲೆಜೆಂಡ್ ನಲ್ಲಿ ನಟಿಸಿದ್ದಾರೆ. ಕೆಲ ದಿನಗಳ ಹಿಂದೆ ಟೈಮ್ಸ್ ಸುದ್ದಿ ಸಂಸ್ಥೆಯು ಊರ್ವಶಿ ಅವರು ಈ ಚಿತ್ರಕ್ಕಾಗಿ ಅತಿ ಹೆಚ್ಚಿನ ಸಂಭಾವನೆ ಪಡೆಯುವ ಮೂಲಕ ತಮಿಳಿನಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಎಂದು ವರದಿ ಮಾಡಿತ್ತು. ಆದಾಗ್ಯೂ ಕೆಲ ಸಿನೆ ಮೂಲಗಳು ಈ ವಾದವನ್ನು ತಳ್ಳಿ ಹಾಕಿವೆಯಾದರೂ ಅವರು ಈ ಚಿತ್ರಕ್ಕೆ ಹೆಚ್ಚಿನ ಸಂಭಾವನೆ ಪಡೆದಿದ್ದಾರೆ ಅಂತ ಅಷ್ಟೇ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿರುವ ಊರ್ವಶಿ ರೌಟೇಲಾ ಅವರು ಈಗಾಗಲೇ ಹಲವು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. 'ಸನಮ್ ರೇ', ಗ್ರೇಟ್ ಗ್ರ್ಯಾಂಡ್ ಮಸ್ತಿ, ಹೇಟ್ ಸ್ಟೋರಿ 4, ಹಾಗೂ ಪಾಗಲ್ ಪಂತಿ ಅಂತಹ ಕೆಲವು ಪ್ರಸಿದ್ಧ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
Published by:Sandhya M
First published: